ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಳ್ಳಿ = ಶಾಲೆ?!

ನಿನ್ನೆ ಸಾಯಂಕಾಲ ಟೀ ಕುಡೀತಿದ್ದಾಗ ನನ್ನ ಮತ್ತು ನನ್ನ ತಮಿಳು ಸ್ನೇಹಿತನ ಚರ್ಚೆ ತಮಿಳು ಇತಿಹಾಸದ ಕಡೆ ತಿರುಗಿತು.

ಅವನ ಓದಿನ ಪ್ರಕಾರ ಪಳ್ಳಿ ( ನಮ್ಮ ಹಳ್ಳಿ) ಅನ್ನುವುದು ಅಂದಿನ ( ಹಲ ಶತಮಾನಗಳ ಹಿಂದೆ) ರಾಜರಿಂದ ಜೈನರಿಗೆ ದತ್ತಿಯಾಗಿ ಕೊಡಲ್ಪಟ್ಟ ಜಾಗ. ಹೆಚ್ಚಾಗಿ ಹಳ್ಳಿ ಅಂದ್ರೆ ಶಾಲೆ ಅನ್ನೋ ಅರ್ಥ ಬಾರೋ ರೀತಿ ಬಳಸ್ತ ಇದರಂತೆ.

ಅದೇರೀತಿ "ಮಂಗಳಂ" ಪದದಿಂದ ಕೊನೆಯಾಗೋ ನಗರ/ಪ್ರದೇಶಗಳು ಬ್ರಾಹ್ಮಣರಿಗೆ ದತ್ತಿಯಾಗಿ ಕೊಡಲ್ಪಟ್ಟ ಸ್ಥಳಗಳಂತೆ.

ನಮ್ಮ ಕನ್ನಡನಾಡಿನ ಇತಿಹಾಸ ನೋಡಿದರೆ ... ಇಲ್ಲಿ (ವೀರಶೈವವೂ ಸೇರಿದಂತೆ ) ಇತರ ಧರ್ಮಗಳು ನೆಲೆಗೊಳ್ಳುವ ಮುಂಚೆ ಜೈನರೆ ಬಹು ಮಂದಿ ತುಂಬಿದ್ದರು. ಇದರಂತೆ "ಹಳ್ಳಿ" ನಮ್ಮಲ್ಲಿ ಹೆಚ್ಚು ಅಂತ ಹೇಳಬಹುದೇ?!

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಳ್ಳಿ = ಶಾಲೆ?!

savithru's picture

http://dsal.uchicago...

4018 Ta. paḷḷi hamlet, herdsman's village, hermitage, temple (esp. of Buddhists and Jains), palace, workshop, sleeping place, school, room. Ma. paḷḷi hut, small settlement of jungle tribes, public building, place of worship for Buddhists or foreigners, mosque, royal couch. To. poḷy sacred dairy, matrilineal sib, Badaga house; -

ಸವಿತೃ

ಉ: ಹಳ್ಳಿ = ಶಾಲೆ?!

mahesha's picture

ನೋಡಿದ್ರ?

ನಮ್ ನೆಲದಲ್ಲಿ ಮೊದಲು ಕಲಿಕೆ ಮೊದಲಿದ್ದು ಬವುದ್ದರು, ಜಯ್ನರು.. ಅಂತ ಯೇಳ್ಬೋದು.!.!

ಉ: ಹಳ್ಳಿ = ಶಾಲೆ?!

hamsanandi's picture

ಮೊದಮೊದಲು ಬರವಣಿಗೆ ಆರಂಭಿಸಿದ್ದೂ ಕೂಡ ಬೌದ್ಧಜೈನರೇ ಅನ್ನೋ ಮಾತಿದೆ. ತಮಿಳಿನ ಅತಿ ಹಳೇ ಶಾಸನಗಳು ಕೂಡ ಈ ಸಾಲಿಗೇ ಸೇರುತ್ತವೆ. ಅಲ್ಲಿಯ ವರೆಗೆ ಕಲಿಕೆ ಬರೀ ಬಾಯಿಂದ ಬಾಯಿಗೆ ಸಾಗುತ್ತಿತ್ತು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಹಳ್ಳಿ = ಶಾಲೆ?!

ಸಂಗನಗೌಡ's picture

ಇದು ನಂಬತಕ್ಕ ಮಾತು ಅನಿಸುತ್ತದೆ, ನಮಗೆ ತಿಳಿದಿರುವಂತೆ, ಸಕ್ಕದದಲ್ಲಿರುವ ರಾಮಾಯಣ, ಮಹಾಭಾರತದಂತವುಗಳನ್ನು ಬಾಯಿಂದ ಬಾಯಿಗೆ ಹೇಳಿಕೊಂಡು ಬರಲಾಗಿತ್ತು. ಅದಕ್ಕಾಗೇ ಆಗೆಲ್ಲ ’ಗುರುಕುಲ’ಗಳೆಂದರೆ ತುಂಬ ಬೇಡಿಕೆ ಇದ್ದಿತು, ದೇವನಾಗರಿ ಕನ್ನಡ ಲಿಪಿಗಿಂತ ತುಂಬ ತಡವಾಗಿ ಬಂತು, ಮೊದಲು ಸಕ್ಕದಕ್ಕೂ ಕನ್ನಡ ಲಿಪಿಯನ್ನೇ ಬಳಸಲಾಗುತ್ತಿತ್ತು.

http://ancientscript...
http://ancientscript...
http://ancientscript...

ಉ: ಹಳ್ಳಿ = ಶಾಲೆ?!

mahesha's picture

ಮಾರಾಯ..

ರಾಮಾಯಣ ಮತ್ತು ಮಹಾಬಾರತಗಳನ್ನು ಸಕ್ಕದದಲ್ಲಿ ತರುವಾಯ ಬರೆಯಲಾಗಿದೆ...

ಏಕೆ ಗೊತ್ತಾ? ಸಂಸ್ಕ್ರತ ಎಂಬುದು ಹುಟ್ಟಿದ್ದೇ ಪಾಣಿನಿಯ ಕಾಲದಲ್ಲಿ.

ರಾಮಾಯಣ ಮತ್ತು ಮಾಬಾರತಗಳ ಮೂಲವನ್ನು ವಯಿಶ್ಣವ ಪಂತದವರು ತಮಗೆ ಬೇಕಾದಂತೆ ತಿದ್ದುಕೊಂಡಿದ್ದಾರಂತೆ.

ಪಂಚತಂತ್ರಗಳನ್ನು ಮೊದಲು ಪಯ್ಶಾಚಿ ನುಡಿಯಲ್ಲಿ ಬರೆಯಲಾಯ್ತಂತೆ.. ಆ ಪಯ್ಶಾಚಿ ನುಡಿ ಕನ್ನಡವೂ ಆಗಿರಬೋದು :)