ಪ್ರಸ್ತುತ ರಾಜಕಾರಣದಲ್ಲಿ ದೇವೇಗೌಡರ ಪಾತ್ರ!
ಕುಮಾರ ಸ್ವಾಮಿ ಬೆಂಬಲವನ್ನು ಹಿಂತೆಗೆದುಕೊಂಡು ತಾನು ಮುಖ್ಯಮಂತ್ರಿಯಾಗ ಹೊರತಿರುವುದರ ಹಿಂದೆ ದೇವೇಗೌಡರ ಪಾತ್ರ ಇದೆ ಎಂದು ಎನಿಸುದಿಲ್ಲವೇ?

- Login or register to post comments
- 738 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕುಮಾರ ಸ್ವಾಮಿ ಬೆಂಬಲವನ್ನು ಹಿಂತೆಗೆದುಕೊಂಡು ತಾನು ಮುಖ್ಯಮಂತ್ರಿಯಾಗ ಹೊರತಿರುವುದರ ಹಿಂದೆ ದೇವೇಗೌಡರ ಪಾತ್ರ ಇದೆ ಎಂದು ಎನಿಸುದಿಲ್ಲವೇ?




Re: ಪ್ರಸ್ತುತ ರಾಜಕಾರಣದಲ್ಲಿ ದೇವೇಗೌಡರ ಪಾತ್ರ!;-)
ಖಂಡಿತ. ದೇವೇಗೌಡರು ಗೋಳೋ ಎಂದು ಅತ್ತಾಗ ಹರಿದ ಕಣ್ಣೀರನ್ನು ತುಂಬಲು ಪಾತ್ರ ಖಂಡಿತಾ ಬೇಕಿತ್ತು. ಇತ್ತೀಚೆಗಿನ ವರದಿಯಂತೆ ಇಷ್ಟು ಚೆನ್ನಾಗಿ ನಟಿಸಿದ ದೇವೇಗೌಡರ ಹೆಸರನ್ನು ಉತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ಸೂಚಿಸಲಾಗಿದೆ.
ಸಿಗೋಣ,
ಪವನಜ
ಸಿದ್ದರಾಮಯ್ಯನವರ comment...
ಇಡೀ ಪ್ರಸಂಗದ ಬಗ್ಗೆ ಸಿದ್ದರಾಮಯ್ಯನವರ comment
"ಕಥೆ, ಚಿತ್ರ ಕಥೆ, ನಿರ್ದೇಶನ, ನಿರ್ಮಾಣ, ಸಂಗೀತ ಎಲ್ಲಾ ದೇವೇಗೌಡರದು.. ಕುಮಾರ ಸ್ವಾಮಿ ಏನಿದ್ದರೂ ಸಹಾಯಕ ಅಷ್ಟೆ!"
ಹೊಲಸು ರಾಜಕೀಯ
ಏನು ಹೊಲಸು ರಾಜಕೀಯ ಮಾರಾಯ್ರ. ಯಾರನ್ನೂ ನಂಬೋದಕ್ಕಾಗೋದಿಲ್ಲ. ದೇಗೌ ಮಾಡಿದ್ದು ಡ್ರಾಮಾ ಆದರೆ ನಮ್ಮೆಲ್ಲರನ್ನೂ ಸೇರಿದಂತೆ ಮೀಡಿಯದವರನ್ನೂ ಡ್ಯೂಪ್ ಮಾಡಿದಂತಾಯಿತು, ಅಲ್ವೆ?
ಬೂಟಾಸಿಂಗ್ ಬೂಟಾಟಿಕೆಯೂ ಅವರೊಬ್ಬರದೇ ಅಲ್ಲವೆಂದು ತೋರುತ್ತದೆ. ಕೇಂದ್ರದಲ್ಲಿ ಅವರನ್ನು ತೆಗೆದುಹಾಕಲು ಮೀನ ಮೇಷ ಎಣಿಸಿತ್ತಿರುವುದನ್ನ ನೋಡಿದರೆ ಇನ್ನೆಷ್ಟು ಜನ ೫೦೦ ಕೋಟಿ ರೂ ವಿನಾಕಾರಣ ವ್ಯವವಾಗಿದ್ದರ ಹಿಂದಿದ್ದಾರೋ ಏನೋ ಎಂದನಿಸುತ್ತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: (ಹೊಲಸು?) ರಾಜಕೀಯ
'ರಾಜಕೀಯ' ಪದಕ್ಕೆ 'ಹೊಲಸು' ಎಂಬ ನಾಮವಿಶೇಷಣದ ಅಗತ್ಯವಿಲ್ಲ; ಒಂದೊಮ್ಮೆ ಬಳಸಿದರೂ ಅದು ದ್ವಿರುಕ್ತಿಯಾಗುತ್ತದೆ
- ಶ್ರೀವತ್ಸ ಜೋಶಿ
ಸರಿ ಮು೦ದೇನ್ ಮಾಡೋದು
ಅದು ಹೊಲಸು, ಅದು ಕಲಪೆ ಅನ್ನೋದು ಸರಿಯೇ ??
ಆದರೆ ನಾವೆಲ್ಲಾ ಮು೦ದೇನ್ ಮಾಡೋದು, ನೋಡಿ ಸ೦ಪದದಲ್ಲಿ
comment post ಮಾಡಿ link ಕೊಟ್ಕೊ೦ಡಿರುವುದೆ,
ಅಥವಾ ಬೇರೆ ಯಾವುದಾದರೂ ಕ್ರಿಯೆ ನಿಮ್ಮ ಮನಸ್ಸಿಗೆ ತೋಚಿದೆಯೇನು.
ಇಲ್ಲಾ ಈ ರೋಗ ಗ್ರಸ್ತ ಸಮಾಜದಲ್ಲಿ ನಾವು ರೋಗಿಗಳಾಗಿ ಬಾಳುವುದೇ - ??
ನಮ್ಮ ಹಣೆ ಬರಹ ಇಷ್ಟೇಯೇನು ??
ಹಿ೦ದೆ ರಾಜರ ಕಾಲದಲ್ಲಿ ಒಬ್ಬ ರಾಜನನ್ನು ಕಿತ್ತು ಮತ್ತೊಬ್ಬ ರಾಜನನ್ನು
ಸೃಷ್ಟಿ ಮಾಡಬಹುದಾಗಿತ್ತು.
ಈಗ ರಾಜರೆಲ್ಲಾ ಕೇವಲ ಖುರ್ಚಿಗಾಗಿ ಒದ್ದಾಡುವರೆ.
ಹುಟ್ಟಿದ ತಕ್ಷಣ ಖುರ್ಚಿಯ ಜಪ ಪ್ರಾರ೦ಭವಾಗುತ್ತೆ.