ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಪೊನ್

July 19, 2008 - 6:26am — cmariejoseph

ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ]

೧. ಕಬ್ಬಿಣ, ತಾಮ್ರ, ಚಿನ್ನ ಮುಂತಾದ ಖನಿಜ; ಲೋಹ ೨. ಬಂಗಾರ; ಚಿನ್ನ; ಸ್ವರ್ಣ ೩. (ಹಿಂದೆ ಚಲಾವಣೆಯಲ್ಲಿದ್ದ) ಹತ್ತು ಹಣ ಬೆಲೆಯುಳ್ಳ ಒಂದು ಚಿನ್ನದ ನಾಣ್ಯ; ಗದ್ಯಾಣ ೪. ಸಂಪತ್ತು; ಐಶ್ವರ್ಯ; ನಿಧಿ ೫. ಹಣ; ಧನ; ದುಡ್ಡು ೬. (ಚಿನ್ನದ) ಒಡವೆ, ಆಭರಣ ೭. ಶ್ರೇಷ್ಠವಾದುದು; ಅತ್ಯುತ್ತಮವಾದುದು ೮. ಪ್ರೀತಿಪಾತ್ರರನ್ನು ಮುದ್ದಿನಿಂದ ಕರೆಯುವ ಮಾತು

(ಪೊನ್ನ ಪೂ=ಚಿನ್ನದ ಹೂ; ಪೊನ್ನಬೆಟ್ಟು=ಚಿನ್ನದ ಪರ್ವತ; ಪೊನ್ನಮೞೆ=ಚಿನ್ನದ ಮಳೆ; ಪೊನ್ನಮೈಯವನು=ಬ್ರಹ್ಮ; ಪೊನ್ನರ್ಧ=ಗದ್ಯಾಣದ ಅರ್ಧಭಾಗ; ಪೊನ್ನವಣ=ಚಿನ್ನದ ಒಂದು ಬಗೆಯ ನಾಣ್ಯ; ಪೊನ್ನುಳ್ಳವಂ=ಧನಿಕ; ಹೊನ್ನಕನಸು=ಹೊಂಗನಸು; ಹೊನ್ನುತಾ ಗುಬ್ಬಿಯಾಟ=ಕೈಯ ಬೆರಳುಗಳನ್ನು ಮುಚ್ಚಿ, ಬಿಡುವ ಆಟ; ಹೊನ್ನದಾರ=ಚಿನ್ನದ ಒಡ್ಯಾಣ; ಹೊನ್ನಹುಳು=ಮಿಂಚುಹುಳು; ಪೊನ್ನಂಡೆ=ಚಿನ್ನದ ಜೀರ್ಕೊಳವೆ, ಬಂಗಾರದ ಪಿಚಕಾರಿ; ಪೊನ್ನಂದಳ=ಚಿನ್ನದ ಪಲ್ಲಕ್ಕಿ; ಪೊನ್ನಂದುಗೆ=ಚಿನ್ನದ ಕಾಲುಕಡಗ; ಪೊನ್ನಂಬು=ಚಿನ್ನದ ಬಾಣ; ಪೊನ್ನಲರ್‍=ಬಂಗಾರದ ಹೂ; ಪೊನ್ನಾಣ್ಮ=ಕುಬೇರ; ಪೊನ್ನಾಯ=ಒಂದು ಬಗೆಯ ತೆರಿಗೆ; ಪೊನ್ನಾಯುಗ=ಕತ್ತಿಯ ಚಿನ್ನದ ಹಿಡಿಕೆ; ಪೊನ್ನಾಯೋಗ=ಆಭರಣ; ಪೊನ್ನಾಳ್=ಶ್ರೇಷ್ಠನಾದ ಯೋಧ; ಪೊನ್ನೀರ್‍=೧.ಹೊಂಬಣ್ಣದ ಕಾಂತಿ ೨.ಹೊಂಬಣ್ಣದ ನೀರು; ಪೊನ್ನುಗ=ಅಕ್ಕಸಾಲಿಗ; ಪೊನ್ನುಡೆ=ಜರತಾರಿ ವಸ್ತ್ರ; ಪೊನ್ನುಯ್ಯಲ್=ಚಿನ್ನದ ಜೋಕಾಲಿ; ಪೊನ್ನೊರೆ=ಚಿನ್ನದ ಮೆರುಗು; ಪೊನ್ನೊಱೆ=ಕತ್ತಿಯನ್ನಿಡುವ ಚಿನ್ನದ ಕೋಶ; ಪೊನ್ನೋಲೆ=ಚಿನ್ನದ ಓಲೆ; ಪೊನ್ಮುಡಿ=ಚಿನ್ನದ ಕಿರೀಟ; ಪೊನ್ಮೋದಿರ=ಚಿನ್ನದುಂಗುರ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‹ ಪೊಳೆ, ಪೊೞೆ, ಹೊಳೆ, ಹೊೞೆ ಅಭಿಸಾರಿಕೆ ಪದದ ಅರ್ಥ ›
  • ದಿನಕ್ಕೊಂದು ಪದ
~.~
  • Login or register to post comments
  • 281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 21, 2008 - 6:27am — cmariejoseph

ಉ: ಪೊನ್

cmariejoseph's picture

ಪೊನ್ ಬಗ್ಗೆ ಹೇಳುತ್ತಾ ಕೆಲ ಉದಾಹರಣೆಗಳನ್ನು ಕೊಟ್ಟಿದ್ದೆ. ಕನ್ನಡಿಗರು ಪೊನ್ನು ಹೊನ್ನುಗಳನ್ನು ಇನ್ನೂ ಯಾವ ಯಾವ ಬಗೆಗಳಲ್ಲಿ ಬಳಸಿದ್ದಾರೆ ಎಂಬುದಕ್ಕೆ ಇಲ್ಲಿವೆ ನೋಡಿ ಮತ್ತಷ್ಟು.

ಪೊಂಗಂಟೆ=ಚಿನ್ನದ ಗಂಟೆ; ಪೊಂಗಂಬ=ಚಿನ್ನದ ಕಂಬ; ಪೊಂಗಡಗ=ಚಿ‌ನ್ನದ ಕಡಗ; ಪೊಂಗಡಲು=ಚಿನ್ನದ ಬಣ್ಣದ ಸಮುದ್ರ; ಪೊಂಗಣೆ=ಚಿನ್ನದ ಬಾಣ; ಪೊಂಗದ=ಚಿನ್ನದ ಬಾಗಿಲು; ಪೊಂಗದಿರ್‍=ಚಿನ್ನದ ತೆನೆ, ಚಿನ್ನದ ಬಣ್ಣದ ಕಿರಣ; ಪೊಂಗದುಗು=ಚಿನ್ನದ ಗಜ್ಜುಗ; ಪೊಂಗಯ್=ಹೊಂಬಣ್ಣದ ಕೈ; ಪೊಂಗರಗ=ಚಿನ್ನದ ಕರಗ; ಪೊಂಗರಡಿಗೆ=ಚಿನ್ನದ ಭರಣಿ; ಪೊಂಗರಿ=(ಬಾಣದ ಹಿಂಭಾಗಕ್ಕೆ ಕಟ್ಟುವ ಚಿನ್ನದ ಗರಿ; ಪೊಂಗರು=ಚಿನ್ನದ ಎರಕ; ಪೊಂಗರುಮಾಡ=ಚಿನ್ನದ ಉಪ್ಪರಿಗೆ; ಪೊಂಗರೆ=ಜರತಾರಿ ಅಂಚು; ಪೊಂಗಲ್=ಚಿನ್ನದ ಕಲ್ಲು; ಪೊಂಗಲು=(ಸಂಕ್ರಾಂತಿಯಂದು) ಅಕ್ಕಿ ಹೆಸರುಬೇಳೆ ಬೆಲ್ಲ ತುಪ್ಪ ಮುಂತಾದವುಗಳಿಂದ ತಯಾರಿಸುವ ಖಾದ್ಯ, ಹುಗ್ಗಿ; ಪೊಂಗವಚ=ಚಿನ್ನದ ಕವಚ; ಪೊಂಗವಡಿಕೆ=ತಲೆಯಲ್ಲಿ ಧರಿಸುವ ಚಿನ್ನದ ಕವಡೆಯಾಕಾರದ ಆಭರಣ; ಪೊಂಗವಳಿಗೆ=ಚಿನ್ನದ ಕರಂಡಕ; ಪೊಂಗಹಳೆ/ಪೊಂಗಾಳೆ=ಚಿನ್ನದ ಕಹಳೆ; ಪೊಂಗಳಂತಿಗೆ=ಚಿನ್ನದ ಜಲಪಾತ್ರೆ; ಪೊಂಗಳಶ=ಚಿನ್ನದ ಕಳಶ; ಪೊಂಗಾಜು=ಚಿನ್ನದ ಬಣ್ಣದ ಗಾಜು; ಪೊಂಗಾರುಕ=ಅಕ್ಕಸಾಲಿಗ; ಪೊಂಗಾಲಿ=(ರಥದ)ಚಿನ್ನದ ಚಕ್ರ; ಪೊಂಗಿರುಗಟೆ=ಚಿನ್ನದಿಂದ ಮಾಡಿದ ಒಂದು ಬಗೆಯ ವಾದ್ಯ; ಪೊಂಗುಡುಪು=ಚರ್ಮವಾದ್ಯವನ್ನು ನುಡಿಸುವ ಚಿನ್ನದ ಕೋಲು; ಪೊಂಗುಪ್ಪಸ=ಜರತಾರಿ ಎಳೆಗಳಿರುವ ಕುಪ್ಪಸ; ಪೊಂಗುಪ್ಪೆ=ಚಿನ್ನದ ಜಾಡಿ; ಪೊಂಗುರುಜು=ಬಂಗಾರದ ಮಂಟಪ; ಪೊಂಗುಲ=ಚಿನ್ನದ ಕೆಲಸ ಮಾಡುವ ಕುಲಕ್ಕೆ ಸೇರಿದವನು; ಪೊಂಗುಳ=ಚಿನ್ನದ ಗುಳ; ಪೊಂಗುಱುವ=ಚಿನ್ನದ ದ್ವೀಪ; ಪೊಂಗೆಜ್ಜೆ=ಚಿನ್ನದ ಗೆಜ್ಜೆ; ಪೊಂಗೆಲಸ=ಚಿನ್ನದ ರೇಕಿನ ಕೆಲಸ; ಪೊಂಗೇದಗೆ=ಚಿನ್ನದ ಬಣ್ಣದ ಕೇದಗೆ; ಪೊಂಗೊಡ=ಚಿನ್ನದ ಕೊಡ; ಪೊಂಗೊಡೆ=ಚಿನ್ನದ ಕೊಡೆ; ಪೊಂಗಳಗು=ಹಸುವಿನ ಗೊರಸಿಗೆ ತೊಡಿಸುವ ಚಿನ್ನದ ಆಭರಣ; ಪೊಂಗೊಳಲು;ಚಿನ್ನದ ಕೊಳಲು; ಪೊಂಗೋಂಟೆ=ಚಿನ್ನದ ಕೋಟೆ; ಪೊಂಗೋಡು=ಪ್ರಾಣಿಗಳ ಕೊಂಬುಗಳಿಗೆ ಹಾಕುವ ಚಿನ್ನದ ಆಭರಣ; ಪೊಂಗೋಲ್=ಚಿನ್ನದ ಕೋಲು; ಪೊಂಜಗಲಿ=ಬಂಗಾರದ ವೇದಿಕೆ; ಪೊಂಜರಪಣಿ=ಚಿನ್ನದ ಸರಪಣಿ; ಪೊಂಜರಿ=ಚಿನ್ನದ ಮಳೆ; ಪೊಂಜರಿಗೆ=ಚಿನ್ನದ ಎಳೆ; ಪೊಂಜಲಗೆ=ಚಿನ್ನದ ಸಲಾಕೆ; ಪೊಂಜಳಂಬ=ಚಿನ್ನದ ಎಳೆಯಿಂದ ಮಾಡಿದ ಮುಸುಕು; ಪೊಂಜಾಳಿಗೆ=ಚಿನ್ನದ ನಾಣ್ಯಗಳಿರುವ ಚೀಲ; ಪೊಂಜುರಿಗೆ=ಚಿನ್ನದ ಕಿರುಗತ್ತಿ; ಪೊಂಜೂಜಿ=ಚಿನ್ನದ ಸೂಜಿ; ಪೊಂಜೂಡಗ=ಚಿನ್ನದ ಕಡಗ; ಪೊಂಜೂಲು=ಚಿನ್ನದ ಎಳೆಗಳಿಂದ ಮಾಡಿದ ಹೊದಿಕೆ; ಪೊಂಜೆಂಡು=ಚಿನ್ನದ ಚೆಂಡು; ಪೊಂಜೆಳೆ=ಚಿನ್ನದ ಕೋಲು; ಪೊಂಜೆಳೆಮಂಚ=ಚಿನ್ನದ ತೂಗುಮಂಚ; ಪೊಂಜೆಳೆಮೆಯ್=ಚಿನ್ನದ ಬೆತ್ತದಂತೆ ಹೊಳೆಯುವ ಶರೀರ; ಪೊಂಜೆಱಂಗು=ಚಿನ್ನದ ಸೆರಗು; ಪೊಂಜೊನ್ನಲಿಗೆ=ಚಿನ್ನದ ಕಳಶ; ಪೊಂದಂಡಿಗೆ=ಚಿನ್ನದ ಪಲ್ಲಕ್ಕಿ; ಪೊಂದಗಡು=ಚಿನ್ನದ ತಗಡು; ಪೊಂದಟ್ಟೆ=ಚಿನ್ನದ ತಟ್ಟೆ; ಪೊಂದಳಿಗೆ=ಚಿನ್ನದ ತಟ್ಟೆ;
ಪೊಂದಳಿರ್‍=ಚಿನ್ನದ ಬಣ್ಣದ ಚಿಗುರು, ಚಿನ್ನದಿಂದ ಮಾಡಿದ ಚಿಗುರಿನಾಕಾರದ ಅಲಂಕಾರವಸ್ತು; ಪೊಂದಾಮರೆ=ಹೊಂಬಣ್ಣದ ಕಮಲ; ಪೊಂದಾರ=ಚಿನ್ನದ ದಾರ; ಪೊಂದಾವು=ಚಿನ್ನದ ಎಳೆಯಿಂದ ಮಾಡಿದ ಹಗ್ಗ; ಪೊಂದಾಳ=ಚಿನ್ನದ ತಾಳ; ಪೊಂದುಗುಲ=ಚಿನ್ನದ ಎಳೆಗಳಿರುವ ರೇಷ್ಮೆಬಟ್ಟೆ; ಪೊಂದೆನೆ=ಚಿನ್ನದ ಬಣ್ಣದ ಧಾನ್ಯದ ಹೊಡೆ; ಪೊಂದೆರೆ=ಚಿನ್ನದ ರೂಪದಲ್ಲಿ ಕೊಡಬೇಕಾದ ತೆರಿಗೆ, ಜರತಾರಿಯ ಪರದೆ; ಪೊಂದೇರು=ಚಿನ್ನದ ತೇರು; ಪೊಂದೊಡರ್‍=ಚಿನ್ನದ ಅಂದುಗೆ; ಪೊಂದೊಡವು=ಬಂಗಾರದ ಒಡವೆ; ಪೊಂದೊಡಹ=ಚಿನ್ನದ ಲೇಪನ; ಪೊಂಬಕ್ಕರಿಗೆ=ಆನೆ ಕುದುರೆಗಳಿಗೆ ಹಾಕುವ ಚಿನ್ನದ ರಕ್ಷಾಕವಚ; ಪೊಂಬಕ್ಕಿ=ಚಿನ್ನದ ರೆಕ್ಕೆಗಳಿರುವ ಹಕ್ಕಿ; ಪೊಂಬಚ್ಚ=ಚಿನ್ನದ ಒಡವೆ; ಪೊಂಬಚ್ಚಲ್=ಚಿನ್ನದಿಂದ ನಿರ್ಮಿತವಾದ ಬಚ್ಚಲು; ಪೊಂಬಟ್ಟ=ಚಿನ್ನದ ಹಣೆಪಟ್ಟಿ; ಪೊಂಬಟ್ಟು=ಚಿನ್ನದ ದುಂಡನೆಯ ವಸ್ತು; ಪೊಂಬಡಲಿಗೆ=ಚಿನ್ನದಿಂದ ಮಾಡಿದ ಅಗಲವಾದ ತಟ್ಟೆ; ಪೊಂಬಡೆ=ಹಣವನ್ನು ಗಳಿಸು; ಪೊಂಬಣತಿ=ಚಿನ್ನದ ದೀಪ; ಪೊಂಬಣ್ಣಿಗೆ=ಚಿನ್ನದ ಅಲಂಕಾರ; ಪೊಂಬರಣಿ=ಚಿನ್ನದ ಕರಂಡಕ; ಪೊಂಬರದ=ಚಿನ್ನದ ವ್ಯಾಪಾರ ಮಾಡುವವನು; ಪೊಂಬರಹ=ಚಿನ್ನದ ಎರಕದಲ್ಲಿ ಬರೆದ ಲಿಪಿ; ಪೊಂಬರಿಗೆ=ಚಿನ್ನದ ಗುರಾಣಿ; ಪೊಂಬರಿಜು=ಚಿನ್ನದ ವಿಗ್ರಹ; ಪೊಂಬಲೆ=ಜಾಲರಿಯಂತಹ ಚಿನ್ನದ ಆಭರಣ; ಪೊಂಬಲ್ಲಕ್ಕಿ=ಚಿನ್ನದ ಅಂದಣ; ಪೊಂಬಸದಿ=ಚಿನ್ನದಿಂದ ನಿರ್ಮಿತವಾದ ಬಸದಿ; ಪೊಂಬಸಿರ=ಬ್ರಹ್ಮ; ಪೊಂಬಳಯಿಗೆ=ಚಿನ್ನದ ಬಾವುಟ; ಪೊಂಬಳೆದೊಂಗಲ್=ಅಡಕೆ ತೆಂಗು ಮೊದಲಾದವುಗಳ ಹೂವಿನ ಗೊಂಚಲು; ಪೊಂಬಳ್ಳಿ=ಚಿನ್ನದ ಬಳ್ಳಿ; ಪೊಂಬಱುಗಲ್=ಚಿನ್ನದ ದೋಣಿ; ಪೊಂಬಾಗಿಲ್=ಚಿನ್ನದ ಬಾಗಿಲು; ಪೊಂಬಾರಿಕ=ಓಲಗದಲ್ಲಿ ಚಿನ್ನದ ದಂಡ ಹಿಡಿದು ಶಿಸ್ತು ಕಾಯುವವನು; ಪೊಂಬಾವುಗೆ=ಬಂಗಾರದ ಪಾದುಕೆ; ಪೊಂಬಾವುಟ=ಹಳದಿ ಬಣ್ಣದ ಬಾವುಟ; ಪೊಂಬಾವುಡೆ=ಹೊಂಬಣ್ಣದ ವಸ್ತ್ರ; ಪೊಂಬಾಸಿಗ=ಚಿನ್ನದ ಬಾಸಿಂಗ; ಪೊಂಬಾಸು=ಚಿನ್ನದ ಎಳೆಗಳ ಪಾಶ; ಪೊಂಬಿಸಿಲ್=ಬೆಳಗ್ಗೆ ಮತ್ತು ಸಂಜೆ ಕಾಣುವ ಹೊನ್ನಿನ ಬಣ್ಣದ ಬಿಸಿಲು; ಪೊಂಬಿಸುಗೆ=ಚಿನ್ನದ ಅಂಬಾರಿ; ಪೊಂಬೀವು=ಚಿನ್ನದ ಎಳೆಗಳಿಂದ ಹೊಸೆದ ಹಗ್ಗ; ಪೊಂಬುಗುಡಿ=ಚಿನ್ನದ ಬುಗುಡಿ; ಪೊಂಬುಜ್ಜಣಿ=ಚಿನ್ನದ ಬಣ್ಣದ ಬುದ್ದಲಿ; ಪೊಂಬುಡಿ=ಚಿನ್ನದ ಹುಡಿ; ಪೊಂಬುತ್ತಳಿ=ಚಿನ್ನದಬೊಂಬೆ; ಪೊಂಬುದಿ=ಚಿನ್ನದ ಬಾಗಿಲುವಾಡ; ಪೊಂಬೆಟ್ಟ=ಬಂಗಾರದ ಬೆಟ್ಟ; ಪೊಂಬೆತ್ತ=ಚಿನ್ನದ ಬೆತ್ತ; ಪೊಂಬೆಸ=ಚಿನ್ನದ ಕೆಲಸ; ಪೊಂಬೆಸರು=ಚಿನ್ನದ ಬಣ್ಣದ ಹೆಸರುಕಾಳು; ಪೊಂಬೆಳಗು=ಹಳದಿ ಬಣ್ಣದ ಕಾಂತಿ; ಪೊಂಬೊಂಬೆ=ಚಿನ್ನದ ಬೊಂಬೆ; ಪೊಂಬೊಗರ್‍=ಚಿನ್ನದ ಕಾಂತಿ; ಪೊಂಬೊಗರಿ=ಚಿನ್ನದ ಬುಗುರಿ; ಪೊಂಬೊರಜೆ=ಚಿನ್ನದ ಹಗ್ಗ; ಪೊಂಭಾಂಡ=ಚಿನ್ನದ ಪಾತ್ರೆ; ಪೊಂಭಿತ್ತಿ=ಚಿನ್ನದಿಂದ ನಿರ್ಮಿತವಾದ ಗೋಡೆ.

ಹೊಂಗಂಬಿ=ಚಿನ್ನದಕೋಲು; ಹೊಂಗಂಬುಗೆ=ಚಿನ್ನದಿಂದ ತಯಾರಿಸಿದ (ಆಯುಧಗಳನ್ನು ಇಡುವ) ರಥದ ಒಂದು ಭಾಗ; ಹೊಂಗಗ್ಗರ=ಚಿನ್ನದ ಕಿರುಗೆಜ್ಜೆಗಳನ್ನುಳ್ಳ ಒಂದು ಆಭರಣ; ಹೊಂಗಟ್ಟಿಗೆ=ಪೊಂಗಟ್ಟಿಗೆ; ಹೊಂಗಟ್ಟಿಸು=(ಕನ್ಯಾಶುಲ್ಕವಾಗಿ) ಹೊನ್ನನ್ನು ಕಟ್ಟಿಸು, ತೆರವನ್ನು ಕೊಡುವಂತೆ ಮಾಡು; ಹೊಂಗಟ್ಟು=ಚಿನ್ನದ ಕಟ್ಟು; ಹೊಂಗಟ್ಟುಬೆತ್ತ=ಚಿನ್ನದ ಕಟ್ಟು ಹಾಕಿರುವ ಬೆತ್ತ; ಹೊಂಗಠಾರಿ=ಚಿನ್ನದ ಕಠಾರಿ; ಹೊಂಗಡಗ=ಪೊಂಗಡಗ; ಹೊಂಗದ್ದುಗೆ=ಚಿನ್ನದ ಆಸನ; ಹೊಂಗನಸು=ಸುಂದರವಾದ ಸ್ವಪ್ನ; ಹೊಂಗಱಿಯಂಬು=ಚಿನ್ನದ ಗರಿಯುಳ್ಳ ಬಾಣ; ಹೊಂಗಱಿವೂ=ಚಿನ್ನದ ಗರಿಯಂತಿರುವ ಹೂ; ಹೊಂಗಾಣ=ಚಿನ್ನದ ಗಾಳ; ಹೊಂಗಾಯಕ=ಅಕ್ಕಸಾಲಿಗ; ಹೊಂಗಾಲ್ವಣೆ=ಚಿನ್ನದ ಕಾಲುಮಣೆ; ಹೊಂಗಾಸೆ=ಚಿನ್ನದ ಬಣ್ಣದ ಕಾಸೆ, ಚಿನ್ನದ ಒಳಚಡ್ಡಿ; ಹೊಂಗಾಳಾಂಜಿ=ಚಿನ್ನದ ಡವಕೆ(ಪೀಕದಾನಿ); ಹೊಂಗಿಡಿ=ಹೊಂಬಣ್ಣದ ಕಿಡಿ; ಹೊಂಗಿರಣ=ಚಿನ್ನದ ಬಣ್ಣದ ಕಿರಣ; ಹೊಂಗಿರಿ=ಚಿನ್ನದ ಬೆಟ್ಟ; ಹೊಂಗಿಱುಗೆಜ್ಜೆ=ಚಿನ್ನದ ಕಿರುಗೆಜ್ಜೆ; ಹೊಂಗುತ್ತಗೆ=ಚಿನ್ನದ ರೂಪದಲ್ಲಿ ಕೊಡುವ ಗುತ್ತಗೆ; ಹೊಂಗುಬ್ಬಿ=ಬಂಗಾರದ ಗುಬ್ಬಿಯಾಕಾರದ ಅಲಂಕಾರಸಾಧನ;ಹೊಂಗುಲಾಬಿ=ಬಂಗಾರದ ಬಣ್ಣದ ಗುಲಾಬಿಹೂ; ಹೊಂಗೆರೆ=ಹೊಂಬಣ್ಣದ ರೇಖೆ; ಹೊಂಗೇಸರ=ಹೊಂಬಣ್ಣದ ಪರಾಗ; ಹೊಂಗೈಪಿಡಿ=ಚಿನ್ನದ ಕಟ್ಟುಳ್ಳ ಕನ್ನಡಿ; ಹೊಂಗೊಂಬು=ಚಿನ್ನದ ಕೆಲಸ ಮಾಡಿರುವ ಕೊಂಬು; ಹೊಂಗೊಡಗಂಬಿ=ಚಿನ್ನದ ಕೊಡವನ್ನುಳ್ಳ (ಬಿದಿರಿನ) ಅಡ್ಡೆ; ಹೊಂಗೊಪ್ಪರಿಗೆ=ಚಿನ್ನದ ಕಡಾಯಿ; ಹೊಂಗೊಳವೆ=ಚಿನ್ನದ ಕೊಳವೆ; ಹೊಂಗೋಡೆ=ಚಿನ್ನದ ಗೋಡೆ; ಹೊಂಗೋಪುರ=ಚಿನ್ನದ ಗೋಪುರ; ಹೊಂಗೋರಟೆ=ಹೊಂಬಣ್ಣದ ಹೂವುಗಳನ್ನು ಬಿಡುವ ಗೋರಂಟೆ;ಹೊಂಜಬಳ=ಚಿನ್ನದ ಈಟಿ; ಹೊಂಜಾವಡಿ=ಚಿನ್ನದ ಚಾವಡಿ; ಹೊಂಜೆಳೆಗ=ಚಿನ್ನದ ಬೆತ್ತವನ್ನು ಹಿಡಿದವನು; ಹೊಂಜೆಳೆವಿಡಿ=ಚಿ‌ನ್ನದ ಸೆಳೆಯನ್ನು ಹಿಡಿ; ಹೊಂದಂಬಿಗೆ=ಚಿನ್ನದ ತಂಬಿಗೆ; ಹೊಂದವಗ=ಚಿನ್ನದ ಆಸನ; ಹೊಂದಾಲಿ=ಚಿನ್ನದ ಚೊಂಬು; ಹೊಂದಾವರೆ=; ಹೊಂದಾಳೆ=;ಹೊಂದುಡಿಗೆ=; ಹೊಂದೂಂಬು=; ಹೊಂದೆನೆ=; ಹೊಂದೆರೆ=; ಹೊಂದೇರು=; ಹೊಂದೊಟ್ಟಿಲು=; ಹೊಂದೊಡರು=;ಹೊಂದೊಡವು=; ಹೊಂದೋಣಿ=; ಹೊಂದೋರಣ=; ಹೊಂಬಟ್ಟಲು=; ಹೊಂಬಟ್ಟೆ=; ಹೊಂಬಣ್ಣ=; ಹೊಂಬರಹ=;ಹೊಂಬರಿವಾಣ=; ಹೊಂಬಳದಿ=; ಹೊಂಬಳಿಯಿಗೆ=; ಹೊಂಬಳಿ=; ಹೊಂಬಳೆ=; ಹೊಂಬಳ್ಳಿ=; ಹೊಂಬಾಳು=; ಹೊಂಬಾಳೆ=;ಹೊಂಬಾಳೆಹುಲ್ಲು=; ಹೊಂಬಾೞೆ=; ಹೊಂಬಿತ್ತಾಳೆ=; ಹೊಂಬಿಸಿಲು=; ಹೊಂಬೀಸಣಿಗೆ=; ಹೊಂಬುಗರಿ=; ಹೊಂಬುಚ್ಚ=;ಹೊಂಬುಟ್ಟಿ=; ಹೊಂಬುತ್ತಳಿ=; ಹೊಂಬುಚ್ಚ=; ಹೊಂಬೆಟ್ಟ=; ಹೊಂಬೆಸ=; ಹೊಂಬೆಸರು=; ಹೊಂಬೆಸಱ್=; ಹೊಂಬೆಸೆ=;ಹೊಂಬೆಳಕು=; ಹೊಂಬೆಳಗು=; ಹೊಂಬೆಳೆ=; ಹೊಂಬೊಂಬೆ=; ಹೊಂಬೊಗರಿ=; ಹೊಂಬೊಗರು=; ಹೊಂಭರಣಿ=; ಹೊನ್ನಂಡೆ=;ಹೊನ್ನಂಡೆದಳೆ=; ಹೊನ್ನಗಸೆ=; ಹೊನ್ನಣೆ=; ಹೊನ್ನರಮನೆ=; ಹೊನ್ನರಳಿ=; ಹೊನ್ನಂಬರ=; ಹೊನ್ನಗರ=; ಹೊನ್ನಾಯುಗ=;ಹೊನ್ನಾಯುಧ=; ಹೊನ್ನಾರತಿ=; ಹೊನ್ನಾಳ=; ಹೊನ್ನುಂಗುರ=; ಹೊನ್ನುಡೆನೂಲು=; ಹೊನ್ನುಬಾಕಿ=; ಹೊನ್ನೊಡ್ಯಾಣ=;ಹೊನ್ನೊರಲು=; ಹೊನ್ನೊಱೆ=; ಹೊನ್ನೋಲೆ

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 12:25pm — kannadakanda

ಉ: ಪೊನ್

kannadakanda's picture

ಪೊಂಜೆಱೆ=ಹೊನ್ನಿನ ಸೆಱೆ. ಪೊನ್ನೆಂದು ಪೊಂಜೆಱೆಗೆ ಸೇರುವರುಂಟೇ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 8:06pm — cmariejoseph

ಉ: ಪೊನ್

cmariejoseph's picture

ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿಕೊಳ್ಳೋಕೆ ಆಗುತ್ಯೇ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 9:39am — kannadakanda

ಉ: ಪೊನ್

kannadakanda's picture

ಹಾ! ಇನ್ನೊಂದು ಪದ ಪೊಂಜೂಜಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 9:42am — kannadakanda

ಉ: ಪೊನ್

kannadakanda's picture

ಪೊಂಜೊಡರ್=ಪೊನ್+ಸೊಡರ್=ಬಂಗಾರದ ದೀಪ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 9:30am — ASHOKKUMAR

ಉ: ಪೊನ್

ASHOKKUMAR's picture

ವಿವರಗಳಿಗೆ ಧನ್ಯವಾದಗಳು ಜೋಸೆಫರೇ.
ಸುಮ್ಮನೆ ಕುತೂಹಲದಿಂದ ಕೇಳುತ್ತಿದ್ದೇನೆ-ಉತ್ತರಿಸದಿದ್ದರೆ ಪರವಾಗಿಲ್ಲ. ನಿಘಂಟು ಕಂಪ್ಯೂಟರೀಕರಿಸುವ ಯೋಜನೆಯಲ್ಲಿ ತೊಡಗಿದ್ದೀರಾ ಹೇಗೆ?
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 7:59pm — cmariejoseph

ಉ: ಪೊನ್

cmariejoseph's picture

ಅಶೋಕ ಅವರೇ, ನಿಘಂಟುಗಳು ಯಾವುದೇ ಭಾಷೆಗೆ ಮಾನಕಗಳಾಗಿರುತ್ತವೆ. ಇಷ್ಷ ಬಂದವರು ಇಷ್ಟ ಬಂದಹಾಗೆ ಪದಗಳನ್ನು ಟಂಕಿಸುವುದಕ್ಕಾಗಲೀ ಅಥವಾ ಇರುವ ಅರ್ಥವನ್ನು ಬಿಟ್ಟು ಇಲ್ಲದ ಅರ್ಥವನ್ನು ಆರೋಪಿಸುವುದಾಗಲೀ ಕೂಡದು ಎಂದೇ ನಿಘಂಟುಗಳನ್ನು ರಚಿಸಲಾಗುತ್ತದೆ. ವಿಪರ್ಯಾಸವೆಂದರೆ ಈಗೀಗ ನಿಘಂಟುಗಳನ್ನೂ ಇಷ್ಟಬಂದಂತೆ ರಚಿಸಿ ಚಲಾವಣೆಗೆ ಬಿಡಲಾಗುತ್ತಿದೆ. ಅಲ್ಲದೆ ಅವನ್ನು ಯಾರು ಬೇಕಾದರೂ ತಮ್ಮ ಮೂಗಿನ ನೇರಕ್ಕೆ ಅಥವಾ ಅರ್ಥಾಂತರ/ಅರ್ಥಸಂಕೋಚಕ್ಕೆ ತಕ್ಕಂತೆ ತಿದ್ದಿ ಮತ್ತೊಬ್ಬರ ಮೇಲೆ ಹೇರಬಹುದಾಗಿದೆ. ಗಣಕಯಂತ್ರಗಳಲ್ಲಿ ಒಂದು standard ನಿಘಂಟನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಹಾಗೂ ಅದನ್ನೇ ಅವಲಂಬಿಸಿದ ಪದಪರೀಕ್ಷಕ ನಮಗಿಂದು ಬೇಕಾಗಿದೆ. ಅಂಥ ಒಂದು ಪ್ರಯತ್ನಕ್ಕೆ ಇದು ಕಿಡಿ ಹಚ್ಚಲಿ ಎಂದು ಭಾವಿಸಿದ್ದೇನೆ.

(ನಿಮಗೆ ಮಾತ್ರ ಹೇಳುವ ಮಾತು: ಪ್ರಮುಖ ಪತ್ರಿಕೆಯೊಂದರಲ್ಲಿ ಒಂದು ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಪ್ರಸಿದ್ದ ಬಿಳಿ ಕ್ರಿಕೆಟಿಗನೊಬ್ಬ ಲಕ್ನೋಗೆ ಬಂದಾಗ ಆ ನಗರದಲ್ಲಿ ಸಂಭ್ರಮದಿಂದ ಓಡಾಡಿದನಲ್ಲದೆ ತಾನು ಜನಿಸಿದ ಆಸ್ಪತ್ರೆಯ ಕಾರ್ಮಿಕ ಕೋಣೆಯನ್ನು ಸಂದರ್ಶಿಸಿದ ಎಂದು ಬರೆಯಲಾಗಿತ್ತು. labour ward ಅನ್ನೋದು ಹೀಗಾಗಿತ್ತು. ಇನ್ನೊಂದು ಸುದ್ದಿ ಹೀಗಿದೆ. ಪಾಕಿಸ್ತಾನದಲ್ಲಿ ಜನಾಂಗ ದೂಷಣೆಯ ಆರೋಪ ಹೊರಿಸಿ ಒಬ್ಬ ಕ್ರೈಸ್ತ ಬಾಲಕನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಆಗ ಅಲ್ಲಿನ ಬಿಷಪರೊಬ್ಬರು ರ್‍ಯಾಲಿ ತೆಗೆದು ಆತ್ಮಾಹುತಿ ಮಾಡಿಕೊಂಡರು. ಆಗ ಅದನ್ನು ಕನ್ನಡ ಪತ್ರಿಕೆಯೊಂದು ಬಿಷಪ್ blasphemy ಅವರು ಆತ್ಮಾಹುತಿ ಮಾಡಿಕೊಂಡರು ಎಂದಿತ್ತು. ಆದರೆ ಅದು ಬಿಷಪರ ಹೆಸರಾಗಿರಲಿಲ್ಲ. ಇಂದು ಯಾರು ಬೇಕಾದರೂ ಕಂಪೋಸ್ ಮಾಡಬಹುದು, ಪುಟ ನಿರ್ಮಿಸಬಹುದು, ಭಾಷೆಯನ್ನು ಹೇಗೆ ಬೇಕಾದರೂ ತಿರುಚಬಹುದು, ಇಂದಿನ ಕನ್ನಡ ಪತ್ರಿಕೆಗಳು ಕನ್ನಡವನ್ನು ಕಾಯುತ್ತಿಲ್ಲ, ಏನಂತೀರಿ?)

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 8:58pm — ASHOKKUMAR

ಉ: ಪೊನ್

ASHOKKUMAR's picture

ಪತ್ರಿಕೆಗಳು ಕನ್ನಡ ಕಾಯುವುದಕ್ಕಿಂತ ಕುಲಗೇಡಿಸುತ್ತಿವೆಯೇನೋ...fence sitters ಎನ್ನುವುದನ್ನು ಬೇಲಿ ಮೇಲೆ ಕುಳಿತವರು ಎಂದು ಕೆಲಪತ್ರಿಕೆಗಳೀಗ ಬಳಸುವುದನ್ನು ಓದುವಾಗ ಸರಿಯೆನಿಸುವುದಿಲ್ಲ. ಸುಖಾಸುಮ್ಮನೆ ಎನ್ನುವಂತಹ ಪದಗಳನ್ನು ಜನಪ್ರಿಯ ಮಾಡಿರುವುದು ಪತ್ರಿಕೆಗಳು.
ನಿಮ್ಮ ಪ್ರತಿಕ್ರಿಯೆಗಳು ಪತ್ರಗಳಂತಿದ್ದು ಖುಷಿಕೊಡುತ್ತವೆ. Smiling
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿನ್ನದ ಹೊನಲು
  • ಲೀಲಾವತಿ
  • ಚಿನ್ನದ ಪದಕದೊಂದಿಗೆ ಬಿಂದ್ರಾ
  • ಅಬಿನವ್ ಬಿಂದ್ರಾ - ೧೦ಮೀ ಏರ್ ರೈಫೆಲ್ ನಲ್ಲಿ ಚಿನ್ನದ ಪದಕ
  • ಅಬಿನವ್ ಬಿಂದ್ರಾ - ೧೦ಮೀ ಏರ್ ರೈಫೆಲ್ ನಲ್ಲಿ ಚಿನ್ನದ ಪದಕ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ನನ್ನ ಮನಸ್ಸಿನಲ್ಲಿ ಕನ್ನಡವಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator