ಬಿಲ್
ಬಿಲ್ (ಬಿಲ್ಲು) (ನಾಮಪದ)=ಧನುಸ್ಸು. ಉದಾಹರಣೆ:- ರಾಮನು ಬಿಲ್ಲಿಗೆ ಬಾಣ ಹೂಡಿ ರಾವಣನ ಮೇಲೆ ಬಿಟ್ಟನು.
ಬಿಲ್(ಕ್ರಿಯಾಪದ)= ಮಾಱು ಅಥವಾ ಕೊಳ್ಳು.
ಉದಾಹರಣೆ:- ಧನಕನಕಕ್ಕೆ ಮಕ್ಕಳಂ ಬಿಲ್ವರುಂಟೇ?
ವರ್ತಮಾನ ಕೃದ್ವಾಚಿ ರೂಪ:- ಬಿಲ್ವ/ಬಿಲಿವ
ಭೂತಕೃದ್ವಾಚಿ ರೂಪ:-ಬಿಲ್ತ/ಬಿಲಿತ
ಕೃದಂತ ಭಾವನಾಮ: ಬೆಲೆ ಹೋಲಿಸಿ ತಮಿೞಿನ ಇದೇ ಅರ್ಥದ ಬೆಲೆ, ತಮಿೞಿನ ವಿಲೈ, ಮಲಯಾಳ ಮತ್ತು ತೆಲುಗಿನ ವಿಲ
ಉದಾಹರಣೆ:- ಗುರುವೇ, ನಿಮ್ಮ ಕರುಣೆಗೆ ಬೆಲೆ ಕಟ್ಟಬಲ್ಲೆನೆ?
- Login or register to post comments
- 398 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಬಿಲ್
ತಮಿೞಿನ ವಿಲೈ ಎಂದಷ್ಟೇ ಓದಿಕೊಳ್ಳಿ.
ಉ: ಬಿಲ್
ಬಿಲ್ವ = ಮಾರುವವ, ಬಿಲ್ಲುಗಾರ :)
ಉ: ಬಿಲ್
ಹಾಗಾದರೆ, ಇಂಗ್ಲೀಷಿನ billಗೂ ಕನ್ನಡ ಬಿಲ್(ಕ್ರಿಯಾಪದಕ್ಕೂ) ನಂಟಿದೆ. ಏನಾದರು ಮಾಱಿದಾಗ ಆರ್ ಕೊಂಡಾಗ ತಾನೇ ನಮಗೆ ಬಿಲ್ ಸಿಗುವುದು.
ಉ: ಬಿಲ್
ಹಾಗೆ ಇಂಗ್ಲಿಶ್ನ ವಿಲ್/will ಗೂ ನಂಟಿದೆ. :)