~
ಕಾದಲ್
ಕಾದಲ್, ಕಾದಲ, ಕಾದಲೆ ಮತ್ತು ಕಾದಲ್ಮೆ ಇವು ಪ್ರೀತಿಗೆ ಸಂಭಂಧಿಸಿದಂತೆ ಇರುವ ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ಪದಗಳೂ. ಈಗಲೂ ಬೞಸಬಾರದೆಂದೇನಿಲ್ಲ. ಬೞಸಬಹುದು.
ಕಾದಲ್, ಕಾದಲ್ಮೆ=ಪ್ರೀತಿ (ಕಾ(ಯ್)= ನಿರೀಕ್ಷಿಸು ಎನ್ನುವ ಪದದಿಂದ. (ಪ್ರಿಯತಮಪ್ರಿಯತಮೆಯರು ಪರಸ್ಪರರಿಗಾಗಿ ಕಾಯುವುದಱಿಂದ. ಕೆಲವರು ಗಂಟೆಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ. ಕೆಲವರಂತೂ ಯುಗಗಟ್ಟಲೆ ಕಾಯುತ್ತೇನೆಂದು (ಹುಸಿ) ಪ್ರಮಾಣ ಕೂಡ ಮಾಡುತ್ತಾರೆ. ಅದೇನೆ ಇರಲಿ ಉೞಿದೆರಡು ಪದಗಳನ್ನು ಕುಱಿತು ಚರ್ಚಿಸೋಣ)
ಕಾದಲ=ಪ್ರಿಯತಮ, ನಲ್ಲ
ಕಾದಲೆ=ಪ್ರಿಯತಮೆ, ಪ್ರೇಯಸಿ, ನಲ್ಲೆ

- Login or register to post comments
- 267 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕಾದಲ್
ಕಾದಲ್ ಇನ್ನೂ ತಮಿಳಲ್ಲಿ ಬಳಕೆಯಲ್ಲಿದೆ
ಉ: ಕಾದಲ್
ಕನ್ನಡಿಗರೂ ಬೞಸಬಾರದೆಂದೇನಿಲ್ಲ. ನಿಮಗೊಬ್ಬ ಕಾದಲೆ ಹೀಗನ್ನಿ. ನಿಮ್ಮ ಕಾದಲೆಯ ಹೆಸರು ಸಂಬೋಧಿಸಿ ನೀ ನನ್ನ ಕಾದಲೆ ಎನ್ನಿ. ಅಥವಾ ಅವಳಿಗೆ ನಿನ್ನ ಮೇಲೆ ನನಗೆ ಕಾದಲ್(ಕಾದಲ್ಮೆ) ಎಂದಾದರೂ ಹೇೞಿ.