ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ರಟ್ಟು

July 22, 2008 - 6:20am — cmariejoseph

ರಟ್ಟು_೧ (ನಾಮಪದ) [ತೆಲುಗು: ರೆಟ್ಟಿ, ರೆಟ್ಟು]
೧. ಎರಡೆಳೆಗಳನ್ನು ಜೊತೆಯಾಗಿ ಹಾಕಿಕೊಂಡು ನೆಯ್ದ ದಪ್ಪಬಟ್ಟೆ; ಒರಟು ಬಟ್ಟೆ
೨. ಪುಸ್ತಕಕ್ಕೆ ಹಾಕುವ ದಪ್ಪಬಟ್ಟೆ ಅಥವಾ ದಪ್ಪಕಾಗದದ ಮೇಲುಹೊದಿಕೆ; ಬೈಂಡು
೩. ಪುಸ್ತಕವು ಕೊಳೆಯಾಗದಂತಿರಲು ಮೇಲೆ ಹಾಕುವ ಕಾಗದದ ಹೊದಿಕೆ

ರಟ್ಟು_೨ (ನಾಮಪದ) [ತೆಲುಗು: ರಟ್ಟು]
ಯಾವುದಾದರೂ ವಿಷಯವನ್ನು ಬಹಿರಂಗ ಪಡಿಸುವಿಕೆ, -ಹೊರಗೆಡಹುವಿಕೆ, -ಪ್ರಕಟಿಸುವಿಕೆ
(ರಟ್ಟು ಮಾಡುವದಾಯತವಲ್ಲ ಹೆಣ್ಣೊಡಂಬಟ್ಟುದೆ ಸ್ಮರಕುಮಾರನಿಗೆ-ಮೋಹನತರಂಗಿಣಿ; ಸಾಕುಮಾಡಿರವ್ವ . . . ಭ್ರಷ್ಟಮಾತುಗಳನೆಷ್ಟೋ ಕಲ್ಪಿಸಿ ಪಟ್ಟುಪಟ್ಟಿಗೆ ರಟ್ಟುಮಾಡುವುದ-ಪುರಂದರದಾಸ; ಸಂಸಾರ ಗುಟ್ಟು ರೋಗ ರಟ್ಟು-ಗಾದೆ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‹ ಪೊಳೆ, ಪೊೞೆ, ಹೊಳೆ, ಹೊೞೆ ಪೊನ್ ›
  • ದಿನಕ್ಕೊಂದು ಪದ
~.~
  • Login or register to post comments
  • 194 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2008 - 9:18am — mahesha

ಉ: ರಟ್ಟು

mahesha's picture

ಕನ್ನಡ ಕಂದರು ಇದು ಱಟ್ಟು ಎಂದು ಹೇೞ್ತಾರೆ ನೋಡಿ.. Smiling

ಕನ್ನಡದಲ್ಲಿ ’ರ’ಕಾರದಿಂದ ಮೊದಲಾಗುವ ಹಲವು ಒರೆಗಳು ’ಱ’ಕಾರದಿಂದ. ಱೋಡು ಕೂಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 5:33pm — cmariejoseph

ಉ: ರಟ್ಟು

cmariejoseph's picture

ಅದು ಅವರೇ (ಕನ್ನಡಕಂದರೇ) ಸೃಷ್ಟಿಸಿಕೊಂಡ ರಟ್ಟು ಇರಬಹುದು.

ಇತ್ತೀಚೆಗೆ ಬೆಂಗಳೂರಿನ ರಸ್ತೆಗಳೆಲ್ಲ ಕೆಸರು ಕೆಸರಾಗಿರುವುದರಿಂದ ಱೋಡು ಎನ್ನಬಹುದೇನೋ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 7:11pm — ASHOKKUMAR

ಉ: ರಟ್ಟು

ASHOKKUMAR's picture

Quote:
ರಸ್ತೆಗಳೆಲ್ಲ ಕೆಸರು ಕೆಸರಾಗಿರುವುದರಿಂದ ಱೋಡು ಎಂದು ಹೇಳಬಹುದು

ತೋಡು ಎಂದೂ ಹೇಳಬಹುದು Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2008 - 4:25pm — kannadakanda

ಉ: ರಟ್ಟು

kannadakanda's picture

ಇತ್ತೀಚೆಗೆ ಬೆಂಗಳೂರಿನ ರಸ್ತೆಗಳೆಲ್ಲ ಕೆಸಱು ಕೆಸಱಾಗಿರುವುದರಿಂದ ಱೋಡು ಎನ್ನಬಹುದೇನೋ?.
ಅಲ್ಲದೇ ನಿಮ್ಮ ಹೆಸರು ಕೂಡ ಮಱಿ ಜೋಸೆಫ್. ಮಱಿ ಅಂತಲ್ಲ. ಇಂಗ್ಲಿಷಿನಲ್ಲಿ ಸಾಮನ್ಯವಾಗಿ ಸಂಪೂರ್ಣ ಉಚ್ಚರಿಸುವ r is always with trill. ಅಂದರೆ ಸ್ವರ ಮುಂದಿಟ್ಟುಕೊಂಡ ರ್ ಇಂಗ್ಲೀಷಿನಲ್ಲಿ ನಡುಕದೊಂದಿಗೆ ಉಚ್ಚರಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2008 - 4:33pm — kannadakanda

ಉ: ರಟ್ಟು

kannadakanda's picture

ಇತ್ತೀಚೆಗೆ ಬೆಂಗಳೂರಿನ ರಸ್ತೆಗಳೆಲ್ಲ ಕೆಸಱು ಕೆಸಱಾಗಿರುವುದರಿಂದ ಱೋಡು ಎನ್ನಬಹುದೇನೋ?.
ಅಲ್ಲದೇ ನಿಮ್ಮ ಹೆಸರು ಕೂಡ ಮಱಿ ಜೋಸೆಫ್. ಮಱಿ ಅಂತಲ್ಲ. ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಸಂಪೂರ್ಣ ಉಚ್ಚರಿಸುವ r is always with a trill. ಅಂದರೆ ಸ್ವರ ಮುಂದಿಟ್ಟುಕೊಂಡ ರ್ ಇಂಗ್ಲೀಷಿನಲ್ಲಿ ನಡುಕದೊಂದಿಗೆ ಉಚ್ಚರಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2008 - 4:22pm — kannadakanda

ಉ: ರಟ್ಟು

kannadakanda's picture

ಹಾಗೆಲ್ಲ ಎನ್ನಲಾದೀತೇ? ಅದಕ್ಕೊಂದು ಆಧಾರ ಬೇಡವೇ? ಱೋಡು, ಱೆಕ್ಕೆ, ಱಿಕ್ಕಟ, ಱೆಪ್ಪೆ, ಱೇವು ಇದ್ದಹಾಗೆ ಈ ಪದ ಆ ಪಟ್ಟಿಯಲ್ಲಿಲ್ಲ. ನದುಗುವ ಱ ಕೊಡಲು ಹೆದಱಿಕೆ (ನಡುಕ) ಗುಟ್ಟು ರಟ್ಟಾಗಿ ಬಿಟ್ಟರೆ Smiling Eye-wink. ಹಾಗೆಲ್ಲ ಕನಸಿನಲ್ಲೂ ’ರ’ ಕ್ಕೆ ’ಱ’ ಕನ್ನಡಕಂದನೆನ್ನುತ್ತಾನೆಯೆಂದು ಗೞಗೞಿಸಿ ಗುಟ್ಟು ರಟ್ಟು ಮಾಡೀರಿ ಜೋಕೆ! Smiling Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2008 - 4:32pm — kannadakanda

ಉ: ರಟ್ಟು

kannadakanda's picture

ತಪ್ಪೊಪ್ಪು:
ಹಾಗೆಲ್ಲ ಎನ್ನಲಾದೀತೇ? ಅದಕ್ಕೊಂದು ಆಧಾರ ಬೇಡವೇ? ಱೋಡು, ಱೆಕ್ಕೆ, ಱಿಕ್ಕಟ, ಱೆಪ್ಪೆ, ಱೇವು ಇದ್ದಹಾಗೆ ಈ ಪದ ಆ ಪಟ್ಟಿಯಲ್ಲಿಲ್ಲ. ನಡುಗುವ ಱ ಕೊಡಲು ಹೆದಱಿಕೆ (ನಡುಕ) ಗುಟ್ಟು ರಟ್ಟಾಗಿ ಬಿಟ್ಟರೆ Eye-wink Smiling . ಹಾಗೆಲ್ಲ ಕನಸಿನಲ್ಲೂ ’ರ’ ಕ್ಕೆ ’ಱ’ ಎಂದು ಕನ್ನಡಕಂದನೆನ್ನುತ್ತಾನೆಯೆಂದು ಗೞಗೞಿಸಿ ಗುಟ್ಟು ರಟ್ಟು ಮಾಡೀರಿ ಜೋಕೆ! Smiling Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2008 - 4:41pm — kannadakanda

ಉ: ರಟ್ಟು

kannadakanda's picture

ಱೆಕ್ಕೆ ಬೀಸುವಾಗ ಪಱ್ ಎಂದು ಸದ್ದಾಗುತ್ತದೆ. ಱೆಪ್ಪೆ ಮುಚ್ಚುವಾಗ ಱಪ್ ಎಂದ ಹಾಗಾಗುತ್ತದೆ Smiling Eye-wink
ಱೇವು=ಎಱಗು=ಇೞಿಸು ಎಂಬ ಮೂಲಪದದಿಂದ. ಱೋಡಿಸುವಾಗ ಗಹಗಹಿಸಿ ನಗುವುದಱಿಂದ ದನಿಪೆಟ್ಟಿಗೆ ನಡುಗುತ್ತೆ Eye-wink Smiling. ಇವೆಲ್ಲ ಆಧಾರ ಸ್ವಾಮಿ ಱ ಬೞಸಲಿಕ್ಕೆ. Smiling Eye-wink Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಿಮಿರ
  • ದೋಣಿ
  • ಹಾಸಿಗೆ
  • ರಚ್ಚೆ
  • ಸೂರೆ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
  • ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಬರಹ ಹೇಳಿಕೊಡಿ, ನುಡಿ ಬೇಡ.. !
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator