ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?
ಬೀಜಿಂಗಿನಲ್ಲಿ ಒಲಿಂಪಿಕ್ಸ್ ಉದ್ಘಾಟನೆಯಾಯಿತು. ಮುಂದಿನ ಎರಡು ವಾರ ಜಗತ್ತಿನ ಗಮನ ಅತ್ತ ಹೋಗಲಿದೆ. ಚೀನಾ ಇಂತಹ ಬೃಹತ್ ಉತ್ಸವದ ಆಯೋಜನೆಗೆ ನಲ್ವತ್ತು ಬಿಲಿಯನ್ ಡಾಲರು ಖರ್ಚು ಮಾಡಿದೆಯಂತೆ. ಪರಿಣಾಮವಾಗಿ ಎಲ್ಲರ ಗಮನ ಚೀನಾದ ಕಡೆಗೆ ಹೋಗಿದೆ. ಅದು ಸಾಧಿಸಿರುವ ಅದ್ಭುತ ಪ್ರಗತಿ,ಮೂಲ ಸೌಕರ್ಯ ಅಭಿವೃದ್ಧಿ ಎಲ್ಲರ ಗಮನ ಸೆಳೆದು,ಅಗಾಧ ಹಣದ ಹೂಡಿಕೆ ಆ ದೇಶಕ್ಕೆ ಹರಿಯ ಬಹುದು. ಭಾರತವೂ ಇತ್ತೀಚಿನ ದಿನಗಳಲ್ಲಿ ಚೀನಾದ ಅಭಿವೃಧ್ದಿಯ ಪರಿಕಲ್ಪನೆಯನ್ನು ಮಾದರಿಯಾಗಿ ತೆಗೆದುಕೊಂಡ ಹಾಗಿದೆ. ನಮ್ಮ ಹಣಕಾಸು ಮಂತ್ರಿ ಚಿದಂಬರಮ್ ಭಾರತ ತನ್ನ ಅಭಿವೃದ್ಧಿ ಸಾಧಿಸಲು ದೊಡ್ಡ ದೇಶಗಳ ಮಾದರಿಯನ್ನೇ ಆಧಾರವಾಗಿರಿಸಿಕೊಳ್ಳುವುದು ಸರಿ ಎಂಬ ವಾದವನ್ನೂ ಮಾಡಿದ್ದಾರೆ.
ನಾವೂ ಒಲಿಂಪಿಕ್ಸ್ ಅಂತ ಕ್ರೀಡಾಕೂಟವನ್ನು ಆಯೋಜಿಸಬೇಕೇ? ಇದು ನಮಗೆ ಸಾಧ್ಯವೇ? ಅದಕ್ಕೆ ಬಿಲಿಯಗಟ್ಟಲೆ ಖರ್ಚು ಮಾಡುವುದು ವಿಹಿತವೇ? ಅಲ್ಲ ಆ ಹಣವನ್ನು ನಮ್ಮ ಮೂಲಸೌಕರ್ಯಗಳ ಹೆಚ್ಚಳಕ್ಕೆ ಬಳಸಬೇಕೇ?

- Login or register to post comments
- 229 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?
ಅಶೋಕ್, ನನಗೆ ಅನ್ನಿಸೋದು. ಭಾರತಕ್ಕೆ ಒಲಿಂಪಿಕ್ ಆಯೋಜಿಸುವುದಕ್ಕೆ ಹಣದ ಕೊರತೆ ಅಡ್ಡಗಾಲಾಗುವುದಿಲ್ಲ. ಬೇಕಿದ್ರೆ, ಹೆಚ್ಚೇ ಎನಿಸುವಷ್ಟು ಹಣವನ್ನು ಹೊಂದಿಸಬಹುದು. ಆದರೆ ಹಣವನ್ನು ಮೀರಿದ ಅನೇಕ ಅಂಶಗಳು ಅಡ್ಡಗಾಲು ಹಾಕುತ್ತವೆ.
೧. ಅರ್ಹತೆ - ಪ್ರತಿ ಬಾರಿ ಒಲಿಂಪಿಕ್ಕಿನಲ್ಲಿ ನಾವು ಎಷ್ಟರ ಮಟ್ಟಿಗೆ ಪದಗಳನ್ನು ಗೆಲ್ಲುತ್ತಿದ್ದೇವೆ ? -- ಇದು ತುಂಬಾ ಪ್ರಮುಖವಾದ ಅಂಶ ಅಂತ ನನಗೆ ಅನಿಸುತ್ತದೆ.
೨. ಒಗ್ಗಟ್ಟಿನ ಬಿಕ್ಕಟ್ಟು - ಕ್ರೀಡಾಂಗಣ ಯಾವ ರಾಜ್ಯದಲ್ಲಿ ಇರಬೇಕು, ಅದಕ್ಕೆ ಯಾವ ಹೆಸರಿಡಬೇಕು ಎಂಬುದಕ್ಕೇ ಅನೇಕ ವರ್ಷ ಬೇಕಾಗಬಹುದು. ಇದೊಂದು ರೀತಿ, ಡೆಮಾಕ್ರಸಿಯ ಅಣಕ. ಆದರೆ ಡೆಮಾಕ್ರಸಿ ಇದ್ದಾಗ್ಯೂ ಇಂತಹ ವಿಚಾರಗಳಲ್ಲಿ ತುಂಬಾ ಮುಂದುವರೆದಿರುವ ಅನೇಕ ದೇಶಗಳು ಇವೆ.
......
ಉ: ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?
ಸುನಿಲ್, ಅದು ದೆಹಲಿಯ ಸುತ್ತಮುತ್ತಲೇ ನಡೆಯುವುದು-ಏಶ್ಯಾಡ್ ನಡೆದಂತೆ.
ಹೆಸರು ಕಾಂಗ್ರೆಸ್ ಆಡಳಿತ ಇದ್ದರೆ ಸೋನಿಯಾ,ರಾಜೀವ್ ಗಾಂಧಿ ...ಬಿಜೆಪಿಯಾದ್ದಾದರೆ ವಾಜಪೇಯಿ...ಆಗ ಮಾಯಾವತಿ ಅಧಿಕಾರದಲ್ಲಿ ಇದ್ದರೆ
ಸ್ವತ: ತಮ್ಮ ಹೆಸರು ಇರಿಸಿಕೊಳ್ಳುತ್ತಾರೆ.
ಹಣ ಒಟ್ಟು ಮಾಡುವುದು ಸಮಸ್ಯೆಯಾಗದು ನಿಜ. ಅಂತಹದ್ದಕ್ಕೆ ಆ ಹಣ ಸುರಿಯುವುದು ನ್ಯಾಯವೇ ಎನ್ನುವುದು ಪ್ರಶ್ನೆ.
*ಅಶೋಕ್
ಉ: ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?
ನನ್ನ ಮಟ್ಟಿಗೆ ಹೇಳುವುದಾದರೆ, ಅದು ಒಳ್ಳೆಯದು. ಹಾಗಾಗಿ, "ಹಣ ಸುರಿಯುವುದು" ಎನ್ನುವುದಕ್ಕಿಂತ "ಹಣದ ಸರಿಬಳಕೆ" ಎನ್ನಬಹುದೇನೋ. ನನ್ನ ಹೇಳಿಕೆ ತುಂಬಾ ತೆಳವಾಗಿರಬಹುದು. ಆದರೆ, ನಾನು ಹೇಳಬಹುದಾದದ್ದು, "ನಮ್ಮ ದೇಶದ ದೊಡ್ಡ ಸಮಸ್ಯೆಯಾದ 'ಸಾಮಾಜಿಕ ನ್ಯಾಯದ ಮರೀಚಿಕೆಯ'(*) ಹಿನ್ನೆಲೆಯಿಂದ ಇಂತಹ ಹಿರಿಕೂಟಗಳನ್ನು ಏರ್ಪಡಿಸುವುದು ಬೇಡ", ಎಂಬ ತೀರ್ಮಾನಕ್ಕೆ ಬರುವುದು ಅಷ್ಟು ಸಮಂಜಸವಲ್ಲ.
ಪ್ರಯೋಜನಗಳು
೧. ಹಣದ ಕೊಳೆಯುವುದಿಲ್ಲ.
೨. ಹಣವು ಹರಿಯುತ್ತದೆ.
೩. ಜಾಗೃತಿ.
೪. ಸಾಧಿಸಬೇಕೆಂಬ ಛಲ
೫. ಪ್ರಜೆಗಳಿಗೆ ಮನೋರಂಜನೆ
...................................
* ಸಾಮಾಜಿಕ ನ್ಯಾಯದ ಮರೀಚಿಕೆ ಎಂದರೇನು ?
ನೋಡಿ, ನಮ್ಮಲ್ಲಿ ಅನೇಕ ತೊಡಕುಗಳಿವೆ
೧. ಹಳ್ಳಿಗಳಲ್ಲಿ ಕರೆಂಟಿಲ್ಲ.
೨. ಎಷ್ಟೋ ಜನಕ್ಕೆ ಕುಡಿಯೋಕ್ಕೆ ನೀರಿಲ್ಲ.
೩. ಕೃಷಿ ಭೂಮಿ ಹಾಳಾಗತ್ತೆ.
೪. ಜನರನ್ನು ಒಕ್ಕಲೆಬ್ಬಿಸಬೇಕಾಗತ್ತೆ.
.......
ಈ ರೀತಿಯ ತೊಡಕುಗಳಿವೆ. ಆದರೆ ಸಮಸ್ಯೆ ಇರುವುದು, "ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ" ಎಂಬುದರಲ್ಲಿ ಅಲ್ಲ. ಆದರೆ "ಒಕ್ಕಲೆಬ್ಬಿಸಲಾಗುತ್ತಿರುವ ಜನರಿಗೆ ಸರಿಯಾದ ರೀತಿಯಲ್ಲಿ ಸಾಮಾಜಿಕ ಸ್ಥಾನಮಾನಗಳು ಸಿಗುವಂತೆ ನಾವು ನೋಡಿಕೊಳ್ಲುತ್ತಿಲ್ಲ". SEZ ಅದೂ ಇದೂ...ಇಂತಹವನ್ನು "ಸಾಮಾಜಿಕ ನ್ಯಾಯದ ಮರೀಚಿಕೆ" ಎಂದುಕೊಂಡಿದ್ದೇನೆ.