"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
"ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..."
ಯಾವ ಬಳಕೆ ಸರಿ ತಪ್ಪು?
--ಶ್ರೀ

- Login or register to post comments
- 283 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
"ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..."
ಯಾವ ಬಳಕೆ ಸರಿ ತಪ್ಪು?
--ಶ್ರೀ




ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಎರಡು ಸರಿ ಕನ್ನಡದಲ್ಲಿ
ಬೆನ್ಸ್ ಕಾರಾ?
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಎರಡೂ ಸರಿ ಆದ್ರೆ, ಮಕ್ಕಳಿಗೆ ಹೇಗೆ ವ್ಯತ್ಯಾಸ ಹೇಳ್ಕೊಡೋದು...??? :-s
ಹೌದು ಬೆಂಜ್ ಕಾರು
--ಶ್ರೀ
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಏನು ವ್ಯತ್ಯಾಸ?
ನಿಮ್ಮ ಮಕ್ಕಳು ಕನ್ನಡ ಮಾತಾಡ್ತಾರ?
ಶಂಕರಬಟ್ಟರ ಹೊತ್ತಗೆಗಳನ್ನು ಓದಿ.. ಅಲ್ಲಿ ವಿಬಕ್ತಿಯ ಬಗ್ಗೆ ಚನ್ನಾಗಿ ತಿಳಿಸಿದ್ದಾರೆ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"
ಕಾರು ಮತ್ತು ಮಯ್ಸೂರು ಎರಡರ ಒಳಗೆ ಇದ್ದು ಓಡಾಡಿದ್ದು ಅದಕ್ಕೆ "ಅಲ್ಲಿ" ಸರಿ....
I traveled in a car.
I wandered in Mysore.
ಸರಿ ಇದೆಯಲ್ಲ.
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
> ಏನು ವ್ಯತ್ಯಾಸ?
"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಇಲ್ಲಿ benz ಕಾರಿನ ಒಳಗೆ ಓಡಾಡ್ತಾ ಇಲ್ಲ...ಅದರಲ್ಲಿ ಕುಳಿತು ಓಡಾಡ್ತಾ ಇದ್ದೀನಿ ಅಂಥಾ
"ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..."
ಮೈಸೂರಿನ ಒಳಗಡೆ ಓಡಾಡಿದ್ದೇನೆ ಎಂಬ ಅರ್ಥ...
> ನಿಮ್ಮ ಮಕ್ಕಳು ಕನ್ನಡ ಮಾತಾಡ್ತಾರ?
ಅಂಮ್! ನಂಗೆ ಮದುವೆನೇ ಆಗಿಲ್ಲ! ಮಕ್ಕಳಾ...
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಹೆ ಹೆ...
ಮನ್ನಿರಿ
ಕಾರಲ್ಲಿ ಎಂದರೆ ಕಾರಿನ ಒಳಗೆ ಎಂದೇ ತಿಳಿವಲ್ಲ..
ಅದಕ್ಕೆ ಹೇಳಿದ್ದು ಶಂಕರಬಟ್ಟರ ಹೊತ್ತಗೆ ಓದಿ, ಬಿಡಿಸಿ ಹೇಳಿದ್ದಾರೆ ಅಂತ..
ಇಲ್ನೋಡಿ..
ಹೇಗೆ ಹೊಡೆದ? ಕಯ್ಯಲ್ಲಿ ಹೊಡೆದ( ಕಯ್ಯಿಂದ ಅನ್ನೋ ಬಳಕೆ ಬಲು ಕಡಮೆ.. ಹೆಚ್ಚು ಮಂದಿ ಕಯ್ಯಲ್ಲಿ ಎಂದೇ ಹೇಳೋದು )
ಹೇಗೆ ಬಂದೆ? ಕಾರಲ್ಲಿ ಬಂದೆ
ಹೇಗೆ ತಿಂದೆ? ಸ್ಪೂನಲ್ಲಿ ತಿಂದೆ
ಯಾವ ಹೊತ್ತಲ್ಲಿ ಹೋದೆ? ಹಗಲಲ್ಲಿ ಹೋದೆ.
ಯಾವುದರಲ್ಲಿ ಮಾಡಿದ ಗೊಂಬೆ? ಮರದಲ್ಲಿ ಮಾಡಿದ ಗೊಂಬೆ...
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಅಂದ ಹಾಗೆ "benz" ಹೇಗೆ ಬರ್ಯೋದು?
ಸಂಪದ convertor ಆಗ್ಲಿ ಗೂಗಲ್ transliteration ಆಗಲೀ ಜ್ ಕೆಳಗೆ ಎರಡು ಚುಕ್ಕೆ ಇಡಲ್ಲ...
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಬೆನ್ಸ್..
ಇದನ್ನ ಹೇಳಿ.. benz ಅಂತ ಕೇಳಸ್ತದೆ.
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಅಪ್ಹ್ ಕೋರ್ಸ್ ಹತ್ತಿರ..
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ನನ್ನ ಪ್ರಕಾರ ಬೆನ್ಸ್ ಕಾರಿನಲ್ಲಿ ಕೂತು ಓಡಾಡಿದ್ದೇನೆ ಅನ್ನುವುದು ಸರಿ!!
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಇದರಲ್ಲೊಂದು ಒಳಗುಟ್ಟಿದೆ. ಮಹೇಶರು ಚೆನ್ನಾಗಿ ಇದನ್ನು ಬಲ್ಲರು.
ಈ ಮೂರನೇ ವಿಭಕ್ತಿ ಅನ್ನುವುದು ಸಂಸ್ಕೃತದಲ್ಲಿ ಹೆಚ್ಚಾಗಿ ಕರಣಾರ್ಥ (ಸರಿ ಎಂದುಕೊಂಡಿರುವೆ - ತಪ್ಪಾದರೆ ತಿದ್ದಿ ಯಾರಾದರೂ).
ಮಾದರಿಗೆ - "ರಾಮನಿಂದ ರಾಮನು ಕೊಲ್ಲಲ್ಪಟ್ಟನು" - ಕರ್ಮಣಿ ಪ್ರಯೋಗದ (passive voice) ಇಂತಹ ಸಾಲುಗಳು ಕನ್ನಡದಲ್ಲಿ ಸಹಜವಾಗಿ ಒಪ್ಪುವುದಿಲ್ಲ.
ಇದನ್ನು ಬಿಟ್ಟು ಇನ್ನು ಕೆಲವು ಕಡೆ ನಾವು ಸಾಮಾನ್ಯವಾಗಿ ಮೂರನೇ ವಿಭಕ್ತಿ ಬಳಸಿದರೂ ಏಳನೇ ವಿಭಕ್ತಿಯ ಅರ್ಥವೇ ಬರ್ತಾ ಇರುತ್ತೆ.
ಉದಾ:
ಗೋದಿಹಿಟ್ಟಲ್ಲಿ ಮಾಡಿದ ಚಪಾತಿ <== > ಗೋದಿಹಿಟ್ಟಿಂದ ಮಾಡಿದ ಚಪಾತಿ
ಚಿನ್ನದಲ್ಲಿ ಮಾಡಿಸಿದ ಸರ <==> ಚಿನ್ನದಿಂದ ಮಾಡಿಸಿದ ಸರ
ಸೇಡಿಯಾಪು ಕೃಷ್ಣಭಟ್ಟರು ಇದರ ಬಗ್ಗೆ ಒಂದು ಒಳ್ಳೆ ಬರಹ ಬರೆದಿದ್ದಾರೆ - ಕನ್ನಡದಲ್ಲಿ ತೃತೀಯ-ಪಂಚಮಿ-ಮತ್ತು ಸಪ್ತಮೀ ವಿಭಕ್ತಿಗಳ ಬಗ್ಗೆ. ಆಸಕ್ತರು ಓದಬಹುದು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
ಹು ..
ಇದನ್ನೇ
"ಮರದಲ್ಲಿ ಮಾಡಿದ ಬೊಂಬೆ" => ಮರದ ಬೊಂಬೆ.. ಎಂದು ಹೇಳಿದೆ..
ಶಂಕರಬಟ್ಟರು ಈ ಸಂಗತಿ ಎಶ್ಟು ಸೊಗಸಾಗಿ ಹೇಳಿದ್ದಾರೆ.. ನಾಳೆ ಬರ್ತಾ ಆ ಹೊತ್ತಗೆ ಇಂದು ಉದ್ದರಿಸಿ ನೋಡುವೆನು..!