ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

August 9, 2008 - 7:16pm — roopablrao

ಈ ಪದ ಯಾಕೆ ಬೇಕು . . ಇದರ ಮೂಲವೇನು
ಹೆಣ್ಣುಜಾತಿಗೆ ಅವಮಾನಕರವಾದ ಈ ಪದಬಳಕೆ ಎಷ್ಟು ಸೂಕ್ತ?
ಇದರ ಬದಲು ವೇಶ್ಯೆ ಅಥವ ಬೇರಾವುದಾದರೂ ಅಚ್ಚ ಕನ್ನಡದ ಪದಗಳಿಲ್ಲವೇ

‹ ಒಳ್ಳೆಯ ಗಂಡ ಹೇಗಿರಬೇಕು? ನರಸಿಂಹ ಯಾರು ? ›
  • ಸಮಾಜ
~.~
  • Login or register to post comments
  • 459 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 9, 2008 - 10:06pm — ASHOKKUMAR

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

ASHOKKUMAR's picture

ಸಂಸ್ಕೃತ ಪದವನ್ನು ಅಚ್ಚ ಕನ್ನಡ ಪದಕ್ಕಿಂತ ಒಳ್ಳೆಯದು ಅಂತಿದ್ದೀರಲ್ಲ!
ಮಹೇಶ ಬನ್ನಿ ಇಲ್ಲಿಗೆ... Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 9:04pm — Sunil Jayaprakash

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

Sunil Jayaprakash's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:01am — roopablrao

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

roopablrao's picture

ವೇಶ್ಯೆ ಕನ್ನಡ ಪದ ಎಂದು ನಾನು ಹೇಳಲಿಲ್ಲ
ಅದು ಸಂಸ್ಕೃತ ಪದವೇ ಅದು ನನಗೂ ಗೊತ್ತು
ಅದನ್ನು ಬಹಳ ಅವಮಾನಕಾರಿಯಾದ ಅರ್ಥದಲ್ಲಿ ಬಳಸುತ್ತಾರೆ
ಬೆಲೆವೆಣ್ಣು ಹೇಗೆ ಇದು ಸಂಸ್ಕೃತವೇ ಅಥವ ಕನ್ನಡವೇ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 10:28pm — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಸೂಳೆ ಕೂಡ ಸಂಸ್ಕೃತ ಪದವೇ. ಸೂಡ್=ಕುಣಿ ಎಂಬ ಧಾತುವಿನಿಂದ ಹುಟ್ಟಿದ ಸೂಡಾವೇ ಈ ಸೂಳೆ.
ಸೂಡೆ->ಸೂಳೆ, ವೀಟಾ->ವೀಟೆ->ವೀಳೆಯಾಗುವಂತೆ. ಹಿಂದೆ ದೇವಸ್ಥಾನದಲ್ಲಿ ದೇವದಾಸಿಯ ತೆಱನಾಗಿ ಈ ಸೂಳೆಯರು ಕುಣಿಯುತ್ತಿದ್ದರಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 9:37pm — Sunil Jayaprakash

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

Sunil Jayaprakash's picture

ಸುಕು (ಸುಮ್ನೆ ಕುಚೇಶ್ಟೆಗೆ) - ಕನ್ನಡ ಕಂದರ ಮೇಲಿನ ಕಾಮೆಂಟ್ ಓದಿ ಒಂದು ಸುಕು ಹೇಳಬೇಕೆನಿಸಿತು.
=======================================
ಕನ್ನಡದಲ್ಲಿ ವೇಶ್ಯಾವಾಟಿಕೆಗೆ ನಂಟಾದ ಪದಗಳು ಏಕಿಲ್ಲ ಅಂದ್ರೆ, ಇಂತಹ ನೀಚ ಪದ್ಧತಿಗಳು "ಅಚ್ಚ-ತಿರುಳ್ಗನ್ನಡನಾಡಿನಲ್ಲಿ" ಇರಲಿಲ್ಲ. ಸಂಸ್ಕೃತದವರು ಯಾವಾಗ ಇಲ್ಲಿಗೆ ಕಾಲಿಟ್ರೋ ಆಗಲೇ ಇಲ್ಲಿಗೆ ಸೂಳೆಯರು, ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ ಕಾಲಿಟ್ಟದ್ದು. ಅದಕ್ಕೆ ಪುರಾವೆಯಾಗಿ ಕೆಲವು ಸಂಸ್ಕೃತ ನಾಟಕಗಳನ್ನು ಹೆಸರಿಸಬಹುದು. ಬರೀ ಇಂತಹ ವಿಚಾರಗಳೇ ಸಿಗತ್ತೆ Sticking out tongue
=======================================

ವಿಷಯಕ್ಕೆ ಬಂದರೆ,
೧. ಕನ್ನಡಕಂದರೆ "ಸೂಡಾ" ಎಂಬ ಪದ ಸಂಸ್ಕೃತದಲ್ಲಿ ಎಲ್ಲೆಲ್ಲಿ ಯಾವಾಗ ಬಳಕೆಯಾಗಿದೆ ಎಂಬುದನ್ನು ತೋರಿಸಿಕೊಡಿ. ನನಗೆ ಅನ್ನಿಸುವ ಮಟ್ಟಿಗೆ, "ಸೂಳೆ" ಕನ್ನಡ ಪದ.
೨. ರೂಪಾ, ಈ "ಸೂಳೆ" ಎಂಬ ಕನ್ನಡ ಪದದ ಅರ್ಥ ನಮಗೆ ಈಗಾಗಲೇ ತಿಳಿದಿರುವುದರಿಂದ, ಅದು ನೇರವಾಗಿ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ "ಸೂಳೆ" ಪದ ಕೇಳಲು ಅಸಹ್ಯವೆನಿಸಬಹುದು. ಆದರೆ ವೇಶ್ಯೆ ಸಂಸ್ಕೃತ ಪದ. ಸಂಸ್ಕೃತವು ಕನ್ನಡಕ್ಕಿಂತ ಶ್ರೇಷ್ಠ, ಸಂಸ್ಕೃತವೇ ಸಂಸ್ಕೃತಿಯ ಪ್ರತೀಕ ಹಾಗೆ ಹೀಗೆ ಅಂತೆಲ್ಲ ಈಗಾಗಲೇ ದೊಡ್ಡ ದೊಡ್ಡವರು ಪ್ರಚಾರ ಮಾಡಿರುವುದರಿಂದ, "ವೇಶ್ಯೆ" ಎಂಬುದು "ಸೂಳೆ"ಯಷ್ಟು ನೇರವಾದ ಪರಿಣಾಮ ಬೀರುವುದಿಲ್ಲ. ಆದರೆ, ನನಗೆ ವೈಯಕ್ತಿಕವಾಗಿ, "ವೇಶ್ಯೆ"ಗೂ "ಸೂಳೆ"ಗೂ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಒಂದು ಎಳೆಯಲ್ಲಿ ಮಹೇಶನು ಈ ರೀತಿಯ ಮುಜುಗರದ ಬಗ್ಗೆ ಪ್ರಸ್ತಾಪ ಮಾಡಿದ್ದ. ನೋಡಿ, ಮಹೇಶನ ಕಾಮೆಂಟ್

ಕೊಕೊ (ಕೊನೆಯ ಕೊಸರು) - ಕರ್ನಾಟಕದಲ್ಲಿ ಸೂಳೆಕೆರೆ ಅಂತ ಒಂದು ಕೆರೆ ಇದೆ. ಒಬ್ಬಳು ಯುವತಿಯ ಮೇಲೆ ಸೂಳೆಗಾರಿಕೆಯ ಆಪಾದನೆ ಬಂದು, ಆಕೆ ಅದನ್ನು ತೊಡೆದುಹಾಕಲು, ಊರಿನವರಿಗಾಗಿ ಒಂದು ಕೆರೆ ಕಟ್ಟಿಸಿದಳು ಎಂಬ ಕತೆ ಇದೆ. ಇದರ ಬಗ್ಗೆ ವೆಂಕಟೇಶರು ಒಂದು ಬರಹವನ್ನು ನೀಡಿದ್ರು, ಓದಿ ಪೂರ್ತಿ ವಿವರ ಸಿಗತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 6:20am — hamsanandi

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

hamsanandi's picture

ಅರ್ಥವಾಗದಿದ್ದಾಗ ಪರಿಣಾಮದಲ್ಲಿ ಏರು-ಪೇರು ಆಗತ್ತ್ತೆ ಅನ್ನೋದು ನಿಜವೇ.

ನನಗನ್ನಿಸಿದ ಕೆಲವು ವಿಷಯಗಳು:

೧. ಇನ್ನು ಸೂಡ ಎನ್ನುವ ಪದವು ಸಂಸ್ಕೃತದ್ದು ಎನ್ನುವ ಬಗ್ಗೆ ನನಗೆ ಅನುಮಾನವಿದೆ. ಸಂಗೀತದ ಪಾರಿಭಾಷಿಕ ಪದಗಳಲ್ಲಿ ಸೂಡ ಎನ್ನುವುದು ಒಂರು ರೀತಿಯ ರಚನಗೆ ಇರುವ ಮಾತು. (ಪ್ರಬಂಧ). ಸಂಗೀತಸಂಬಂಧಿ ಪಾರಿಭಾಷಿಕ ಶಬ್ದಗಳಲ್ಲಿ ಎಷ್ಟಕ್ಕೋ ಸಂಸ್ಕೃತದ ಹೆಸರನ್ನು ಹೊಂದಿದ್ದರೂ, ಎಷ್ಟಕ್ಕೋ ಕನ್ನಡದ್ದೇ ಹೆಸರುಗಳೇ ಇವೆ ( ಸರಳೆ ವರಸೆ - ಜಂಟಿ ವರಸೆ -ಪದ ಮೊದಲಾದ ಹೆಸರುಗಳನ್ನು ನೋಡಿ). ಈ ಪ್ರಬಂಧದ ಹೆಸರಿಂದಲೇ ಬಂದಿರುವ ಸೂಳಾದಿ ತಾಳಗಳು ಸಂಗೀತದಲ್ಲಿ ಬಳಕೆಯಲ್ಲಿವೆ.

೨. ಕನ್ನಡವು "ಟ ಠ ಡ ಢ ಣ" ಅಕ್ಷರಗಳನ್ನು ಹೆಚ್ಚಾಗಿ ಬಳಸುತ್ತೆ ಅನ್ನೋದು ಗೊತ್ತಿರೋ ವಿಷಯವೇ Smiling

೩. ಸೂಡಿ ಎಂದರೆ, ದೊಂದಿ ಅಲ್ಲವೇ? ಅದು ಅಚ್ಚಕನ್ನಡ ಪದವೇ ಅಲ್ಲವೆ?

ಆದರೆ ಕನ್ನಡ ಕಂದರ ಬಳಿ ಸೂಡ ಎನ್ನುವುದು ಸಂಸ್ಕೃತದ್ದೇ ಎನ್ನಲು ಹೆಚ್ಚಿನ ಆಧಾರಗಳಿದ್ದರೆ, ನಾನು ಕೇಳಲು ತಯಾರು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:33am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಸೂಡತೇ=ಕುಣಿಯುತ್ತಾನೆ/ಳೆ, ಕುಣಿಯುತ್ತದೆ. ಇದಱ ಮೂಲರೂಪ ಸೂಡ್.
ಸೂಡಿ=ದೊಂದಿ. ಇದು ಕನ್ನಡವೇ ಅಥವಾ ತಮಿೞೇ. ಸೂಡ್=ಸುಡು ಇದಱ ಭಾವನಾಮ ಸೂಡಿ=ದಹನ ಅಥವಾ ದಹನವನ್ನು ಸೂಚಿಸುವ ವಸ್ತು ದೊಂದಿ, ಸೂಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 1:15pm — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಹಾಗೇನೂ ಇಲ್ಲ. ಕನ್ನಡದ ನೀಡು=ಚಾಚುವಿನ ಭಾವನಾಮಪದ ನೀಟ. ಅದನ್ನೆ ನೀಳ=ಉದ್ದನೆಯ (ಚಾಚಿದ) ಎಂಬರ್ಥದಲ್ಲಿ ಬಳಸುತ್ತೇವೆ. ಇಲ್ಲಿ ಟ್->ಳ್ ಆಗಿದೆ. ಸಂಸ್ಕೃತದ ವೀಟಾ (ವೀಟಿಕಾ)->ವೀಳೆಯಾಗಿದೆ ನೋಡಿ (ಹಿಂದಿ ಹಾಗೂ ಇತರ ಉತ್ತರ ಭಾಷೆಗಳಲ್ಲಿ ಇದೇ ಬೀಡಾ). ಹಾಗೆಯೇ ಸಂಸ್ಕೃತದ ದಾಡಿಮಾ->ದಾಳಿಂಬೆ ಆಗಿದೆ. ಇಲ್ಲೂ ಕೂಡ ಡ್->ಳ್ ಆಗಿದೆ. ಅಗ್ನಿಮೀಡೇ ಪುರೋಹಿತಂ -> ಅಗ್ನಿಮೀಳೇ ಪುರೋಹಿತಂ ದಕ್ಷಿಣ ಭಾರತದಲ್ಲಿ ಪ್ರಚುರದಲ್ಲಿರುವುದು ಗೊತ್ತು. ಉತ್ತರಭಾರತದಲ್ಲೂ ಹಾಗಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 10:42pm — Chamaraj

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

Chamaraj's picture

ರೂಪಾ ಅವರೇ,

ಯಾವ ಶಬ್ದ ಬಳಸಿದರೂ ಮೂಲ ಅರ್ಥವೇ ಹೊರಡುತ್ತದೆ, ಅಲ್ಲವೆ? ವೇಶ್ಯೆ ಶಬ್ದಕ್ಕೂ ಅದೇ ಅರ್ಥ. ಬೆಲೆವೆಣ್ಣು, ಕರೆವೆಣ್ಣು, ಲೈಂಗಿಕ ಕಾರ್ಯಕರ್ತೆಯರು ಎಂಬ ಶಬ್ದಗಳ ಬಳಕೆಯೂ ನಡೆದಿದೆ. ಆದರೆ, ವಿಷಯಕ್ಕೆ ಒತ್ತು ಕೊಡಲು ಮೂಲ ಶಬ್ದಗಳನ್ನು ಬಳಸುವುದು ಉಂಟು.

ಇದು ಖಂಡಿತ ಹೀಗಳೆಯುವ ಮಾತಲ್ಲ. ಬರವಣಿಗೆಯಲ್ಲಿ ಪ್ರಸ್ತಾಪಿತಗೊಂಡ ವಿಷಯದ ಮೇಲೆ ಅದರ ನಿಷ್ಕರ್ಷೆ ಅವಲಂಬಿಸಿರುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 5:15am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ನಾಯಂ ಸೊಣಗನೆಂದೊಡಂ ಪೇಲ್ಗೆ
ಪಾಯ್ವುದಂ ಬಿಟ್ಟೀತೆ
ಮಾಯಾಂಗನೆಯೆಂದೊಡಮೇಂ
ಕಾಯಮಂ ಮಾರ್ವುದಂ ಬಿಡುವಳೇ ಸೂಳೆ||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 7:48am — mahesha

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

mahesha's picture

http://dsal.uchicago.edu/cgi-bin/philologic/getobject.pl?c.1:1:153.burro...
Ta. cūḷai prostitute. Ma. cūḷa, (Tiyya) cūḷacci harlot; cūḷan whoremonger. Ko. cu·ḷ woman who has sexual intercourse with men of all castes, prostitute. Ka. sūḷe harlot, prostitute. Koḍ. cu·ḷe dancing-girl. Tu. sūḷe whore, harlot.

ಸೂಳೆ ಅನ್ನೋದು ಅಪ್ಪಟ ದ್ರಾವಿಡ ಮತ್ತು ಕನ್ನಡ ಒರೆ.

ಕನ್ನಡಕಂದು ತುಸು ಎಲ್ಲೆಡೆ ಸಿಕ್ಕಸಿಕ್ಕದ್ದನ್ನೆಲ್ಲ ದ್ರಾವಿಡ ಎಟಿಮೊಲಜಿ ಒರೆಗಂಟು ನೋಡದೇ ಸಂಸ್ಕ್ರತ ಅನ್ನೋದು ನಿಲ್ಲಿಸಿದ್ರೆ ಸಯ್ಪು/ನ್ಯಾಯ.

ರೂಪ ಮೇಡಂ ಮಾತಿಗೆ ಹುರುಳೇ ಇಲ್ಲ..!!

ಸೂಳೆ, ಬೆಲೆವೆಣ್ಣು, ಮಯ್ವಿಲೆ(ವಿಲೆ = ಮಾರುವವಳು ) ಏನೇ ಹೇಳಬೋದು..

ಅಶೋಕರು ಹೇಳಿದಂಗೆ.. ಸಂಸ್ಕ್ರತದಲ್ಲಿ ಹೇಳಿದ್ರೆ ಏನು ಹಿರಿಮೆಯಿಲ್ಲ..

ಅದೇ ಹೆಂಗಸನ್ನು - ಮಹಿಳೆ ಅಂದಂಗೆ!!

ರೂಪ ಮೇಡಂ.. ವಸಿ.. ನಂಮ ನುಡಿ, ಹೊರನುಡಿ ಅನ್ನೋ ಲೆಕ್ಕ ಮರೀಬೇಡಿ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 9:49am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಸೂಳೆ ಎಂಬ ಪದ ಸಂಸ್ಕೃತ ಮೂಲದ್ದೆಂದು ತಿಳಿಸದಿದ್ದರೆ ಅದು ಅಚ್ಚ ತೆನ್ನುಡಿ ಪದವೆಂದು ತಿಳಿಯಲಾಗದು. ಅಥವಾ ತೆನ್ನುಡಿಮೂಲ ತಿಳಿಸಬಹುದಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 1:13pm — mahesha

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

mahesha's picture

ಕಿಟ್ಟಲ್ ಇನ್ನು ಹಲವು ತಪ್ಪುಗಳನ್ನು ಹೇಳಿದ್ದಾರೆ..

ಅದೂ ಅಲ್ಲದೆ ಕಿಟ್ಟಲ್ ಬರೆದುದು ಎಟಿಮೋಲಜಿ ಒರೆಗಂಟಲ್ಲ...

ಎಮಿನೋ ಮತ್ತು ಬರೋ ಬರೆದುದು ಎಟಿಮೋಲಜಿ ಒರೆಗಂಟು.. ಅಲ್ಲಿ ಅವರು ಇದು ದ್ರಾವಿಡದಿಂದಲೇ ಸಕ್ಕದಕ್ಕೆ ಹೋಗಿದೆ ಎಂಬ ಅಯ್ಬು ತೋರಿದ್ದಾರೆ..

ಇನ್ನು ಇವರು ಕೊಟ್ಟು ಸಕ್ಕದದ ಒರೆಗಂಟು ಎಟಿಮೊಲಜಿ ಒರೆಗಂಟಲ್ಲ..!!

ಕಂನಡ ಕಂದರು ತುಸು ಎಮಿನೊ ಮತ್ತು ಬರೋ ಒರೆಗಂಟಿನ ಮುನ್ನುಡಿ ನೋಡಬೇಕು..!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 1:18pm — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ನಿಮ್ಮ ವಾದವನ್ನೂ ಒಪ್ಪೋಣ. ಸೂಡ್=’ಕುಣಿ’ಯಿಂದ ಬಂದಿದೆ ಎಂದು ವಾದಿಸಿದರೂ ಅದನ್ನು ಅಲ್ಲಗಳೆಯಲಾಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 1:22pm — mahesha

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

mahesha's picture

ಅಲ್ಲಗಳೆಯ ಬೋದು

ಡ => ಲ ಎಲ್ಲೆಲ್ಲೆ ಸಕ್ಕದದಲ್ಲಿ ಆಗಿದೆ?

ಈ ಬದಲಾವಣೆ ಹೆಚ್ಚಿಲ್ಲ.!!

ಕುಣಿಯುವವಳಲ್ಲ ಸೂಳೆ Smiling

ಹಾಗಾದಲಿ ಜಡ್ => ಜಲಾ? Smiling

ಒಟ್ನಲ್ಲಿ ಸಕ್ದದದಿಂದಲೇ ಹಟ.. ಅಂದ್ರೆ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 9:53am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಇಲ್ಲಿ ನೋಡಿ ’ಸೂಳೆ’ ಸಂಸ್ಕೃತದಿಂದ ಎಂದು ಅದೇ Dravidian Etymological dictionaryಯಲ್ಲಿ.

2741 Ta. cūḷai prostitute. Ma. cūḷa, (Tiyya) cūḷacci harlot; cūḷan whoremonger. Ko. cu·ḷ woman who has sexual intercourse with men of all castes, prostitute. Ka. sūḷe harlot, prostitute. Koḍ. cu·ḷe dancing-girl. Tu. sūḷe whore, harlot. /:) Cf. Skt. śūlā- harlot;), prostitute. DED(N) 2262.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 10:47am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಶೂಲಾ=harlot->ಸೂಳೆ ಬಂದಿದೆಯೆಂದು ಕಿಟ್ಟೆಲ್‍ ಘೋಷಿಸುತ್ತಾನೆ.
ಶೂಲಾ=ಸೂಳೆಯೆಂಬರ್ಥ Monier Williams Dictionary ಹೇೞುತ್ತದೆ.
शूला [p= 1086,3] [L=220385] f. a stake (= शूल) L.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:17am — vikashegde

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

vikashegde's picture

roopa wrote:
ಹೆಣ್ಣುಜಾತಿಗೆ ಅವಮಾನಕರವಾದ ಈ ಪದಬಳಕೆ ಎಷ್ಟು ಸೂಕ್ತ?.

ಹೆಣ್ಣು ಜಾತಿಗೆ ಅವಮಾನಕರ ಹೇಗಾಗುತ್ತದೆ ಅದು?
ಹೆಣ್ಣು ಜಾತಿಗೆ ಅವಮಾನಕರವಾದ ಈ ಕೆಲಸ ಎಷ್ಟು ಸೂಕ್ತ ಎಂದಿದ್ದರೆ ಬೇರೆ ಮಾತು.
ಹೋಗಲಿ ಅದೂ ಒಂದು ಕೆಲಸ, ಹೊಟ್ಟೆಪಾಡು, ಪರಿಸ್ಥಿತಿ ಅದೂ ಇದೂ ಅಂತಿಟ್ಟುಕೊಳ್ಲೋಣ, ಆದರೆ ಅದನ್ನು ಇಡೀ ಹೆಣ್ಣು ಜನಾಂಗಕ್ಕೆ ಅನ್ವಯಿಸಿಕೊಳ್ಳುವುದೇಕೆ?

ಸೂಳೆಯರನ್ನು ಸೂಳೆಯರು ಅಂದರೆ ಇಡೀ ಹೆಣ್ಣು ಜಾತಿಗೆ ಅವಮಾನ ಹೇಗಾಯಿತು?
ವೇಶ್ಯೆ ಎಂದು ಕರೆದರೆ ಇಡೀ ಹೆಣ್ಣುಜಾತಿಗೆ ಮರ್ಯಾದೆ ಕೊಟ್ಟ ಹಾಗೆ ಆಗುತ್ತದೆಯೆ? Puzzled
**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:28am — roopablrao

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

roopablrao's picture

ಸಾಮಾನ್ಯವಾಗಿ ಬಯ್ಯುವುದಕ್ಕೆ ಇದೇ ಪದವನ್ನು ಉಪ್ಯೋಗಿಸುತ್ತಾರೆ
ಈ ಪದದ ಬಳಕೆ ಬೇಕಿದೆಯೇ ಅಷ್ಟೆ ನನ್ನ ಪ್ರಶ್ನೆ
ಈ ಪದ ಅವಮಾನಕಾರಿಯಾದುದ್ಡೇ .
ಸೂಳೆಯ ಬದಲು ಬೆಲೆವೆಣ್ಣು ಉಪಯೋಗಿಸಬಹುದು ಅಲ್ಲವೇ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:33am — vikashegde

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

vikashegde's picture

ಓಹ್ ಅದನ್ನು ಬೈಗುಳವಾಗಿ ಬಳಸಿದಾಗ ಅವಮಾನಕಾರಿಯಾದುದ್ದೇ ಹೌದು.

ಆದರೆ ಆ ಕೆಲಸವೆ ಅವಮಾನಿಕಾರಿ ಅನ್ನಿಸದಿದ್ದ ಮೇಲೆ ಆ ಪದವೂ ಅನ್ನಿಸಬೇಕಂತಿಲ್ಲ. ಅದೂ ಇಡೀ ಹೆಣ್ಣು ಜಾತಿಗೆ !
ಸೂಳೆ ಅಲ್ಲದಿದ್ದವರನ್ನ ಸೂಳೆ ಅಂದರೆ ಯಾವುದೇ ಹೆಣ್ಣಿಗಾದರೂ ಅವಮಾನಕಾರಿಯೇ.

ಆದರೆ ಆ ಪದವೇ ತಪ್ಪು ಅಂತ ಹೇಳಕ್ಕಾಗುವುದಿಲ್ಲ. ಆ ವೃತ್ತಿಗೆ ಅದೇ ಅನ್ನುತ್ತಾರೆ. ರಾಜಕಾರಣಿಯನ್ನು ರಾಜಕಾರಣಿ ಅಂದ ಹಾಗೆ. ವಕೀಲರನ್ನು ವಕೀಲ ಅಂದ ಹಾಗೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:39am — ASHMYA

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

ASHMYA's picture

ಬಯ್ಯುವಾಗ ಸೂಳೆ ಎಂದರೇನು ಬೆಲೆವೆಣ್ಣು ಎಂದರೇನು? ಎರಡರ ಅರ್ಥ ಒಂದೆ ತಾನೆ?ಬೆಲೆವೆಣ್ಣು ಸ್ವಲ್ಪ ಸಭ್ಯ ಬೈಗುಳವಾದೀತು ಅಷ್ಟೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 11:53am — vikashegde

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

vikashegde's picture

ಬೈಯುವಾಗ ಬೆಲೆವೆಣ್ಣು ಎಂದರೆ ಬೈದಂಗೂ ಆಗಲ್ಲ. Smiling

ಆ ಕೆಲಸ, ಕೆಲಸದವರ ಬಗ್ಗೆ ಹೇಳುವಾಗ ಬೆಲೆವೆಣ್ಣುಗಳು ಎಂದರೆ ಸಭ್ಯವಾಗಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 12:05pm — ASHMYA

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

ASHMYA's picture

ಬೈದಂತೆ ಆಗುತ್ತೊ ಇಲ್ಲವೊ ಆದ್ರೆ ಆ ಪದಗಳು ಕೊಡುವ ಅರ್ಥ ಒಂದೆ ಅಲ್ಲವ? ’ಬೆಲೆವೆಣ್ಣು’ ಪದದ ಬಳಕೆ ಬೈಗುಳಕ್ಕೆ effect ಕೊಡದೆ ಇರಬಹುದು. ಆದ್ರೆ, ’ನಿನ್ನ ಹಾಡು ಕತ್ತೆಯ ಹಾಡಿನಂತಿತ್ತ’ ಅಂದಾಗಲೂ, ’ನಿನ್ನದು ಗಾರ್ದಬ ಗಾಯನ’ ಅಂದಾಗಲೂ ,ಅರ್ಥ ನಿನ್ನ ದನಿ ಚನ್ನಾಗಿಲ್ಲ ಅಂತ ತಾನೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 12:10pm — vikashegde

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

vikashegde's picture

ಖರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 10:59pm — prameela

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

prameela's picture

ರೂಪಾ ಮೇಡಮ್,
ಮುಂಡೆ,ರಂಡೆ,ಬೇವಾರ್ಸಿ ಈ ಪದಗಳೂ ಇದೇ ವರ್ಗಕ್ಕೆ ಸೇರುತ್ತವೆ ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 8:26am — mahesha

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

mahesha's picture

ಮುಂಡೆ = ವಿದವೆ, ಗಂಡ ಇಲ್ಲದವಳು, ಇದು ಸಂಸ್ಕ್ರತ. ಮುಂಡಾ ಮುಂಡನ ಮಾಡಿಸಿಕೊಂಡವಳು
ರಂಡೆ ಗೊತ್ತಿಲ್ಲ
ಬೇವರ್ಸಿ/ಬೇವಾರ್ಸಿ = ಬೇವಾರಿಸ್ ವಾರಿಸ್ ಇಲ್ಲದವನು. ಅಂದ್ರೆ ತಬ್ಬಲಿ/ಅನಾತ/orphan.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:22am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

raNDa mfn. (cf. %{baNDa}) maimed , crippled L. ; faithless (see %{zAkhA-r-}) ; m. a man who dies without male issue MW. ; a barren tree ib. ; (%{A}) f. a term of abuse in addressing women , a slut (others `" a widow "' ; %{bAla-r-} "' , a young widow "'). Ka1v. Pan5cat. ; Salvinia Cucullata L. ; Anthericum Tuberosum L. ; a kind of metre Col.

ಮಾಧ್ವವಿಜಯವೊಂದಱಲ್ಲಿ ವಾದಿರಾಜರು ಒಬ್ಬ ಹೆಣ್ಣುಮಗಳಿಗೆ ಬ್ರಹ್ಮಪಿಶಾಚಿ ಹಿಡಕೊಂಡಾಗ ಈ ರೀತಿ ಬ್ರಹ್ಮಪಿಶಾಚಿಯನ್ನು ಬಯ್ಯುತ್ತಾರೆ.
"ರಂಡಾಪುತ್ರ ತ್ವಂ ನ ಸ್ನಾತ:" ರಂಡೆಮಗನೆ ನೀನು ಸ್ನಾನ ಮಾಡೋಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:42am — kannadakanda

ಉ: ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

kannadakanda's picture

ಬೇವಾರ್ಸಿ ಅರಬ್ಬಿ ಪದವಾಗಿದ್ದು ಹಿಂದಿಯ ಬೇವಾರಿಸ್ ಅಥವಾ ಲಾವಾರಿಸ್ ಅಂದರೆ ತಬ್ಬಲಿ ಅಥವಾ ಅನಾಥನೆಂಬ ಅರ್ಥವೇ ಹೊಱತು ಸೂಳೆ ರಂಡೆ ಎಂಬಷ್ಟು ಕೆಟ್ಟ ಅರ್ಥವುಳ್ಳದ್ದಲ್ಲ. ಬೇವಾರ್ಸಿ=ದರಿದ್ರವನೇ ಅಂದಷ್ಟೇ ಹೇೞ್ಕೇಳೋಕ್ಕೆ ಯಾರೂ ಇಲ್ದವನೇ ಎಂದು ಬಯ್ದ ಹಾಗಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • || ದುರ್ಗಾ ಸೂಕ್ತ ||
  • ಅಚ್ಚ ಕನ್ನಡದ ಹೆಸರುಗಳು
  • ಲೇಖನಗಳ ಆಹ್ವಾನ
  • ಸಂಪದ ಏನು ಮಾಡಬಹುದು
  • ಕರ್ನಾಟಕ ಪೋಲಿಸ್ಸ್ -- ದೇವರನ್ನು ಕಾಯುವ ಕೆಲ್ಸಾ --ನನ್ನ ಪ್ರಾರ್ಥನೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator