ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ.
ಹೊಗೆನಕಲ್ ವಿವಾದವಾದಾಗ ತಮಿಳು ಚಿತ್ರನಟರಾದ ಶ್ರೀ.ರಜನಿಕಾಂತ್ ಅವರು ಕನ್ನಡಿಗರನ್ನು ಕುರಿತು, ಕನ್ನಡ ಹೋರಾಟಗಾರರನ್ನು ಕುರಿತು ಕೀಳಾಗಿ ಮಾತನಾಡಿದ್ದು ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದು ’ನನ್ನ ಚಿತ್ರ ನೋಡದಿದ್ದರೆ ನನಗೇನೂ ನಷ್ಟವಿಲ್ಲ’ ಎ೦ದಿದ್ದ ಅವರು ಕನ್ನಡಿಗರ ಕ್ಷಮೆ ಕೇಳಲು ಇಲ್ಲವೆಂದಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯಿಂದ ಕೆಲ ಕನ್ನಡಿಗ ಸದಸ್ಯರನ್ನು ತೆಗೆದು ಹಾಕಿದ ಅಪಮಾನದ ಗಾಯ ಇನ್ನೂ ಕನ್ನಡಿಗರ ಮನದಲ್ಲಿ ಹಸಿಯಾಗಿದೆ. ಶ್ರೀ. ರಜನಿಕಾಂತ್ ಅವರು ತಮ್ಮ ಉದ್ಧಟತನದ ಮಾತಿಗಾಗಿ ಕನ್ನಡಿಗರ ಕ್ಷಮೆಯನ್ನು ಕೇಳದೆ ಇದೀಗ ಕುಸೇಲನ್ ಚಿತ್ರವನ್ನು ಇಲ್ಲಿ ಬಿಡುಗಡೆ ಮಾಡಲು ಮುಂದಾಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ರಜನಿಕಾಂತ್ ಅವರು ನಾಡಿನ ಕ್ಷಮೆ ಕೇಳುವವರೆಗೆ ಅವರ ಚಿತ್ರ ಬಿಡುಗಡೆಗೆ ತಡೆ ಒಡ್ಡುತ್ತೇವೆ. ಈ ದಿಸೆಯಲ್ಲಿ ಸಂಬಂಧಪಟ್ಟ ವಾಣಿಜ್ಯ ಮಂಡಲಿಯವರಿಗೆ, ಚಿತ್ರವಿತರಕರಿಗೆ, ನಾಡಜನತೆಗೆ ಕನ್ನಡ ನಾಡಿನ ಸ್ವಾಭಿಮಾನಕ್ಕೆ ಎದುರಾಗಿರುವ ಈ ಸವಾಲನ್ನು ಎದುರಿಸಲು ನಮ್ಮೊಂದಿಗೆ ಕೈಜೋಡಿಸಬೇಕೆಂದು ಈ ಮೂಲಕ ಕೋರುತ್ತೇವೆ.
http://www.karnatakarakshanavedike.org/modes/view/74/kuselan-film-karnat...

- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ.
ಅರಣ್ ಜಾವಗಲ್ ಅವರೇ
ಈ ರಜನೀಕಾಂತ್ ಹೆಂಗೆ "ದಮ್ಮಯ್ಯ ನನ್ ಸಿನಿಮ ಬಿಡಿ ಎಂದು ದಂಬಲ್ ಬಿದ್ದುದು" ಹೆ ಹೆ..
ಅಲ್ರೀ "ನಾನು ಪಾಟ ಕಲಿತೆ" ಅಂತ ಹೇಳಿಕೊಂಡಾದ್ರೂ ಸಿನಿಮ ಬಿಡಿಸಿ, ರೊಕ್ಕ ಮಾಡ್ತಾರೆ.
ಮೊನ್ನೆ ನಮ್ ಲೂಜ್ ಮಾದನ ಸಂದರ್ಶನ ಇತ್ತು.. ಪಾಪಾ ಆ ವಯ್ಯ ಹಿಂಗೆ ಅಂದ
"ನಾವ್ ಕನ್ನಡದೋರು ನಮ್ ನೆಲದಾಗೆ ಎಲ್ಲಾ ನುಡಿ ಸಿನಿಮಗಳನ್ನ ತೋರಿಸಕ್ಕೆ ಬಿಡ್ತೀವಿ.. ಹಿಂಗೆ ನಮ್ ಪಕ್ಕದ ರಾಜ್ಯಗೊಳು ಮಾಡಿದ್ರೆ ಇಶ್ಟೊತ್ತಿಗೆ ನಮ್ ಕನ್ನಡ ಸಿನಿಮ ಮಟ್ಟ ಯಾವ್ ಮಟ್ಟದಲ್ ಇರ್ತಿತೋ ಅಂತ.. ನನಗೆ ನಾವ್ ಬೇರೆಯೋರಿಗೆ ನೆರವಾಗೋಶ್ಟು ನಮಗೆ ಅವರು ಆಗಲ್ಲ ಅಂತ ಬೇಜಾರ್:
ಉ: ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ.
ನೆರವು ಹರಿವು ಏನಿಲ್ಲ. ನೋಡೋಕೆ ಜನ ಇದ್ದಿದ್ರೆ ಅಲ್ಲೂ ಕನ್ನಡ ಚಿತ್ರಗಳು ಬಿಡುಗಡೆಯಾಗ್ತಿದ್ವು. ಎಲ್ಲರೂ ಅರ್ಥಿಕ ಲಾಭ ನೋಡ್ತಾರೆಯೇ ಹೊರತು ಮತ್ತೇನಿಲ್ಲ. ಕರ್ನಾಟಕದಲ್ಲಿ ಬೇರೆ ಭಾಷೆಯ ಜನ ಬಹಳ ಇದ್ದಾರೆ, ಬೇರೆ ಭಾಷೆಯ ಚಿತ್ರಗಳನ್ನು ನೋಡೋ ಜನ ಬಹಳ ಇದ್ದಾರೆ. ಅದಕ್ಕೆ ಅವರಿಗೆ ಲಾಭ ಇರೋದ್ರಿಂದ ಬಿಡುಗಡೆಯಾಗತ್ತೆ. ಆದರೆ ಬೇರೆ ರಾಜ್ಯಗಳಲ್ಲಿ ಕನ್ನಡಿಗರು, ಕನ್ನಡ ಚಿತ್ರ ನೋಡೋರು ಬಹಳ ಮಂದಿ ಇಲ್ಲ. ಅದಕ್ಕೆ ಅಲ್ಲಿ ಬಿಡುಗಡೆಯಾಗೋಲ್ಲ. ಸಿಂಪಲ್...