ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಸಂಪದ ಪುಟಕ್ಕೆ ಬಂದಾಗಲೆಲ್ಲಾ ಎಷ್ಟು ಜನರು ಆನ್‌ಲೈನ್‌ನಲ್ಲಿ ಇರುತ್ತಾರೆ ಎಂದು ಕಣ್ಣಿಗೆ ಬೀಳುತ್ತಿರುತ್ತದೆ. ಆದರೆ ಇವತ್ತು ನಾನು ನಿಜಕ್ಕೂ ದಂಗು ಬಡಿದು ಹೋದೆ- ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು ಆನ್‌ಲೈನ್ ಇದ್ದಾರೆ ಎಂದಿತ್ತು. ಹೆಚ್ಚಾಗಿ ನಲ್ವತ್ತು -ಐವತ್ತು ಮೀರದ ಸಂಖ್ಯೆ ಮುನ್ನೂರು ದಾಟಿದೆ! ನೀವು ಇದಕ್ಕಿಂತ ಹೆಚ್ಚು ಜನರು ಸಂಪದ ಜಾಲಾಡುವುದನ್ನು ಕಂಡಿದ್ದುಂಟೇ? ಆದರೆ ಗಂಭೀರವಾಗಿ ಭೇಟಿ ನೀಡುವವರು ಹೆಚ್ಚಿಲ್ಲದಿರುವುದು ವಿಚಿತ್ರ. ಕೈಬೆರಳೆಣಿಕೆಯ ಜನರೇ ಪ್ರತಿಕ್ರಿಯಿಸುತ್ತಿರುತ್ತಾರೆ. ಬರೆಯುತ್ತಿದ್ದೇವೆ. ಅತಿಥಿಗಳು ಅದೇಕೆ ಸದಸ್ಯರಾಗುತ್ತಿಲ್ಲ? ಐದು ಕೋಟಿ ಕನ್ನಡಿಗರಲ್ಲಿ ಶೇ. ಒಂದು ಜನ ಅಂತರ್ಜಾಲ ಬಳಸುತ್ತಿದ್ದರೆ, ಐದು ಲಕ್ಷ ಜನರಾದರೂ ಅಂತರ್ಜಾಲ ಬಳಸುತ್ತಿರಬಹುದು. ಅವರಲ್ಲಿ ಶೇ.ಒಂದು ಜನ ಸದಸ್ಯರಾಗಿದ್ದಾರೆ. ಅತಿಥಿಗಳೇ ನೀವು ಸಂಪದದ ಸದಸ್ಯರಾಗಿ ಬಿಡಿ. ಆಗದೇ?

- Login or register to post comments
- 413 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಬರೆದು ಪ್ರಕಟಿಸಿ ನೋಡುತ್ತೇನೆ ಅತಿಥಿಗಳ ಸಂಖ್ಯೆ ಮುನ್ನೂರೈವತ್ತೇಳು.
ಇವತ್ತು ಬೆಳಗೆ ನನಗೆ ಬಹಳ ಹೊತ್ತು ಮುಖಪುಟ ಮಾತ್ರಾ ಸಿಕ್ಕುತ್ತಿತ್ತು. ಯಾವುದೇ ಕೊಂಡಿ ಒತ್ತಿದರೆ ಖಾಲಿ ಪುಟವೇ ಬರುತ್ತಿತ್ತು. ಸರ್ವರ್ ಮೇಲೆ ಒತ್ತಡದ ಫಲವೇ? ಸರ್ವರ್ ಎಷ್ಟು ಜನರ ಬೇಡಿಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ-ನಾಡಿಗರಿಗೇ ಗೊತ್ತು.
*ಅಶೋಕ್
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ನನಗೂ ಬೆಳಿಗ್ಗೆ ಹಾಗೇ ಆಯ್ತು.
ನಾನು ನನ್ನ ಕಛೇರಿಯಲ್ಲಿ ಮಾತ್ರ ಈ ತೊಂದರೆ ಇದೆ ಎಂದು ತಿಳಿದಿದ್ದೆ... ನಮ್ಮ ಕಛೇರಿಯ ಅಂತರ್ಜಾಲದ ಸರ್ವರ್ ಡೌನ್ ಇದೆ ಎಂದು ಭಾವಿಸಿದ್ದೆ...
ಸ್ವಲ್ಪ ಹೊತ್ತಾದ ಮೇಲೆ ಸರ್ವರ್ ಸರಿ ಹೋಯ್ತು ಅಂತ ಅನ್ಸುತ್ತೆ...
ಆಮೇಲೆ ಪ್ರತಿಕ್ರಿಯೆ ನೀಡಲು ಅನುಕೂಲವಾಯ್ತು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ನಾಡಿಗರೇ ಇದಕ್ಕೆ ಸರಿಯಾದ ಉತ್ತರ ಕೊಡಬಲ್ಲವರು; ಆದರೆ ನನ್ನ ಅನಿಸಿಕೆ ಪ್ರಕಾರ ೩೦೦ ಅಥಿತಿಗಳು ಅಂತ ಕಾಣಿಸುವುದಕ್ಕೆ ಕೆಳಗಿನ ಕಾರಣಗಳು ಇರಬಹುದು.
* ಸಾಧಾರಣವಾಗಿ 'spambot'ಗಳು ಮತ್ತು ಹ್ಯಾಕರ್ ಗಳು ವೆಬ್ ಸೈಟ್ ಗಳ ಮೇಲೆ ಧಾಳಿ ಮಾಡಿದಾಗ ಈ ರೀತಿ ಕಾಣಿಸುತ್ತದೆ.
*ಸಂಪದವನ್ನು ನಡೆಸುವ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಕಳೆದ ೩೦-೪೫ ನಿಮಿಶಗಳಿಂದ ಭೇಟಿ ಕೊಟ್ಟಿರುವ ಎಲ್ಲ IP ಅಡ್ರೆಸ್ ಗಳನ್ನು ಬೇರೆ-ಬೇರೆ ಅಥಿತಿಗಳಾಗಿ ಪರಿಗಣಿಸುತ್ತದೆ.
ಇದು ನಾನು ನಡೆಸುವ ಬೇರೊಂದು ವೆಬ್ ಸೈಟ್‍ನಿಂದ ನನ್ನ ಅನುಭವ. ನಾನು ನಡೆಸಿತ್ತಿರುವ ವೆಬ್ ಸೈಟ್ ನಲ್ಲಿ ಈ ರೀತಿ ೩೦೦-೪೦೦ ಅಥಿತಿಗಳು ಕಾಣಿಸಿದಾಗ ಲಾಗ್ ಗಳನ್ನು ನೋಡಿದರೆ spam ಅಥವಾ hack ಮಾಡಲು ಪ್ರಯತ್ನಗಳು ನಡೆದಿರುವುದು ಕಾಣಿಸುತ್ತದೆ.
ನನಗೂ ನಿನ್ನೆ ಸಂಪದದ ಪುಟಗಳು ಸರಿಯಾಗಿ ತೆರೆದುಕೊಳ್ಳುತ್ತಿರಲಿಲ್ಲ. ಅದಕ್ಕೂ ಇದಕ್ಕೂ ಸಂಬಂಧವಿದೆಯೋ ಇಲ್ಲವೋ ಅಂತ ನಾಡಿಗರಿಗೆ ಮಾತ್ರ ಗೊತ್ತು!!
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ನೀವು ನೋಡಿದ ಮುನ್ನೂರೈವತ್ತರಲ್ಲಿ ಎಲ್ಲರೂ Human users ಆಗಿರಬೇಕಿಲ್ಲ, ಆದರೆ ಮುನ್ನೂರೈವತ್ತು botಗಳು ಖಂಡಿತ ಸಂಪದಕ್ಕೆ ಬರುತ್ತಿಲ್ಲ. "spam ಅಥವಾ hack ಮಾಡಲು ಪ್ರಯತ್ನಗಳು" ಖಂಡಿತ ಅಲ್ಲ.
ನನ್ನ ಬಳಿ ಇರುವ ಮಾಹಿತಿಯಂತೆ ಅದರಲ್ಲಿ ಸುಮಾರು ಜನ ಓದುಗರು. ಹೆಚ್ಚಿನ ಜನ ಲಾಗಿನ್ ಆಗದೇ ಓದುತ್ತಿದ್ದಾರೆ. ಕಾಮೆಂಟ್ ಬರೆಯುವಾಗ ಮಾತ್ರ ಲಾಗಿನ್ ಆಗುತ್ತಿದ್ದಾರೆ.
ಜೊತೆಗೆ ಈ ಲೆಕ್ಕ ಬರೇ ಸಂಪದವೊಂದರದ್ದೇ ಅಲ್ಲ, ಸಂಪದ ಐಡಿ ಬಳಸಿ ಲಾಗಿನ್ ಆಗಬಹುದಾದ ಎಲ್ಲ ಸೈಟುಗಳ (planetkannada.com, haridasa.in, krushi.sampada.net ಮುಂತಾದವಗಳ) ಲೆಕ್ಕ ಒಟ್ಟಾರೆ ತೋರಿಸುತ್ತದೆ.
ಬೆಳಿಗ್ಗೆ ಆದದ್ದು (ನನಗೆ ಕಂಡುಬಂದ ಮಟ್ಟಿಗೆ) ಕ್ಯಾಶ್ ಪ್ರಾಬ್ಲಮ್.
ಸರ್ವರಿನ Usage Statistics ಹೇಳುವಂತೆ ಸೋಮವಾರ ಖಂಡಿತವಾಗಿ ಸುಮಾರು ಜನ ಬಂದು ಹೋಗುತ್ತಾರೆ. ವಾರದ ಒಟ್ಟು ಟ್ರಾಫಿಕ್ ನ ೨೦% ಸೋಮವಾರ ಇರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಬೆಳಿಗ್ಗೆ ಆದದ್ದು (ನನಗೆ ಕಂಡುಬಂದ ಮಟ್ಟಿಗೆ) ಕ್ಯಾಶ್ ಪ್ರಾಬ್ಲಮ್.
ನನಗೂ ಸಂಶಯ ಬಂದು cache clear ಮಾಡಿ ನೋಡಿದೆ. ಪ್ರಯೋಜನವಾಗಲಿಲ್ಲ. ನೀವು ಸರ್ವರಿನ ಬಗ್ಗೆ ಹೇಳಿದ್ದಲ್ಲವಲ್ಲಾ?
*ಅಶೋಕ್
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಹೌದು. ಸರ್ವರಿನ ಕ್ಯಾಶ್. ಅದಿಲ್ಲದೆ ಸಂಪದ ಲೋಡ್ ಆಗುವುದು ತುಂಬ ನಿಧಾನವಾದೀತು. ಎರಡೆರಡು ರೀತಿಯ ಕ್ಯಾಶ್ ಅಳವಡಿಸಲಾಗಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಹರಿ comment ಬರಿಯುವವರಿಗೆ open id(www.openid.net) enable ಮಾಡಲು ಸಾಧ್ಯವೇ? ಸಂಪದ ಉಪಯೋಗಿಸುವ ಎಷ್ಟು ಮಂದಿಗೆ ಇದರ ಬಗ್ಗೆ ತಿಳಿದಿದೆಯೋ ಗೊತ್ತಿಲ್ಲ.
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಕಾರ್ತಿಕ್ ನಾನಂತೂ ಓಪನ್ ಐಡಿ ಪಡೆದೆ.
*ಅಶೋಕ್
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಏನಿದು ಓಪೆನ್ ಐಡಿ ಅಂದ್ರೆ? ಯಾರಾದ್ರೂ ಸ್ವಲ್ಪ ಬಿಡಿಸಿ ಹೇಳಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಸರಳವಾಗಿ ಹೇಳಬೇಕೆಂದರೆ, ಎಲ್ಲ ಅಂತರ್ಜಾಲ ಖಾತೆಗಳಿಗೆ ಪ್ರತ್ಯೇಕವಾಗಿ ಲಾಗಿನ್ ಆಗುವುದನ್ನು ತಪ್ಪಿಸುವ ವ್ಯವಸ್ಥೆ. ಓಪನೈಡಿ ಯೋಜನೆಯಡಿ ಬರುವ ಸೈಟುಗಳಿಗೆ ಪ್ರವೇಶವನ್ನು ಪ್ರತ್ಯೇಕವಾಗಿ ಪಡೆಯದೆ, ಈ ವ್ಯವಸ್ಥೆಯ ಮೂಲಕ ಪಡೆಯಬಹುದು. ಆದರೆಅಂತರ್ಜಾಲ ತಾಣಗಳೂ ಓಪನೈಡಿಗೆ ಸೇರಿದರೆ ಮಾತ್ರಾ ಇದು ಸಾಧ್ಯ. ಈಗ ಸಂಪದ ಅದರಲ್ಲಿ ಸೇರಿಲ್ಲವೆನಿಸುತ್ತದೆ.
http://openid.net/
ಇಲ್ಲಿ ಹೆಚ್ಚಿನ ವಿವರ ಇದೆ.
ಇಲ್ಲಿ ನಿಮ್ಮ ಓಪನೈಡಿ ಪಡೆದುಕೊಳ್ಳಬಹುದು:
http://pip.verisignlabs.com/
*ಅಶೋಕ್
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಸದ್ಯಕ್ಕೆ ಕಷ್ಟ. ಸಂಪದದ್ದೇ ಒಂದು centralized ಲಾಗಿನ್ ರೆಡಿಯಾಗುತ್ತಿದೆ. ಅದಾದ ನಂತರ ಓಪನ್ ಐಡಿ ಬಗ್ಗೆ ಆಲೋಚಿಸಬಹುದು.
ಟೆಕ್ನಿಕಲ್ ಕೆಲಸಗಳ ಹಿಂದೆ ಹೆಚ್ಚು ಜನ ಇಲ್ಲವಾದ್ದರಿಂದ ಸಮಯ ಹಿಡಿಯುವುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ:
ನಾನೂ ಲಾಗಿನ್ ಆಗುವುದು ಪ್ರತಿಕ್ರಿಯಿಸಲು ಮಾತ್ರ! ಉಳಿದಂತೆ ಹಾಗೇ ನೋಡುವುದು. ಸೋಮವಾರಗಳಂದು ಟ್ರಾಫಿಕ್ ಜಾಸ್ತಿ ಅಂದರೆ ಹೆಚ್ಚಿನವರು ಕಚೇರಿಯಿಂದ ನೋಡುತ್ತಾರೆ (ವಾರದ ಕೊನೆಯ ರಜಾ ಮುಗಿಸಿ ಬಂದು, ಕೆಲಸ ಸುರು ಮಾಡಲು ಉದಾಸೀನ ಆಗಿ) ಅಂತ ಅನ್ನಿಸುತ್ತೆ?! ಪ್ರತಿಕ್ರಿಯೆಗಳ ಸಮಯ ನೋಡಿದರೂ ಹಾಗೇ ಕಾಣುತ್ತೆ!
(ಕಾಮೆಂಟ್ ಬದಲಾಯಿಸಿದಾಗ ಉ: ಮುಂದಿರುವ ವಿಷಯ ಹೋಗಿಬಿಟ್ಟಿದೆ)