ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ದಿನಕ್ಕೊಂದು ಪ್ರಶ್ನೆ

ಪಂಚಬಾಣಗಳು ಎಂದರೆ ಆವುವು ?

August 17, 2008 - 10:22pm — Sunil Jayaprakash

ಶ್ಯಾಮಲಾ ದಂಡಕದಲ್ಲಿ ಹೀಗೊಂದು ಪದ್ಯ ಬರುತ್ತದೆ.

ಭೈರವೀ ಸಂವೃತೇ | ಪಂಚಬಾಣೇನ ರತ್ಯಾ ಚ ಸಂಭಾವಿತೇ |
ಪ್ರೀತಿ ಶಕ್ತ್ಯಾವಸಂತೇನ ಚಾನಂದಿತೇ ||

ಪಂಚಭೂತ ಕೇಳಿದ್ದೆ, ಈ ಪಂಚಬಾಣಗಳಾವುವು ?

‹ ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?] ಉತ್ತರ ಕುಮಾ(ರ)ರಿಯರಿಗೆ....." ›
  • ದಿನಕ್ಕೊಂದು ಪ್ರಶ್ನೆ
~.~
  • Login or register to post comments
  • 403 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 17, 2008 - 10:33pm — prameela

ಉ: ಪಂಚಬಾಣಗಳು ಎಂದರೆ ಆವುವು ?

prameela's picture

ಅರವಿಂದ,ಅಶೋಕ,ಚೂತ,ಮಲ್ಲಿಕಾ, ನೀಲೋತ್ಪಲ-ಇವು ಮನ್ಮಥನ ಪಂಚ ಬಾಣಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 10:42pm — anil.ramesh

ಉ: ಪಂಚಬಾಣಗಳು ಎಂದರೆ ಆವುವು ?

anil.ramesh's picture

ಪರಮೇಶ್ವರ(ಶಿವ) ಯಾವ ಬಾಣಕ್ಕೆ ತನ್ನ ಮೂರನೇ ಕಣ್ಣು ಬಿಟ್ಟಿದ್ದು? Eye-wink

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 10:53pm — prameela

ಉ: ಪಂಚಬಾಣಗಳು ಎಂದರೆ ಆವುವು ?

prameela's picture

ಕೊನೆಯದೇ ಇರಬಹುದು.ಕೊನೆಯದು ಯಾವಗಲೂ ಪವರ್ಫುಲ್ ಆಗಿರುತ್ತೆ ಅಲ್ವ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 10:59pm — anil.ramesh

ಉ: ಪಂಚಬಾಣಗಳು ಎಂದರೆ ಆವುವು ?

anil.ramesh's picture

ಇದ್ರೂ ಇರಬಹುದು... ಕೊನೆಯದು ಯಾವಾಗಲೂ ಬ್ರಹ್ಮಾಸ್ತ್ರದ ಟೈಪ್ ಅನ್ಸುತ್ತೆ... Laughing out loud

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:59pm — kannadakanda

ಉ: ಪಂಚಬಾಣಗಳು ಎಂದರೆ ಆವುವು ?

kannadakanda's picture

ಅಹುದಹುದು. ಕನ್ನೈದಿಲೆಯದು. ಬ್ರಹ್ಮಾಂಡದ ಕಪ್ಪುತೂತಿನ (Blackhole) ತೆಱ ಎಲ್ಲರನ್ನು ತನ್ನತ್ತ ಸೆಳೆವ ಮಹಾಬಾಣವದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 10:31am — kannadakanda

ಉ: ಪಂಚಬಾಣಗಳು ಎಂದರೆ ಆವುವು ?

kannadakanda's picture

ಆದರೆ ಇಲ್ಲಿ ಪಂಚಬಾಣೇನ ಎಂದು ಏಕವಚನದಲ್ಲಿರುವುದಱಿಂದ ಮನ್ಮಥನೆಂದೇ ಅರ್ಥ

ಅರವಿಂದಮಶೋಕಂ ಚ ಚೂತಂ ಚ ನವಮಲ್ಲಿಕಾ
ನೀಲೋತ್ಪಲಂ ಚ ಪಂಚೈತೇ ಪಂಚಬಾಣಸ್ಯ ಸಾಯಕಾಃ||

ಎನ್ನುತ್ತದೆ ಅಮರಕೋಶ. ಅರವಿಂದ=ಕೆಂಪು ಕಮಲ, ಅಶೋಕ, ಮಾವಿನ ಹೂ, ಹೊಸಮಲ್ಲಿಗೆ, ಕನ್ನೈದಿಲೆ ಇವು ಮನ್ಮಥನ(ಪಂಚಬಾಣನ) ಬಾಣಗಳು. ಪ್ರಾಯಶಃ ಇವೆಲ್ಲ ವಸಂತರ್ತುವಿನಲ್ಲಿ ಬಿಡುವ ಹೂಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 11:36pm — Narayana

ಉ: ಪಂಚಬಾಣಗಳು ಎಂದರೆ ಆವುವು ?

Narayana's picture

ನೀಲೋತ್ಪಲಂಚ ಪಂಚೈತೆ ಪಂಚ ಬಾಣಸ್ಯ ಸಾಯಕಾ:
ಅರವಿಂದಂ ಅಶೋಕಂ ಚ ಚೂತಂ ಚ ನವಮಲ್ಲಿಕಾ
-ಅಮರಕೋಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 10:37am — kannadakanda

ಉ: ಪಂಚಬಾಣಗಳು ಎಂದರೆ ಆವುವು ?

kannadakanda's picture

ನಾರಾಯಣ ಅವರೇ, ನಿಮ್ಮ ಪ್ರತಿಕ್ರಿಯೆಯಲ್ಲಿ ಅಮರಕೋಶದ ಶ್ಲೋಕದ ಸಾಲುಗಳು ಹಿಂದುಮುಂದಾಗಿವೆ. ನನ್ನ ಪ್ರತಿಕ್ರಿಯೆಯಲ್ಲಿ ಅದನ್ನು ಸರಿಪಡಿಸಿದ್ದೇನೆ. ನನ್ನಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 2:02pm — Sunil Jayaprakash

ಉ: ಪಂಚಬಾಣಗಳು ಎಂದರೆ ಆವುವು ?

Sunil Jayaprakash's picture

ಉತ್ತರಿಸಿದ ಎಲ್ಲರಿಗೂ ನನ್ನಿ. ಪಂಚಬಾಣ -> ಐದು ಬಾಣ -> ಅವುಗಳನ್ನು ಹೊಂದಿರತಕ್ಕ ಮನ್ಮಥ ಅಂತೇನೋ ಆಯ್ತು.

ಆದರೆ ಈ "ಮನ್ಮಥ ಹಾಗು ರತಿಯಿಂದ ಸಂಭಾವಿತಳಾದವಳು" ಅಂತ ಶ್ಯಾಮಲೆಯನ್ನು ಏಕೆ ಕರೆದಿದ್ದಾರೆ ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 3:48pm — kannadakanda

ಉ: ಪಂಚಬಾಣಗಳು ಎಂದರೆ ಆವುವು ?

kannadakanda's picture

ಭೈರವೀ ಸಂವೃತೇ | ಪಂಚಬಾಣೇನ ರತ್ಯಾ ಚ ಸಂಭಾವಿತೇ |
ಪ್ರೀತಿ ಶಕ್ತ್ಯಾವಸಂತೇನ ಚಾನಂದಿತೇ ||

ವಸಂತರ್ತುವಿನ ಆಗಮನದಲ್ಲಿ ಎಲ್ಲಾ ಕಡೆಗೂ ಹೊಸ ಜೀವನ ಕಾಣುವುದು (ಕಾಮಕೇಳಿಯಿಂದ). ಹಾಗಾಗಿ ಮನ್ಮಥ ಮತ್ತು ರತಿಯರಿಂದ ಸಂಭಾವನೆಗೊಳಗಾಗಿ (ಲಂಚಕ್ಕೊಳಗಾಗಿ ಆಮಿಷಕ್ಕೊಳಗಾಗಿ ಲಂಚ=ಆಮಿಷ) ಸಂತೋಷಪಡುವವಳೇ ಎಂದಿರಬಹುದೇನೋ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 7:16pm — benaka

ಉ: ಪಂಚಬಾಣಗಳು ಎಂದರೆ ಆವುವು ?

benaka's picture

ಇದು ಸ್ವಲ್ಪ ವೈದಿಕ ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ್ದು!

"ಪಂಚಬಾಣೇನ ರತ್ಯಾ ಚ ಸಂಭಾವಿತೇ"
ಎಂದರೆ, ಕನ್ನಡಕಂದರು ಹೇಳಿದಂತೆ, ಮದನ ಹಾಗೂ ಅವನ ಸತಿ-ರತಿ ಇಬ್ಬರಿಂದಲೂ ಸಂಭಾವಿತಳು ಈ ದೇವಿ.

ಆದರೆ 'ಸಂಭಾವಿತಾ' ಎಂಬುದಕ್ಕೆ ಟೀಕಾಕಾರರು 'ಸಂಭವಿಸುವವಳು' ಎಂಬರ್ಥ ನೀಡಿದಾಗ ಬೇರೆಯೇ ಅರ್ಥ ಬರುತ್ತದೆ!
ಅಂದರೆ ರತಿ-ಮದನರಿಂದ 'ಸಂಭವಿಸುವವಳು', ಪ್ರತ್ಯಕ್ಷವಾಗುವವಳು, ಅಥವಾ ಕನ್ನಡದಲ್ಲಿ ಮೈದೋರುವವಳು, ಮೈದಳೆಯುವವಳು!
ಇದೇ ಸಂಸ್ಕೃತಭಾಷೆಯ ನಾನಾರ್ಥ ವೈಶಿಷ್ಟ್ಯ!
ಶಾಕ್ತರು ಅಥವಾ ದೇವಿಯ ಉಪಾಸಕರು ಅತ್ಯಂತ ಶಕ್ತಿಶಾಲಿಯೆಂದು ನಂಬುವ ಮಂತ್ರವೊಂದಿದೆ; ಅದೇ ಪಂಚದಶಾಕ್ಷರೀ - ಹದಿನೈದಕ್ಕರದ ಶ್ರೀವಿದ್ಯಾ ಮಂತ್ರ. ಇದರಲ್ಲಿ ೬೪ ವಿಧಗಳಿದ್ದು, ಅವುಗಳಲ್ಲಿಯೂ ಮಹತ್ತರವಾದ ಹನ್ನೆರಡು [ಮನು, ಚಂದ್ರ, ಕುಬೇರ, ಲೋಪಾಮುದ್ರಾ, ಮನ್ಮಥ,ಅಗಸ್ತ್ಯ, ಅಗ್ನಿ, ಸೂರ್ಯ,ಇಂದ್ರ, ಸ್ಕಂದ, ಶಿವ, ಕ್ರೋಧಭಟ್ಟಾರಕ(ದೂರ್ವಾಸ)] ಪ್ರಸಿದ್ಧವಾಗಿವೆ. ಆ ಒಂದೊಂದೂ ಒಬ್ಬೊಬ್ಬ ಋಷಿ, ಮುನಿ, ದೇವತೆಗಳಿಂದ ಉಪಾಸಿಸಲ್ಪಟ್ಟು, ಅವರದೇ ಹೆಸರಿನಿಂದ ಪ್ರಸಿದ್ಧ ಕೂಡ. ಅವುಗಳಲ್ಲಿ 'ಮದನ' ಹಾಗೂ 'ರತಿ' ಕೂಡ ಸೇರಿದ್ದು, "ಪಂಚಬಾಣೇನ ರತ್ಯಾ ಚ ಸಂಭಾವಿತೇ" ಎಂದರೆ, ಆ ಎರಡು ಮಂತ್ರಗಳಿಂದ ಸಾಕ್ಷಾತ್ಕಾರಗೊಳ್ಳುವವಳೇ, ಎಂದರ್ಥ!

ಕಾದಿ(ಮದನ)ವಿದ್ಯೆಯಲ್ಲಿ ಹಯಗ್ರೀವ, ಅಗಸ್ತ್ಯ, ಶಂಕರಾಚಾರ್ಯ, ಮುತ್ತುಸ್ವಾಮಿ ದೀಕ್ಷಿತರು ಖ್ಯಾತರು.
ಹಾದಿ(ಲೋಪಾಮುದ್ರಾ)ವಿದ್ಯೆಯಲ್ಲಿ ಲೋಪಾಮುದ್ರಾ, ಕಾಲತಾಪನಾನಂದನಾಥರು ಖ್ಯಾತರು.
ಸಾದಿ(ಕ್ರೋಧಭಟ್ಟಾರಕ)ವಿದ್ಯೆಯಲ್ಲಿ ದೂರ್ವಾಸ, ಧರ್ಮಾಚಾರ್ಯರು ಖ್ಯಾತರು.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 10:41pm — ಭರದ್ವಾಜ

ಉ: ಪಂಚಬಾಣಗಳು ಎಂದರೆ ಆವುವು ?

ಭರದ್ವಾಜ's picture

Hats off for ur interpretation....

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
  • ಪ್ರೀತಿ
  • ಘನಗಂಭೀರ ಕವಿತ್ವ
  • ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ
  • ೞ ಮತ್ತು ಳ ನಡುವಿನ ಅರ್ಥವ್ಯತ್ಯಾಸ ಈ ಪದ್ಯ ಅರ್ಥ ಮಾಡಿಕೊಂಡಾಗ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator