ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ವಿಶ್ವಾಸ ಮತ ಮತ್ತು ವಿಶ್ವಾಸಘಾತ

July 24, 2008 - 10:08am — mahesha

ಪರಮಾಣು ಒಪ್ಪಂದಕ್ಕೆ ಒಪ್ಪಿಗೆ ಇದ್ದರೂ ತನ್ನ ತತ್ವ ಸಿದ್ದಾಂತಕ್ಕೆ ಎಂದೂ ಚ್ಯುತಿಗೆಡೆಯಿಯ್ಯದೆಂದು ಪಣತೊಟ್ಟರಿವ ಪಕ್ಷ, ಕೇವಲ ಸರಕಾರದ ಶೀಘ್ರಪತನಪ್ರಯಾಸಹೇತು ಅತಿಶೀಘ್ರಾಧಿಕಾರ’ಗ್ರಹಣ’ಕ್ಕಾಗಿ ಅಬ್ಬರವಾಗಿ ವಿರೋಧವ್ಯಕ್ತಪಡಿಸುತ್ತಾ ಎಡಪಂಥೀಯರ ಸಹ ಬಲಗಯ್ಯನ್ನು ಸೇರಿಸಿತು.

ಇದೇ ಸದವಕಾಶವೆಂದು ಆನೆಯಂತಹ ದೊಡ್ಡ ಜನರ ಚಿಕ್ಕಚಿಕ್ಕ ಪಕ್ಷಗಳು ತಮ್ಮ ಸ್ಥಳೀಯಲಾಭಾಂಕ್ಷೆಯಿಂದ ನಮ್ಮ ದೇಶಕ್ಕೆ ಅಪಾರ ಇಂಧನಪ್ರಾಪ್ತಿಪ್ರಯತ್ನದ ಜ್ಞಾನವಿದ್ದರೂ, ವಿರೋಧಕ್ಕೆ ನಿಂತವು.

ಇಷ್ಟೆಲ್ಲ ಘಟನಾನುಘಟನೆಯ ನಡುವೆ.. ಶಿಸ್ತಿನ ಪಕ್ಷದಲ್ಲೇ ಅಶಿಸ್ತು ಎದ್ದು ಅದರ ಹರಿಯಾಳುಗಳೇ ಕಡಲೆಪುರಿಯಂತೆ ಹಂಚಿ’ಹೋದರು’.

ಈ ವಿಶ್ವಾಸಮತಾಗ್ರಹದಲ್ಲಿ ಮನಮೋಹನಸಿಂಘರು ತಮ್ಮ ಪರಮಾಣ್ವಸ್ತ್ರೈಕಮಾತ್ರದಿಂದ ಹಲಪಕ್ಷಿಗಳನ್ನು ಬೇಟೆಯಾಡಿದರು.
ಅಂತೂ ಧೈರ್ಯದಿಂದ ವಿಶ್ವಾಸಮತ ಆಗ್ರಹಿಸಿ, ಎಡಪಂಥೀಯರನ್ನು ಎಡಕ್ಕೆ ತಳ್ಳಿ ತಮ್ಮ ’ಬಲ’ವನ್ನೂ ಇನ್ನೂ ಬಲಪಡಿಸಿಕೊಂಡರು.

ಸದ್ಯ ಇನ್ನೂ ಕನಿಷ್ಠ ಆರುಮಾಸಗಳು ಎಡ-ಬಲದ ಯಾವ ಕವಾಯಿತ್ತಿನ ಮನರಂಜನೆ ಇಲ್ಲ..! ಅಷ್ಟರಲ್ಲಿ ಅಣುಒಪ್ಪಂದಕ್ಕೆ ಸಿಹಿಸಹಿ ಬಿದ್ದಿರುತ್ತದೆ.

ನಮ್ಮ ಪ್ರಧಾನಮಂತ್ರಿಯ ಬಗ್ಗೆ ಹೆಮ್ಮೆಯಾಗುತ್ತಿದೆ.. ! ಜಾಣರಲ್ಲಿ ಜಾಣರೂ, ಚಾಪೆ, ರಂಗೋಲಿ,ಕೆಳಗೆ ಗುಪ್ತಗಾಮಿಗಳು! Smiling

ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಎಷ್ಟು ಶ್ರೇಷ್ಠ!! ಧನ್ಯರು ನಾವು ಬೃಹತ್ ಭಾರತೀಯರು.

‹ ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು? ›
  • ರಾಜಕೀಯ
~.~
  • Login or register to post comments
  • 336 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 5:28pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

> ಪರಮಾಣು ಒಪ್ಪಂದಕ್ಕೆ ಒಪ್ಪಿಗೆ ಇದ್ದರೂ ತನ್ನ ತತ್ವ ಸಿದ್ದಾಂತಕ್ಕೆ ಎಂದೂ ಚ್ಯುತಿಗೆಡೆಯಿಯ್ಯದೆಂದು ಪಣತೊಟ್ಟರಿವ ಪಕ್ಷ, ಕೇವಲ ಸರಕಾರದ ಶೀಘ್ರಪತನಪ್ರಯಾಸಹೇತು
> ಅತಿಶೀಘ್ರಾಧಿಕಾರ’ಗ್ರಹಣ’ಕ್ಕಾಗಿ ಅಬ್ಬರವಾಗಿ ವಿರೋಧವ್ಯಕ್ತಪಡಿಸುತ್ತಾ ಎಡಪಂಥೀಯರ ಸಹ ಬಲಗಯ್ಯನ್ನು ಸೇರಿಸಿತು.

ಇಲ್ಲಿ ನಿಮ್ಮ ಅನಿಸಿಕೆ ತಪ್ಪಿದೆ..

ಅಡ್ವಾಣಿ ಹೇಳಿದ್ದನ್ನು ಮುಕ್ಕಾಲು ಮಂದಿ ಸರಿಯಾಗಿ ಅರಿತು ಕೊಂಡಿಲ್ಲ...
"Nuclear deal is not acceptable in its current form"
ಇಲ್ಲಿ
" in its current form" ಜನ ಇದನ್ನು ಮರೆತಂತಿದೆ ಅಥವಾ ಜಾಣ ಕಿವುಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 5:38pm — roshan_netla

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

roshan_netla's picture

ವಾಲಗ ಊದಿ ಜಾಗಟೆ ಬಾರಿಸಿ ಹೇಳಿದರೆ ಸುಳ್ಳು ಸತ್ಯ ವಾಗುತ್ತೆ!! ಮನಮೊಹನ ಸಿಂಗರು ಜಾಣರು!! ಚಿದಂಬರಂ ಇನ್ನೂ ಜಾಣರು ..ಜಾಣರೆಲ್ಲರು ಸೇರಿ ನಮ್ಮ ಬದುಕನ್ನು ಮಾಡಿದರು ನೋಡಿ..ಅಕ್ಕಿ ೨೫ ರುಪಾಯಿ, ನೀರುಳ್ಳಿ ೧೬ ರುಪಾಯಿ..ನಮಗೆ ಬೇಕು ಅಣ್ಣು ವಿಧ್ಯುತ್ತು..ಆದರೆ ನಮೊಂದಿಗೆ ಒಪ್ಪಂದ ಮಾಡುವ ರಾಷ್ಟ್ರಕ್ಕೆ ಬೇಡವಾಗಿದೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 11:40pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಸರಿಯಾಗಿ ಹೇಳಿದ್ದೀರಿ...
೧. ಈಗಲೂ ಜನಕ್ಕೆ (ನನಗಂತೂ) ಏಕೆ ಅಣು ಒಪ್ಪಂದ ಏಕೆ ಬೇಕೆ ಬೇಕು ಎಂದು ತಿಳಿದಿಲ್ಲ ..
ನಮ್ಮ ಘನ ಸರ್ಕಾರ ಇದನ್ನು ಜನಕ್ಕೆ ಮನವರಿಕೆ ಮಾಡಿ ಕೊಡುವ ಗೋಜಿಗೂ ಹೋಗಲ್ಲಿಲ್ಲ...ಇದು ವೈಫಲ್ಯವಲ್ಲದೆ ಇನ್ನೇನು...

೨. ಜನರ ಬೇರೆ ಎಲ್ಲ ಸಮಸ್ಯೆಗಳೂ ತೀರಿತ್ತೆ, ಇಷ್ಟು ಪಟ್ಟು ಹಿಡಿಯಲು?

೩. ಸರಕಾರ ಉರುಳಿದ್ದರೆ, ಸಾವಿರಾರು ಕೋಟಿ ರೂ ದಂಡ ಜನ ಸಾಮಾನ್ಯನ ತಲೆಯ ಮೇಲೆ ಬೀಳುತ್ತಿರಲಿಲ್ಲವೇ?
ಆಗಲೂ ಭಾ ಜ ಪಾ/ಎಡ ಪಕ್ಷಗಳನ್ನೇ ದೂರುತ್ತಿದ್ದಿರಿ ಸರಕಾರ ಉರುಳಿಸಲು ಕಾರಣವೆಂದು...!!!

ನನ್ನ ಪ್ರಕಾರ ಮನಮೋಹನ ಸಿಂಗ್ ಅತ್ಯಂತ ಕಳಪೆ ಪ್ರಧಾನಿ ಗಳಲ್ಲಿ ಒಬ್ಬರಾಗಿ ಹೊಮ್ಮಿದ್ದಾರೆ.. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 11:51pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಅಣು ಒಪ್ಪಂದದ ಬಗ್ಗೆ ಸರಕಾರ ಜನರಿಗೆ ಎಲ್ಲಾ ಸಂಗತಿಗಳನ್ನು ಬಹಿರಂಗ ಪಡಿಸಬೇಕಿಲ್ಲ. ಆ ಸವಲತ್ತು ಸಾಂವಿಧಾನಿಕವಾಗಿ ಸರಕಾರಕ್ಕಿದೆ. ಒಟ್ಟಾರೆಯಾಗಿ ಅಣು ಶಕ್ತಿಯ ಚಟುವಟಿಕೆಗಳಲ್ಲಿ ಸರಕಾರ ಎಷ್ಟರ ಮಟ್ಟಿಗೆ ರಹಸ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ವಿವಾದಗಳಿವೆ.
ಹೆಚ್ಚಿನ ಓದಿಗಾಗಿ ಇಲ್ಲಿಗೆ ತಾಕಿ: http://kendasampige.com/article.php?id=1083
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 12:00am — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಎಲ್ಲ ಸಂಗತಿಗಳೂ ಜನ ಸಾಮಾನ್ಯನಿಗೆ ಬೇಕಿಲ್ಲ..
ಉದಾ..
- ಅಣು ಒಪ್ಪಂದದಿಂದ ವಿದ್ಯುತ್ ಸಿಗತ್ತೆ...
ನನ್ನ ಪ್ರಶ್ನೆ ಯಾವಾಗ? Smiling
ಹೇಳ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 12:06am — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಅಣು ಶಕ್ತಿ ಹಾಗೂ ಅಣು ವಿದ್ಯುತ್ ಬಗೆಗೆ ತಿಳಿಯುವ ಆಸಕ್ತಿ ಇದ್ದರೆ ಕಳೆದ ಶನಿವಾರದ ಪ್ರತಾಪ್ ಸಿಂಹರ ಲೇಖನ ಓದಬಹುದು.
ಸರಕಾರ ಹೇಳಿದ್ದನ್ನು ನಂಬುವ ಸ್ಥಿತಿಯಲ್ಲಿ ಇಲ್ಲದವರಿಗೆ ಯಾವ ಮಾಹಿತಿಯೂ ಪಥ್ಯವಾಗದು...

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 12:10am — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಕೊಂಡಿ ಕಳಿಸಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 9:12am — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಅಂದ ಹಾಗೆ ಚೀನಾ ದೇಶ ಹದಿಮೂರು ವರುಷಗಳನ್ನು ತೆಗೆದು ಕೊಂಡಿತಂತೆ ೧೨೩ ಒಪ್ಪಂದ ಸಹಿ ಮಾಡಲು...
ಮೊನ್ನೆ Deccan Herald ನಲ್ಲಿ ಇದನ್ನು ಬರೆದಿದ್ದರೆ...
ನಮಗೆ ಯಾಕೆ ಅರ್ಜೆಂಟು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:17pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಚೀನಾದಲ್ಲಿ ಮಳೆಬರುವ ಮುನ್ಸೂಚನೆ ಇದೆ ಎಂದರೆ ನೀವ್ಯಾಕೆ ಕೊಡೆ ಹುಡುಕುತ್ತೀರಿ?

ಅಣು ಒಪ್ಪಂದದ ಬಗ್ಗೆ ಒಂದು ವಸ್ತುನಿಷ್ಠವಾದ ಲೇಖನ ಇಲ್ಲಿದೆ ಗಮನಿಸಿ: http://kannadathinktank.blogspot.com/2008/07/blog-post_24.html
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:27pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

> ಚೀನಾದಲ್ಲಿ ಮಳೆಬರುವ ಮುನ್ಸೂಚನೆ ಇದೆ ಎಂದರೆ ನೀವ್ಯಾಕೆ ಕೊಡೆ ಹುಡುಕುತ್ತೀರಿ?

ಚರ್ಚೆಯ ವಿಷಯವಿದ್ದರೆ ಒಳಿತು...ಕೊಂಕು ಬೇಡ...

ಕೊಂಡಿ ಓದಿ ಬರುವೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:36pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಓದಿದೆ...
ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ...

ಅಣು ವಿದ್ಯುತ್ ನಮ್ಮ ಮನೆಗೆ ಯಾವಾಗ ಬತ್ತದೆ?ವಸಿ ಹೇಳ್ರೀ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:43pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಅಣು ವಿದ್ಯುತ್ ಆಗಲೇ ಪೂರೈಕೆಯಾಗುತ್ತಿದೆ. http://www.icjt.org/npp/podrobnosti.php?drzava=11&lokacija=679
ನಿಮ್ಮ ಮನೆಗೆ ಅಣು ವಿದ್ಯುತ್ ಯಾವಾಗ ಬೇಕು ಎಂಬುದನ್ನು ಹೇಳಿ... ಕೂಸು ಹುಟ್ಟಲು ಬಿಡಿ ಅನಂತರ ಕುಲಾವಿಯ ಸೈಜಿನ ಬಗ್ಗೆ ಚರ್ಚೆ ನಡೆಸೋಣ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:51pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

> ಅಣು ವಿದ್ಯುತ್ ಆಗಲೇ ಪೂರೈಕೆಯಾಗುತ್ತಿದೆ.

ಅಂ! ಆಗ್ಲೇ ಅಣು ವಿದ್ಯುತ್ ಪೂರೈಕೆ ಆಗ್ತದ...

ಮತ್ತೆ ಜನ ಸಾಮಾನ್ಯನ್ಗೆ ಏನು ಕೊಡತ್ತೆ ಅಣು ಒಪ್ಪಂದ...

ಏನೋ ಅಣ್ವಸ್ತ್ರ ಅದು ಇದೂ ಅಂತಾರಪ್ಪ ಆ ಕೊಂಡೀಲಿ...
ಅದೆಲ್ಲ ನಂಗೆ ಬೇಕಾಗಿಲ್ಲ...

> ನಿಮ್ಮ ಮನೆಗೆ ಅಣು ವಿದ್ಯುತ್ ಯಾವಾಗ ಬೇಕು ಎಂಬುದನ್ನು ಹೇಳಿ... ಕೂಸು ಹುಟ್ಟಲು ಬಿಡಿ ಅನಂತರ ಕುಲಾವಿಯ ಸೈಜಿನ ಬಗ್ಗೆ ಚರ್ಚೆ ನಡೆಸೋಣ.

ಹಾಗಲ್ಲ ನಾನು ಕೇಳಿದ್ದು..

ನಮ್ಮ ಸರ್ಕಾರದವರು ಯಾವುದಾನ ಯೋಜನೆ ಹಾಕಿದರೆ ಇಂಥ ದಿನಕ್ಕೆ ಮುಗಿಯತ್ತೆ ಅಂಥ ಹೇಳಾಕಿಲ್ವಾ?
ಹಂಗೆ ಇದು ಕೇಳ್ತಾ ಇರೋದು...
ನಂ ಬೆಂಗಳೂರಿನಲ್ಲಿ ೩ ದಿನಕ್ಕೆ ಅಂದರ ಪಾಸ್ ಕಟ್ತೀನಿ ಅಂದ್ರು...ಕಡೆ ಪಕ್ಷ ೩೦ ದಿನಕ್ಕಾದ್ರೂ ಆಯ್ತಾ...
ಅಂಗೆ ಇದನ್ ಸ್ವಲ್ಪ ನನ್ನಂತ ಜನ ಸಾಮಾನ್ಯನ್ಗೆ ಬಿಡಿಸಿ ಹೇಳಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 8:05pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಶ್ರೀನಿವಾಸರೇ,
ಭಾರತ ಅಮೇರಿಕಾದೊಂದಿಗೆ ಮಾಡಿಕೊಳ್ಳುತ್ತಿರುವುದು ನಾಗರೀಕ ಪರಮಾಣು ಒಪ್ಪಂದ. ಇದರಿಂದಾಗಿ ಐಎಇಎ ನ ಸದಸ್ಯರಾಗಿರುವ ರಾಷ್ಟ್ರಗಳಿಂದ ಭಾರತ ಅಣುವಿದ್ಯುತ್ ಉತ್ಪಾದನೆಗೆ ಬೇಕಾಗುವ ಯುರೇನಿಯಂನ್ನು ಕೊಂಡುಕೊಳ್ಳಬಹುದು. ಈ ಒಪ್ಪಂದದಿಂದ ಅಮೇರಿಕಾ ಭಾರತಕ್ಕೆ ಯುರೇನಿಯಂ ಪೂರೈಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಈಗ ಒಟ್ಟು ಅಣು ವಿದ್ಯುತ್ ಉತ್ಪಾದನೆ ಶೇ ನಾಲ್ಕರಷ್ಟು ಬೇಡಿಕೆಯನ್ನು ಪೂರೈಸುತ್ತಿದೆ. ಈ ಒಪ್ಪಂದದಿಂದ ಅದು ಶೇ. ೯ಕ್ಕೆ ಏರುವ ಸಾಧ್ಯತೆ ಇದೆ. ಆದರೆ ಬೇರೆ ಶಕ್ತಿಯ ಉತ್ಪಾದನೆಯ ಮಾರ್ಗಗಳಿಗೆ ಹೋಲಿಸಿದರೆ ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಕಡಿಮೆ ಖರ್ಚಿನ ವಿಷಯ. ಅಲ್ಲದೆ ಈ ಯುರೇನಿಯಂ ಕೊಂಡುಕೊಳ್ಳುವ, ಅದನ್ನು ನಾಗರೀಕ ಬಳಕೆಗೆ ಬಳಸುವ ಸಂಗತಿಗಳೆಲ್ಲಾ ರಾಷ್ಟ್ರೀಯ ರಹಸ್ಯಗಳು. ಇವನ್ನೆಲ್ಲಾ ಸಂಸತ್ತಿನಲ್ಲಿ ಬಹಿರಂಗ ಪಡಿಸಲಾಗದು.

ಇನ್ನು ಈ ಒಪ್ಪಂದದಿಂದ ಭಾರತದ ವಿದ್ಯುತ್ ಕ್ಷಾಮ ನಿವಾರಣೆಯಾಗುತ್ತದಾ? ಖಂಡಿತಾ ಇಲ್ಲ. ವಿದ್ಯುತ್ ಸ್ವಾವಲಂಬನೆಗೆ ಈ ಒಪ್ಪಂದ ಒಂದು ಪುಟ್ಟ ಹೆಜ್ಜೆ ಅಷ್ಟೇ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಒಪ್ಪಂದ ಬಹು ನಿರ್ಣಾಯಕವಾದದ್ದು.
ಇದಿಷ್ಟೂ ನನ್ನ ಗ್ರಹಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳುವೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 8:13pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

>> ಅಲ್ಲದೆ ಈ ಯುರೇನಿಯಂ ಕೊಂಡುಕೊಳ್ಳುವ, ಅದನ್ನು ನಾಗರೀಕ ಬಳಕೆಗೆ ಬಳಸುವ ಸಂಗತಿಗಳೆಲ್ಲಾ ರಾಷ್ಟ್ರೀಯ ರಹಸ್ಯಗಳು. ಇವನ್ನೆಲ್ಲಾ ಸಂಸತ್ತಿನಲ್ಲಿ ಬಹಿರಂಗ ಪಡಿಸಲಾಗದು.

ನಿಮಗೆ ಗೊತ್ತು! ನನಗೆ ಈಗ ಗೊತ್ತಾಯ್ತ ನೀವು ಹೇಳಿದ್ದರಿಂದ ಸಂಪದಿಗರಿಗೆಲ್ಲ ಗೊತ್ತಾಯ್ತ...!!!!
ಸಂಸತ್ತು ಏನು ..???ಗುಟ್ಟೆಲ್ಲಿ ಬಂತು!???

ಅಲ್ಲರೀ ನನ್ ಪ್ರಶ್ನೆ ತುಂಬಾ ಸಿಂಪಲ್ ಯಾವಾಗ ಅಂತಾ...

ಇಂಥಾ ದಿನಕ್ಕೆ ಮುಗೀತದೆ ಅಂತ ಹೇಳೋ ಜಾವಬುದಾರಿ ಸರಕಾರಕ್ಕೆ ಇದೆ ಅಂತೀರೋ ಇಲ್ಲವೊ ಹೇಳಿ...

ಕಡಿಮೆ ಕರ್ಚಾ ಎಷ್ಟು? ಇದೆಲ್ಲ ಸರಕಾರ ಕೊಡ್ಬೇಕು ತಾನೆ...ಇಷ್ಟಿತು ಆಯ್ತದೆ ಅಂತ..
ಇದನ್ನ ಜನತೆಗೆ ಯಾವಾಗ /ಎಲ್ಲಿ ಕೊಟ್ಟಿದಾರೆ ಹೇಳಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 8:18pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಇದನ್ನ ಸ್ವಲ್ಪ ಓದಿ...

Nuke deal is not in national interest

Sir,
Nuclear deal is not in national interest. It is wishful thinking by the corrupt Congress that they have people’s support.
I’ve read the 123 agreement, the Hyde act and the IAEA agreement. BJP is correct that this deal in its present form will sacrifice our national security.
But why is Congress hiding the fact that this deal will bring electricity only after 2030 and will come at atleast six times the cost?
It took China 13 years of negotiation before it signed its 123. So what is the hurry?
When the deal is already through, why are they fooling the people by calling this a vote of confidence on nuclear deal?
Instead they must focus on issues that affect the common people.
I am glad that Mr Advani and the Left parties pointed these out on the floor of the Parliament.
It does sound like a personal deal between the two lame duck heads, Bharatiya PM and US President.
SEEMA
Dallas, TX

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 8:33pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಮಾನ್ಯರೇ,
ಇಂಥಾ ಎಷ್ಟೋ ವಾದಗಳನ್ನೂ ಚರ್ಚೆಯ ಎರಡೂ ಕಡೆಗೂ ಒಡ್ಡಬಹುದು. ಬಹುಶಃ ಇಂಥ ಬಿಕ್ಕಟ್ಟಿನ ತೀರ್ಮಾನ ನನ್ನಂಥವನ ಅಳವಿಗೆ ನಿಲುಕದ್ದು ಎನ್ನಿಸುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 8:35pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

> ಇಂಥಾ ಎಷ್ಟೋ ವಾದಗಳನ್ನೂ ಚರ್ಚೆಯ ಎರಡೂ ಕಡೆಗೂ ಒಡ್ಡಬಹುದು

ಇಲ್ಲೇ ಇರೋದು ಪ್ರಾಬ್ಲಮ್ಮು!
ಅಂಗಂದ್ರೆ ಜನ ಸಾಮಾನ್ಯನ್ಗೆ ಇನ್ನು ಯಾಕೆ ಬೇಕು ಅಂತ ಗೊತ್ತಾಗಿಲ್ಲ ಅಂತಾ Smiling

ಇದನ್ನ ಸರಕಾರ ಸ್ವಲ್ಪ ಹೇಳ್ಬೇಕು...ಅವಾಗ ನಮ್ಮಂತೋರಿಗೆ ನಿಮ್ಮಂತೋರಿಗೆ ಎಲ್ಲಾರ್ಗೂ ಸಮಾಧಾನ ಆಗತ್ತೆ!
ಅಲ್ಲವಾ?

ಇದನ್ನೇ ನಾನು ಹೇಳಿದ್ದು ಸರಕಾರದ ವೈಫಲ್ಯ ಅಂತ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 12:14pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ನೀವು ಬರಿ ೯% ಅನ್ದ್ರೀ...ಸುಮ್ಕೆ ಯೋಚನೆ ಮಾಡ್ತಾ ಇದ್ದೆ...

ಅಲ್ಲ ನಮ್ಮ ಇಸ್ರೋ ಅವರು ಚಂದ್ರನ್ ಹತ್ರಾನೇ ಹೋಗ್ತಾರಂತೆ...
ನಮ್ಮಲ್ಲಿ ಇರೋದನ್ನೇ ಉಪಯೋಗಿಸ್ಕೊಂಡು ವಿದ್ಯುತ್ ತಯಾರಿ ಮಾಡಕ್ಕೆ ಆಗಲ್ವಾ?
ಅದು ೪% ರಿಂದ ೯% ಮಾಡಕ್ಕೆ ಆಗೋಷ್ಟು...!!!

> ವಿದ್ಯುತ್ ಸ್ವಾವಲಂಬನೆಗೆ ಈ ಒಪ್ಪಂದ ಒಂದು ಪುಟ್ಟ ಹೆಜ್ಜೆ ಅಷ್ಟೇ.

ಸ್ವಾವಲಂಬನೆ ಅಂದ್ರೆ ಬೇರೆ ಅವರ ಸಹಾಯ/ಅವಲಂಬಿಸದೆ ಇಲ್ಲದೆ ಅಂತ ಅಲ್ವ? ನಂಗೆ ಸಂಸ್ಕೃತ ಗೊತ್ತಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 2:32pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಇದು ತೀರಾ ಅಪ್ರಬುದ್ಧವಾದ ವಾದ. ಇಸ್ರೋದವರು ಚಂದ್ರನವರೆಗೂ ಹೋಗಬಲ್ಲರು, ಭಾರತದ ವಿಜ್ಞಾನಿಗಳು ಸೂಪರ್ ಕಂಪ್ಯೂಟರನ್ನು ಕಂಡು ಹಿಡಿಯಬಲ್ಲರು. ಅಂಥ ವಿಜ್ಞಾನಿಗಳೇ ಹೇಳುತ್ತಿರುವುದು, ನಮಗೆ ಯುರೇನಿಯಂ ಬೇಕಿದೆ. ಭಾರತದ ನಿಕ್ಷೇಪಗಳಲ್ಲಿ ಯುರೇನಿಯಂ ಪ್ರಮಾಣ ಕಡಿಮೆಯಿದೆ ಎಂದು.

ಸ್ವಾವಲಂಬನೆ ಎಂದರೆ ಯಾರಿಂದಲೂ ನೆರವು ಪಡೆಯದೆ ಇರುವುದು ಎಂದು ಈಗಿನ ಜಾಗತೀಕರಣದ ಯುಗದಲ್ಲೂ ಆಲೋಚಿಸುತ್ತೀರೆಂದರೆ ನನಗೆ ಆಶ್ಚರ್ಯವಾಗುತ್ತದೆ. ನಮ್ಮ ವಿದ್ಯುತ್ ಸ್ವಾವಲಂಬನೆಗೆ ಯುರೇನಿಯಂ ಇಂಧನ ಪೂರೈಕೆ ಮಾಡಿಕೊಳ್ಳುತ್ತಿದೆ ಅಷ್ಟೇ.

ನಿಮ್ಮ ಅಭಿಪ್ರಾಯವನ್ನು ಸ್ಪಷ್ಟ ಪಡಿಸಿ. ನೀವು ಸಂಪೂರ್ಣವಾಗಿ ಅಣು ಒಪ್ಪಂದವನ್ನು ಬಹಿಷ್ಕರಿಸುತ್ತೀರೋ, ಅಥವಾ ಒಪ್ಪಂದ ಸರಿ ಆದರೆ ಕೆಲವು ಮಾರ್ಪಾಡು ಆಗಬೇಕು ಅನ್ನುತ್ತೀರೋ, ಇಲ್ಲವೇ ನಮ್ಮ ನಾಡಿನ ಸ್ಥಿತಿಗತಿಗಳ ಬಗ್ಗೆಗಮನ ಕೊಡುವ ಬದಲು ಚೀನಾ ಅಷ್ಟು ವರ್ಷ ತಗೊಳ್ತು. ನಾವೂ ಅಷ್ಟೇ ವರ್ಷದವರೆಗೆ ಮುಂದೂಡೋಣ ಎನ್ನುತ್ತೀರೋ? ನಿಮ್ಮ ನಿಲುವು ಸ್ಪಷ್ಟ ಪಡಿಸಿ...

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 2:53pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

>> ಇದು ತೀರಾ ಅಪ್ರಬುದ್ಧವಾದ ವಾದ.
ಯಾಕೆ?

ನಂ ಕಬಿನಿಲಿ ವಿದ್ಯುತ್ ಉತ್ಪಾದನೆ ಮಾಡೋಣಾ ಅಂದ್ರೆ ಗಲಾಟೆ ಮಾಡೋಕ್ಕೆ ಜನ ಸೈ ಅಂತಾರೆ ...ಯಾಕೆ?
ಹಿಂಗೆ ನಂ ದೇಶದಲ್ಲಿ ಬ್ರಹ್ಮಪುತ್ರದಲ್ಲಿ ನೀರು ಉಕ್ಕಿ ಹರಿಯುತ್ತೆ...ಸುಮ್ನೆ ಹೋಗಿ ಸಮುದ್ರ ಸೇರತ್ತೆ ...
ವಿದ್ಯುತ್ ನಾವೇ ತಯಾರು ಮಾಡಕ್ಕೆ ಆಗಲ್ವಾ??? ಅಣು ವಿದ್ಯುತ್ತೆ ಬೇಕಾ?

ಅಷ್ಟೊಂದ್ ವಿಜ್ನಾನಿಗಳೆಲ್ಲ ಬಡಕೊತಾ ಇದ್ದರೂ, ಥೋರಿಯಂ ಬಗ್ಗೆ ಯಾಕೆ ಸರಕಾರ ಕಣ್ಣು ಮುಚ್ಚಿದೆ?

ಇದು ನನ್ನ ಪ್ರಶ್ನೆ...

>> ಸ್ವಾವಲಂಬನೆ ಎಂದರೆ ಯಾರಿಂದಲೂ ನೆರವು ಪಡೆಯದೆ ಇರುವುದು ಎಂದು ಈಗಿನ ಜಾಗತೀಕರಣದ ಯುಗದಲ್ಲೂ ಆಲೋಚಿಸುತ್ತೀರೆಂದರೆ ನನಗೆ ಆಶ್ಚರ್ಯವಾಗುತ್ತದೆ. ನಮ್ಮ ವಿದ್ಯುತ್ ಸ್ವಾವಲಂಬನೆಗೆ ಯುರೇನಿಯಂ ಇಂಧನ ಪೂರೈಕೆ ಮಾಡಿಕೊಳ್ಳುತ್ತಿದೆ ಅಷ್ಟೇ.

ರೀ ಒಂದು ಕಡೆ ವಿದ್ಯುತ್ ಸ್ವಾವಲಂಬನೆ ಅಂತೀರಾ...
ಇನ್ನೊಂದ್ ಕಡೆ ಬೇರೆ ದೇಶದ ಯುರೇನಿಯಮ್ ಬೇಕು ಅಂತೀರಾ...
ಏನ್ರೀ confuse ಮಾಡ್ತೀರ....
ನಾನಲ್ಲ ಹೇಳಿದ್ದು ಸ್ವಾವಲಂಬನೆ ಅಂತ..

ಬೇರೆ ದೇಶದ ಮೇಲೆ ಅವಲಂಬಿಸಿದ ಮೇಲೆ ನಾಳೆ ಅವರು ಹೇಳ್ತಾರಪ್ಪ ನಂಗೆ ಇಲ್ಲ ಯುರೇನಿಯಮ್ ನಿನಗೆಲ್ಲಿಂದ ಕೊಡಲಿ ಹೋಗಯ್ಯ ಅಂತಾ..ಅವಗೆನ ಮಾಡೋದು...
(ಸೂ...ಭಾರತ ಅಕ್ಕಿ ರಫ್ತು ಹೀಗೆ ನಿಲ್ಲಿಸಿದೆ)

> ಒಪ್ಪಂದ ಸರಿ ಆದರೆ ಕೆಲವು ಮಾರ್ಪಾಡು ಆಗಬೇಕು ಅನ್ನುತ್ತೀರೋ,

ಇದು ನನ್ನ ನಿಲುವು...

ನಂಗೆ ಯಾಕೋ ಏನೋ ಗೋಲ್ ಮಾಲ್ ನಡೀತಾ ಇದೆ ಅಂತ ಗುಮಾನಿ...
ಇಲ್ಲಾಂದ್ರೆ ಬುಶ್ಶಣ್ಣ ಅಲ್ಲಿಂದ ಕರೆ ಯಾಕಪ್ಪಾ ಮಾಡ್ಬೇಕು ಬೇಗ ಬೇಗ ಮಾಡಿ ಅಂತಾ..
ನಮಗೆ ತಾನೆ ಉಪಯೋಗ? ಹೇಗಿದ್ರೂ ಬುಶ್ಶಣ್ಣ ಟಾ ಟಾ ಅಂತಾನೆ ಎರಡು ತಿಂಗಳಲ್ಲಿ...
ಅವನಿಗೆ ಯಾಕ್ರೀ ಇಂಡಿಯಾ ಉಸಾಬರೀ...ಮೆಕ್ ಕೈನ್ ಗೆಲ್ಲೋದನ್ನ ನೋಡ್ಕೋಬೇಕು ತಾನೆ ಈ ಟೈಮ್ ನಲ್ಲಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 3:05pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ನಿಮ್ಮ ಗುಮಾನಿಗಳನ್ನು ಗಮನಿಸಿದರೆ ಇನ್ನು ಚರ್ಚೆ ನಡೆಸಿ ಪ್ರಯೋಜನವಿಲ್ಲ ಅನ್ನಿಸುತ್ತದೆ.

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 3:06pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಗುಮಾನಿ ಬಿಡ್ರೀ ನನ್ ಪ್ರಶ್ನೆಗೆ ಉತ್ತರ ನೀಡಿ ಸಾಕು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 6:23pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಇದನ್ನ ಹಾಗೆ ಸ್ವಲ್ಪ ಓದಿ...

.....
Nuclear power is not “clean and green,” as the industry claims, because large amounts of traditional fossil fuels are required to mine and refine the uranium needed to run nuclear power reactors, to construct the massive concrete reactor buildings, and to transport and store the toxic radioactive waste created by the nuclear process. Burning of this fossil fuel emits significant quantities of carbon dioxide (CO2)—the primary “greenhouse gas”—into the atmosphere. In addition, large amounts of the now-banned chlorofluorocarbon gas (CFC) are emitted during the enrichment of uranium. CFC gas is not only 10,000 to 20,000 times more efficient as an atmospheric heat trapper (“greenhouse gas”) than CO2, but it is a classic “pollutant” and a potent destroyer of the ozone layer.
.....

Source: http://calitreview.com/19

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 6:52pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಥೋರಿಯಂ ಬಗ್ಗೆ ತಿಳಿಯಲು ಇಲ್ಲೂ ಒಂದು ಕಣ್ಣು ಹಾಯಿಸಿ...

http://www.world-nuclear.org/info/inf62.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 9:10am — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಮನಮೊಹನರು ಅಷ್ಟು ಜಾಣರೆ?
ಜನತೆಯಾ ಎಲ್ಲ ಸಮಸ್ಯೆ ಬಗೆಹರಿಸಿದ್ದರೇನು?
ಈಗ ನಮ್ಮ ಘನ ಸರಕಾರಕ್ಕೆ ಅತಿ ಮುಖ್ಯವಾಗಿರುವ ವಿಷಯ ಎರಡೇ...
- ಸೇತು ಸಮುದ್ರಂ ಯೋಜನೆ
- ಅಣು ಒಪ್ಪಂದ

ಇದರಿಂದ ಅನ್ನ,ವಸತಿ,ಉದ್ಯೋ‌ಗ, ಸಾರಿಗೆ ಮುಂತಾದವುಗಳ ಸಮಸ್ಯಗಳು ಬಗೆ ಹರಿಯುವುದೇ...
ಅದು ಹೇಗೆ ಜಾಣರಾದರು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:46pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಜಾಣತನಕ್ಕೂ ಆಡಳಿತ ಜ್ಞಾನಕ್ಕೂ, ರಾಜಕೀಯ ಚತುರತೆಗೂ ವ್ಯತ್ಯಾಸ ಇದೆ ಅನ್ನಿಸುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 7:57pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಇದು ನನ್ನದಲ್ಲ ...
> ನಮ್ಮ ಪ್ರಧಾನಮಂತ್ರಿಯ ಬಗ್ಗೆ ಹೆಮ್ಮೆಯಾಗುತ್ತಿದೆ.. ! ಜಾಣರಲ್ಲಿ ಜಾಣರೂ, ಚಾಪೆ, ರಂಗೋಲಿ,ಕೆಳಗೆ ಗುಪ್ತಗಾಮಿಗಳು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 2:51pm — uniquesupri

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

uniquesupri's picture

ಅದನ್ನೇ ನಾನೂ ಹೇಳಿದ್ದು... ಜಾಣತನಕ್ಕೂ ರಾಜಕೀಯ ಮುತ್ಸದ್ಧಿತನಕ್ಕೂ ವ್ಯತ್ಯಾಸವಿದೆ ಎಂದು. ರಂಗೋಲಿ ಕೆಳಗೆ ನುಸುಳುವ ಜಾಣ್ಮೆಯಿರುವವರು ಜನರ ಸಮಸ್ಯೆ ಪರಿಹರಿಸಬಲ್ಲ ಮುತ್ಸದ್ಧಿಯಾಗಬೇಕಿಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 5:47pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಅಹುದಹುದು ಕೋಟಿ ಹಣ ಚೆಲ್ಲಿ ವಿಶ್ವಾಸ ಮತ ಪಡೆದ ಚಾಣಾಕ್ಷರು...

ಅಂದ ಹಾಗೆ 'ಜಾಣ' ಎಂಬುದನ್ನೂ ಬೇರೆ ರೀತಿಗಳಲ್ಲಿ ಬಳಸಬಹುದು...
ಹೋಗಲಿ ಬಿಡಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2008 - 3:53pm — srinivasps

ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ

srinivasps's picture

ಇದನ್ನು ಓದಿ...ಸ್ವಲ್ಪ ದಿಟ ಸ್ವಲ್ಪ ಉತ್ಪ್ರೇಕ್ಷೆ ಇದೆ...ತಕ್ಕದ್ದನ್ನು ಒಳಗಿಳಿಸಿ..

http://www.dailypioneer.com/columnist1.asp?main_variable=Columnist&file_...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಕರ್ನಾಟಕದ ಹೆಣ್ಣುಮಕ್ಕಳು ಪ್ರದರ್ಶಿಸುವ ರಂಗೋಲಿ ಕಲೆಯ ಸಿರಿವಂತಿಕೆ.
  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ಅವಕಾಶವಾದಿ ಅಮೆರಿಕಾ
  • ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?
  • ಹೀಗೊ೦ದ್ ವಿಷ್ಯ...
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
  • ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಬರಹ ಹೇಳಿಕೊಡಿ, ನುಡಿ ಬೇಡ.. !
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator