ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ನನ್ನಿ

July 21, 2008 - 6:23am — cmariejoseph

ನನ್ನಿ (ನಾಮಪದ) [ತಮಿಳು: ನನ್ಱಿ, ನನ್ಱು ಮಲಯಾಳ, ತೆಲುಗು: ನನ್ನಿ]

೧. ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ.
(ನನ್ನಿಯನೀ ಪಲ್ಲವಮೆನೆ ಸನ್ನುತುಫೊಂ ವಿಪರ್ಯಯೋಪಮಮಕ್ಕುಂ-ಕವಿರಾಜಮಾರ್ಗ; ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನತನಯಂ-ಪಂಪಭಾರತ; ಅನೃತಂ ಲೋಭಂ ಭಯಮೆಂಬಿನಿತುಂ ನೀನಿರ್ದ ನಾಡೊಳಿರ್ಕುಮೇ ರವಿನಂದನ ನನ್ನಿ ಚಾಗಮಂಬೆಣ್ಮಿನಿತರ್ಕಂ ನೀನೇ ಮೊತ್ತಮೊದಲಿನಾದೈ-ಗದಾಯುದ್ದ; ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ)

೨. ಸತ್ಯವಂತಿಕೆ; ಸತ್ಯಸಂಧತೆ
(ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯ . . . ಕರ್ಣನ ಕಡುನನ್ನಿ-ಪಂಪಭಾರತ; ನನ್ನಿ ವಿನಯಂ ನಯಂ ಜಯಮುನ್ನತಧೃತಿ ಸತ್ವಮೆಂಬ ರಾಜಗುಣಂಗಳ್-ಲೀಲಾವತೀಪುರಾಣ)

೩. ಅಕ್ಕರೆ; ಪ್ರೀತಿ; ವಿಶ್ವಾಸ
(ಎಂತು ಸೈರಿಪರೋ ಕಾಂತನೊಳ್ನನ್ನಿಯುಳ್ಳರಸಿಯರ್‍-ಜೈಮಿನಿಭಾರತ)

೪. ಕೊಟ್ಟಮಾತು; ಭಾಷೆ; ವಚನ; ಪ್ರತಿಜ್ಞೆ
(ಮುಸುರುವ ನನ್ನಿಗಳ ನಾಯಕರ್‍ ಪೆಱರೊಳರೇ-ರಾಜಶೇಖರವಿಳಾಸ)

೫. ಒಳ್ಳೆಯದು; ಸರಿಯಾದುದು; ಸಮಂಜಸವಾದುದು
(ಇದಿರನಱಿಯದೆ ಹೋರುವುದು ನನ್ನಿಯೇ-ಜಯಕಾ)

೬. ಚೆಲುವು; ಅಂದ; ಸೌಂದರ್ಯ

(ನನ್ನಿ ಕಂದರ್ಪ=ನಿಜ ಮನ್ಮಥ; ನನ್ನಿಗಾಶ್ರಯಂ=ಸತ್ಯಕ್ಕೆ ಆಶ್ರಯ; ನನ್ನಿಚಳುಕಿ=ಸತ್ಯವಂತನಾದ ಚಾಲುಕ್ಯ; ನನ್ನಿ ನಾರಾಯಣ; ನನ್ನಿ ಮಹಾರ್ಣವ; ನನ್ನಿ ಮಾರ್ತಂಡ; ನನ್ನಿಯ ಮೇರು; ನನ್ನಿಕಾಱ=ಸತ್ಯವಂತ; ನನ್ನಿಗೆಡು=ಮಾತಿಗೆ ತಪ್ಪು; ನನ್ನಿಗೆಯ್=ಸಾಬೀತುಪಡಿಸು; ನನ್ನಿಗೊಡು=ಭಾಷೆಕೊಡು; ನನ್ನಿಗೊಳ್=ಪ್ರತಿಜ್ಞೆಯನ್ನು ಪಡೆ; ನನ್ನಿದಪ್ಪು=ಮಾತು ತಪ್ಪು; ನನ್ನಿ ನುಡಿ=ದಿಟವನ್ನು ನುಡಿ; ನನ್ನಿವಂತ=ಧರ್ಮಿಷ್ಟ; ನನ್ನಿವಾತು=ಪ್ರತಿಜ್ಞೆಯ ನುಡಿ; ನನ್ನಿವೇೞ್=ಸತ್ಯವನ್ನು ನುಡಿ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‹ ತಾತ ನೆಗೞ್ ›
  • ದಿನಕ್ಕೊಂದು ಪದ
~.~
  • Login or register to post comments
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 21, 2008 - 1:13pm — srinivasps

ಉ: ನನ್ನಿ

srinivasps's picture

'ನನ್ನಿ' ಇದನ್ನು 'ಧನ್ಯವಾದ' ಎಂಬುದಾಗಿ ಎಲ್ಲಿ ಬಳಕೆ ಮಾಡಿದ್ದರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 5:17pm — cmariejoseph

ಉ: ನನ್ನಿ

cmariejoseph's picture

ಕನ್ನಡ ಸಾಹಿತ್ಯಕೃತಿಗಳಲ್ಲಾಗಲೀ, ಆಡುಮಾತಿನಲ್ಲಾಗಲೀ ಎಲ್ಲೂ "ನನ್ನಿ" ಎಂಬುದು ಧನ್ಯವಾದ ಎಂಬರ್ಥದಲ್ಲಿ ಬಳಕೆಯಾದಂತಿಲ್ಲ. ಆಗಿದ್ದರೆ ಅದು ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟುಗಳಲ್ಲಿ ಉಲ್ಲೇಖವಾಗಿರಬೇಕಿತ್ತು.
ಸಂಪದದ ಕೆಲವರು "ನನ್ನಿ" ಯನ್ನು "ಧನ್ಯವಾದ"ಕ್ಕೆ ಸಂವಾದಿಯಾಗಿ ಬಳಸುತ್ತಿದ್ದಾರೆ. ಬಹುಶಃ ಅವರಿಗೆ ತಮಿಳಿನ "ನನ್ರಿ" ಪ್ರೇರಣೆ ನೀಡಿರಬಹುದೆನ್ನಿಸುತ್ತದೆ.
ಇನ್ನು ಮಲಯಾಳದಲ್ಲ ನನ್ನಿ ಇದೆಯಾದರೂ ಅದು "ಆಗಲಿ, ಒಳ್ಳೆಯದು" ಎಂಬರ್ಥದಲ್ಲಿ ಬಳಕೆಯಾದಂತೆ ತೋರುತ್ತದೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 11:17pm — Sunil Jayaprakash

ಉ: ನನ್ನಿ

Sunil Jayaprakash's picture

ಹ್ಮ್. ಮರಿಜೋಸೇಫರೆ, "ನನ್ನಿ" ಪದವನ್ನು "ಧನ್ಯವಾದ"ಕ್ಕೆ ಸಮನಾಗಿ ಬಳಸುತ್ತಿರುವುದಕ್ಕೆ, ನಾನು ಮಹೇಶ ಮುಂತಾದವರು ತಮಿಳಿನ ಮೊರೆಹೋಗಿಲ್ಲ.

ಮರಿಜೋಸೇಫರು ಬರೆದದ್ದು

ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ, ಸತ್ಯವಂತಿಕೆ; ಸತ್ಯಸಂಧತೆ, ಅಕ್ಕರೆ; ಪ್ರೀತಿ; ವಿಶ್ವಾಸ, ಕೊಟ್ಟಮಾತು; ಭಾಷೆ; ವಚನ; ಪ್ರತಿಜ್ಞೆ, ಒಳ್ಳೆಯದು; ಸರಿಯಾದುದು; ಸಮಂಜಸವಾದುದು -

ಈಗ ಹೇಳಿ, ಒಬ್ಬರಿಗೆ ನಾವು thanks ಹೇಳುವಾಗ ನಮ್ಮ ಮನಸ್ಸಿನಲ್ಲಿ ಸತ್ಯವಂತಿಕೆ, ಅಕ್ಕರೆ, ಪ್ರೀತಿ ಇರೋದಿಲ್ವೇ ? ಇದಕ್ಕೂ ನನ್ನಿಗೂ ತಮಿಳಿಗೂ ನಂಟು ಹಾಕಬೇಡಿ. ಧನ್ಯವಾದಕ್ಕೆ "ನನ್ನಿ" ಬಳಸುವುದಕ್ಕೂ ಮೊದಲು ಸವಿಯೊದಗು (ಸವಿ + ಒದಗು - ಸರಿಯಾದ ಸಮಯದಲ್ಲಿ ನಮಗೆ ಒದಗಿಬಂದ ಸಹಾಯ ನಮಗೆ ಸಂತೋಷವನ್ನುಂಟುಮಾಡಿದಾಗ ನಮ್ಮಲ್ಲಿರಬಹುದಾದ ಭಾವನೆ - ಸವಿಯೊದಗು) ಬಳಸ್ತಾ ಇದ್ವಿ. ಆದರೆ ಆಮೇಲೆ ಒಂದು ದಿನ, "ಅನ್ನವನು ಇಕ್ಕುವದು, ನನ್ನಿಯನು ನುಡಿಯುವುದು" - ಇದರಿಂದ ಆರಂಭವಾದ ಒಂದು ಚರ್ಚೆ, ನಮಗೆ "ನನ್ನಿ ಅಂದರೆ ಬರೀ ಸತ್ಯ ಅಷ್ಟೇ ಅಲ್ಲ, ಪ್ರೀತಿ, ವಿಶ್ವಾಸ, ಮಮತೆ" ಅಂತಲೂ ಅರಿತಗಳಿವೆ ಎಂಬುದು ತಿಳಿಯಿತು. ಹಾಗಾಗಿ, ಧನ್ಯತಾ ಭಾವನೆಯನ್ನು ಪ್ರಕಟಪಡಿಸುವಾಗಲೂ ಬಳಸಬಹುದು ಎಂದೆಣಿಸಿ ಬಳಸುತ್ತಿದ್ದೇವೆ. ಇದಕ್ಕೆ, ಸರಿಯಾಗಿ ಮಲಯಾಳದಲ್ಲಿ "ನನ್ನಿ" ಈಗಲೂ ಇದೆ ಎಂಬುದು, ಅಥ್ವಾ ತಮಿಳಿನಲ್ಲಿ ನಣ್ರಿ ಇರುವುದು, ನಮ್ಮ ಮಟ್ಟಿಗೆ ಹೇಳುವುದಾದರೆ ಅದು ಕಾಕತಾಳೀಯವಾಗಿ ನಂಟಾದದ್ದೇ ಹೊರತು, ಅದನ್ನೇ ಆಧಾರವಾಗಿ ಪರಿಗಣಿಸಿಲ್ಲ. ಆ ಪದಕ್ಕೆ ಆ ಅರ್ಥವನ್ನು ಹುಟ್ಟಹಾಕಲು ಬರೀ ಕನ್ನಡದ ನೆಲೆಗಟ್ಟನ್ನಷ್ಟೇ ಬಳಸಿದ್ದೇವೆ.

ಹಳೆಯ ನಿಘಂಟುಗಳಲ್ಲಿ ಇಲ್ಲದಿರಬಹುದು, ಆದರೆ ನಿಘಂಟುಗಳೇನು ನಿಂತ ನೀರಾಗ ಬೇಕಿಲ್ಲವಲ್ಲ, ಹಳೆ ಪದಗಳನ್ನು ತಪ್ಪಲ್ಲದ ರೀತಿಯಲ್ಲಿ ಹೊಸ ಅರ್ಥದಲ್ಲಿ ಬರುವಂತೆ ನಾವೇಕೆ ಬಳಸಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 21, 2008 - 11:49pm — kannadakanda

ಉ: ನನ್ನಿ

kannadakanda's picture

ತಮಿೞಿನಲ್ಲೂ ನನ್ಱಿ ಎಂದರೆ ಉಪಕಾರವಾಗಿ ನನಗೆ ಒಳ್ಳೆಯದಾಯ್ತು ಆದ್ದಱಿಂದ ಕೃತಜ್ಞ ಎಂಬ ಭಾವದಿಂದ ನನ್ಱಿಗೆ ಧನ್ಯವಾದ ಎಂಬುದಕ್ಕೆ ಬೞಸಲಾಗಿದೆ. ಕನ್ನಡದಲ್ಲೂ ನನ್ನಿ=ಒಳ್ಳೆಯದು->ನನಗೆ ಲಾಭವಾಗಿ->ಕೃತಜ್ಞನಾಗಿ ನನ್ನಿ ಎಂದರೆ ಒಳ್ಳೆಯದು ಹಾಗಾಗಿ ಧನ್ಯತಾಭಾವದಿಂದ ಧನ್ಯವಾದಗಳು ಎನ್ನಲೇನಡ್ಡಿಯಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 7:35pm — cmariejoseph

ಉ: ನನ್ನಿ

cmariejoseph's picture

"ಹಳೆಯ ನಿಘಂಟುಗಳಲ್ಲಿ ಇಲ್ಲದಿರಬಹುದು, ಆದರೆ ನಿಘಂಟುಗಳೇನು ನಿಂತ ನೀರಾಗ ಬೇಕಿಲ್ಲವಲ್ಲ, ಹಳೆ ಪದಗಳನ್ನು ತಪ್ಪಲ್ಲದ ರೀತಿಯಲ್ಲಿ ಹೊಸ ಅರ್ಥದಲ್ಲಿ ಬರುವಂತೆ ನಾವೇಕೆ ಬಳಸಬಾರದು."
ಸುನಿಲ್,
ನೀವು ಹೇಳೋದು ಸರಿ. ನಿಘಂಟುಗಳು ಪ್ರಯೋಗವಾಗಿರತಕ್ಕ ಭಾಷೆಯನ್ನಷ್ಟೇ ದಾಖಲಿಸುತ್ತವೆ ಹೊರತು ಭಾಷೆ ಹೀಗೇ ಇರಬೇಕು ಎಂದೇನೂ ಹೇಳುವುದಿಲ್ಲ.

ನಾನು ಈ ವೇದಿಕೆಯಲ್ಲಿ ಪದಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ ಬೃಹತ್ ನಿಘಂಟು ಸಂಪುಟಗಳಿಂದ ಆಯ್ದು ನೀಡುತ್ತಿದ್ದೇನೆ. ಇದರಲ್ಲಿ ನನ್ನ ಹೇರಿಕೆ ಏನೇನೂ ಇಲ್ಲ. ಈ ಪದಗಳು ಹಿಂದೆ ಎಲ್ಲೆಲ್ಲಿ ಬಳಕೆಯಾಗಿವೆ ಎಂಬುದನ್ನು ತಜ್ಞರ ಸಮಿತಿ ನೀಡಿದೆ.

ನಿಮಗೆ ತಿಳಿದಂತೆ ಬೇರೆ ನಿಘಂಟುಗಳಲ್ಲಾಗಲೀ ಜನಪದದಲ್ಲಾಗಲೀ ಇವು ಇನ್ನೊಂದು ಬಗೆಯಲ್ಲಿ ಪ್ರಯೋಗವಾಗಿದ್ದರೆ ಆ ಕುರಿತು ಚರ್ಚಿಸಿದರೆ ಚೆನ್ನಾಗಿರುತ್ತೆ ಎಂದು ಭಾವಿಸಿದ್ದೇನೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 9:12am — mahesha

ಉ: ನನ್ನಿ

mahesha's picture

ನನ್ಱಿ ಅಂದರೆ "ಧನ್ಯವಾದ" ಎಂದಲ್ಲ..

ತ್ಯಾಂಕ್ಸ್ ಎಂದು ಹೇಳೋ ವಾಡಿಕೆ ನಮ್ಮಲ್ಲಿ ಇರಲಿಲ್ಲ.. ಹಾಗೆ ಗುಡ್ ಮಾರ್ನಿಂಗೂ, ಗುಡ್ ಇವನಿಂಗು ಮುಂ...

ಈಗಲೂ ಹಳ್ಳಿಕಡೆ ನೆರವಾದರೆ "ಬಲು ನೆರವಾಯ್ತು. ಒಳ್ಳೇದಾಗಲಿ, ನೀವು ಸಂದಾಕ್ ಇರಿ" ಎಂದು ಹೇಳೋದೇ... ಇದೇ ನಮ್ಮ ’ಧನ್ಯ’ತೆಯ ಹೇಳುವ ಬಗೆ..

ಆದರೆ ಈಗಿನ ಮಾಡ್ರನ್ ಮಂದಿಗೆ ಅಶ್ಟುದ್ದು ಹೇಳಲು ಪುರುಸೊತ್ತಿಲ್ಲ ಮತ್ತು ತ್ಯಾಂಕ್ಸ್ ಬರೀ ಒಂದು ಕರ್ಟಸಿ/ಸವ್ಜನ್ಯ...

ಅದಕ್ಕೆ ತ್ಯಾಂಕ್ಸ್ ಗೆ ಸರಿಸಮನಾದ, ಸರಿಸಮವೇನು ಮಿಗಿಲದಾದ ಕನ್ನಡದ್ದೇ ಒರೆ ’ನನ್ನಿ’. ನನ್ನಿ ಇರುವ ಅರ್ಥವ್ಯಾಪ್ತಿ/ತಿಳಿಹರವು ತುಂಬಾ ಸಲ್ಲುವಂತಹದ್ದು....

ಒಂದಾಸೆ ತಮಿಳು ನನ಼್ಱಿ ಇಂದ ಬಳಕೆಗೆ ಬಂದಿದ್ದರೂ ತಪ್ಪಿಲ್ಲ. ಎಶ್ಟೇ ಆದರು ತಮಿಳು ಮತ್ತು ಕನ್ನಡ ಒಡವುಟ್ಟಿದ ನುಡಿಗಳು.. ಆದುದರಿಂದ "ಕೇಳ್, ಪೇಳ್, ಸೊಲ್" ಹೇಗೆ ಎರಡೂ ನುಡಿಯ ಒರೆಗಳೋ ಹಾಗೇ ನನ್ಱಿ ಕೂಡ.. ನನ್ಱಿಗೆ ಕನ್ನಡತನ ಬಂದು ನನ್ನಿಯಾಗಿದೆ..

ಕನ್ಱು => ಕುಂದು
ಮಱ್ಱ => ಮತ್ತು ಮುಂತಾದವು...

ತಮಿಳರು ನಮಗೆ ಮಾದರಿಗಾಗುವ ಹಲವು ಸಂಗತಿಗಳಿವೆ.. ಹಾಗೆ ನಾವು ಅವರಿಗೆ ಹಲವ ಕಡೆ ಮಾದರಿ..!!

ಮಳಯಾಳ = ೩೦% ಹಳದಮಿಳು + ೭೦% ತತ್ಸಮ ಸಂಸ್ಕ್ರುತ.. ಅದೊಂದು ದ್ರಾವಿಡ ಬಾಶೆ ಅನ್ನಿಸಿಕೊಳ್ಳಕ್ಕೆ ನಾಲಾಯಕ್ಕು ಅಂತ ಹಲವರು ಹೇಳುವುದೂ ಉಂಟು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 7:49pm — cmariejoseph

ಉ: ನನ್ನಿ

cmariejoseph's picture

"ಮಳಯಾಳ = ೩೦% ಹಳದಮಿಳು + ೭೦% ತತ್ಸಮ ಸಂಸ್ಕ್ರುತ.. ಅದೊಂದು ದ್ರಾವಿಡ ಬಾಶೆ ಅನ್ನಿಸಿಕೊಳ್ಳಕ್ಕೆ ನಾಲಾಯಕ್ಕು ಅಂತ ಹಲವರು ಹೇಳುವುದೂ ಉಂಟು."

ಅವರು ರೈತನನ್ನು ರೈತ ಅನ್ನೊಲ್ಲ. ಕರ್ಷಕ ಅನ್ತಾರೆ. (ಕೃಷಿ ಮಾಡುವವನು ಕರ್ಷಕ). ಅವರ ಭಾಷೆ ಬಲು ಸಂಸ್ಕೃತಭೂಯಿಷ್ಟ. ಇರಲಿ ಬಿಡಿ ನಮಗೇನಾಗ್ಬೇಕಿದೆ.
ಆದರೆ ನಮ್ಮ ಈ ನನ್ನಿ ಯನ್ನು ಹೆಚ್ಚಾಗಿ ಸತ್ಯಕ್ಕೆ ಸಂವಾದಿಯಾಗಿಯೇ ಹಿಂದಿನವರು ಬಳಸಿದ್ದಾರೆ. ನನ್ನಿಯನ್ನು ಪ್ರೀತಿವಿಶ್ವಾಸಕ್ಕೆ ಸಮನಾಗಿ ಕಾಣಬೇಕೆಂಬ ನಿಮ್ಮ ಆಶಯ ಒಳ್ಳೆಯದೇ. ಅದನ್ನು ತುಂಡರಿಸಲೆಂದು ನಾನು ಈ ಪದವನ್ನು ಒರೆಗೆ ಹಚ್ಚಿಲ್ಲ. ತಪ್ಪು ತಿಳಿಯಬಾರದು. ವೃಥಾ ಯಾಕೆ ಎಲ್ಲೆಲ್ಲೋ ಗುರಿಯಿಡಬೇಕು ಅನ್ತೀನಿ.
ಕವಿ ಕುವೆಂಪು ಅವರೂ "ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ" ಎಂದಂದು ಕದ್ದಿಂಗಳು ಪದವನ್ನು ಪ್ರಯೋಗಕ್ಕೆ ತೇಲಿಬಿಟ್ಟರಾದರೂ ಆ ಪ್ರಯೋಗ ಸೋತಿತೆಂದು ಬಲ್ಲವರು ಹೇಳುತ್ತಾರೆ. ಜನ ಸ್ವೀಕರಿಸದಿದ್ದರೆ ಮಹಾಕವಿಯ ಪದವೂ ಸೋಲುತ್ತದೆಂದಾಯಿತು ಅಲ್ಲವೇ?Smiling
ಇಲ್ಲೊಂದು ಅಜ್ಞಾತಕವಿಯ ಶಾಸನಪಠ್ಯವಿದೆ ನೋಡಿ. "ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರಾರ್ಕತಾರಂಬರಂ . ."

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 9:18am — mahesha

ಉ: ನನ್ನಿ

mahesha's picture

Smiling

ತುಂಬಾ ಓದಿದ್ದೀರಿ

ಯಪ್ಪ ನನ್ನಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 12:46pm — srinivasps

ಉ: ನನ್ನಿ

srinivasps's picture

>> "ನನ್ಱಿ ಅಂದರೆ "ಧನ್ಯವಾದ" ಎಂದಲ್ಲ..
>> ತ್ಯಾಂಕ್ಸ್ ಎಂದು ಹೇಳೋ ವಾಡಿಕೆ ನಮ್ಮಲ್ಲಿ ಇರಲಿಲ್ಲ.. ಹಾಗೆ ಗುಡ್ ಮಾರ್ನಿಂಗೂ, ಗುಡ್ ಇವನಿಂಗು ಮುಂ..."

ಇದೆ ನಂಗೆ ಬೇಕಾಗಿದ್ದು...

ನನ್ನಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:17pm — mahesha

ಉ: ನನ್ನಿ

mahesha's picture

ಶ್ರಿನಿವಾಸ ಪಿ ಎಸ್..

ಹಾಗೆ ತಮಿಳಲ್ಲಿ ನಮಸ್ಕಾರಕ್ಕೆ ’ವಣಕ್ಕು’ ಎಂಬ ಒರೆ ಇದೆ.. ವಣಕ್ಕು ಅಂದರೆ "ಬಾಗು" ಎಂದು..

ಅವರು ನಮಸ್ಕಾರ ಎಂಬ ಸಕ್ಕದ ಒರೆ ಬದಲು "ನಾನು ನಿಮಗೆ ಬಾಗಿದೆ" ಎಂದು "ವಣಕ್ಕು" ಎನ್ನುವರಶ್ಟೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:29pm — srinivasps

ಉ: ನನ್ನಿ

srinivasps's picture

ನಾವು ಹೇಳಲ್ವಾ..."ಅಡ್ಡ ಬಿದ್ದೆ ಗುರುವೇ" ಅಂತಾ Smiling

ಅಂದ ಹಾಗೆ ನನ್ನ ಹೆಸರನ್ನು ಪೂರ ಬಳಸಿದರ ಗುಟ್ಟೇನು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:38pm — mahesha

ಉ: ನನ್ನಿ

mahesha's picture

ಅಡ್ಡಬಿದ್ದೆ ಅನ್ನೋದು ನಮ್ಮ ಕನ್ನಡದ್ದೇ ಬಳಕೆ ನೋಡಿ.. ನಾವು ಬಂದ ದಾರಿಗೆ ಅಡ್ಡವಾಗಿಯೇ ಬೀಳೋದು!!

ನಿಮ್ಮ ಹೆಸರು ನಾನು ಸರಿಯಾಗಿ ಬರೆದೆ ಅಂತ ನಿಕ್ಕಿ ಆಯ್ತು..

ನನ್ನಿ!

ನಾವು ಮೊದಲು ಒಬ್ಬರನ್ನ ನೋಡಿದಾಗ
"ಹೇಗಿದ್ದೀರ" / "ಚನ್ನಾಗಿದ್ದೀರ" ಅಂತೀವೇ ಹೊರತು. ಹಿ, ಹಾಯ್ ಎಂಬುದು ನಮ್ಮ ಬಳಕೆಗಳಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 8:14pm — srinivasps

ಉ: ನನ್ನಿ

srinivasps's picture

ಗೊತ್ತಾಯ್ತ ಬಿಡಿ...ನಾನು ಯಾವಗಲೂ ಬಳಸೋದು..."ಆರಾಮ?"...ಇದು ಪ್ರಾಕೃತ ಅನ್ಸುತ್ತೆ! ಯಪ್ಪಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:37pm — kannadakanda

ಉ: ನನ್ನಿ

kannadakanda's picture

ಬಳು(೦)ಕು ಇನ್ನೂ ಸರಿಯಾದ ಪದ. ನಾನು ಬಳು(೦)ಕಿದೆ. ಇದು ತಮಿೞಿನ ’ವಣಂಗು’ ವಿಗೆ ಸರಿಯಾದ ಪದ.
ಬಳು(೦)ಕ=ನಮಸ್ಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 3:39pm — mahesha

ಉ: ನನ್ನಿ

mahesha's picture

ಬಳಂಕು,

ಹವುದಾ?

ಹಾಗಾದರೆ ಕನ್ನಡದಲ್ಲಿ ಬಳಂಕು ಎನ್ನಬೋದು..

ಬಳಂಕು = ವಣಂಗು!

ಬಳಂಕು, ನನ್ನಿ! ಇನ್ಮೇಲೇ ಇದೇ ಬಳಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 4:29pm — madhava_hs

ಉ: ನನ್ನಿ

madhava_hs's picture

ಈ ಧನ್ಯವಾದ ಮತ್ತು ನನ್ನಿಗಿಂತ ’ಕೃತಜ್ಞ’ ಎಂಬುದು ಸೂಕ್ತ ಎನಿಸುತ್ತದೆ. ಇದು ಆಡುಭಾಷೆಗೂ ಸಮೀಪವಾದದ್ದು ಹಾಗು ಹೆಚ್ಚು ಅರ್ಥಗರ್ಭಿತವಾದದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2008 - 4:53pm — mahesha

ಉ: ನನ್ನಿ

mahesha's picture

Smiling ಅಲ್ಲ

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಾಕ್ಟರ್ಸ್ ಡೇ
  • ನನ್ನಿ ಬಳಕೆ ಹೆಚ್ಚಾಗಿದೆ :)
  • 'ನನ್ನಿ'ಯ ಮೂಲ???
  • ಸುನಿಲಮಾವ ನನ್ನಿಮಾವನಾದದ್ದು ಹೇಗೆ ?
  • ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
  • ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
  • ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
  • ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಅಡಿಗರಿಗೆ ಬುಕ್ಕರ್‍ ಸಿಕ್ಕಿದೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator