ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಅಬ್ಬಿ, ಅರ್ಬಿ

July 25, 2008 - 10:00am — kannadakanda

ಅರ್ಬಿ ಅಥವಾ ಅಬ್ಬಿ= ನೀರಿನ ಜಲಪಾತ. ನೀರು ಮೇಲಿನಿಂದ ಧುಮ್ಮಿಕ್ಕುವಾಗ ಈ ಅಬ್ಬಿಗಳು ಉಂಟಾಗುತ್ತವೆ.
ಹೋಲಿಸಿ ಹೞಗನ್ನಡದ ಅರ್ಬಿ ಹಾಗೂ ತಮಿೞಿನ ಅರುವಿ

‹ ಪೞಗು, ಪೞೆ(ಹೞೆ) ಓದು ›
  • ದಿನಕ್ಕೊಂದು ಪದ
~.~
  • Login or register to post comments
  • 225 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 25, 2008 - 1:06pm — mahesha

ಉ: ಅಬ್ಬಿ, ಅರ್ಬಿ

mahesha's picture

ಕುದುರೆ ಅಬ್ಬಿ = ಚಿಕ್ಕಮಗಳೂರಲ್ಲಿದೆ

ರೀ ನೀರಿನ ಜಲಪಾತ ಅಂದ್ರೇನು? Smiling ಜಲಪಾತದಲ್ಲೇ ಜಲ ಇದೆಯಲ್ಲ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 1:46pm — savithru

ಉ: ಅಬ್ಬಿ, ಅರ್ಬಿ

savithru's picture

ಹೆಬ್ಬೆ ಜಲಪಾತ ಕೆಮ್ಮಣ್ಣು ಗುಂಡಿಯಲ್ಲಿದೆ. (೧೦ ಕಿ ಮೀ ಆಗಬಹುದು.).. ಬೊಂಬಾಟ್ ಜಾಗ .. ಪಿಕ್ನಿಕ್ಗೆ !

ಅಬ್ಬಿ ಜಲಪಾತ ಮಡಿಕೇರಿ ಸುತ್ತ ಮುತ್ತ ಎಲ್ಲೋ ಇದೆ. ನಾನು ಇನ್ನೊ ನೋಡಿಲ್ಲ ಇದನ್ನ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 2:09pm — kannadakanda

ಉ: ಅಬ್ಬಿ, ಅರ್ಬಿ

kannadakanda's picture

ಅಬ್ಬಿ ಜಲಪಾತ ಮಡಿಕೇರಿಯಿಂದ ೫ ಕಿ.ಮೀ. ದೂರದಲ್ಲಿದೆ. ಇದೊಂದೇ ಅಬ್ಬಿ ಎಂಬ ಹೆಸರಿನ ಒಂದೇ ಜಲಪಾತವಲ್ಲ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲೂ ಒಂದು ಅಬ್ಬಿಯಿದೆ. ಅಬ್ಬಿಯೆಂದರೆ ಜಲಪಾತವೆಂದಷ್ಟೇ ಅರ್ಥ. ಅದು ಯಾವುದೇ ಒಂದು ಪ್ರದೇಶ ಅಥವಾ ಜಲಪಾತದ ಹೆಸರಾಗಬೇಕೆಂದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2008 - 1:09pm — kannadakanda

ಉ: ಅಬ್ಬಿ, ಅರ್ಬಿ

kannadakanda's picture

ಶಿವಮೊಗ್ಗ ಜಿಲ್ಲೆಯ ಮಲೆನಾಡ ಜನರು ಹೇೞುವ ಮಾತು: ಅಡಿಗೆಗೆ ಮತ್ತು ಕುಡಿಯಲು ಅಬ್ಬಿಯ ನೀರು ಬೞಸುತ್ತೇವೆ. ಬೇಱೆ ಜಿಲ್ಲೆಯವರು ಬೞಸಬಹುದು. ಶಿವಮೂಗ್ಗ ಜಿಲ್ಲೆಯವನಾದ ನಾನು ಈ ಮಾತನ್ನು ಅಲ್ಲಿ ಕೇಳಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 27, 2008 - 9:39am — kpbolumbu

ಉ: ಅಬ್ಬಿ, ಅರ್ಬಿ

kpbolumbu's picture

ಮಲೆಯಾಳದಲ್ಲಿ 'ಪಾಲರುವಿ' ಎಂಬ ಬಳಕೆಯಿದೆ. ಅಲ್ಲಿ 'ಅರುವಿ'ಗೆ ಹರಿವು, ಪ್ರವಾಹ ಎಂದು ಅರ್ಥ. ಕನ್ನಡದಲ್ಲಿ ಹಾಲಬ್ಬಿ ಎನ್ನಬಹುದೇನೋ?..
ಹವ್ಯಕದಲ್ಲಿ ಅಬ್ಬಿ ಕೊಟ್ಟಗೆ(ಕೊಟ್ಟಿಗೆ) ಎಂದರೆ ಬಚ್ಚಲುಮನೆ. ಈ ಬಳಕೆ ಬರಲು ಕಾರಣ ಹಿಂದೆ ಅಬ್ಬಿಗಳಲ್ಲೇ(ಹರಿಯುವ ನೀರಿನಲ್ಲಿ, ಹೊಳೆಯಲ್ಲಿ) ಹೆಚ್ಚಾಗಿ ಮೀಯುತ್ತಿದ್ದುದು.

__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 27, 2008 - 10:57am — ASHOKKUMAR

ಉ: ಅಬ್ಬಿ, ಅರ್ಬಿ

ASHOKKUMAR's picture

ಬಚ್ಚಲು ಮನೆಯಲ್ಲೂ ಅಬ್ಬಿ ನೀರು ಹರಿದು ಬರುತ್ತಿತ್ತು-ನಮ್ಮಜ್ಜನ ಮನೆಯಲ್ಲಿ---ದಂಬೆ ಎಂಬ ವ್ಯವಸ್ಥೆಯ ಮೂಲಕ. ಅಡಿಕೆಯ ಮರವನ್ನು ಸಿಗಿದು,ಅದರ ಒಳಭಾಗ ಸ್ವಚ್ಛ ಮಾಡಿದರೆ,ಅದು ಪೈಪಿನ ಅರ್ಧ ಭಾಗವನ್ನು ಹೋಲುತ್ತದೆ.ಅಂತಹ ದಂಬೆಗಳನ್ನು ಜೋಡಿಸಿ,ಹರಿಯುವ ನೀರನ್ನು ಮನೆಗೆ ತಂದು ಬಳಸುವ ವ್ಯವಸ್ಥೆಯಿತ್ತು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 27, 2008 - 3:39pm — kannadakanda

ಉ: ಅಬ್ಬಿ, ಅರ್ಬಿ

kannadakanda's picture

ದಂಬೆಯೋ ದಬ್ಬೆಯೋ. ನಾನು ಕೇಳಿರುವಂತೆ ಅಡಿಕೆ ಮರದ ಸೀೞಿದ ಭಾಗಕ್ಕೆ ದಬ್ಬೆ ಎನ್ನುತ್ತಾರೆ. ದಂಬೆಯೂ ಇರಬಹುದೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 4:27am — kannadakanda

ಉ: ಅಬ್ಬಿ, ಅರ್ಬಿ

kannadakanda's picture

ದಂಬೆ=ಸಣ್ಣ ಕಾಲುವೆ. ಇದು ಸರಿಯೇ. ಅಡಿಕೆಯ ದಬ್ಬೆಗಳನ್ನು ಜೋಡಿಸಿ ಸಣ್ಣ ಕಾಲುವೆ ಮಾಡಿ ನೀರು ಬೞಸುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 4:32am — kannadakanda

ಉ: ಅಬ್ಬಿ, ಅರ್ಬಿ

kannadakanda's picture

ಅನ್ನಬಹುದು. ಅಬ್ಬಿ ಎಂದರೆ ಸಮತಟ್ಟಿಲ್ಲದ ಪ್ರದೇಶದಲ್ಲಿ ಹರಿಯುವ ನೀರು. ಜೋಗ ಜಲಪಾತದಂತಹ ಜಲಪಾತವಾಗಬೇಕಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಬ್ಬಿ ಜಲಪಾತ
  • ಯಡೂರು ಅಬ್ಬಿ
  • ಬಿಲ್
  • ಎೞ್ತು
  • ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!
  • ಗುಬ್ಬಿಗಳ ಸಂರಕ್ಷಣೆ ಹೇಗೆ?
  • ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
  • ನಮ್ ಕಂನಡದ ಎರಡನೇ ಮತ್ತು ಆರನೇ ವಿಬಕ್ತಿ
  • ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
  • ತೋಡು ಮತ್ತು ಮೊಗೆ
  • ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator