ತೆರಣಿ
ತೆರಣಿ=ರೇಷ್ಮೆಹುೞು ಅಥವಾ ರೇಷ್ಮೆಯಂತೆ ತನ್ನ ಜೊಲ್ಲಿನಿಂದ ನೇಯ್ದು ತನ್ನ ಸುತ್ತಲೇ ಗೂಡು ಕಟ್ಟುವ ಹುೞು.
ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನ ನೋಡಿ:
ತೆರಣಿಯ ಹುೞು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆಱನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ
ಅಯ್ಯ, ಎನ್ನ ಮನ ದುರಾಶೆಯ ಮಾಣಿಸಿ
ನಿಮ್ಮತ್ತ ತೋಱಾ ಚೆನ್ನಮಲ್ಲಿಕಾರ್ಜುನ

- Login or register to post comments
- 147 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ತೆರಣಿ
ತೆರಣಿ ಕನ್ನಡವ?
ಉ: ತೆರಣಿ
ಶಿವಶರಣರು ಬೞಸಿದ್ದಾರೆಂದರೆ ಅದು ಅಚ್ಚಗನ್ನಡವೇ. ಕೂಡಲಸಂಗಮ ಅಂದಿನ ಕಾಲಕ್ಕೆ ತಿರುಳ್ಗನ್ನಡ ನಾಡು.