ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಐಸ್ ಕ್ರೀಮ್ ಗೆ ಕನ್ನಡದಲ್ಲಿ "ತಂಪು ಮಿಠಾಯಿ" ಅಥವಾ "ಥಂಡಾ ಮಿಠಾಯಿ" ಎಂದು ಹೇಳುತ್ತಾರೆ.
ಆದರೆ "ಥಂಡಾ" ಎನ್ನುವುದು ಹಿಂದಿ ಭಾಷೆ ಆಯಿತಲ್ಲವೇ???
ಆದ್ದರಿಂದ "ಐಸ್ ಕ್ರೀಮ್"ಗೆ ಕನ್ನಡದಲ್ಲಿ "ತಂಪು ಮಿಠಾಯಿ" ಎನ್ನಬಹುದೇ??? ಅಥವಾ "ಐಸ್ ಕ್ರೀಮ್"ಗೆ ಕನ್ನಡದಲ್ಲಿ "ಐಸ್ ಕ್ರೀಮ್" ಎಂದೇ ಕರೆಯಬಹುದೇ???

- Login or register to post comments
- 472 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಕುಳಿರ್‍ವೆಪ್ಪು ( ಕುಳಿರ್(ತಂಪಾದ) + ಹೆಪ್ಪು(ಕ್ರೀಮ್) )
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಮಹೇಶ್ ಅವರೇ,
[ಕುಳಿರ್‍ವೆಪ್ಪು ( ಕುಳಿರ್(ತಂಪಾದ) + ಹೆಪ್ಪು(ಕ್ರೀಮ್) )] ಇದು ಹಳೆಗನ್ನಡ ಅಲ್ಲವೇ??? ಅಂಗಡಿಗೆ ಹೋಗಿ ಕುಕುಳಿರ್‍ವೆಪ್ಪು ಎಂದು ಕೇಳಿದರೇ, ಇದು ಯಾವ ಭಾಷೆ ಎಂದು ಅಂಗಡಿಯವರು ತಬ್ಬಿಬ್ಬಾಗುವರು... ಅಂದರೇ ಜನಕ್ಕೆ ಅರ್ಥವಾಗುವುದಿಲ್ಲ ಎಂದು ನನ್ನ ಭಾವನೆ...
ಈ ಕಾಲದಲ್ಲಿ ಎನೆಂದು ಹೇಳುತ್ತಾರೆ??? ಸ್ವಲ್ಪ ತಿಳಿಸಿ...
ಅನಿಲ್ ರಮೇಶ್.
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಅಂಗಡಿಗೆ ಹೋಗಿ ಅಯ್ಸ್ ಕ್ರೀಮ್ ಕೊಡಿ ಅಂದ್ರೆ ಅವರು ಕೊಡಲ್ಲ ಅಂದ್ರಾ?
ಕನ್ನಡದಲ್ಲಿ ಒರೆಬೇಕು ಅಂದ್ರಿ.. ಕೊಟ್ಟೆವು..
ತಂಬೆಪ್ಪು, ಕುಳಿರ್ವೆಪ್ಪು
ತಂಪಿಗಿಂತ ತಂಪು ಕುಳಿರ್!
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ತಂಬೆಪ್ಪು. ಇದಕ್ಕೂ ಅಂಗಡಿಯವ ಬೆೞ್ಪಾದರೆ ಅದು ಬೆಂಬೆಪ್ಪು. ಎನಪ್ಪಾ ಇದು ಅಂತ ಬೆವರಿಳಿಸಿಕೊಳ್ಳುವ ಬೆಪ್ಪು. ನಾವಿದಕೇನೂ ಮಾಡಲಾಗದು.
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ತಣ್+ಕೆನೆ=ತಂಗೆನೆ
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಪ್ರತಿಕ್ರಯೆ ನೀಡಿದವರಿಗೆಲ್ಲಾ ನನ್ನಿ...
ಅನಿಲ್ ರಮೇಶ್.