ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಚೆನ್ನುಡಿ ಮತ್ತು ಕನ್ನುಡಿ

August 12, 2008 - 8:56am — Sunil Jayaprakash

ಕ್ಲಾಸಿಕಲ್ ಲಾಂಗ್ವೇಜ್ ಅನ್ನೋದಕ್ಕೆ ಕನ್ನಡದಲ್ಲಿ ಕನ್ನುಡಿ ಎನ್ನಬಹುದು ಎಂಬುದಾಗಿ, ನಾನು ಈಗ್ಗೆ ಸುಮಾರು ಒಂದೂವರೆ ವರ್ಷದ ಹಿಂದೆ ಪ್ರಸ್ತಾಪಿಸಿದ್ದೆ. ಅದನ್ನು ಮತ್ತೊಮ್ಮೆ ಹಾಕಬೇಕಾಗಿ ಬಂದಿದೆ.

=========ಹಿಂದಿನ ಲೇಖನದಿಂದ=========
ಈಗ ನೋಡಿ, Classical Language'u, Classical Language'u ಅಂತ ಬಡ್ಕೋತಾರಲ್ಲ, Classical Language ಎನ್ನುವುದಕ್ಕೆ ಕನ್ನಡದಲ್ಲಿ ಏನಂತ ಕರೆಯುತ್ತಾರೆ ಎಂದು ಕೇಳಿ ನೋಡಿ. ಎಲ್ಲ ಜನರೂ, ಎಲ್ಲ ರಾಜಕಾರಣಿಗಳೂ, ಎಲ್ಲ ಪತ್ರಿಕೆಯವರೂ, ಅಷ್ಟೇ ಏಕೆ ಎಲ್ಲ ಕನ್ನಡ ವಿದ್ವಾಂಸರೂ ಮುಂದಾಲೋಚನೆ ಇಲ್ಲದೆ ಬಳಸುವ ಪದ ಶಾಸ್ತ್ರೀಯ ಭಾಷೆ. .....Classical ಎನ್ನುವುದಕ್ಕೆ ಕನ್ನಡದಲ್ಲಿ ಏನಂತ ಕರೆಯಬೇಕು ಎಂಬ ಪ್ರಯತ್ನವನ್ನೂ ಮಾಡುವುದಿಲ್ಲ ನಾವುಗಳು, so called ಕನ್ನಡಿಗರು. ಈ ವಿಷಯವಾಗಿ, ನಾನು ಕಿಟ್ಟೆಲ್ ನಿಘಂಟನ್ನು ನೋಡಿದೆ. ಎಷ್ಟೋ ಪುಟಗಳನ್ನು ತಿರುವಿದ ನಂತರ ಕಡೆಗೆ ಸಿಕ್ಕಿತು ನೋಡಿ. ಎಂಥಹ ಸೊಗಸಾದ ವಿವರಣೆ ನೀಡುತ್ತದೆ ಗೊತ್ತೇ ಅದು.

ಕರ್ ಕರು ಎಂಬ ಪದ -

ಕನ್ನಡದಲ್ಲಿ ಕರ್(ಕರು) ಎಂದರೆ embossed.

1. To mold or carve in relief: emboss a design on a coin.
2. To decorate with or as if with a raised design: emboss leather.
3. To adorn; decorate.

mold(ಸ್ವರೂಪ ಪಡೆದಿರುವ, ಪಕ್ವವಾದ), decorate(ಸುಂದರವಾದ), adorn(To enhance or decorate with or as if with ornaments - ಸಾಲಂಕೃತ),

ಹಾಗಾಗಿ ಕರ್ + ನುಡಿ -> ಕರ್ನುಡಿ -> ಕನ್ನುಡಿ. ಚೆನ್ನಾಗಿಲ್ಲವೇ ಇದು, ಆದರೆ ನಾನು ಇದನ್ನು ನನ್ನ ಗೆಳೆಯರಿಗೆ ಹೇಳಿದಾಗ, ನಗೆಪಾಟಲಿಗೀಡಾದೆ. ನಮಗೆ ಕನ್ನುಡಿಗಿಂತ ಸಂಸ್ಕೃತದ ಶಾಸ್ತ್ರೀಯ ಭಾಷೆ ಎಂಬ ಬಳಕೆಯೇ ಬೇಕು. ಅದು ತಪ್ಪು ಎಂದು ತಿಳಿದಿದ್ದರೂ.
=============ಮುಗಿದುದು====

ಇಷ್ಟಲ್ಲದೆ, ಶಂ.ಬಾ.ಜೋಶಿಯವರು "ಕಂನ" ಜನಾಂಗದ ಹಿನ್ನೆಲೆಯಿಂದ ಕನ್ನುಡಿ ಎಂಬ ಪದದ ಬಗ್ಗೆ ಒಳ್ಳೆಯ ವಿವರಣೆಯನ್ನು ನೀಡಿದ್ದಾರೆ. ಅವರು ಸಾವಿರಾರು ವರ್ಷದ ಇತಿಹಾಸವಿರುವ ಒಂದು ಜನಾಂಗದ ಹಿನ್ನೆಲೆಯಿಂದ ಕಂನ, ಕಂನುಡಿ, ಕಂನಾಡು, ಮುಂತಾದ ಪದಗಳನ್ನು ವಿಶ್ಲೇಷಿಸುತ್ತಾರೆ. ಶಂ.ಬಾ ಜೋಶಿಯವರ ಈ ಜನಾಂಗೀಯ ಹಿನ್ನೆಲೆಯಿಂದ "ಕನ್ನುಡಿಯ" ಪದದ ಬಗ್ಗೆ ನೀಡಿರುವ ವಿವರಣೆಯನ್ನು ಓದಿದ ಮೇಲೆ ಕ್ಲಾಸಿಕಲ್ ಲಾಂಗ್ವೇಜ್ ಅನ್ನೋದಕ್ಕೆ "ಕನ್ನುಡಿ" ಒಂದು ಸಮರ್ಥವಾದ ಪದ ಅಂತ ನನಗೆ ಅನ್ನಿಸಿದೆ. ಈಚೆಗೆ ಗೆಳೆಯರು "ಚೆನ್ನುಡಿ" ಅಂತಲೂ ಹೇಳಬಹುದು ಎಂದಿರುವರು, ಆದರೆ "ಚೆನ್ನುಡಿ" ಪದವು, "ಕನ್ನುಡಿಯ" ಒಂದು attribute ಅಷ್ಟೇ.

ಲಿಂಗ್ವಿಸ್ಟಿಕಲಿ, ಕನ್ನುಡಿಯೆಂಬುದು ಚೆನ್ನುಡಿಯೂ ಹೌದು. ಆದರೆ ಚೆನ್ನುಡಿಯು ಕನ್ನುಡಿಯಾಗುವುದಿಲ್ಲ.

‹ firefox tab, keyboard tabಗಳಿಗೆ ಕನ್ನಡ ಪದಗಳು ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ' ›
  • ಸಾಹಿತ್ಯ, ಭಾಷೆ
~.~
  • Login or register to post comments
  • 298 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 12, 2008 - 9:14am — mahesha

ಉ: ಚೆನ್ನುಡಿ ಮತ್ತು ಕನ್ನುಡಿ

mahesha's picture

ಸರಿ ಇಲ್ಲ..

ಹಿರಿನುಡಿ, ಚನ್ನುಡಿ, ಮೇಲ್ನಡಿ,

ಕರ್‍+ನಾಡ್ = ಕರ್ನಾಡ => ಕನ್ನಡ
ಕರ್‍ + ನುಡಿ => ಕನ್ನುಡಿ

ಕರ್‍ನುಡಿ ಅಂದ್ರೆ ಕಪ್ಪುನುಡಿ ಎಂದೂ ತಿಳಿವು ಬರುವುದು.. ಆದರೆ ಅದೆಂದು ಕ್ಲಾಸಿಕಲ್ ನುಡಿ ಎನ್ವ ತಿಳಿವು ಕೊಡಲ್ಲ.!

ಚಮ್ಮೋೞಿ ತೆರ ಚನ್ನುಡಿ, ಚಲುನುಡಿ ಇದೇ ಚನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 9:17am — kannadakanda

ಉ: ಚೆನ್ನುಡಿ ಮತ್ತು ಕನ್ನುಡಿ

kannadakanda's picture

ಚಮ್ಮೋೞಿ ಅಲ್ಲ. ಚೆನ್ಮೊೞಿ. ಇನ್ನು ಸರಿಯಾಗಿ ಹೇೞಬೇಕೆಂದರೆ ಸೆನ್ಮೊೞಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 9:38am — mahesha

ಉ: ಚೆನ್ನುಡಿ ಮತ್ತು ಕನ್ನುಡಿ

mahesha's picture

ಅಲ್ರೀ

ಚನ್ + ಮೊೞಿ => ಚಮ್ಮೊೞಿ ಸರಿಯಾಗಿದೆ..!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:30am — kannadakanda

ಉ: ಚೆನ್ನುಡಿ ಮತ್ತು ಕನ್ನುಡಿ

kannadakanda's picture

ತಮಿೞಿನಲ್ಲಿ ன் ಸಂಧಿಯಾಗುವಾಗ ಮ್ ಆಗುವುದಿಲ್ಲ. ಉದಾಹರಣೆ ತೇನ್ಮೊೞಿ=ಜೇನ್ನುಡಿ. ಹಾಗಾಗಿ ಚೆನ್=ಚೆನ್ನಾದ ಮೊೞಿ=ನುಡಿ ಚೆನ್ಮೊೞಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:52am — Sunil Jayaprakash

ಉ: ಚೆನ್ನುಡಿ ಮತ್ತು ಕನ್ನುಡಿ

Sunil Jayaprakash's picture

ಕನ್ನಡಕಂದರೆ,

ಕರು - ತಳಪಾಯ, ಮೂಲಸ್ಥಾನ, ಆಕರ, ಎತ್ತರ, ಹಿರಿಮೆ, embossed. ಹಾಗಾಗಿಯೇ,
ಕನ್ನುಡಿ = ಚೆನ್ನುಡಿ(embossed) + ಹಿರಿನುಡಿ + ಮೇಲ್ನುಡಿ + ತಳಪಾಯವಿರುವ ನುಡಿ + ಆಕರನುಡಿ + ಸ್ವಂತಿಕೆ ಇರುವ ನುಡಿ. ಇದಾವುದನ್ನೂ "ಚೆನ್ನುಡಿ" ಪ್ರತಿಧ್ವನಿಸುವುದಿಲ್ಲ.

ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 9:37am — Sunil Jayaprakash

ಉ: ಚೆನ್ನುಡಿ ಮತ್ತು ಕನ್ನುಡಿ

Sunil Jayaprakash's picture

ನೋಡಿ, ನಾಡೋಜ ಪ್ರೊ.ಜಿ.ವಿಯವರ ನಿಘಂಟು ಹೀಗೆ ಹೇಳತ್ತೆ.
ಕರು - ತಳಪಾಯ, ಮೂಲಸ್ಥಾನ, ಆಕರ, ಎತ್ತರ, ಹಿರಿಮೆ. ಹಾಗಾಗಿಯೇ,
ಕನ್ನುಡಿ = ಚೆನ್ನುಡಿ(embossed) + ಹಿರಿನುಡಿ + ಮೇಲ್ನುಡಿ + ತಳಪಾದನುಡಿ + ಆಕರನುಡಿ + ಮೂಲಸ್ಥಾನದಲ್ಲಿರುವ ನುಡಿ. ಇದಾವುದನ್ನೂ "ಚೆನ್ನುಡಿ" ಪ್ರತಿಧ್ವನಿಸುವುದಿಲ್ಲ. ಸುಮ್ನೆ "ತಮಿಳರು ಚೆಮ್ಮೋಳಿ ಅಂತಾರೆ, ನಾವು ಚೆನ್ನುಡಿ ಅನ್ನೋಣ", ಅಂದ್ರೆ ಏನು ಚೆನ್ನಾಗಿರತ್ತೆ.

ನೋಡಿ, ನೀವು ಶಂಕರ ಭಟ್ಟರ ಪುಸ್ತಕಗಳನ್ನು ಕೋಟ್ ಮಾಡ್ತಾ ಇರ್ತೀರಲ್ಲ, ಹಾಗೆ ಶಂ.ಬಾ.ಜೋಶಿ ಮುಂತಾದವರು ಬರೆದಿರುವ ಪುಸ್ತಕಗಳನ್ನೂ ಓದಿ (ಓದಿರದಿದ್ದರೆ), ಆಗ ತಿಳಿಯುತ್ತೆ. ಕನ್ನುಡಿ ಎನ್ನುವುದು ನಮ್ಮ ethnicityಗೆ ನಂಟಾದದ್ದು.

ನಾನು ಮೊದಲೇ ಹೇಳಿದ ಹಾಗೆ,

೧. ಕನ್ನುಡಿ - ಕರು + ನುಡಿ.
೨. ಕನ್ನುಡಿ - ಕಂನ ಜನಾಂಗದವರು ನುಡಿ. ಇದನ್ನು ತಿಳಿಯಲು ಶಂ.ಬಾ.ಜೋಶಿಯವರನ್ನು ಓದಿ. ಆಗ ನೀವೇ ಹೇಳ್ತೀರಾ, ಕನ್ನುಡಿ - ಕನ್ನಡ ethnicಗೆ ನಂಟಾದದ್ದು ಅಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 9:46am — Sunil Jayaprakash

ಉ: ಚೆನ್ನುಡಿ ಮತ್ತು ಕನ್ನುಡಿ

Sunil Jayaprakash's picture

ತಳಪಾದನುಡಿ ಅಲ್ಲ ತಳಪಾಯನುಡಿ ಅಂತ ಓದಿಕೊಳ್ಳಿ. ತಳಪಾಯನುಡಿ - ತಳಪಾಯವಿರುವ + ತಳಪಾಯವನ್ನು ಕೊಡಲು ಸಮರ್ಥವಾದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 5:07pm — srivathsajoshi

ಉ: ಚೆನ್ನುಡಿ ಮತ್ತು ಕನ್ನುಡಿ

srivathsajoshi's picture

"ನೋಡಿ, ನೀವು ಶಂಕರ ಭಟ್ಟರ ಪುಸ್ತಕಗಳನ್ನು ಕೋಟ್ ಮಾಡ್ತಾ ಇರ್ತೀರಲ್ಲ..."

- ಅವರು ಮತ್ತೆ ಶಂಕರ ’ಭ’ಟ್ಟರಾಗಿರುವರೇ? ಅವರ ಹೆಸರು ಶಂಕರ ’ಬ’ಟ್ಟ ಎಂದು ಕೇಳಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 6:32pm — ಸಂಗನಗೌಡ

ಉ: ಚೆನ್ನುಡಿ ಮತ್ತು ಕನ್ನುಡಿ

ಸಂಗನಗೌಡ's picture

ಹೆಸರು ಇಟ್ಟಂಗೇ ಇರುತ್ತಲ್ಲವಾ? ಕಿಟೆಲ್‍ರಿಗೆ ಕನ್ನಡ ಇಸ್ಟವಾಯಿತು ಅಂತ ಕಿಟ್ಟಪ್ಪ ಆಗಲಿಲ್ಲವಲ್ಲ, ಹಾಗೆನೇ ಸಾರ್, ಶಂಕರ ಭಟ್ಟರು, ಶಂಕರ ಭಟ್ಟರೇ.. ಮತ್ತೆ ಆಗೋದೇನು ಬಂತು ಹೇಳಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 6:56pm — Sunil Jayaprakash

ಉ: ಚೆನ್ನುಡಿ ಮತ್ತು ಕನ್ನುಡಿ

Sunil Jayaprakash's picture

Smiling - ಆದರೆ ಶ್ರೀವತ್ಸಜೋಶಿ ನೀವು ಒಂದು ಗಮನಿಸಬೇಕು.

ಶಂ.ಬಾ.ಜೋಶಿಯವರಿಗೂ ಕೂಡ ಸಂಸ್ಕೃತದ ಬಗ್ಗೆ ಭ್ರಮಾತ್ಮಕ ನಿಲುವುಗಳಿರಲಿಲ್ಲ. ಉದಾಹರಣೆಗೆ - ಸಂಸ್ಕೃತವು ಶಿವನ ಢಮರುಗದಿಂದ ಬಂತು (ನನಾದ ಢಕ್ಕಾಂ ನವಪಂಚ ವಾರಂ) ಇಂತಹ ಮಾತುಗಳಿಗೆ ಅವರೂ ಕೂಡ ಸೊಪ್ಪು ಹಾಕಿಲ್ಲ. ಅಲ್ಲದೆ, ಭೌಗೋಳಿಕವಾಗಿಯೂ ಅನೇಕ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಉದಾ: ಕಾಕಾ - ಕಾಗೆ. ಭೌಗೋಳಿಕವಾಗಿ ಕನ್ನಡನಾಡಿನಲ್ಲಿರುವ "ಕಾಗೆ"ಪದ ಸಂಸ್ಕೃತದ "ಕಾಕಾ"ದಿಂದ ಬಂತು ಎಂಬುದನ್ನು ಅವರೂ ಕೂಡ ಒಪ್ಪಿರಲಿಲ್ಲ. ಅವರ ಬರಹಗಳು ಭ್ರಮಾತ್ಮಕವಾಗಿರದೆ ಹೆಚ್ಚಾಗಿ ವಾಸ್ತವಿಕ ನೆಲೆಯಲ್ಲಿಯೇ ಇದೆ. ಶಂ.ಬಾ.ಜೋಶಿಯವರು ಈ ರೀತಿ ವಾಸ್ತವಿಕ ಅಂಶಗಳನ್ನು ಇಟ್ಟುಕೊಂಡು ವಿಶ್ಲೇಷಿಸಿರುವ ಪರಿಯೇ, Classical language->ಕನ್ನುಡಿ ಎಂಬುದಕ್ಕೆ ಸ್ಫೂರ್ತಿ ಸಿಕ್ಕಿರುವದು. ಅದರ ಜೊತೆಗೆ ಪ್ರೊ.ಜಿ.ವಿಯವರ ನಿಘಂಟು, ದ್ರಾವಿಡ ನುಡಿಕೋಶ ಕೂಡ ಇದನ್ನು ಬೆಂಬಲಿಸುತ್ತಿದೆ. ಇದನ್ನು ಗಮನಿಸದೆ, ನಾವು ನೀವು "ಶಾಸ್ತ್ರೀಯ ಭಾಷೆ" ಬಳಸುತ್ತಿರಬಹುದು, ಆದರೆ Classical Language=ಶಾಸ್ತ್ರೀಯ ಭಾಷೆ, ತಪ್ಪು.

ಹಾಗಾಗಿ,
ಕರು - ಹಿರಿಯ, ಆಕರ, ಮೂಲಸ್ಥಾನ, embossed ನುಡಿ - ಕನ್ನುಡಿ - ಇವೆಲ್ಲ ಕ್ಲಾಸಿಕಲ್ ಲಾಂಗ್ವೇಜಿಗೆ ಇರಬೇಕಾದ ಆಟ್ರಿಬ್ಯೂಟ್ಸ್.
ಕಂನರ ನುಡಿ - ಕನ್ನುಡಿ -> ಆ ಭಾಷೆಯನ್ನು ಮಾತನಾಡುವ ಜನಾಂಗ ಇನ್ನೂ ಜೀವಂತವಿರಬೇಕು (ಇಲ್ಲಿ, ಕಂನ) ಎಂಬುದು, ಕ್ಲಾಸಿಕಲ್ ಲಾಂಗ್ವೇಜ್ ಸ್ಟೇಟಸ್ಸಿಗೆ ಬೇಕಿರುವ ಮತ್ತೊಂದು ನಿಬಂಧನೆ. "ಶಾಸ್ತ್ರೀಯ" ಅಥವಾ "ಚೆನ್ನುಡಿ" ಈ ಎರಡೂ ಪದಗಳೂ ಕೂಡ "ಕನ್ನುಡಿ" ಹೊರಸೂಸುತ್ತಿರುವ ಗುಣವಾಚನಗಳನ್ನು ಸಮರ್ಪಕವಾಗಿ ಹೇಳುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 7:32pm — srivathsajoshi

ಉ: ಚೆನ್ನುಡಿ ಮತ್ತು ಕನ್ನುಡಿ

srivathsajoshi's picture

ಆಯ್ತು, ಗಮನಿಸಿದೆ. ಮೊದಲೂ ಗಮನಿಸಿದ್ದೆ Smiling

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಬೇಕು/ಸಿಗಬಾರದು ಎಂಬ ವಿಷಯದಲ್ಲಾಗಲೀ, "ಶಾಸ್ತ್ರೀಯ ಭಾಷೆ" ಎಂಬುದನ್ನು ’ಕನ್ನುಡಿ’ ಪದ ಸಮರ್ಥವಾಗಿ ಸೂಚಿಸುತ್ತದೆ/ಸೂಚಿಸುವುದಿಲ್ಲ ಎಂದಾಗಲೀ ನನ್ನ ವಾದವಿಲ್ಲ, ವಾದವಲ್ಲ.

ಶಂಕರ ‘ಭ’ಟ್ಟ ಮತ್ತು ಶಂಕರ ’ಬ’ಟ್ಟ - ಹೆಸರುಗಳೇಕೆ ಒಮ್ಮೆ ಅದು ಒಮ್ಮೆ ಇದು ಎಂಬಂತೆ ಬಳಕೆಯಾಗುತ್ತಿವೆ ಎಂಬುದರ ಬಗ್ಗೆಯೂ ನನ್ನ ಗಮನ ಹರಿಯಿತು. ಅದಕ್ಕೆ ಕೇಳಿದೆ, ಅಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 7:58pm — Sunil Jayaprakash

ಉ: ಚೆನ್ನುಡಿ ಮತ್ತು ಕನ್ನುಡಿ

Sunil Jayaprakash's picture

ಯಪ್ಪಾ!!!!! ನೀವೊಳ್ಳೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 9:00am — mahesha

ಉ: ಚೆನ್ನುಡಿ ಮತ್ತು ಕನ್ನುಡಿ

mahesha's picture

ಕನ್ನುಡಿ ಅನ್ನೋ ಒರೆಯ ಬಳಕೆ ಸಂಸ್ಕ್ರತ ಮತ್ತು ತಮಿಳುಗಳ ಮೇಲೆ ಬಳಸಲು ಬರುವುದೇ?

ಕನ್ನುಡಿ ಅನ್ನೋದನ್ನ ಜೋಶಿಗಳು ಕನ್ನಡ ನುಡಿಗೆ ಸಮವಾಗಿ ಬಳಸಿಹರು..

ಕರ್‍ + ನಾಡ್ => ಕನ್ನಡ
ಕರ್‍+ನುಡಿ => ಕನ್ನುಡಿ ಅಂಬೋದು ಅವರ ಅನಿಸಿಕೆ..

ಆವರ ಹೊತ್ತಗೆಯಲ್ಲಿ ಕ್ಲಾಸಿಕಲ್ ಪಟ್ಟದ ಬಗ್ಗೆ ಎಲ್ಲಿ ಹೇಳಿಹರು ಹೇಳಿ ನೋಡುಮ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 2:41pm — kannadakanda

ಉ: ಚೆನ್ನುಡಿ ಮತ್ತು ಕನ್ನುಡಿ

kannadakanda's picture

ಕರ್(ಕರು)=ಎತ್ತರವಾದ ನುಡಿ= ಕನ್ನುಡಿ =ಶ್ರೇಷ್ಠವಾದ ನುಡಿ. ಸಮಾಜದಲ್ಲಿ ತುಂಬಾ ಎತ್ತರದಲ್ಲಿರುವವರಾಡುವ ನುಡಿ ಆದ್ದಱಿಂದ ಕನ್ನುಡಿ, ಕನ್ನಡ, ಕನ್ನಾಡು ಎನಂತೀರಾ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ ಮತ್ತು ಒತ್ತರಿಸಿ ಬರುವ ಬೇಸರ ಮತ್ತು ಕೋಪಗಳು
  • ಕಾಲು ಕೆರೆಯೋದು ಅಂದ್ರೆ ಹೀಗೆ
  • ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ
  • ಹುರ್ರೇ...............
  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator