ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಈ ವಿಷಯವಾಗಿ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಚರ್ಚೆ ನಡೆಯುತ್ತಿದೆ. ರಾತ್ರಿ ೧೧.೩೦ ರನಂತರ ’ಕಲಾವಿಧ’ ರಿಗೆ ತಮ್ಮ ’ಪ್ರತಿಭೆ’ ತೋರಿಸಲು ಅವಕಾಶಕೊಡಿ ಎಂದು ಕೆಲವರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾರೋ ಕೆಲವು ವಿದೇಶೀಯರು ಇಲ್ಲಿಗೆ ಬಂದರೆ ಅವರಿಗೆ ಮುಜುಗರವಾಗಬಾರದು ಎಂದು ಇವರವಾದ. ಎಲ್ಲೋ ಕೆಲವರು ವಿದೇಶೀಯರಿಗೆ ಅನುಕೂಲವಾಗಲೆಂದು ೧ ಕೋಟಿ ಬೆಂಗಳೂರಿಗರ ಹಿತ ಬಲಿಕೊಡುವುದು ಯಾವ ನ್ಯಾಯ? ೧೧.೩೦ ರ ನಂತರವೂ ಕುಡಿದು ಕುಣಿಯುವುದು ಸಭ್ಯ ನಾಗರೀಕ ಸಮಾಜದ ಲಕ್ಷಣವೇ? ಬೆಳಿಗ್ಗೆ ೬ ರಿಂದ ರಾತ್ರಿ ೧೧.೩೦ ರ ಒಳಗೆ ಕಲಾವಿಧರು ತಮ್ಮ ಪ್ರತಿಭೆಯನ್ನು ತೋರಲಾರರೇ?

- Login or register to post comments
- 328 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅದಕ್ಕೆ ಗಿರೀಶ್ ಕಾರ್ನಾಡಿನ ಬೆಂಬಲವೂ ಇದೆ !
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಸ್ವತಂತ್ರದೇಶದಲ್ಲಿ ಯಾವ ಬೇಡಿಕೆ ಇಡುವ ಸ್ವಾತಂತ್ರ್‍ಯ ಅಯ್ತೆ...
ಸರಕಾರ ಅದನ್ನ ಸರಿ ತಪ್ಪು ಹೇಳ್ತದೆ.. ಅದಕ್ಕೆ ಸಬ್ಯ ಅಸಬ್ಯ ಹಣೆಪಟ್ಟಿ ಬ್ಯಾಡ.
ನನ್ನಂತೆ ಹೋಟೆಲ್ಗಳನ್ನು ೧೧.೩೦ರ ಬಳಿಕವೂ ತೆರೆದಿಬೇಕು...
ಬಾರ್ ಪಬ್ಗಳನ್ನೂ ೧೧.೨೦ರ ಬಳಿಕ ತೆರೆದಿದ್ದರೆ.. ಒಳಗೆ ಹೋದವರನ್ನು ಬೆಳಗ್ಗೆ ೬ರ ಬಳಿಕವೇ ಹೊರಗಡೆ ಬಿಡಬೇಕು
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅಂಗಿದ್ರೆ ಸ್ವತಂತ್ರ್ಯ ದೇಶದಲ್ಲಿ ೬ ಗಂಟೆಗಿನ್ನ ಮುಂಚೆನೇ ಹೊರಿಕ್ಕೆ ಬಿಡಿ ಅಂತ ಕೇಳೋ ಸ್ವಾತಂತ್ರ್ಯನೂ ಐತಲ್ವಾ ಅವ್ರಿಗೆ
ನೀವ್ಯಾಕೆ ನಿಮ್ಮ ಅಭಿಪ್ರಾಯ ಹೇರೋಕೆ ಹೋಗ್ತಿರಾ?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಕೆರೆಕ್ಟಲ್ವ..!!
ನಾನು ಅದೇ ತೆಪ್ ಮಾಡಿಬುಟ್ಟೆ!
ಸ್ವತಂತ್ರದೇಶದಲ್ಲಿ ಕುಡಿಯೋ ಸ್ವತಂತ್ರ ಅಯ್ತೆ...!
ಅದಕ್ಕೆ ಹೊತ್ತಿನ ಕಟ್ಟುಪಾಡು ಯಾಕೆ?
ತಮಗೆ ಮೂರುವೊತ್ತು ಕುಡಿಯೋ ಸೊತಂತ್ರಬೇಕು ಅಂದ್ರೆ ತಪ್ಪ?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಸರಿ.
ಇನ್ನು ನೀವು ನಿಮ್ಮ ಕೆಲಸ ಸುರು ಹಚ್ಕೊಳ್ಳಿ.
ಲಕ್ಷಣ, ಕಲಾವಿದ, ಪ್ರತಿಭೆ ಹೀಗೆ ಸಕ್ಕದ ಪದ ಹುಡುಕಿ ಮೂಲ ಬಿಟ್ಟು ಬಾಲ ಹಿಡಿದುಕೊಳ್ಳಿ.
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅಲ್ರೀ. ಆ ವಿಶಯ ಯಾಕಿಲ್ಲ ಅಂತ..
ಸಕ್ಕತ್ತಾಗಿ ಕುಡಿದಾಗ ಮಂದಿ ಸಂಸ್ಕ್ರತವನ್ನೇ ಮಾತಾಡದಂತೆ..
ಹೆ ಹೆ.. ನೀವು ಅದಕ್ಕೆ ಸಕ್ಕತ್ ಸಂಸ್ಕ್ರತ ಮಾತಾಡ್ತೀರ!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಈಚೆಗೆ ಬೆಂಗಳೂರಿನಲ್ಲಿ ರೇಯ್ಡ್ ಆದ ರೇವಾ ಪಾರ್ಟಿ ಬಗ್ಗೆ. ನಾವುಗಳು ಟೀವಿ, ಪೇಪರಿನಲ್ಲಿ ನೋಡಿದ ಹಾಗೆ, ಅಲ್ಲಿ ಯಾವುದೇ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ ಇದ್ದದ್ದು. ಆ ರೇವಾ ಪಾರ್ಟಿಯಿಂದಾಗಿ ಅಲ್ಲಿದ್ದ ಲೋಕಲ್ ಜನರಿಗೆ ತೊಂದರೆಯಾಗಿ, ಯಾವ ಅಧಿಕಾರಿಗಳು ಏನೂ ಮಾಡಲು ಮುಂದೆ ಬರದಿದ್ದಾಗ, ಕ.ರ.ವೇ ಪ್ರವೇಶವಾಗಿ ಪರಿಸ್ಥಿತಿ ಹತೋಟಿಗೆ ಬಂದು, ನಂತರ ಪೋಲೀಸರ ಪ್ರವೇಶವಾಯಿತು. ಒಳ್ಳೆ ಸಿನಿಮಾದ ರೀತಿ.
ಸ್ಮಗಲ್ಡ್ ಗಾಂಜಾ, ಡ್ರಗ್ಸು ಎಲ್ಲದಕ್ಕೂ ಮಾನ್ಯತೆ ಕೊಡಕ್ಕೆ ನಮ್ಮ ಬೆಂಗಳೂರೇನು ಬಿಟ್ಟಿಬಿದ್ದಿದೆಯೇ ? ನಮ್ಮಂತಹ ಯುವಜನತೆಯನ್ನ ತಪ್ಪುದಾರಿಗೆಳೆದು, ಅದಕ್ಕೆ ಆಯ್ಕೆಯ ಸ್ವಾತಂತ್ರ್ಯ ಅಂತ ಹಣೆಪಟ್ಟಿಕಟ್ಟೋದು/ಕಟ್ಟಿಸಿಕೊಳ್ಳೋದು ನನಗೆ ಸುತರಾಂ ಇಶ್ಟ ಆಗಲ್ಲ.
ಇನ್ನು ನೆನ್ನಿನ ಪೇಪರುಗಳಲ್ಲಿ ಬಂದ "೧೧:೩೦ರ ನಂತರ ಕಲಾವಿದರಿಗೆ ಅವಕಾಶ ಕೊಡಬೇಕು" ಎಂಬ ವಿಚಾರದ ಬಗ್ಗೆ. ನೋಡಿ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ರೀತಿಯ ಸಾಮಾಜಿಕ/ಸಾಂಸ್ಕೃತಿಕ ಹಿನ್ನೆಲೆಯಿದೆ. ಪಶ್ಚಿಮ ದೇಶಗಳಲ್ಲಿ ಇಂತಹ ವಿಷಯಗಳ ಬಗ್ಗೆ ಒಂದು ರೀತಿಯ ಪ್ರೊಫೆಶನಾಸಿಮ್ ಇದೆ. ಯಾವ ಸವಲತ್ತು/ಸೌಲಭ್ಯ ಹೇಗೆ ಬಳಕೆಯಾಗಬೇಕು ಎಂಬುದಕ್ಕೆ ಸ್ಪಷ್ಟಮಾನದಂಡವಿದೆ. ಆದರೆ ನಮ್ಮಲ್ಲಿ ಅದು ಸಾಧ್ಯವಿಲ್ಲ. ಇಲ್ಲೇನಾದರೂ, ೧೧:೩೦ರ ನಂತಹ ಇಂತಹವಕ್ಕೆ ಅವಕಾಶ ಕೊಟ್ಟರೆ, ಅದನ್ನು ಪ್ರೊಫೆಶನಲ್ಲಾಗಿ ಬಳಸೋದಕ್ಕಿಂತ ಅದರ ದುರುಪಯೋಗವೇ ಹೆಚ್ಚು ಆಗೋದು.
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಯಪ್ಪ..!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಸ್ವೇಚ್ಚಾಚಾರವನ್ನು ಸ್ವಾತಂತ್ರ್ಯ ಅಂತ ತಿಳಿದುಕೊಂಡಿರುವವರು ಇವರೆಲ್ಲ.
ಎಲ್ಲರೂ ತಮಗಿಷ್ಟ ಬಂದ ಹಾಗೆ ಇರುವುದಾಗಿದ್ದರೆ ಇಲ್ಲಿ ಸಮಾಜ ವ್ಯವಸ್ಥೆ, ಕಾನೂನು ವ್ಯವಸ್ಥೆ, ಸರ್ಕಾರ ಎಲ್ಲಾ ಯಾಕಿರಬೇಕಿತ್ತು?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಹು ಯಾಕಿರಬೇಕಿತ್ತು?
ಸರಕಾರ ಅಂದ್ರೆ ನಾವು
ಸರಕಾರದ ಕಾನೂನು ಅಂದ್ರೆ ನಮ್ಮ ಕಾನೂನು
ಅಂದ ಮೇಲೆ.. ಆಯ್ತಲ್ಲ..
ನಮ್ಮ ಸಮ್ವಿದಾನ ಇದನ್ನೆಲ್ಲ ಅನುವು ಮಾಡ್ತಲ್ಲ!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಮಾಯ್ಸಣ್ಣ,
‘ನಾವು’ ಅಂದ್ರೆ ಯಾರು?
ನೀವೂ ಸಂಪಾದಕರು, ಮಠಾಧಿಪತಿಗಳಂತೆ ನಿಮ್ಮೊಬ್ಬರನ್ನೇ ‘ನಾವು’ ಅಂತ ಕರೆಯೋಕೆ ಶುರು ಮಾಡಿದಿರೋ ಹೇಗೆ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ನೆನ್ನಿನ ರೇವ್ ಪಾರ್ಟಿಯಲ್ಲಿದ್ದ ಮಹಾನ್ ವ್ಯಕ್ತಿಗಳನ್ನು ಟಿ.ವಿ. ಪರದೆಯಮೇಲೆ ನೋಡಿ ಅವರ ಪೋಷಕರುಗಳು ಹೆಮ್ಮೆಪಟ್ಟುಕೊಂಡಿರಬೇಕು !!
ಅದೇನು ತಮಾಷೆಯೋ ಏನೋ ಧಾಳಿಮಾಡಿದ ಕಾರ್ಯಕರ್ತರಮೇಲೆ ಕೇಸು ಹಾಕಿದ್ದಾರಂತೆ!! ಇದು ಕಳ್ಳರನ್ನು ಹಿಡಿದ ಪೋಲೀಸರಮೇಲೆ ಕೇಸು ಹಾಕಿದಂತೆ.
ಈ ಊರಿಗೆ ಬಂದಿರುವ ಕೆಲವು ಐಟಿ-ಬಿಟಿ-ಕಿಟಿಪಿಟಿ ಮಂದಿಗೆ ಯಾರು ಹೇಳಿದರು ಇದು ಪಬ್ ಸಿಟಿ ಅಂತ?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಇನ್ಯಾರ್ರೀ ಹೇಳ್ತಾರೆ? ಏಕಮೇವಾದ್ವಿತೀಯ "ಟೈಮ್ಸಾಫಿಂಡಿಯಾ "
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಕುಡಿದು ಗಾಡಿ ಓಡಿಸುವುದು ತಡೆಯಲು ಖಂಡಿತ ಇದು ಒಳ್ಳೆಯ ಉಪಾಯ!
*ಅಶೋಕ್
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಬ್ಯಾಡವಂತಲ್ಲ ಇದು!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಕುಡಿದು ಗಾಡಿ ಓಡಿಸುವುದು ಕೂಡ ಅವರವರ ಸ್ವಾತಂತ್ರ್ಯದ ವಿಷಯವಲ್ವಾ ನಿಮ್ ಪ್ರಕಾರ
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅದು ಬೇರೆಯವರಿಗೆ ತೊಂದರೆ ಆಗದಿದ್ದಲ್ಲಿ ತೊಂದರೆ ಇಲ್ಲ, ಸ್ವಾತಂತ್ರಕ್ಕೂ, ಸ್ವೇಚ್ಚೆಗೂ ಬೇರೆತನವಿದೆ ಅಲ್ಲವ?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅಲ್ರೀ.
ಕುಡಿದು ಓಡಿಸೋದು ಕಾನೂನು ವಿರುದ್ದ ಅಂತ ಸಂಸ್ಕ್ರತದಲ್ಲೇ ಬರೆದಿದ್ದಾರಲ್ಲ.. ನಿಮಗೆ ತಿಳೀಲಿಲ್ವೇ? "ಮದ್ಯಪಾನ ಮಾಡಿ ವಾಹಲ ಚಲಿಸಬೇಡಿ" ಅಂತ..
ಆದ್ರೆ ೧೨ಗಂಟೆ ಆದ ಮೇಲೆ ಕುಡೀಬೇಡಿ ಅಂತ ಕಾನೂನು ಇದ್ಯ?
ಕಾನೂನು ಮಾಡಿ, ಮುಂದೆ ಎರಡು ದಾರಿ
೧)ಕಾನೂನು ಉಳಿಸೋದು
೨)ಕಾನೂನು ಅಳಿಸೋದು
ಎರಡನ್ನೂ ನಾವ್ ಕೇಳಬೋದು..ತಾನೆ..!
ಒಂದು ಪಂಗಡ ಕಾನೂನು ಅಳಸಿ ಅಂದ್ರೆ ಇನ್ನೊಂದು ಪಂಗಡ ಉಳಿಸಿ ಅಂದ್ರಾಯ್ತು.. ಯಾ ಯಾ ಪಂಗಡದಲ್ಲಿ ಎಶ್ಟೆಶ್ಟು ದುಡ್ಡು, ಮಂದಿ ಅದಾರೋ, ಅದರ ಮೇಲೆ ಕಾನೂನು ಉಳೀತಯ್ತೆ, ಬೀಳತಯ್ತೆ...
ನಿಮಗೆ ೧೧.೨೦ ಆದ ಮೇಲೆ ಬೇಡ ಅಂದ್ರೆ ಸರಿ.. ನೀವು ಸರಕಾರಕ್ಕೆ ಹೇಳಿ.. ಅವರೂ ಹೇಳಲಿ...
ಹೇಳೋದು ಸರಿ..! ಆದರೇ ಹೇಳಿರೋದೇ ತಪ್ಪು ಅನ್ನೋದು ತಪ್ಪು..!!
ನೀವ್ ಅವರು ಒಂದು ಪಂಗಡ ೧೧.೨೦ ಬಳಿಕ ಇರಬೇಕು ಎಂದು ಕೇಳೋದು ತಪ್ಪು ಎಂದು ಹೇಳೋದು ತಪ್ಪು.. ಕೇಳೋ ಅನುವಿದೆ.. ಆದ್ರೆ ಸರಕಾರ ಒಂದು ವೇಳೆ ಅದಕ್ಕೆ ಒಪ್ಪಿದರೆ, ಇಲ್ವೇ ಒಪ್ಪಕ್ಕೆ ಮುನ್ನವೇ ’ಬೇಡ’ ಅನ್ನೋ ಅನುವು ಬೇರೆ ಗುಂಪಿಗೂ ಇದೆಯಲ್ಲ.!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಅಂತ ಕಾನೂನು ಇದೆಯಲ್ಲ ಅದೇ ರೀತಿ ೧೧:೩೦ ಮೇಲೆ ಕುಡಿತದ ಪಾರ್ಟಿ ಮಾಡಬೇಡಿ ಅಂತನೂ ಕಾನೂನೈತೆ ಗೊತ್ತಿದೆ ಅಲ್ವಾ?
ಅವರು ಹೇಗೆ ೧೧;೩೦ ಮೇಲೋ ಕುಣಿಯೋಕೆ ಅನುಮತಿ ಕೊಡಿ ಅಂತ ಕೇಳ್ತಿದಾರೋ ಅದೇ ತರ ನೀವು ಬೇಕಿದ್ದರೆ ಹೆಂಡ ಕುಡಿದು ಬಂಡಿ ಓಡಿಸಲು ಅನುಮತಿ ಕೇಳಿ.
ಎಲ್ಲರಿಗೂ ಏನು ಬೇಕಾದರೂ ಕೇಳೋ ’ಅನುವು’ ಇದೆ ಬಿಡಿ. ನಿಮಗೆ, ನಮಗೆ ಸಂಪದದಲ್ಲಿ ಏನು ಬೇಕಾದರೂ ಬರೆಯೋ ಅನುವು ಇದ್ದಂಗೆ
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಅಲ್ಲ ರೀ
ನೀವು ಏನ್ ಬೇಕಾದ್ರೂ ಬರೆಯೊಲ್ವೇ? ನಾನ್ ಬರೀ ಬೇಡಿ ಅಂದ್ನೇ.. ಬರೀರಿ.. ಮಜ ಬರ್ತದೆ.
ಅದನ್ನೇ ನಾನ್ ಹೇಳಿದ್ದು.. ಕಾನೂನಂನು ಅಳಿಸಿ ಎಂದು ಕೇಳುವ ಅನುವು ಇರೋ ಹಂಗೆ ಅದನ್ನ ಉಳಿಸಿ ಅನ್ನೋ ಅನುವಿದೆ...
ನನಗೆ ಕುಡಿದು ಬಂಡಿ ಓಡಿಸೋ ಬಯಕೆಯಂತೂ ಇಲ್ಲ.. ಅದಕ್ಕೆ ನಾನ್ ಕೇಳ್ತಿಲ್ಲ..
ಆದರೆ ಇರುಳೆಲ್ಲ ಹಾಡು, ಕುಣಿತ, ಕುಡಿತ ಇರಬೇಕು ಅನ್ನೋ ಮಾತಿಗೆ ನನ್ನ ಒಪ್ಪಿಗೆ ಇದೆ... ಆದರೆ.. ಅದು ನಡೆಯುವ ಜಾಗದಿಂದ ಮಂದಿ ವೊತ್ತಾರೆಗಂಟ ವೊರಗೆ ಬರಬಾರ್ದು ಅನ್ನೋ ಕಂಡೀಶನ್ ಮ್ಯಾಗೆ.. ಹಿಂಗೆ ಕೇಳೋ ಅನುವು ಅಯ್ತಪ್ಪ..
ವಿಕಾಸ್ ಹೆಗೆಡೆರೇ..
ನೀವ್ ಏನ್ ಬೇಕಾದೇ ಹೇಳಿ, ಅದ್ರೆ ಕೇಳಬೇಡಿ, ಹೇಳಬೇಡಿ ಅಂಬೋದು... ಸೊತಂತ್ರತನಕ್ಕೆ ಇರುದ್ದ.....
ನ್ಯಾಯ ಅನ್ನೋದು ಸಿಗಬೇಕಾರೆ.. ಎರಡೂ ಕಡೆಯೋರು ಮಾತಾಡಬೇಕು.!!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಸರಿ, ಮಾತಾಡಿ ನೀವು
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಹೆ ಹೆ..
ಮತ್ತೇನ್ ವಿಶಯ..!
ಸದ್ಯ ತಲೆಗೆ ವೋಗದೆ..!
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
೬ಕ್ಕೆ ಮನೆ ಹೋಗಿ ಮತ್ತೆ ಆಫೀಸ್ ಹೊಗೋದ್ ಯಾವಾಗ?... ಮತ್ತೆ ಅಲ್ಲಿಗೆ ಹೊಗ್ಬೇಕು..
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ವಿಷಯಕ್ಕೆ ಬರುವುದಾದರೆ , ಆ ರೀತಿ ಕಲಾವಿದರು ಎಂಬ ಹೆಸರಿನಲ್ಲಿ ರಾತ್ರಿ ಅನುಮತಿಗೆ ಆಗ್ರಹಿಸುತ್ತಿರುವವರು ಡಿಸ್ಕೋ ಜಾಕಿಗಳು, ಫ್ಯಾಷನ್ ಫ್ರೀಕ್ ಗಳು, ಅವರ ಜೊತೆ ಏನು ಕಾರಣವೋ ಗೊತ್ತಿಲ್ಲ ವಿಪರ್ಯಾಸಕರವಾಗಿ ಸೇರಿಕೊಂಡದ್ದು ನಮ್ಮ ಜ್ಞಾನ ಪೀಠಿ ಕಾರ್ನಾಡರು. ಸದ್ಯಕ್ಕೆ ಕುಣಿಯೋ ಹುಡ್ಗೀರನ್ನೂ ಕರೆತಂದಿರಲಿಲ್ಲ ಅನಿಸುತ್ತದೆ ಆಗ್ರಹಕ್ಕೆ.
ಇಂತಹ ’ಕಲಾವಿದ’ರಿಗೆ ತಮ್ಮ ’ಪ್ರತಿಭೆ’ಯನ್ನು ತೋರಿಸೋ ಅವಕಾಶ ಇರುವುದೇ ರಾತ್ರಿಯ ನಂತರ. ಅದೂ ಕೂಡ ಗಿರಾಕಿಗಳು ಕುಡಿದ ಮತ್ತಿನಲ್ಲಿದ್ದಾಗ ಹೆಚ್ಚಿನ ಪ್ರತಿಭೆ ತೋರಿಸಲು ಸಾದ್ಯವಾಗುತ್ತದೆ. ಮತ್ತು ಆ ಕಲಾವಿದ ಹುಡುಗಿಯರಿಗೆ ’ಸಂಪಾದನೆ'ಗೂ ದಾರಿಯಾಗಿ ಅವರ ಕುಟುಂಬ(!) ಬೀದಿಗೆ ಬೀಳುವುದು ತಪ್ಪುತ್ತದೆ
ಡಿಸ್ಕೋ ಜಾಕಿಗಳನ್ನ, ಲೈವ್ ಬ್ಯಾಂಡ್ ಹಾಡುಗಾರ್ತಿಯರನ್ನ, ಕ್ಲಬ್ ಡ್ಯಾನ್ಸರುಗಳನ್ನ ಕಲಾವಿದರು ಅನ್ನುತ್ತಿರುವ ಇವರು ಇನ್ನೂ ಸ್ವಲ್ಪ ದಿನ ಹೋದರೆ ಪೋಲ್ ಡ್ಯಾನ್ಸರ್ ಗಳನ್ನ, ಸ್ಟ್ರಿಪ್ ಡ್ಯಾನ್ಸರ್ ಗಳನ್ನ ಕೂಡ ಕಲಾವಿದರ ಪಟ್ಟಿಗೆ ಸೇರಿಸಿ ಅದಕ್ಕೂ ಅವಕಾಶ ಕೊಡಿ ಎಂದರೂ ಆಶ್ಚರ್ಯ ಇಲ್ಲ. ಬೆಂಬಲಕ್ಕೆ ಟೈಮ್ಸಾಫಿಂಡಿಯಾದಂತ ಪತ್ರಿಕೆಗಳಿವೆ. ಇಂಗ್ಲೀಷ್ ಪತ್ರಿಕೆಗಳಲ್ಲಿ ಬಂದದ್ದನ್ನು ಅನುಮೋದಿಸಲು ನಮ್ಮ ಕನ್ನಡದ ಪತ್ರಿಕೆಗಳೂ ಇವೆ. ದೇವರಾಣೆ ಇದು ನಮ್ಮ ದೇಶದ ನಿಜವಾದ ಕಲಾವಿದರಿಗೆ ಅವಮಾನ !
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ಹೌದ್ರೀ ವಿಕಾಸ್, ಜ್ಞಾನಪೀಠಿಗಳು ಬಂದು ’ಕಲಾವಿಧರಿಗೆ ಅನ್ಯಾಯವಾಗ್ತದೆ’ ಅಂದದ್ದು ನೋಡಿದರೆ ಆಶ್ಚರ್ಯವಾಗುತ್ತದೆ. ಅದೇ ಕಲಾವಿಧರು ಈ ನೆಲದ ಗುಣಕ್ಕೆ ಹೊಂದುವ ಕಲೆಗಳನ್ನು ರೂಢಿಸಿಕೊಂಡರೆ ಒಳ್ಲೆಯದಲ್ಲವೇ?
ಉ: ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
ವಿಕಾಸ್,
ಕಾರ್ನಾಡರು ‘ಕಲೆಗೆ ಮತ್ಸರವೇಕೆ’ ಎನ್ನುತ್ತಾರೆ. ಅವರು ಹಿರಿಯರು ಪಾಪ ನಮ್ಮ ಹುಡುಗ್ರು ಕುಡಿತ ಕುಣಿತ ಇಲ್ದೆ ಹಾಳಾಗ್ಬಾರ್ದು. ಅವ್ಯಾವೂ ಇಲ್ಲ ಅಂದ್ರೆ ಅವ್ರು ಇನ್ನಷ್ಟು ಜ್ಞಾನ ಪೀಠ ತರೋದು ಹೇಗೆ ಅಂತ ಕಳಕಳಿಯಿಂದ ಹಾಗೆ ಹೇಳಿರಬಹುದು!