ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಪೞಗು, ಪೞೆ(ಹೞೆ)

July 22, 2008 - 12:28am — kannadakanda

ಪೞಗು, ಪೞೆ(ಹೞೆ) ಎರಡೂ ಒಂದೇ ಬೇರಿಗೆ ಸೇರಿದ್ದು. ಅವುಗಳ ಅರ್ಥ ಹೊಸದಲ್ಲದ್ದು. ಹೞೆಯದೆಂದೇ ಅರ್ಥ. ನಾವು ಯವುದನ್ನಾದರೂ ಪೞಗಿಸಬೇಕೆಂದರೆ ಅದು ಹೊಸದಱಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಆನೆಯನ್ನು ಪೞಗಿಸುವುದನ್ನೇ ತೆಗೆದುಕೊಳ್ಳಿ. ಅದಱೊಂದಿಗೆ ನಮಗೆ ಸಲಿಗೆ ಬೆಳೆದು ಅದು ನಾವು ಹೇೞಿದಂತೆ ಕೇಳಬೇಕೆಂದರೆ ನಮಗೆ ಆನೆಯ ಪರಿಚಯದ ಹೊಸತಱಲ್ಲಿ ಸಾಧ್ಯವಿಲ್ಲ. ಅದರ ಪರಿಚಯ ನಮಗೆ ಹೞೆಯದಾಗಬೇಕು. ಹಾಗೆಯೇ ನಾವು ಯಾವುದಾದರೂ ವಿಷಯದಲ್ಲಿ ಪೞಗಬೇಕೆಂದರೂ ಆ ವಿಷಯ ನಮಗೆ ಹೞೆಯದಾಗಬೇಕು. ಈ ಉದಾಹರಣೆ ನೋಡಿ: "ವಕೀಲಿವೃತ್ತಿ ಅವನಿಗೇನು ಹೊಸತೇ. ಅದಱಲ್ಲಿ ಪೞಗಿ ಅವನಿಗೀಗ ಹತ್ತು ವರ್ಷವಾಗಿದೆ". ಇಲ್ಲೂ ಪೞಗು ಎಂಬುದು ಹೞೆಯದಾಗಿದೆಯೆಂದೇ ಹೇೞುತ್ತಿದೆ. ತಮಿೞಿನ ಪೞಂ=ಹಣ್ಣು ಇದನ್ನೇ ತೆಗೆದುಕೊಳ್ಳಿ. ಇಲ್ಲಿ ಕಾಯಿ ಅಗಲೇ ಹೞೆಯದಾಗಿ ತಿನ್ನಲು ಯೋಗ್ಯವಾಗಿದೆ. ಆ ಹಣ್ಣನ್ನು ತಿನ್ನದೇ ಬಿಟ್ಟರೆ ಅದು ಎಷ್ಟು ಹೞೆಯದಾಗುತ್ತದೆಂದರೆ ಮರದಿಂದ (ಗಿಡದಿಂದ) ಬಿದ್ದು ಕೊೞೆಯಲು ಸಿದ್ಧವಾಗಿದೆ. ಹೞೆಯದು ಅೞಿಯಬೇಕಲ್ಲವೇ? ಇಲ್ಲೂ ಹೊಸ ಕಾಯಿ ಹೞತಾಗಿ (ಪೞತಾಗಿ) ಪೞವಾಗಿದೆ. ಇನ್ನೂ ಮುಂದೆ ಹೋದರೆ ಪೞತಾಗಿ (ಹೞತಾಗಿ) ಕೊೞೆತುಹೋಗುತ್ತದೆ. ಈ ’ಪೞಗು’ ವಿನ ಪಕಾರವೇಕೋ ಕನ್ನಡದಲ್ಲಿ ಹ ಆಗಲಿಲ್ಲ. ಇಲ್ಲಿ ಪೞಗು ತನ್ನ ಹೊಸರೂಪವಾಗಬೇಕಿದ್ದ ’ಹೞಗು’ ಆಗದೆ ಹೞೆಯ ಪೞಗು ಆಗೇ ಉೞಿದಿದೆ. ಹಾಗೆಯೇ ಪೞಗಾಗಿ ಕೊೞೆಯದಿದ್ದರೆ ಸಾಕು. (ಪೞಗುಮಿನ್ ಬಾೞ್ಗೆ ಕನ್ನಡದೊಳ್).

‹ ಪೊನ್ ರಟ್ಟು ›
  • ದಿನಕ್ಕೊಂದು ಪದ
~.~
  • Login or register to post comments
  • 158 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2008 - 9:15am — mahesha

ಉ: ಪೞಗು, ಪೞೆ(ಹೞೆ)

mahesha's picture

ತಮಿೞು ನುಡಿಯ ಒರ್ವಾತು(ಒಂದು ಮಾತು)

"ಚಿತಿರಂ ಕಯ್ ಪೞಕ್ಕುಂ
ಸೆಂದಮಿೞ್ ವಾಯ್ ಪೞಕ್ಕುಂ" ( ತಿದ್ದಿ ತಪರ್ದೊಡೆ )

"ಚನ್ನಾದ ಚಿತ್ರವೂ ಕಯ್ ಪೞಗಿನಿಂದ
ಚನ್ನಾದ ತಮಿೞು ಬಾಯ್ ಪೞಗಿನಿಂದ"

ಹಾಗೇ ಕನ್ನಡ ಕಂದರಿಗೆ ಎಂದೂ ಎಲ್ಲರನ್ನೂ ’ಪೞಗಿ’ಸಿ ೞ, ಱ, ಷ, ಮಹಾಪ್ರಾಣಗಳನ್ನು ಉಲಿಸುವ ಆಸೆ...!! Smiling

ನಾವು ಇದಕ್ಕೆ ಎದುರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 10:38am — kannadakanda

ಉ: ಪೞಗು, ಪೞೆ(ಹೞೆ)

kannadakanda's picture

ಮಹಾಪ್ರಾಣ ಬಿಡು ಎಂದರೂ ಬಿಟ್ಟೇನು? ಪ್ರಾಣ ಬಿಟ್ಟೇನು. ಆದರೆ ಱ ಮತ್ತು ೞವನ್ನು ಬಿಡಲಾಱೆನಯ್ಯಾ ಮಹೇಶ್ವರದೇವ ಕಾಣಯ್ಯಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 10:41am — mahesha

ಉ: ಪೞಗು, ಪೞೆ(ಹೞೆ)

mahesha's picture

Smiling ಸದ್ಯ ಮಾಪ್ರಾಣವನ್ನಾದ್ರೂ ಬಿಟ್ಟರಲ್ಲ.. Smiling ನನ್ನಿ!! ಅವು ಕನ್ನಡದಲ್ಲಿ ಇರಲೇ ಇಲ್ಲ.

ನೀವು ನಮ್ಮ ಱ/ೞ ಸ್ಪೆಸಲಿಸ್ಟರು.. Smiling

ಸರಿ.. ಱ ಮತ್ತು ೞಗಳನ್ನು ಎಲ್ಲಿವೆ ಎಂದು ತಿಳಿಯಲು ಒಂದು ರೂಲ್-ಸೆಟ್ ಅನ್ನು ಕೂಡಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 11:02am — kannadakanda

ಉ: ಪೞಗು, ಪೞೆ(ಹೞೆ)

kannadakanda's picture

ಱಕ್ಕೆ ಕೊಟ್ಟೇನೂ ಮಾದೇವ. ೞಕ್ಕೆ ಎರಡೇ ಉದಾಹರಣೆ: ಗಾಜು ಪೞ್ ಎಂದು ಒಡೆಯುತ್ತದೆ. ಗೞಗೞ ಗೞುಪುವ ಮಾತಲ್ಲವೀ ಱಳ ಕುಳ ಕ್ಷಳನ ಕತೆ ಕಾಣಯ್ಯಾ ಮಹೇಶ್ವರ ದೇವಾ! ಪೞನುಡಿಗರ ನೋಡಿ ಕಲಿಯೆಂದನಾ ಮಲೈ ಮಹದೇಶ್ವರಾ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 11:55am — Sunil Jayaprakash

ಉ: ಪೞಗು, ಪೞೆ(ಹೞೆ)

Sunil Jayaprakash's picture

ತಮಿೞಿನ ಪೞಂ=ಹಣ್ಣು ಇದನ್ನೇ ತೆಗೆದುಕೊಳ್ಳಿ.

ಇದನ್ನು ಓದಿದ, ದ್ರಾವಿಡಭಾಷಾಪ್ರಿಯರು, ದ್ರಾವಿಡದ ಪೞಂನಿಂದ ಸಕ್ಕದದ ಫಲಂ ಬಂತು ಅಂತಾರೆ!!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 12:09pm — mahesha

ಉ: ಪೞಗು, ಪೞೆ(ಹೞೆ)

mahesha's picture

ಬಂತೇನು? ಬಂದಿದೆ...

ಸಂಸ್ಕ್ರುತ ಹುಟ್ಟಿದ ಇರಾನ್, ಸಿಂದು ಕಣಿವೆಯಲ್ಲಿ ಬರೀ ಬಂಜರು.. ಹಣ್ಣು-ಗಿಣ್ಣು ಏನಿಲ್ಲ. Smiling

ಪೞ್/ಪಣ್

ತಮಿಳರು ವ್ಯಾಕರಣದಂತೆ ಪೞಂ ಆಯ್ತು.. ಕನ್ನಡದಂತೆ ಪಣ್ಣು ಆಯ್ತು. ತೆಲುಗು ಅಂತ ಪಂಡು ಆಯ್ತು.. ಸಂಸ್ಕ್ರತದೋರು ಳ ಹೇಳಕ್ಕೆ ಆಗದೆ ಫಲ ಅಂದ್ರು ಆಶ್ಟೇ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 12:47pm — kannadakanda

ಉ: ಪೞಗು, ಪೞೆ(ಹೞೆ)

kannadakanda's picture

ಸಕ್ಕದದ ಫಲಂ ಕಾಯ್ ಹಾಗೂ ಹಣ್ಣು ಎರಡಕ್ಕೂ ಅನ್ವಯಿಸುತ್ತದೆ. ಅಪಕ್ವ ಅಥವಾ ಪಕ್ವ ಫಲ. ಅಪಕ್ವ ಫಲ=ಕಾಯ್, ಪಕ್ವಫಲ=ಹಣ್ಣು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 9:52am — kannadakanda

ಉ: ಪೞಗು, ಪೞೆ(ಹೞೆ)

kannadakanda's picture

ಈ ಹೞೆಯದೆನ್ನುವುದಕ್ಕೆ ಪೞು, ಹೞು, ಹೞುಕು, ಹೞುಕಲ್ ಎಂಬ ಪದಗಳನ್ನು ಸೇರಿಸುತ್ತಿದ್ದೇನೆ. ಪೞು, ಹೞು, ಹೞುಕು, ಹೞುಕಲ್ ಎಂದರೆ ಕಾಡು. ಅಂದರೆ ಜನಸಂಚಾರವಿರದೆ ಉಪಯೋಗಕ್ಕೆ ಬಾರದೆ ಹೞೆಯದಾಗಿ ಗಿಡಗಂಟಿಗಳು ಬೆಳೆದ ಜಾಗ ಈ ಪೞು, ಹೞು, ಹೞುಕಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಯ್
  • ಕನ್ನಡದ ಪದಗಳನ್ನೊಂದಿಷ್ಟು ಕುಱಿತು
  • ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
  • ಮೊಬೈಲ್ ಫಿಲಾಸಫಿ ಭಾಗ ೧
  • ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 6:32am
  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator