~
ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಹರಿಪ್ರಸಾದ ಅವರೇ,
ಸುಧಾ, ಹಾಯ್ ಬೆಂಗಳೂರ್, ತರಂಗ ಮುಂತಾದ ಪತ್ರಿಕೆಗಳಲ್ಲಿ ಓದುಗರ ಪ್ರಶ್ನೆಗಳಿಗೆ ತಮಾಷೆಯಾಗಿ ಉತ್ತರ ಕೊಡುವ ಅಂಕಣಗಳಿವೆ. ಅಂಥದ್ದೊಂದು ಅಂಕಣವನ್ನು ನೀವ್ಯಾಕೆ ಪ್ರಾರಂಭಿಸಬಾರದು? ಸಂಪದಿಗರು ಪ್ರಶ್ನೆ ಕೇಳಲಿ. ಪ್ರತಿ ದಿನ ಸಂಗ್ರಹವಾಗುವ ಪ್ರಶ್ನೆಗಳಿಗೆ ನೀವು ಆಯ್ಕೆ ಮಾಡುವ ಒಬ್ಬೊಬ್ಬರು ಉತ್ತರ ಕೊಡಲಿ. ಟೈಮ್ಸ್ ಆಫ್ ಇಂಡಿಯಾದ ಓಪನ್ ಸ್ಪೇಸ್ ಮಾದರಿಯಲ್ಲಿ, ಗಂಭೀರ ಉತ್ತರ ಅಥವಾ ನಿಜ ಉತ್ತರ ಕೊಡದ, ಕೇವಲ ಲಘು ಉತ್ತರ ಬರೆಯುವಂತಹ ಅಂಕಣ ನೀವೇ ಪ್ರಾರಂಭಿಸಿ.
ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುವಾಗ ಹೊಳೆದ ಸಂಗತಿ ಇದು. ತುಂಬ ಜನ ಸಂಪದಿಗರು ಚೆನ್ನಾಗಿ ಪ್ರತಿಕ್ರಿಯೆ ಹಾಕುತ್ತಾರೆ. ಓದಲು ತಮಾಷೆಯಾಗಿರುತ್ತದೆ. ಕಚಗುಳಿಯಂತೆ, ಚುಟುಕು ಉತ್ತರಗಳು. ಅಂಥ ಒಂದು ಅಂಕಣ ಪ್ರಾರಂಭಿಸಲು ಆದೀತೆ?
ಈ ಬಗ್ಗೆ ಸಂಪದಿಗರ ಅಭಿಪ್ರಾಯ ಏನಿದೆ?
- ಪಲ್ಲವಿ ಎಸ್.

- Login or register to post comments
- 496 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಒಳ್ಳೆಯ ಸಲಹೆ.
ಪ್ರಾಯೋಗಿಕವಾಗಿ ಇಲ್ಲೇ ಪ್ರಶ್ನೆ ಕೇಳಿದರೆ ಹೇಗೆ? ನೀವೇ ಉತ್ತರಿಸಿ.
ನನ್ನ ಪ್ರಶ್ನೆ:
ಮಳೆಯನ್ನು ಬೇಕಾದಾಗ ಬರಿಸುವುದು ಹೇಗೆ?
*ಅಶೋಕ್
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಮೋಡ ತಂದು ಬಿತ್ತುವ ಮೂಲಕ !
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಮೇಡಂ,
ಒಂದು ವಾಕ್ಯಕ್ಕೇ ಪ್ರತಿಕ್ರಿಯೆಗಳ 'ಸುರಿಮಳೆ 'ನೇ ಹರಿದು ಬಂದಿದೆ.
ಹಾಗೇ ಒಂದು ಕುಡಿನೋಟ ಮೋಡದ ಕಡೆ ಹಾಯಿಸಿ.
-ಗಣೇಶ.
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಕುಡಿನೋಟ ಹರಿಸಿದಾಗೆಲ್ಲ ಮಳೆ ಬಂದಿದೆ, ಹುಡುಗರ ಕಣ್ಣಲ್ಲಿ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಸವಿತೃ
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಮೞೆಯನ್ನು ಮೞೆಯೆಂದೇ ಕರೆದಾಗ ನನಗದು ಓಗೊಟ್ಟಿದೆ. ಇದೇ ಕಾರಣಕ್ಕೆ ನಾನದನ್ನು ಮೞೆಯೆಂದೇ ಕರೆಯುವುದು. ನಾನು ’ಮಳೆ’ಯೆಂದರೆ ಮೞೆ ಬೇಱೆ ಯಾರನ್ನೋ ಕರೆದಂತಾಗುವುದಱಿಂದ ತಾನು ಕಱೆ(ಮೞೆಗಱೆ)ಯೆನೆಂದು ನನ್ನ ಕಿವಿಯೊಳಗೆ ಉಸುರಿ ಹೋದವಾರ ಓಡಿ ಹೋಯ್ತು. ನಾನಿನ್ನೂ ಉಸುರುತ್ತಿರುವೆ. ’ಮೞೆಯೇ ನೀ ಮತ್ತೊಮ್ಮೆ ಕಱೆ’.
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಅಶೋಕ್,
>> ಮಳೆಯನ್ನು ಬೇಕಾದಾಗ ಬರಿಸುವುದು ಹೇಗೆ?
ಇಲ್ಲಿ ಎರಡು ಪ್ರಶ್ನೆ ಬರುತ್ತದೆ?
ಸಕಾಲಿಕ ಮಳೆನಾ? ಅಕಾಲಿಕ ಮಳೆನಾ?
ಸಕಾಲಿಕ ಮಳೆ ಆದರೆ ಎರಡು ಪ್ರಶ್ನೆ..
ನ್ಯಾಚುರಲ್ಲಾ? ಅನ್ನ್ಯಾಚುರಲ್ ಮಳೆನಾ?
ನ್ಯಾಚುರಲ್ಲಾದರೆ ಎರಡು ಪ್ರಶ್ನೆ..
ಮುಂಗಾರು ಮಳೆನಾ? ಹಿಂಗಾರು ಮಳೆನಾ?
ಮುಂಗಾರು ಮಳೆ ಆದರೆ ಎರಡು ಪ್ರಶ್ನೆ..
ಯೋಗರಾಜಭಟ್ರದ್ದಾ? ದೇವರಾಜ ಇಂದ್ರರದ್ದಾ?
ಯೋಗರಾಜಭಟ್ರದ್ದಾದರೆ ಎರಡು ಪ್ರಶ್ನೆ..
ಜೋಗದ ಮಳೆನಾ? ಕೊಡಚಾದ್ರಿಯ ಮಳೆನಾ?...
...
ಇನ್ನು ಅನ್ನ್ಯಾಚುರಲ್ ಮಳೆ ಆದರೆ ಎರಡು ಪ್ರಶ್ನೆ..
ಸಾಮಾನ್ಯರು ಬರಿಸುವ ಮಳೆನಾ? ಸರಕಾರಾನಾ?
ಸಾಮಾನ್ಯರದ್ದಾದರೆ ಎರಡು ಪ್ರಶ್ನೆ..
ಕಪ್ಪೆಗಳ ಮದುವೆ ಮಾಡಿದ್ದಾ? ಕತ್ತೆಗಳ ಮದುವೆ ಮಾಡಿದ್ದಾ?
ಸರಕಾರದಿಂದಾದರೆ ಎರಡು ಪ್ರಶ್ನೆ..
ಮೋಡ ಬಿತ್ತನೆ ಮಾಡಿದ್ದಾ? ಯಜ್ಞ ಮಾಡಿ ಬರಿಸಿದ್ದಾ?
ಮೋಡ ಬಿತ್ತನೆ ಮಾಡಿದ್ದಾದರೆ ಎರಡು ಪ್ರಶ್ನೆ..
ಇಲ್ಲಿ ಬಿತ್ತಿ ಆಂಧ್ರದಲ್ಲಿ ಮಳೆಬಂದದ್ದಾ? ಇಲ್ಲಿ ಬಿತ್ತಿ ತಮಿಳ್ನಾಡಲ್ಲಿ ಬರುವ ಮಳೆನಾ?
.........?
_ಗಣೇಶ.
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಉತ್ತರ ಕೊಡಿ ಅಂದ್ರೆ ಪ್ರಶ್ನೆ ಕೇಳ್ತಿದ್ದೀರಲ್ಲಾ ಗಣೇಶ್?
*ಅಶೋಕ್
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಏನ್ರೀ ಗಣೇಶ ಇದು, ಪ್ರಶ್ನೆಗಳ ಸುರಿಮಳೆ! ಒಂದು ಪ್ರಶ್ನೆ ಕೇಳಿದರೇ ಬೇಗ ಉತ್ತರ ಕೊಡೋದು ಕಷ್ಟ. ಹೀಗಿರುವಾಗ ಇಷ್ಟೊಂದು ಪ್ರಶ್ನೆಗಳನ್ನು ಒಟ್ಟಿಗೇ ಕೇಳಿದ್ದೀರಿ.
ಸದ್ಯ, ಪ್ರಶ್ನೆ ಹೋಗಿದ್ದು ಅಶೋಕ್‌ಗೆ. ಅನುಭವಿಸಲಿ ಫಜೀತಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಪಲ್ಲವಿ..
ಪ್ರಶ್ನೆಗೆ ಉತ್ತರವಾಗಿ ಪ್ರಶ್ನೆಯೂ ಇರಬೋದು.
ಹಾಗೆ
ಉತ್ತರಗಳೂ ಪ್ರಶ್ನೆಗಳಾಗಬೋದು..
ಅದಕ್ಕೆ ಪ್ರಶ್ನೆ ಮತ್ತು ಉತ್ತರ ಎಂಬ ಯತ್ವಾಸ ಬೇಕಾ?
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
"ನಿಮ್ಮ ಉತ್ತರಗಳಿಗೆ ನಮ್ಮ ಪ್ರಶ್ನೆಗಳು" ಅಂಕಣ ಪ್ರಾರಂಭಿಸಿದರೆ ಇನ್ನೂ ಚೆನ್ನಾಗಿರ್ತದೆ!
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಸದ್ಯ ಈಗ ಹಾಗೇ ಆಗ್ತಿದೆ. ಇನ್ನೊಬ್ಬರ ಬರವಣಿಗೆ ಬಗ್ಗೆ ಬರೀ ಪ್ರಶ್ನೆಗಳೇ ಹುಟ್ಟಿಕೊಂಡಿವೆ. ನಿಮ್ಮ ಮತ್ತು ಡಿ.ಎಸ್. ನಾಗಭೂಷಣರ ಲೇಖನಗಳಿಗೆ ಚಾಮರಾಜ ಅವರು ಪ್ರತಿಕ್ರಿಯೆಗಳ ಲೇಖನವನ್ನೇ ಬರೆದ ಹಾಗೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ನಿಜ. ಆದರೆ, ಎರಡೂ ಸೇರಿಕೊಂಡು ವ್ಯತ್ಯಾಸ ಇಲ್ಲದಂತೆ ಆದ ಮೇಲೆ ಅದನ್ನು ಏನಂತ ಕರೆಯೋದು ಮಹೇಶ್?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...