ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಮುಗಿ=ಆವರಿಸು, ಮುಚ್ಚು, ಮುದುಡು. ಇದು ನಿಜವಾದ ಅರ್ಥ ಈ ಪದಗಳಿಗಿರುವುದು. ಸಾಮಾನ್ಯವಾಗಿ ಕೊನೆಗೊಳಿಸು ಎಂಬ ಅರ್ಥ ಜನ ತಿಳಿದಿದ್ದಾರೆ. ಇದಕ್ಕೆ ಕಾರಣ ನಾಟಕ ಅಥವಾ ಸಿನೆಮಾಗಳ ಕೊನೆಯಲ್ಲಿ ತೆರೆ ಮುಚ್ಚಿ ಕೊನೆಯನ್ನು ಸೂಚಿಸುವುದಱಿಂದ ಮುಗಿ=ಕೊನೆ ಎಂದು ಜನ ತಿಳಿದಿದ್ದಾರೆ. ಆದರೆ ಕೈಮುಗಿ ಎಂದಾಗ ಎರಡೂ ಕೈಗಳನ್ನು ಮುಚ್ಚಿ ನಮಸ್ಕರಿಸು ಎಂದಾಗ ಈ ಅರ್ಥ ನಿಚ್ಚಳವಾಗಿರುವುದು ಕಾಣುತ್ತದೆ.

0

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮುಗಿ

ASHMYA's picture

ಅಕ್ಕಿ ಮುಗಿದು ಹೋಯ್ತು ಅನ್ನುವಾಗ,ಮುಗಿ ಅನ್ನು ಖಾಲಿ ಎಂಬರ್ಥದಲ್ಲಿ ಬಳಸ್ತೀವಲ್ಲ್ವ?

ಉ: ಮುಗಿ

mahesha's picture

ಅಕ್ಕಿ ತೀರಿತು ಎಂಬುದೇ ಸರಿಯಾದ ಬಳಕೆ..

ಅಕ್ಕಿ ಮುಗಿತು ಇದು ಪಟ್ಟಣದ ಬಳಕೆಯಂತೆ.

ಉ: ಮುಗಿ

mahesha's picture

ಆದರೂ ಇಂಗ್ಲೀಶಲ್ಲಿ ’close' = ಮುಚ್ಚು/ತೀರು ಎರಡಕ್ಕೂ ಬಳಸೋ ಹಾಗೆ ಬಳಸುತ್ತಾ ಇದ್ದೀವಿ..

ಆದುದರಿಂದ ಮುಗಿ = ಕೊನೆಯಾಗೂ ಕೂಡ.!

ಉ: ಮುಗಿ

kannadakanda's picture

ಸೂಚಿತಾರ್ಥಗಳು ಭಾಷೆ ಬೆಳೆದಂತೆ ಸಹಜ. ನಾನಿಲ್ಲಿ ’ಮುಗಿ’ ಪದದ ನಿಜವಾದ ಅರ್ಥ ಅದು ಹಿಂದೆ ಬೞಕೆಯಲ್ಲಿದ್ದಂತೆ. ನಾಟಕ/ಸಿನಿಮಾ ಕೊನೆಯಾಗುವುದಱ ಸೂಚನೆಗೆ ಹೇಗೆ ಮುಗಿ ಪದ ಬೞಕೆ ಪ್ರಾರಂಭವಾದ ಮೇಲೆ ಮುಗಿ->ತೆರೆ ಮುಚ್ಚು->ಕೊನೆಯಾಗು->ತೀರು ಎಂಬ ಅರ್ಥದಲ್ಲಿ ಜನ ಬೞಸಲು ಪ್ರಾರಂಭಿಸಿರಬಹುದು.

Syndicate content