ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

ಅಂತೂ ಇಂತೂ ನಂಮಾಪೀಸಲ್ಲಿ ಕಂನಡ ಕಲಿಕೆ ಮೊದಲಾಯ್ತು. ನೆಂನೆಯಿಂದ ಮೊಗಸು.

ಇವೊತ್ತು ಅವರ ಡವ್ಟುಗಳಂನು ಟೀ-ಟಯ್ಮಲ್ಲಿ ಕೇಳ್ತಾ ಇದ್ರು.

ಹೇಳಿ ಕೊಡವರು "ನಾವು ಬಾರತೀಯರು", "ನಾವು ಉದ್ಯೋಗಿಗಳು" ಎಂದು ಹೇಳಿಕೊಟ್ಟಿದ್ದಾರಂತೆ.

ಅದಕ್ಕೆ ಬಾರತೀಯ + ರು = ಬಾರತೀಯರು. ಆದರೆ ಉದ್ಯೋಗಿ + ರು = ಉದ್ಯೋಗಿರು ಯಾಕೆ ಆಗಲ್ಲ ಅಂತ ಅವರ ಪ್ರಶ್ನೆ?

ನಾನು ಏನು ಹೇಳದೇ? ನವ್ನುಗಳಂನು ಹೀಗೆ ಹೇಳಬೇಕಾದುದಿಲ್ಲ...

ನಾವು ಇಂಡಿಯನ್ಸು. ನಾವು ಎಂಪ್ಲಾಯೀಸು ಎಂದು ಹೇಳಿ.. ಮೊದಲು ನವ್ನುಗಳಂನು ಬಿಟ್ಟು ಮಿಕ್ಕವುಗಳ ಬಗ್ಗೆ ಒತ್ತುಕೊಟ್ಟು ಕಲಿಯಿರಿ ಅಂದೆ...

ಆದರೆ ನನಗೆ ಪ್ರಶ್ಣೆ

"ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?"

ಕನ್ನಡದ ಒರೆಗಳಲ್ಲಿ ಈ ಗೊಂದಲ ಇಲ್ಲವೇ ಇಲ್ಲ.. !! ಬರೀ ಸಂಸ್ಕ್ರುತ, ಇಂಗ್ಲೀಶಿನ ಎರವಲು ಒರೆಗಳಲ್ಲಿ ಗೊಂದಲ.

0

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

sipayi's picture

’ರು’ ಜಾಸ್ತಿ ಬರೋಲ್ನೋಡ್ರಿ, ಬಂದ್ರ ಬರ್ತತ ಮನುಷ್ಯರ ಬಗ್ಗಿ ಇರ ನಾಮಪದಗಳ್ ’ಅ’ ಕಾರದಾಗ ತೀರಿದ್ರೆ(೧);
ಇನ್ನೇನಾರ ಬ್ಯಾರೆ - ಇ, ಉ, ಎ, ಒ, ಔ, ಯಾತರದಾರ ಆಗಿರ್ಲಿ - ಇದ್ರೆ ’ಗಳು’ ಬರ್ತಾವ (೨). ಬ್ಯಾರೆ ಪ್ರಾಣಿಗೋಳು(೩) ಮತ್ತ, ನಿರ್ಜೀವ ವಸ್ತು/ವಿಷಯ ಇವು ’ಗಳು’ ತಗಂತಾವ (೪).

(೧) ಉ: ಮಾಲೀಕ, ಮಾಲೀಕರು; ಸಂಘ, ಸಂಘರು; ಆಪ್ತ, ಆಪ್ತರು; ಸಾದ, ಸಾದರು; ಜನ, ಜನರು; ಬ್ರಾಹ್ಮಣ, ಬ್ರಾಹ್ಮಣರು; ಅಲ್ಪ, ಅಲ್ಪರು; ಅವ, ಅವರು; ಇತ್ಯಾದಿ.,
(೨) ಉ: ಪಾಪಿ, ಪಾಪಿಗ್ಳು; ಆದರ್ಶವಾದಿ, ಆದರ್ಶವಾದಿಗಳು; ನಿರುದ್ಯೋದಿ, ನಿರುದ್ಯೋದಿಗಳು; ಕಂತ್ರಿ, ಕಂತ್ರಿಗಳು; ಬೇವಾರ್ಸಿ, ಬೇವಾರ್ಸಿಗ್ಳು; ಇತ್ಯಾದಿ.,
(೩) ಉ: ಹುಲಿ, ಹುಲಿಗಳು; ನರಿ, ನರಿಗಳು; ಮಂಗ್ಯಾ, ಮಂಗ್ಯಾಗ್ಳು; ರಾಜಕಾರಣಿ, ರಾಜಕಾರಣಿಗಳು; ಹಂದಿ, ಹಂದಿಗಳು; ಇತ್ಯಾದಿ.,
(೪) ಉ: ಹೆಣ, ಹೆಣಗಳು; ಊಟ, ಊಟಗ್ಳು; ಶಂಖ, ಶಂಖಗೋಳು; ಓದು, ಓದುಗಳು; ಬಸ್ಸು, ಬಸ್ಸುಗಳು; ಪಂಕ್ಚರ್, ಪಂಕ್ಚರ್‍ಗಳು; ಇತ್ಯಾದಿ.,

ಉ: ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

sipayi's picture

ಮರ್ತ್ಬಿಟ್ಟೆ ನೋಡ್ರಿ, ಅದೈತಲ್ಲ, ಅದ್ಬಂದು ’ಭಾರತೀಯ’, ’ಬಾರತೀಯ’ ಅಲ್ಲ...

Syndicate content