ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಬೇರೆ ಭಾಷೆಯ ಪದಗಳ ಬಳಕೆ

January 30, 2006 - 12:18pm — ಮಹೇಶ ಭೋಗಾದಿ

ನಮಸ್ತೆ,

ಕನ್ನಡದಲ್ಲಿ ಬೇರೆ ಭಾಷೆಯ(ಸಂಸ್ಕೃತ, ಉರ್ದು, ಆಂಗ್ಲ ಮುಂತಾದವು) ಪದಗಳನ್ನು ಅನವಶ್ಯಕವಾಗಿ ಬಳಸುವುದು ಸೂಕ್ತವೆ? ಕನ್ನಡ ಭಾಷೆಯ ಬೆಳವಣಿಗೆಗೆ ಇದರಿಂದ ಪರಿಣಾಮಗಳೇನು?

ಮಹೇಶ.

‹ ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
~.~
  • Login or register to post comments
  • 1194 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 30, 2006 - 1:41pm — hpn

ಬೇರೆ ಭಾಷೆಗಳ ಪದ ಬಳಕೆ

hpn's picture

ಈ ಚರ್ಚೆ ಸಂಪದದಲ್ಲಿ ಈ ಹಿಂದೆಯೂ ನಡೆದಿದೆ. ನೋಡಿ:
ಶುದ್ಧ ಕನ್ನಡ
ಭಾಷಾ ಶುದ್ಧಿಯ ನಟ್ಟು ಬೋಲ್ಟುಗಳು….

ಅನ್ಯ ಭಾಷೆಗಳಿಂದ ಪದ ಬಳಕೆ ಹೊಸತೇನಲ್ಲ. ಮುಂಚಿನಿಂದಲೂ ಇದೆ. Sticking out tongue

ಆದ್ದರಿಂದ ಅನ್ಯ ಭಾಷೆಗಳ ಪದ ಬಳಕೆಗೆ ಅಷ್ಟೇನೂ ತಲೆಕೆಡಿಸಿಕೊಳ್ಳಬೇಕಿಲ್ಲ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2006 - 2:31pm — shreekant.mishrikoti

ಕನ್ನಡದಲ್ಲಿ ಬೇರೆ ಭಾಷೆಯ ಪದಗಳ ಬಳಕೆ .

shreekant.mishrikoti's picture

೧. ಬೇರೆ ಭಾಷೆಗಳ ಪದಗಳು ನಮ್ಮ ಭಾಷೆಯನ್ನು ಹೆಚ್ಚು ಶ್ರ್‍ಇಮಂತಗೊಳಿಸುವದಿಲ್ಲವೇ? ( ಇಂಗ್ಲೀಷು ಬೆಳೆದಿರುವದೇ ಹೀಗೆ) ಸಂಸ್ಕೃತ ನಮ್ಮ ಪುರಾತನ ಜ್ಞಾನ ಭಾಂಡಾರಕ್ಕೆ ಕೀಲಿಕೈಯಾಗಿದೆ; ಹಾಗೆಯೇ ಇಂಗ್ಲೀಷು ಹೊಸ ತಂತ್ರಜ್ಞಾನಕ್ಕೆ, ಜಗತ್ತಿಗೆ ಕೀಲಿಕೈಯಾಗಿದೆ. ಮತ್ತು ಇನ್ನೊಂದು ಪ್ರಶ್ನೆ. ಇಂಗ್ಲೀಷು ಶಬ್ದಗಳು ಕನ್ನಡದಲ್ಲಿ ಇರದಿದ್ದರೆ ,
ಈ ವಾಕ್ಯಗಳು ಹೇಗಿರುತ್ತಿದ್ದವು ?

ಮೊಬೈಲು ತಗೊಂಡವಳು ಬಯಲಿಗೆ ಬಾರಳೇ?
ಬಯಲು ಸೀಮೆ; ಮೊಬೈಲು ಸೀಮೆ.
ವಂಡರ್‍ ಲಾ - ಇಲ್ಲಿಗೆ ಬನ್ರೆಲಾ !

೨. ಆದರೆ ನಮ್ಮ ಭಾಷೆಗೆ ಹಾನಿಯಾಗಬಾರದು .

೩. ಸಂಸ್ಕೃತದ ಅನೇಕ ಶಬ್ದಗಳು ಈಗಾಗಲೇ ಕನ್ನಡದಲ್ಲಿ ಹಾಸು ಹೊಕ್ಕಾಗಿದ್ದು ಭಾಷೆಯನ್ನು ಶ್ರೀಮಂತಗೊಳಿಸಿವೆ. ಹಿಂದಿರುಗಿ ನೋಡುವ ಪ್ರಶ್ನೆಯಿಲ್ಲ .

೪. ಆದರೆ ಅನಗತ್ಯವಾಗಿ ಪರಭಾಷೆಯ ಶಬ್ದಗಳನ್ನು ಬಳಕೆಗೆ ತರಬಾರದು . ಸಾಧ್ಯವಿದ್ದಲ್ಲಿ ಸಾದ್ಯವಿದ್ದಷ್ಟೂ ಕನ್ನಡಪದಗಳನ್ನೇ ಬಳಸಬೇಕು. ಬಳಕೆಯಲ್ಲಿರುವ ಕನ್ನಡದ ಪದಗಳನ್ನು ಕೈಬಿಡಬಾರದು. ಬಳಕೆ ತಪ್ಪಿರುವ ಅಚ್ಚಗನ್ನಡದ ಪದಗಳನ್ನು ಬಳಕೆಗೆ ತರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2006 - 5:55pm — ಮಹೇಶ ಭೋಗಾದಿ

ನನ್ನ

ಮಹೇಶ ಭೋಗಾದಿ's picture

ನನ್ನ ಪ್ರಕಾರ ಸಂಸ್ಕೃತದಿಂದ ಕನ್ನಡಕ್ಕೆ ಹಾನಿಯೆ ಹೆಚ್ಚು.

ಕಾರಣಗಳು
1) ಕನ್ನಡ ತನ್ನ ಎಲ್ಲ ಹೊಸ ಪದಗಳಿಗೆ ಸಂಸ್ಕೃತವನ್ನು ಅವಲಂಬಿಸಬೇಕಿದೆ, ಆದ್ದರಿಂದ ಕನ್ನಡವು ಒಂದು ಅವಲಂಬಿತ ಭಾಷೆ ಹೊರತು ಸ್ವತಂತ್ರ ಭಾಷೆಯಲ್ಲ.

ಆದರೆ ತಮಿಳು ಈ ಗೋಜಿಗೆ ಹೋಗದೆ ಒಂದು ಸ್ವಾವಲಂಬಿ ಭಾಷೆಯಾಯಿತು.

2) ಕನ್ನಡದಲ್ಲಿ ಪದವಿದ್ದರು ನಾವು ಸಂಸ್ಕೃತ ಪದ ಬಳಸುತ್ತೇವೆ.

ಉದಾ :
ಸಂಸ್ಕೃತ - ಕನ್ನಡ

ಉಪಯೋಗಿಸು - ಬಳಸು
ಸೂರ್ಯ - ನೇಸರ
ಗರ್ಭಿಣಿ - ಬಸುರಿ
ಚಂದ್ರ - ತಿಂಗಳು
ಸಮಯ - ವೇಳೆ
ವಾರ್ತೆ - ಸುದ್ದಿ
ಮುಂತಾದವುಗಳು(ಇತ್ಯಾದಿ).

3) ಕನ್ನಡದ ಸ್ವಂತ ಸ್ವರೂಪವನ್ನು ಇದು ನಾಶ ಮಾಡಿದೆ.

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2006 - 7:43pm — Sunil Jayaprakash

ಸ್ವಾವಲಂಬಿ ಹಾಗು ಪರಾವಲಂಬಿ ಉ:ನನ್ನ

Sunil Jayaprakash's picture

mahesh_b_s wrote:
ನನ್ನ ಪ್ರಕಾರ ಸಂಸ್ಕೃತದಿಂದ ಕನ್ನಡಕ್ಕೆ ಹಾನಿಯೆ ಹೆಚ್ಚು. ಕಾರಣಗಳು 1) ಕನ್ನಡ ತನ್ನ ಎಲ್ಲ ಹೊಸ ಪದಗಳಿಗೆ ಸಂಸ್ಕೃತವನ್ನು ಅವಲಂಬಿಸಬೇಕಿದೆ, ಆದ್ದರಿಂದ ಕನ್ನಡವು ಒಂದು ಅವಲಂಬಿತ ಭಾಷೆ ಹೊರತು ಸ್ವತಂತ್ರ ಭಾಷೆಯಲ್ಲ. ಆದರೆ ತಮಿಳು ಈ ಗೋಜಿಗೆ ಹೋಗದೆ ಒಂದು ಸ್ವಾವಲಂಬಿ ಭಾಷೆಯಾಯಿತು.

ಸಂಸ್ಕೃತ ಪದದ ಬಳಕೆಯ ನಿಮ್ಮ ಮಾತನ್ನು ಒಪ್ಪಬಹುದಾದರೂ, ನೀವು ಹೇಳಿರುವ ಸ್ವತಂತ್ರ ಹಾಗು ಸ್ವಾವಲಂಬಿ ಭಾಷೆಗಳ ಬಗ್ಗೆ ಒಂದೆರೆಡು ಮಾತು.
ನನ್ನ ಪ್ರಕಾರ ಜಗತ್ತಿನಲ್ಲಿರುವ ಭಾಷೆಗಳೆಲ್ಲ ಸ್ವತಂತ್ರವೇ. ಅವು ಕೆಲವೊಂದು ನಿರ್ದಿಷ್ಟ ಪದಗಳನ್ನ ಎರವಲು ಪಡೆಯುತ್ತವಷ್ಟೆ. ಅಲ್ಲ ರೀ ಕನ್ನಡ ಸ್ವತಂತ್ರವಾಗಿರದಿದ್ದರೆ, ತತ್ಸಮ ತದ್ಭವ ಗಳೇಕಿರುತ್ತಿದ್ದವು. ನೀವೇ ಪಟ್ಟಿಮಾಡಿರುವ ಪದಗಳು ಇರಲೇಬಾರದಿತ್ತಲ್ಲವೇ.
ಕನ್ನಡ ಪರಾವಲಂಬಿಯಾಗಿದ್ದರೆ ಕನ್ನಡ ಪದಗಳೇ ಇರಬಾರದಿತ್ತಲ್ಲವೇ. ಇನ್ನು ಕನ್ನಡ ಪದಗಳನ್ನು ಬಿಟ್ಟು ನಾವು ಸಂಸ್ಕೃತ ಪದ ಉಪಯೋಗಿಸಲು ಎರಡು ಕಾರಣ
೧. ಕೆಲವೊಂದು ಕಡೆಗಳಲ್ಲಿ ನಮ್ಮ ನಿರ್ಲಕ್ಷ್ಯ
೨. ಕೆಲವೊಂದು ಕಡೆಗಳಲ್ಲಿ ಅದು ಸಂಸ್ಕೃತವೇ ಕನ್ನಡವೇ ಎಂದು ತಿಳಿದಿರುವುದಿಲ್ಲ.

ಅಲ್ಲ ರೀ ಇನ್ನೊಂದು ವಿಷಯ ಸ್ಪಷ್ಟಪಡಿಸಿ,
ತಮಿಳಿನಲ್ಲಿ ಸಂಸ್ಕೃತ ಪದಗಳೇ ಇಲ್ಲವೆ, ಉದಾ, ದೇವಸ್ಥಾನಂ, ರಾಗಂ
ಹಾಗೆಯೇ ತರಕಾರಿ ಕಾರೆಟ್ಟಿಗೆ ತಮಿಳಿನಲ್ಲಿ ಏನು ಹೇಳುತ್ತಾರೆ. ಇಂಗ್ಲೀಷಿನಿಂದ ಎರವಲು ಪಡೆದರೆ ಸ್ವತಂತ್ರ, ಸಂಸ್ಕೃತದಿಂದ ಅಥವಾ ಉರ್ದುವಿನಿಂದ ಎರವಲು ಪಡೆದರೆ ದಾಸ್ಯ. ಇದೆಂಥ ಮೊಂಡು ವಾದ. ಚೆನ್ನಾಗಿದೆ.

ಕನ್ನಡದಲ್ಲಿ ಸಂಸ್ಕೃತ ಪದಗಳಿವೆ ಎಂದ ಮಾತ್ರಕ್ಕೆ ಗ್ರಾಂಥಿಕ ಕನ್ನಡಕ್ಕೆ ಸ್ವತಂತ್ರ ಅಸ್ತಿತ್ವವೇ ಇಲ್ಲ ಎಂದು ಹೇಳಬೇಡಿ. ಹೊಸ ಪದಗಳನ್ನ ಸೃಷ್ಟಿ ಮಾಡುವುದಕ್ಕೆ ನಿಮಗೆ ಸಂಸ್ಕೃತವೇಕೆ ಬೇಕು ಅರ್ಥವಾಗುತ್ತಿಲ್ಲ. ಹಾಗಾದರೆ ಸಂಸ್ಕೃತ ಗೊತ್ತಿಲ್ಲದವರು ಹೊಸ ಕನ್ನಡ ಪದಗಳನ್ನ ಸೃಷ್ಟಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದೀರೋ ಸ್ಪಷ್ಟಪಡಿಸಿ.

ನಮ್ಮ ನಿರ್ಲಕ್ಷ್ಯವನ್ನು ಬೈಯಬೇಕೇ ಹೊರತು ಕನ್ನಡವೇ ಸ್ವತಂತ್ರವಲ್ಲ ಎಂದು ಹೇಳುವುದು ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 12:07pm — ಮಹೇಶ ಭೋಗಾದಿ

ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ

ಮಹೇಶ ಭೋಗಾದಿ's picture

ನಾನು ಮಂಡ್ಯದಲ್ಲಿ ಬೆಳೆದವನು, ನನ್ನ ತಾಯ್ನುಡಿ ಕನ್ನಡವೆ.
ನನಗೆ ಕನ್ನಡವೊಂದು ಶಾಸ್ತ್ರೀಯ(?) ನುಡಿ(ಭಾಷೆ)ಯಾಗಬೇಕೆನ್ನುವ ಹಬ್ಬಯಕೆ(ಮಹದಾಸೆ).

ನಾನು ಹಾಗೆ ಬರೆಯಲು ಕಾರಣ(?)ಗಳಿವೆ.
1) ತಮಿಳರು ತಮಿಳು ಸಂಸ್ಕೃತದಿಂದ ಪದ(?)ಗಳನ್ನು ಪಡೆದಿಲ್ಲ, ಪಡೆದಿದ್ದರು ಅವು ಬಹಳ ಕಡಿಮೆ ಎಂದು ಹೇಳಿ(ವಾದಿಸಿ), ಆ ನುಡಿಗೆ ಆ ಪಟ್ಟವನ್ನು ಗಿಟ್ಟಿಸಿದ್ದು.

2) ಆಸ್ಪತ್ರೆಗಳಲ್ಲಿ, ಕಛೇರಿಗಳಲ್ಲಿ, ವಿಜ್ಞಾನ(ಬಿನ್ನಾಣ)/ಗಣಿತ(ಲೆಕ್ಕ) ಹೊತ್ತಿಗೆಗಳಲ್ಲಿ, ಸಂಸ್ಕೃತ(ಸಕ್ಕದ)ದ ಪದ ಬಳಕೆಯೆ ಹೆಚ್ಚು.

3) ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ?

ನನ್ನ ಅನಿಸಿಕೆಯಲ್ಲಿ ಪಟ್ಟಣದ ಮಂದಿಗೆ ಈ ಪದಗಳ ಮಾಹಿತಿ ಹೆಚ್ಚು. ಹಳ್ಳಿಗರು ಇನ್ನು ಅಚ್ಚಕನ್ನಡವನ್ನೆ ಬಳಸುವರು.

ಏನೇಯಿರಲಿ ನಾವು ಸಂಸ್ಕೃತ(ಸಕ್ಕದ)ಪದಗಳಿಗೆ ಹೆಚ್ಚು ಒತ್ತು ಕೊಡುವಂತೆ ಕಾಣುವುದು(ಒಬ್ಬ ಕನ್ನಡವನ್ನು ಹೊಸದಾಗಿ ಕಲಿಯಲು ಮೊದಲುಮಾಡಿದವನಿಗೆ, ಅಥವಾ(?) ಕನ್ನಡದ ಜೊತೆಗೆ ಬೇರೆ ನುಡಿಗಳನ್ನು ಬಲ್ಲವನಿಗೆ ).

ನಾವಾದರು ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 12:43pm — shreekant.mishrikoti

ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ?

shreekant.mishrikoti's picture

ಸಂಸ್ಕೃತವೇ ಬಳಕೆಯಲ್ಲಿಲ್ಲ ಇನ್ನು ಅದರಲ್ಲಿ ಕನ್ನಡ ಪದಗಳ ಬಳಕೆಯೇ?!

ಆದರೆ ಸಂಸ್ಕೃತದಲ್ಲಿ ಕನ್ನಡದ ೪೨೦ ( ಹೌದು , ನಾಲ್ಕು ನೂರ ಇಪ್ಪತ್ತು) ಪದಗಳಿವೆಯೆಂದು ಕಿಟ್ಟೆಲ್ರವರು ಪಟ್ಟಿ ಮಾಡಿದ್ದಾರೆಂದು ಓದಿದ್ದೇನೆ.

ಒಂದು ಪದವಂತೂ ನನಗೆ ಗೊತ್ತು - ಅದು ನೀರು . (ನೀರಂ , ನೀರಜ ಇತ್ಯಾದಿ) .ರೈಲು ಇಲಾಖೆಯವರು ಮಾರುವ ನೀರಿನ ಬ್ರ್ಯಾಂಡ್ ಹೆಸರು ನೀರ್ ಎಂದೇ ಇದೆ. ಗಮನಿಸಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 1:41pm — ಮಹೇಶ ಭೋಗಾದಿ

ನೀರು - ಜಲ, ಸಲಿಲ, ತೋಯ, ಪಯ,

ಮಹೇಶ ಭೋಗಾದಿ's picture

>ಸಂಸ್ಕೃತವೇ ಬಳಕೆಯಲ್ಲಿಲ್ಲ ಇನ್ನು ಅದರಲ್ಲಿ ಕನ್ನಡ ಪದಗಳ ಬಳಕೆಯೇ?!
ಆದರೆ ಸಂಸ್ಕೃತ(ಸಕ್ಕದ)ಪದಗಳು ಬಳಕೆಯಲ್ಲಿವೆ.

> ಸಂಸ್ಕೃತದಲ್ಲಿ ಕನ್ನಡದ ೪೨೦ ( ಹೌದು , ನಾಲ್ಕು ನೂರ ಇಪ್ಪತ್ತು) ಪದಗಳಿವೆಯೆಂದು ಕಿಟ್ಟೆಲ್ರವರು ಪಟ್ಟಿ >ಮಾಡಿದ್ದಾರೆಂದು ಓದಿದ್ದೇನೆ.

ದಯವಿಟ್ಟು ಆ ಪಟ್ಟಿಯು ಸಿಕ್ಕರೆ ನಮಗೂ ತೋರಿಸಿ.

>ಒಂದು ಪದವಂತೂ ನನಗೆ ಗೊತ್ತು - ಅದು ನೀರು . (ನೀರಂ , ನೀರಜ ಇತ್ಯಾದಿ) .ರೈಲು ಇಲಾಖೆಯವರು >ಮಾರುವ ನೀರಿನ ಬ್ರ್ಯಾಂಡ್ ಹೆಸರು ನೀರ್ ಎಂದೇ ಇದೆ. ಗಮನಿಸಿರಬಹುದು.

ನೀರ್, ನೀರು ಈ ಪದವು ತೆಲುಗಿನಲ್ಲು ಇದೆ. ಆದರೆ ಸಂಸ್ಕೃತ(ಸಕ್ಕದ)ದಲ್ಲಿ ಈ ಪದದ ಬಳಕೆ ಹೆಚ್ಚೀನಿಲ್ಲ.
"ನೀರು" ಪದಕ್ಕೆ ಸಂಸ್ಕೃತ(ಸಕ್ಕದ)ದಲ್ಲಿ ಹೆಚ್ಚಾಗಿ - ಜಲ, ಸಲಿಲ, ತೋಯ, ಪಯ, ಮುಂತಾದ ಪದಗಳನ್ನು ಬಳಸುವರು.

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 2:03pm — shreekant.mishrikoti

ತೆಲುಗಿನಲ್ಲೂ ನೀರು

shreekant.mishrikoti's picture

ನೀರು ಸಂಸ್ಕ್ರಿತಕ್ಕೆ ಕನ್ನಡದಿಮ್ದ ಅನ್ನುವದಕ್ಕಿಂತ ದ್ರ್‍ಅವಿಡ ಮೂಲದಿಂದ ಹೋದದ್ದು ಎಂದು ಹೇಳಿದರೆ ಸರಿಯಾದೀತು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 4:20pm — tvsrinivas41

ತೆಲುಗು - ನೀಳ್ಲು

tvsrinivas41's picture

ತೆಲುಗುವಿನಲ್ಲಿ ನೀರಿಗೆ ನೀಳ್ಲು ಎನ್ನುವರು.

ತಮಿಳಿನಲ್ಲಿ ತಣ್ಣಿ ಅಂದ್ರೆ ನೀರು. ಅದೇ ಬಿಸಿನೀರಿಗೆ ಸೂಡುತಣ್ಣಿ ಅಂತಾರೆ. ಇದಕ್ಕೂ ಕನ್ನಡದ ತಣ್ಣೀರಿಗೂ ಸಂಬಂಧವಿದೆಯಲ್ಲವೇ?

ಈ ಭಾಷೆಗಳು ದ್ರಾವಿಡ ಮೂಲದ ಭಾಷೆಗಳು. ಒಂದಕ್ಕೊಂದರಲ್ಲಿ ಸಾಮ್ಯತೆ ಇದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 4:27pm — ಮಹೇಶ ಭೋಗಾದಿ

ತೆಲುಗಿನಲ್ಲಿ ನೀಳ್ಳು ಅಂತ ಅಂದರೂ ನೀರು ಅಂತನೆ ಬರೆಯುವುದು

ಮಹೇಶ ಭೋಗಾದಿ's picture

ಒಂದು ಮಾತು,

ತೆಲುಗಿನಲ್ಲಿ ನೀಳ್ಳು ಅಂತ ಅಂದರೂ ನೀರು ಅಂತನೆ ಬರೆಯುವುದನ್ನು ನಾನು ನೋಡಿದ್ದೀನಿ.

ಸರಿ.. ಅದು ಕನ್ನಡದ ಪದವಂತನೆಯಿಟ್ಟುಕೊಳ್ಳೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 4:48pm — tvsrinivas41

ನೀವು ತೆಲುಗರೇ!

tvsrinivas41's picture

ತೆಲುಗಿವಿನಲ್ಲಿರುವ ಪದ నీళ్లు.

ನನ್ನ ಮನೆಮಾತು ತೆಲುಗು - ನಿಮ್ಮದೂ ತೆಲುಗೇ?

ಇನ್ನು ಇದೇ ಪದ ಸರಿ. ಇದೇ ಮೂಲಪದ ಅಂತ ಅನ್ನುವುದು ಸರಿಯಲ್ಲ ಎನ್ನುವುದು ನನ್ನ ಇಂಗಿತ. ಕಾಲಕಾಲಕ್ಕೆ ಭಾಷೆಗಳು ಬದಲಾಗುತ್ತಿರುತ್ತವೆ. ಮುಂದೊಂದು ದಿನ ಸರಿ ಎನ್ನುವ ಪದ ತಪ್ಪು ಕರೆಕ್ಟು ಅನ್ನುವುದೇ ಸರಿ ಎಂತಲೂ ಹೇಳಬಹುದೇನೋ.

ವಾದ ಮಾಡಲು ನನಗಿಷ್ಟವಿಲ್ಲ. ತೆಲುಗು ಪದದ ಬಗ್ಗೆ ಕೇಳಿದ್ದಕ್ಕೆ ಹೇಳಿದೆನಷ್ಟೆ. ನೀವೇ ಸರಿ ಇರಬಹುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 10:21pm — hpn

ನೀರು

hpn's picture

ವಾರಿ (वारि) ಎಂದೂ ಬಳಸುತ್ತಾರೆ. ಆದರೆ ನೀರು ಅನ್ನೋದು ಸಂಸ್ಕೃತ ಪದವೋ ಕನ್ನಡ ಪದವೋ ಗೊತ್ತಿಲ್ಲ.
ಯಾವ ಭಾಷೆಯ ಪದವಾದ್ರೇನು? ಇಂಗ್ಲೀಷು ಬಳಸುವಾಗ ಹೀಗೆಯೇ ಯೋಚನೆ ಮಾಡ್ತೀವ? ಸುಮ್ಮನೆ ಬಳಸ್ಕೊಂಡು ಹೋಗ್ತೀವಿ Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2006 - 9:29pm — gvmt

ಪ್ರಕಾರ, ಇತ್ಯಾದಿ

gvmt's picture

ಪ್ರಕಾರ, ಹಾನಿ, ಕಾರಣ, ಅವಲಂಬಿಸು/ಅವಲಂಬಿತ/ಸ್ವಾವಲಂಬಿ, ಭಾಷೆ, ಸ್ವತಂತ್ರ, ಪದ, ಸ್ವರೂಪ, ನಾಶ, ಸ್ವಂತ

ತಮಿೞು ತಾನಾಗಿಯೆ "ಸ್ವಾವಲಂಬಿ" ಭಾಷೆಯಾಗಲಿಲ್ಲ; ತಮಿೞರು ತಮಿೞು ಪದಗಳನ್ನು ಮಾತ್ರ ಬಳಸುವ (ಕೆಲವೊಮ್ಮೆ ಅತಿರೇಕದ) ಪ್ರಯತ್ನ ಮಾಡಿದರು; ಬೇರೆ ತಮಿೞರು ತಮಿೞಲ್ಲದ ಪದಗಳನ್ನು ಬಳಸುವುದನ್ನು ತಡೆದರು (ಬಿ.ಜಿ.ಎಲ್. ಸ್ವಾಮಿಯವರ "ತಮಿಳು ತಲೆಗಳ ನಡುವೆ" ಓದಿರಿ). ಕನ್ನಡಿಗರು ಹಾಗೆ ಮಾಡಿದರೆ ತಾನೆ ಕನ್ನಡ, ನಿಮ್ಮ ಮಾತಿನಲ್ಲಿ "ಸ್ವಾವಲಂಬಿ" ಆಗಲು ಸಾಧ್ಯ?

> ಕನ್ನಡ ತನ್ನ ಎಲ್ಲ ಹೊಸ ಪದಗಳಿಗೆ ಸಂಸ್ಕೃತವನ್ನು ಅವಲಂಬಿಸಬೇಕಿದೆ, ಆದ್ದರಿಂದ ಕನ್ನಡವು ಒಂದು ಅವಲಂಬಿತ ಭಾಷೆ ಹೊರತು ಸ್ವತಂತ್ರ ಭಾಷೆಯಲ್ಲ. ಆದರೆ ತಮಿಳು ಈ ಗೋಜಿಗೆ ಹೋಗದೆ ಒಂದು ಸ್ವಾವಲಂಬಿ ಭಾಷೆಯಾಯಿತು.

ಕನ್ನಡವೂ ತಮಿೞೂ ನನ್ನ ನಿಮ್ಮ ಹಾಗೆ ಓಡಾಡುವ ಪ್ರಾಣಿಗಳಾಗಿದ್ದರೆ ಏನು ಮಾಡುತ್ತಿದ್ದವೊ ಏನೊ, ಆದರೆ ಅವು ಅಲ್ಲ; ಅವು ಏನಾಗಬೇಕಾದರೂ ಏನಾಗದಿದ್ದರೂ ಅವನ್ನಾಡುವ ನಾವುಗಳೆ ಕಾರಣ. ನಿಮಗೆ "ಕನ್ನಡದಲ್ಲಿ ಸಂಸ್ಕೃತ ಹೆಚ್ಚಾಯಿತು" ಎನಿಸಿದರೆ ಆದಷ್ಟು ಅಚ್ಚಗನ್ನಡದಲ್ಲಿ ಬರೆಯುವುದು ಮಾತನಾಡುವುದು ಮಾಡಿರಿ. ನಿಮ್ಮನ್ನು ನೋಡಿ ನಾವೂ ಕಲಿತೇವು. ಆದರೆ ನೆನಪಿಡಿ: ಸಂಸ್ಕೃತ ಬೇಡವಾದರೆ ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ ಪದಗಳನ್ನೂ ಬಿಡಬೇಕು. ನಿಮ್ಮ ಅನಾದರ ಸಂಸ್ಕೃತಕ್ಕೆ ಮಾತ್ರ ಸೀಮಿತವಾಗಬಾರದು.

ತಪ್ಪು ತಿಳಿಯಬೇಡಿ - ನಾನೂ ಹೊಸಪದಗಳಿಗೆ ಕನ್ನಡವನ್ನು ಹುಡುಕುವವನೆ. ಆದರೆ "ಸಂಸ್ಕೃತದಿಂದ ಕನ್ನಡಕ್ಕೆ ಹಾನಿ" ಎಂದದ್ದನ್ನು ಒಪ್ಪಲಾರೆ - ನನ್ನ ಅಭಿಪ್ರಾಯದಲ್ಲಿ ನಿಮ್ಮ ನಿಲುವು ಬಾಲಿಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 11:35am — ಮಹೇಶ ಭೋಗಾದಿ

ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ

ಮಹೇಶ ಭೋಗಾದಿ's picture

>ನಿಮ್ಮ ಅನಾದರ ಸಂಸ್ಕೃತಕ್ಕೆ ಮಾತ್ರ ಸೀಮಿತವಾಗಬಾರದು.

ನಾನು ಒಬ್ಬ ಸಂಸ್ಕೃತದ ವಿದ್ಯಾರ್ಥಿ. ಎಂದಿಗೂ ಸಂಸ್ಕೃತವನ್ನು ಅನಾದರಿಸಲಾರೆ.

>ತಪ್ಪು ತಿಳಿಯಬೇಡಿ - ನಾನೂ ಹೊಸಪದಗಳಿಗೆ ಕನ್ನಡವನ್ನು ಹುಡುಕುವವನೆ. ಆದರೆ "ಸಂಸ್ಕೃತದಿಂದ ಕನ್ನಡಕ್ಕೆ >ಹಾನಿ" ಎಂದದ್ದನ್ನು ಒಪ್ಪಲಾರೆ - ನನ್ನ ಅಭಿಪ್ರಾಯದಲ್ಲಿ ನಿಮ್ಮ ನಿಲುವು ಬಾಲಿಶ.

ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅದರಲ್ಲಿ ದೋಷಗಳಿದ್ದರೆ, ಅವು ಯಾವುವು ಮತ್ತು ಅವು ಯಾವ ಕಾರಣಗಳಿಗೆ ದೋಷಗಳು ಎಂದು ತಿಳಿಸಿ ನನ್ನನ್ನು ತಿದ್ದಿ.

ಆದರೆ ಹೇಳಿದ ಅಭಿಪ್ರಾಯಗಳೆಲ್ಲ ನನ್ನ ನಿಲುವುಗಳೆಂದುಕೊಂಡು ಅವನ್ನು, ಅವುಗಳ ಪ್ರೌಢತೆಯನ್ನು ಅಳೆದು ಕೆಲವು ಅನಾದರದ ಪದಗಳನ್ನು ಬಳಸುವುದು ಸೂಕ್ತವಲ್ಲ. ಹಾಗು ಅದು ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ

ಸಿರಿಗನ್ನಡ ಚಿರಗನ್ನಡ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 9:13pm — gvmt

ನನ್ನ ದುರದೃಷ್ಟ

gvmt's picture

> ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ

ನಿಮಗೆ ಹಾಗನಿಸಿದ್ದು ನನ್ನ ದುರದೃಷ್ಟ; ನಿಮ್ಮ ಹಾಗೆ ನಾನೂ ನನಗೆ ಅನಿಸಿದ್ದನ್ನು ಬರೆದೆ ಅಷ್ಟೆ.

ನಿಮಗೆ ಕನ್ನಡದಲ್ಲಿ ಕನ್ನಡವಲ್ಲದ ಮಾತುಗಳ ಬಳಕೆಯಾಗುತ್ತಿದೆ, ಇದರಿಂದ ಕನ್ನಡಕ್ಕೆ ಕೇಡಾಗುತ್ತಿದೆ, ಎಂದೆನಿಸಿದರೆ ಕೇಡು ಏನಾದರೂ ಕನ್ನಡವಲ್ಲದದ್ದರಿಂದ ಆಗುತ್ತದೆಯೆ ಹೊರತು ಸಂಸ್ಕೃತವಾದ್ದರಿಂದ ಅಲ್ಲ. ನೀವು ಸಂಸ್ಕೃತವನ್ನು ಎತ್ತಿಹಿಡಿದಿದ್ದು ನನಗೆ ಸರಿಕಾಣಲಿಲ್ಲ.

ಆಂಡಯ್ಯನ "ಕಬ್ಬಿಗರ ಕಾವ" ಓದಿದ್ದೀರಾ? ಒಮ್ಮೆ ಓದಿ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2006 - 10:15pm — hpn

ಕಬ್ಬಿಗರ ಕಾವ

hpn's picture

> ಆಂಡಯ್ಯನ "ಕಬ್ಬಿಗರ ಕಾವ"

ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆ ತಗೊಂಡಿದ್ದಾಗ ಈ ಪುಸ್ತಕ ಪಠ್ಯವಾಗಿತ್ತು Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 7, 2008 - 3:27pm — kannadakanda

ಉ: ಬೇರೆ ಭಾಷೆಯ ಪದಗಳ ಬಳಕೆ

kannadakanda's picture

ಕನ್ನಡಕ್ಕೆ ಸುಲಲಿತವಾಗಿ ಒಗ್ಗಿಸಿಕೊಂಡು ಬೞಸಿರಿ. ಉದಾಹರಣೆಗೆ, ನಿದ್ರೆಯನ್ನು ನಿದ್ದೆಯೆನ್ನಿ, ರಾಸ್ತಾವನ್ನು ರಸ್ತೆಯೆನ್ನಿ. ಬೇಱೆ ಭಾಷೆಯ ಪದಗಳು ಕನ್ನಡದ ಪದಗಳೇನೋ ಎಂಬ ಹಾಗೆ ಬೞಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 9:24am — kannadakanda

ಉ: ಬೇರೆ ಭಾಷೆಯ ಪದಗಳ ಬಳಕೆ

kannadakanda's picture

ವೇಳೆ=ಸಮಯ ಇದೂ ಕೂಡ ವೇಲಾ ಎಂಬ ಸಂಸ್ಕೃತ ಪದವೇ. ಅಲ್ಲಿ ಕ್ಷಣಭಂಗುರವಾದ ಸಮುದ್ರದ ಅಲೆಗಳಿಗೆ ಉಪಯೋಗಿಸಿದ್ದರೆ ಇಲ್ಲಿ ಕಾಲಗಣನೆಗೆ ಬೞಸಿರಬಹುದು. ಇದಱ ಬದಲು ಕನ್ನಡದ್ದೇ ಆದ ಹೊತ್ತು=ಸಮಯ ಮತ್ತು ನೇಸಱು ಎರಡೂ ಅರ್ಥಗಳಿಗೂ ಬೞಸಿಕೊಳ್ಳಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 9:28am — kannadakanda

ಉ: ಬೇರೆ ಭಾಷೆಯ ಪದಗಳ ಬಳಕೆ

kannadakanda's picture

ತೆನ್ನುಡಿಗಳಿಂದ ಸಂಸ್ಕೃತಕ್ಕೆ ಹೋದ ಶಬ್ದಗಳ ಪಟ್ಟಿಯಲ್ಲಿ ನನಗೆ ಗೊತ್ತಿರುವಂತೆ ಮೂಱು ನೀರು, ಮೀನು ಮತ್ತು ಬಿಲ. ಈ ನೀರು ಕನ್ನಡ, ತಮಿೞ್ (ಅವರ ತಣ್ಣಿ ಕೇವಲ ಆಡುಮಾತಿನಲ್ಲಿ ಮಾತ್ರ) ಮತ್ತು ತೆಲುಗಿನಲ್ಲಿ ಬೞಕೆಯಲ್ಲಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಸ್ತ್ರೀಯ ಭಾಷೆಯ ಕಲಹದಲ್ಲಿ ಭಾಷೆ, ದೇಶಕ್ಕಿಂತ ಮುಖ್ಯವೆ?
  • ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಶುದ್ಧ ಕನ್ನಡ?
  • ನಿನ್ನೆ(೧೭-೦೪-೨೦೦೬)ಯ ನನ್ನ ಓದು
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator