ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ..
--ಶ್ರೀ

- Login or register to post comments
- 533 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ..
--ಶ್ರೀ




ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಪಾಟಿ. school bag ಗೆ ’ಪಾಟಿ’ಯ ಚೀಲ ಅಂತಾರೆ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕ್ಷಮಿಸಿ.. ಸ್ಲೇಟ್ ಗೆ ಪಾಟಿ ಅಂತಾರೆ. ಶಾಲೆಗೆ ಅಲ್ಲ. ಶಾಲೆಗೆ ಬೇರೆ ಏನಂತಾರೆ ಅಂತ ಗೊತ್ತಿಲ್ಲ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನಮ್ಮ ಅಜ್ಜ / ಅಜ್ಜಿಯರು ಶಾಲೆ ಗೆ ಮಠ ಅಂತಾನೆ ಬಳಸುತ್ತಿದ್ರು/ ಬಳಸುತ್ತಿದ್ದಾರೆ.
ಸವಿತೃ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಅದಕ್ಕೆ ಕಾರಣ ಬಹುಶ: ಇಲ್ಲಿದೆ . ನೋಡಿ.
http://sampada.net/blog/shreekant_mishrikoti/25/07/2006/2002
"ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು."
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನನ್ನೀ.... ಓದಿದೆ.
ಸವಿತೃ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
"ಪಳ್ಳಿಮನೆ" ಎಂಬ ಅಪ್ಪಟಕನ್ನಡ ಒರೆ ಇನ್ನೂ ಚಾಮರಾಜನಗರದಲ್ಲಿ ಬಳಕೆಯಲ್ಲಿದೆ
ಕಲಿವಟ್ಟಿಗೆ ಎಂದೂ ಹೇಳಬೋದು
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
http://sampada.net/forum/10693
ಈ ಬರಹ / ಚರ್ಚೆ ಈ ಮಾತನ್ನು ಪುಷ್ಟೀಕರಿಸುತ್ತೆ.
ಸವಿತೃ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನಮ್ಮ ಅಪ್ಪ, ಅಮ್ಮ, ತಾತ, ತಾತಿ, ಮುತ್ತಾತ, ಮುತ್ತಾತಿ ಎಲ್ಲರೂ ಕೂಡ "ಶಾಲೆ" ಅಂತನೇ ಹೇಳ್ತಿದ್ರು/ ಹೇಳ್ತಾರೆ. ಅದ್ಕೆ ನಮ್ಮ ಕನ್ನಡದಲ್ಲಿಯೂ ಅದೇ. ಯಾವೂರಲ್ಲಿ ಏನಾದ್ರೂ ಇರಲಿ, ಯಾರು ಏನಾದ್ರೂ ಹೇಳಿಕೊಳ್ಳಲಿ.
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ತಪ್ಪಾಯ್ತು ಮನ್ನಿಸಿ...
ನಾನು ಕೇಳಿದ್ದು ಹಳೆ ಕನ್ನಡದಲ್ಲಿ /ಅಪ್ಪಟ ಕನ್ನಡದಲ್ಲಿ/ಸಕ್ಕದ ಸೋಕದ ಕನ್ನಡದಲ್ಲಿ
ಮುಂದಿನ ಬಾರಿ ಎಚ್ಚರಿಕೆಯಿಂದ ಬರಿತೀನಿ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸಕ್ಕದ ಸೋಕದೆ ಇದ್ದ ಕಾಲದಲ್ಲಿ ಶಾಲೇನೇ ಇರಲಿಲ್ವೇನೋ ?
ಆ ಥರ ವ್ಯವಸ್ಥೆ ( ಗುರುಕುಲ, ಅಗ್ರಹಾರ , ಮಠ ಇತ್ಯಾದಿ ) ಇದ್ದರೆ ಅಲ್ಲಿ ಸಂಸ್ಕೃತ ಕಲೀತಿದ್ರು/ಕಲಿಸ್ತಿದ್ರು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸಾರ್, ನೀವು ಕನ್ನಡ ಎತ್ತಿನಿಕ್ಕಿಗೇ ಅವಮಾನ ಮಾಡ್ತಾ ಇದೀರ
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
>ಸಕ್ಕದ ಸೋಕದೆ ಇದ್ದ ಕಾಲದಲ್ಲಿ ಶಾಲೇನೇ ಇರಲಿಲ್ವೇನೋ ?
ಯಾಕೋ ಇದನ್ನ ನಂಬಕ್ಕೆ ಮನಸ್ಸು ಒಪ್ತಾ ಇಲ್ಲ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ವಿಕಾಸ ಹೆಗ್ಡೆ ....ಏನಿದು ....ಇಷ್ಟೊಂದು ಹತಾಶರಾದರೆ ಹೆಂಗೆ. ಸ್ವಲ್ಪ ಸಮಾಧಾನ!
ಸವಿತೃ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನನಗಂತೂ ವಿಕಾಸ್ ಬರೆಯೋ commentಗಳು ಭಾರಿ ಇಷ್ಟ... ಮಜಾ ಇರತ್ತೆ ಓದಕ್ಕೆ...
ವಿಕಾಸ್, ಹೀಗೆ ವಿಕಾಸವಾದ ನಡೆಸಿ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಶ್ರೀನಿವಾಸ್, ಶಾಲಲ್ಲಿ ಸುತ್ತಿ ಹೊಡೆದದ್ದಾ ಅದು ಅಥವಾ ಶಾಲು ಹಾಕಿದ್ದಾ?
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನಿಮಗೆ support ಮಾಡ್ತಿದ್ದಾರೆ. ನೀವು ನೀತಾಗೆ support ಮಾಡಿದ ಹಾಗೆ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಯಪ್ಪಾ ಶಾಲು ಹಾಕಿದರೆ ಹೊಡೀತಾನೆ ಅನ್ತಾರಲ್ಲಪ್ಪೋ !
ನಾನು ಬೇರೆ ಅವ್ರಿಗೆ ಅಚ್ಚ ಕನ್ನಡ ಬಳಸಿ ಅನ್ನಲ್ಲ...
ಆದರೆ ನಾನು ಅಚ್ಚ ಕನ್ನಡ ತಿಳಿದುಕೊಳ್ಳೊದ್ರಲ್ಲಿ ತಪ್ಪಿಲ್ಲ ಅಲ್ಲವಾ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸವಿತೃ, ಅದು ಸಂಪದದೊಳಗಿನೆ ಸಂಸ್ಕೃತ-ಕನ್ನಡ frustrationnu.
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ವಿಕಾಸ್ ಬಿದ್ದರಿ ಹಳ್ಳಕ್ಕೆ...

'ಸಂಸ್ಕೃತ-ಕನ್ನಡ' ಅಂದ್ ಬಿಟ್ಟರಿ
ಒಪ್ಪಿ ಕೊಂಡರಿ ತಾನೆ ಬೇರೆ ನುಡಿ ಅಂತಾ...
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಅಬ್ಬಾ, ಎಲ್ಲೆಲ್ಲೋ ಹಳ್ಲಕ್ಕೆ ಬೀಳಿಸ್ತಾರಪ್ಪಾ ಇಲ್ಲಿ.
ಅವತ್ತು ಟೈಪ್ ಮಾಡುವಾಗ d ಬದಲು t ಮಾಡಿದ್ದೆ , ದ ಬದಲು ಥ ಬಂದಿತ್ತು. ಅದಕ್ಕೆ ಯಾರೋ ನೋಡಿನೋಡಿ ಸಕ್ಕದ ಪದ ಅದು ಅದಕ್ಕೆ ತಪ್ಪು ಬರೆದಿದ್ದೀರಿ ಎಂದಿದ್ದರು.
ಇವತ್ತು ನೋಡಿದರೆ ಹೀಗೆ.
ಆದ್ರೂ ಶ್ರೀನಿವಾಸ್, its just a means of communication , ಯಾಕೆ ನಿಮ್ಗೆ ಶಾಲೆಗೆ ಕನ್ನಡದಲ್ಲಿ ಏನಂತಾರೆ ಇವೆಲ್ಲಾ. ಎದುರಿಗಿರೋರಿಗೆ ಅರ್ಥಾದ್ರೆ ಸಾಕು. ಇಸ್ಕೂಲು, ಶಾಲೆ, ಸಾಲೆ, ಸ್ಕೂಲು ಎಲ್ಲಾರಿಗೂ ಅರ್ಥಾಗುತ್ತೆ. ಅದೇನೋ ಕಲಿವಟ್ಟಿಗೆ ಅಂದ್ರೆ ಕೇ.ಜಿಗೆಷ್ಟು ಅಂತಾರೆ. ಜನಸಾಮಾನ್ಯರು ಎನು ಮಾತಾಡ್ತಾರೋ ಅದೆ ನಮ್ಮ ಭಾಷೆ .
ಬಟ್ಟರು , ಅವರ ಬಂಟರು ಹೇಳಿದಾಕ್ಷಣ ಬದಲಾಗೋಗತ್ಯೆ?
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
> ಆದ್ರೂ ಶ್ರೀನಿವಾಸ್, its just a means of communication , ಯಾಕೆ ನಿಮ್ಗೆ ಶಾಲೆಗೆ ಕನ್ನಡದಲ್ಲಿ ಏನಂತಾರೆ ಇವೆಲ್ಲಾ.
ತಿಳಿದು ಕೊಳ್ಳಕ್ಕೆ...
> ಅದೇನೋ ಕಲಿವಟ್ಟಿಗೆ ಅಂದ್ರೆ ಕೇ.ಜಿಗೆಷ್ಟು ಅಂತಾರೆ.
> ಬಟ್ಟರು , ಅವರ ಬಂಟರು ಹೇಳಿದಾಕ್ಷಣ ಬದಲಾಗೋಗತ್ಯೆ?
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ತಾತ-ಅಜ್ಜಿ, ಮುತ್ತಾತ-ಮುತ್ತಜ್ಜಿ ಗೊತ್ತು, ತಾತಿ,ಮುತ್ತಾತಿ ಯಾರು?
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ತಾತಿ=ಅಜ್ಜಿ
ಮುತ್ತಾತಿ=ಮುತ್ತಜ್ಜಿ
ಕೆಲವು ಕಡೆ ಹೀಗೆ ಬಳಕೆ ಇದೆ.
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನಮ್ಮ್ ಅಜ್ಝ ಸಾಲಿ ಅಂತಿದ್ದ. ನಮ್ಮಪ್ಪನು ಹಂಗ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕಲ್=ಕಲಿ (ಹೞಗನ್ನಡದಲ್ಲಿ) ಹಾಗೆಯೇ ಅವಂ ಕಲ್ತವನಲ್ಲ ಎನ್ನುತ್ತಾರೆ. ಹಾಗಾಗಿ ಕಲಿ ಎನ್ನುವುದಕ್ಕೆ ಕಲ್ ಎಂದೂ ಹೊಸಗನ್ನಡದಲ್ಲಿ ಹೇೞಬಹುದೇನೋ. ಆಗ ಶಾಲೆ=ಕಲ್ಮನೆ ಅಥವಾ ಕಲ್ವನೆ. ಕಲ್+ಮನೆ=ಕಲ್=ಕಲಿಯುವ ಮನೆ. ನೀವೇನನ್ನುತ್ತೀರಿ?
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕಲ್ಮನೆ ಅಂದ್ರೆ ಕಲ್ಲಿನ ಮನೆ ಅಲ್ಲವ್ರಾ , ಬುದ್ದೀ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕಲಿಕೆಯ ಮನೆ, ಕಲಿಮನೆ ಅನ್ನಬಹುದು.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನಂಗೆ ಏನು ಅನ್ನಬಹುದು ಅಂತ ಬೇಡ...ಏನು ಬಳಕೆಲಿತ್ತು, ಇದು ಬೇಕು..
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ನೋಡಿ, ಇದ್ನ ಮುಂಚೆನೇ ಹೇಳಿದ್ರೆ ಇಷ್ಟೆಲ್ಲಾ ಆಗ್ತನೇ ಇರ್ಲಿಲ್ಲ.
ಅದ್ಕೆ ಮಿಶ್ರಿಕೋಟಿಗಳು ಹೇಳಿದ್ದು ಸರಿ ಇರ್ಬೋದಾ ಅಂತ !
**************************
http://vikasavada.blogspot.com/
**************************
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ತುಂಬಾ ಮುಂಚೆನೇ ಸರಿ ಪಡಿಸಿಕೊಂಡೆ ಅಲ್ಲವಾ?
> ನಾನು ಕೇಳಿದ್ದು ಹಳೆ ಕನ್ನಡದಲ್ಲಿ /ಅಪ್ಪಟ ಕನ್ನಡದಲ್ಲಿ/ಸಕ್ಕದ ಸೋಕದ ಕನ್ನಡದಲ್ಲಿ
ಅಂತ ನಿಮ್ಮ ಎಲೆಗೆ ಮರುಲಿದ್ದೆ ..
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಅಣ್ಣ ಪಳ್ಳಿಮನೆ ಇನ್ನು ಬಳಕೆಯಲ್ಲಿದೆ
ಅದು ಅಪ್ಪಟ ಕನ್ನಡದ ಒರೆ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಗೊತ್ತಾಯ್ತ್ರ...
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಗೊತ್ತಿದ್ರೆ ಮತ್ತೆ ಮತ್ತೆ ಕೇಳೋದು ಯಾಕೆ?
ಜ್ಞಾತವಾದಲ್ಲಿ ಪುನಃ ಪುನಃ ಪ್ರಶ್ನಿಸುವ ಕಾರಣವೇನು?
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಯಪ್ಪಾ ಹುಷಾರಾಗಿರಬೇಕು ಇಲ್ಲಿ ಬರೀ ಬೇಕಾದ್ರೆ...
ಇದನ್ನ
"ನಂಗೆ ಏನು ಅನ್ನಬಹುದು ಅಂತ ಬೇಡ...ಏನು ಬಳಕೆಲಿತ್ತು, ಇದು ಬೇಕು."
ಹೀಗೆ ಬರೀ ಬೇಕಿತ್ತು...
"ನಂಗೆ ಏನು ಅನ್ನಬಹುದು ಅಂತ ಬೇಡ...ಏನು ಬಳಕೆಲಿತ್ತು, ಇದು ಬೇಕಿತ್ತು "
ಮನ್ನಿಸಿ
ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಅಂದ ಹಾಗೆ ಬೇರೆ ಅವರು ಶಾಲೆಗೆ ಏನೇನು ಒರೆಗಳಿವೆ ಅಂಥ ಹೇಳಬಹುದಲ್ಲ ನಿಮ್ಮ ಉತ್ರ ಬಿಟ್ಟು...
ಅದಕ್ಕೆ 'ಬೇಕು' ಅಂದ್ರೆ ತಪ್ಪಿಲ್ಲ