ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.
ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.
ಮಲಯಾಳಂ/ಮಲೆಯಾಳಂ= ಮಲೆ+ಆಡ(ಳ)೦=ಗುಡ್ಡ ಪ್ರದೇಶದಲ್ಲಿ ಆಡುವ ಭಾಷೆ.
ತೆಲುಗು=ತೆನುಗು/ತೆನುಂಗು/ತೆಲುಂಗು=ದಕ್ಷಿಣ ಭಾಷೆ.

- Login or register to post comments
- 314 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಇದು ನಿಜಕ್ಕೂ ಚರ್ಚೆ ಮಾಡಬೇಕಾದ ವಿಷಯ...
ಅಗಸ್ತ್ಯರು ಕರು ನಾಡಲ್ಲೇ ಹೆಚ್ಚು ಕಾಲ ಎಂಬುದು ಇತಿಹಾಸ/ಪುರಾಣದಲ್ಲಿ ಹೇಳಿರುವ ವಿಷಯ...
(ನಮ್ಮ ಬಾದಾಮಿಯೆ ವಾತಾಪಿ ಎಂದು, ವಾತಾಪಿ/ಇಲವಲರೆಂಬ ರಕ್ಕಸರು ಇದ್ದರೆಂದೂ ಸಂಪದದಲ್ಲೇ ಕೆಲ ಸಮಯದ ಹಿಂದೆ ಹಂಸನಂದಿಯವರು ಬರೆದಿದ್ದ ನೆನಪು)
ಲೋಪಾ ಮುದ್ರೆಯೇ ಕಾವೇರಿ ಯಾಗಿ ಹರಿದಳೆಂದೂ ಪುರಾಣ ಹೇಳುತ್ತದೆ...
ಇರಲಿ, ಹೆಂಗಸೊಬ್ಬಳು ನದಿಯಾಗಿ ಹೇಗೆ ಹರಿದಳು ಎಂಬುದನ್ನೂ ಸದ್ಯಕ್ಕೆ ಬದಿಗಿಟ್ಟು ಆ ಸಮಯದಲ್ಲಿ ಅಗಸ್ತ್ಯರು ಕರು ನಾಡಿನಲ್ಲಿ ಇದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ...
> ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ
> ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ.
ಅಂದರೆ ಈ ಸಮಯವಾದ ಮೇಲೆ ತಮಿಳ್ ಹುಟ್ಟಿತು ಎಂದು ಲೆಕ್ಕ ಹಾಕಿದರೆ...
ವಾತಾಪಿ/ಇಲಾವರರು ಮಾತಾಡುತ್ತಿದ್ದ ಹಳೇ....... ಕನ್ನಡವು ಅದಕ್ಕಿಂತ ಹಳೆಯದಾಯಿತಲ್ಲವೇ?
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಅಗಸ್ತ್ಯರು ತಮಿೞ್ ಸೊಲ್ಲರಿಮೆಯನ್ನ ಬರೆದರಂತೆ................
ಅಗಸ್ತ್ಯರು ವಿಂದ್ಯಪರ್ವತಮು ಬೆಳೆಯೋದನ್ನ ನಿಲ್ಲಿಸಿ ತೆಂಕಣಕ್ಕೆ ಬಂದರಂತೆ.. ಅಗಸ್ತ್ಯರು ನೆಲೆಸಿದ ಲಿಂಗವೊಂದು ಟಿ.ನರಸೀಪುರದಲ್ಲಿದೆ...
ರಾವಣನೂ ತಮಿೞ್ ಸೊಲ್ಲರಿಮೆ ಬರೆದನಂತೆ...
ಕನ್ನಡವೇನಿದ್ದರು ಹನುಮ, ವಾತಾಪಿ, ಮುಂತಾದವರ ನುಡಿ ಇರಬೇಕು..
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಸಿರಿನೆಲೆಸಿಗ,
ನನ್ನ ಕಮೆಂಟನ್ನು ತೆಗದುಕೊಳ್ಳದೇ ಇರುವ ಅನುವಿದೆ ನಿಮಗೆ...
ನನ್ನಿ...
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
> ಕನ್ನಡವೇನಿದ್ದರು ಹನುಮ, ವಾತಾಪಿ, ಮುಂತಾದವರ ನುಡಿ ಇರಬೇಕು..
ಇರಬಹುದು...
ಆದರೆ ನಂಗೆ ಏನು ಪ್ರಶ್ನೆ ಬರತ್ತೆ ಅಂದ್ರೆ...ರಾಮ ಅದು ಹೇಗೆ ನಮ್ಮ ಕನ್ನಡ ಭಾಷೆ ಕಲಿತಾ ಅಂತ...
ರಾಮ ಹನುಮ ಯಾವ ನುಡಿ ಮಾತಾಡ್ತಿದ್ರು ?
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಡಿ.ಎಂ.ಕೆ ಮತ್ತು ಯು.ಪಿ.ಎ ಅವರನ್ನು ಕೇಳಿ...
ಅವರೇ ಹೆಚ್ಚು ರಾಮ-ರಾವಣರ ಬಗ್ಗೆ ಆರಯ್ಯು ಜರುಗಿಸಿದ್ದಾರೆ
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಡಿ.ಎಂ.ಕೆ ಮತ್ತು ಯು.ಪಿ.ಎ ಅವರನ್ನು ಕೇಳಿ...
ಅವರೇ ಹೆಚ್ಚು ರಾಮ-ರಾವಣರ ಬಗ್ಗೆ ಆರಯ್ದು ಜರುಗಿಸಿದ್ದಾರೆ
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಆರಯ್ದು = ಆರಯ್ಯು ಮಾಡಿ..
ಆರಯ್ಯು = ಸಂಶೋದನೆ
ಎರಡೇ ವಿಬಕ್ತಿ ಪಲ್ಲಟ..
ಹಣ್ಣು ತಿನ್ನು = ಹಣ್ಣನ್ನು ತಿನ್ನು
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕಂ ಜನರ ನಾಡು ಕನ್ನಾಡು ; ಅವರ ಭಾಷೆ ಕನ್ನುಡಿ ; ಕನ್ನಡ ಅನ್ನೋದು ತಪ್ಪು ಅಂತ ಶಂ.ಬಾ.ಜೋಷಿ ಅವರು ಹೇಳ್ತಿದ್ರು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕಂ ಜನರು ಎಂದರೆ?? ಕಂದು ಬಣ್ಣದ ಜನರೇ?
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಅಲ್ಲ. ಹೆಚ್ಚಿನ ವಿವರಗಳಿಗೆ ಶಂಬಾ ಪುಸ್ತಕ ನೋಡಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕರ್ನಾಡ್ => ಕರ್ನಾಡ => ಕನ್ನಡ ಇದು ಸರಿ ಎಂದು ಓದಿದ್ದೆ.
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕಂನಾಡು->ಕಱ್ನಾಡ್->ಕನ್ನಾಡ್->ಕನ್ನಾಡು->ಕನ್ನಡ.
ಇಲ್ಲಿ ಕಱ್ ಎಂದರೆ ಪವಿತ್ರ ಶುದ್ಧ ಎಂಬರ್ಥವೂ ಇದೆ. ಹೇಗೆ ತಮಿೞಿನ ತೆಱ್ಕು->ತೆಂಕು ಆಗುತ್ತೋ ಹಾಗೆ.
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಸಕ್ಕತ್...
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಶಂ. ಬಾ. ಜೋಶಿಯವರು ’ಱ’ ಮತ್ತು ’ೞ’ ಬಗ್ಗೆ ಕನ್ನುಡಿಯ ಬಗ್ಗೆ ಹೇೞುವಾಗ ಚರ್ಚಿಸಿರಬಹುದು. ಅವರು ಇದಱ ಬಗ್ಗೆ ಏನನ್ನುತ್ತಾರೆ? ನಿಮಗೆ ಇದಱ ಬಗ್ಗೆ ಗೊತ್ತಿದೆಯೇ?
ಉ: ಕನ್ನಡ, ತಮಿೞ್, ಮಲಯಾಳಂ, ತೆಲುಗು
ಕಂ=ಕಮ್ಮಿತು/ಕಂಪಿನ ನಾಡು ಕನ್ನಾಡು, ಕನ್ನಡ ಆಗಬಹುದು. ಅದಕ್ಕೇ ಕನ್ನಡಕ್ಕೆ ಕಸ್ತೂರಿ ಕಂಪಿದೆ ಎನ್ನುತ್ತಾರೆ. ಮಲ್ಲಿಗೆಯ ನಾತವೂ ಇದಱೊಡನೆ ಬೆರೆತಿರಬಹುದು. ಪಂಪ ಇಲ್ಲಿ ಘಮ್ಮೆಂದು ನಾಱುವ ಮಲ್ಲಿಗೆಯಿದೆಯೆಂದು ಹೇೞುತ್ತಾನೆ.