ಜ್ಯೋತಿಷ್ಯ..ವೈಜ್ಞಾನಿಕ ?
ಇತ್ತೀಚಿಗೆ ಒಂದು ಚರ್ಚೆ ನಡೀತಾ ಇದೆ. ಜ್ಯೋತಿಷ್ಯದ ಬಗ್ಗೆ. ಅದರ ವೈಜ್ಞಾನಿಕ ವಿವರಣೆಯ ಬಗ್ಗೆ.
ನನಗೆ ಜ್ಯೋತಿಷ್ಯದಲ್ಲಿ ಆಸಕ್ತಿಯಿದೆ. ಜ್ಯೋತಿಷ್ಯದ "ಗಣಿತ" ಭಾಗ ನನಗೆ ನಿಜವಾಗಿಯೂ ಮೆಚ್ಚಿಗೆ ಯಾಗಿದೆ. ಆದರೆ ಆ ಗಣಿತ ಇತ್ತೀಚಿಗೆ ಲೆಕ್ಕ ತಪ್ಪಿದೆ ಅನ್ನಿಸುತ್ತದೆ. ನನಗೆ ವೈಯಕ್ತಿಕವಾಗಿ "ಫಲಿತ" ಭಾಗದ ಕಡೆ ಆಸಕ್ತಿ ಇದ್ದರೂ ನಂಬಿಕೆಯಿಲ್ಲ. ಕೆಲವೊಮ್ಮೆ ತಮಾಶೆಮಾಡಲು ( ಮೋಸ ಮಾಡಲು ಅಲ್ಲ!) ಬಳಸಿಕೊಳ್ಳುತ್ತೇನೆ.
ಇಲ್ಲಿ ಜ್ಯೋತಿಷ್ಯ ಬಲ್ಲವರು ಬಹಳಷ್ಟು ಇದ್ದಾರೆ. ನಂಬುವವರು ಇನ್ನೂ ಹೆಚ್ಚಿದ್ದಾರೆ.
ಈ ಜ್ಯೋತಿಷ್ಯಕ್ಕೆ ವಿಜ್ಞಾನದ ವಿವರಣೆ ಜೋಡಿಸುವುದು ಎಷ್ಟು ಸರಿ? ಈ ಜ್ಯೋತಿಷ್ಯ ನಿಜವಾಗಲೂ ವೈಜ್ನಾನಿಕವೇ? ಅದು ಒಂದು ಸತ್ವ/ಸತ್ಯ ಇರೋ ಜ್ಞಾನವೇ?
ನೀವು ಏನಂತೀರಿ?
- Login or register to post comments
- 1215 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ಜ್ಯೋತಿಷ್ಯ..ವೈಜ್ಞಾನಿಕ ?
ನನ್ನ ಅಭಿಪ್ರಾಯದಲ್ಲಿ ಜ್ಯೊತಿಷ್ಯವು ವಿಜ್ಞಾನವಲ್ಲ ಮತ್ತು ಯಾವುದೇ ವೈಜ್ಞಾನಿಕ ತಳಹದಿ ಹೊಂದಿಲ್ಲ.
ಯಾವುದೇ ಶಾಸ್ತ್ರ ವೈಜ್ಞಾನಿಕ ಎಂದು ಎನಿಸಿಕೊಳ್ಳಬೇಕಾದರೆ ಅದರ ತೀರ್ಮಾನಗಳು ಮತ್ತು prediction ಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದಬೇಕಾಗಿರುತ್ತವೆ. ನನ್ನ ಪ್ರಕಾರ ವೈಜ್ಞಾನಿಕ ತಳಹದಿ ಎಂದರೆ (http://en.wikipedia.... ಇಂದ)
Scientific method refers to a body of techniques for investigating phenomena, acquiring new knowledge, or correcting and integrating previous knowledge. To be termed scientific, a method of inquiry must be based on gathering observable, empirical and measurable evidence subject to specific principles of reasoning. A scientific method consists of the collection of data through observation and experimentation, and the formulation and testing of hypotheses.
ನನಗೆ ಗೊತ್ತಿರುವ ಮಟ್ಟಿಗೆ ಜ್ಯೋತಿಷ್ಯವು ಈ ಮೇಲೆ ಹೇಳಲ್ಪಟ್ಟ ಹಲವು ವಿಶಯಗಳಲ್ಲಿ ಸಮರ್ಪಕವಾಗಿಲ್ಲ.
"acquiring new knowledge, or correcting and integrating previous knowledge" -> ಜ್ಯೋತಿಷ್ಯದಲ್ಲಿ ಹೊಸ ಸಂಶೋಧನೆಗಳಾಗಲಿ, ಹಳೆಯ ಶಾಸ್ತ್ರದ ತಿದ್ದುಪಡಿಗಳಾಗಲೀ ಆಗಿರುವುದು ನನಗೆ ತಿಳಿದಿಲ್ಲ.
"gathering observable, empirical and measurable evidence subject to specific principles of reasoning" ಮತ್ತು "collection of data through observation and experimentation" -> ಈ ನಿಯಮಗಳಿಗನುಗುಣವಾಗಿ ನಡೆದ ಸಂಶೋಧನೆ (study)ಗಳು ಇರುವಂತೆ ಕಾಣೆ.
"the formulation and testing of hypotheses" -> ಜ್ಯೋತಿಷ್ಯದ ಹಿಂದೆ ನಂಬಿಕೆ ಎನ್ನುವುದನ್ನು ಬಿಟ್ಟರೆ ಬೆರೆ ಯಾವುದೇ ’hypothesis' ಇಲ್ಲ. ಜ್ಯೋತಿಷ್ಯ ನಂಬುವರೂ ಕೂಡ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಸಮರ್ಪಕವಾದ ವಿವರಣೆಯನ್ನು ಕೊಟ್ಟಿಲ್ಲ.
ನನಗೆ ಜ್ಯೋತಿಶ್ಯವನ್ನು ನಂಬುವವರನ್ನು ನಂಬಬೇಡಿ ಎನ್ನುವ ಇಚ್ಚೆ ಇಲ್ಲ (ಆ ನಂಬಿಕೆ ತಪ್ಪು ಎಂದು ನಾನು ವ್ಯಕ್ತಿಗತವಾಗಿ ಭಾಬಿಸಿದ್ದರೂ ಕೂಡ). ಅವರವರ ನಂಬಿಕೆ ಅವರವರ ವೈಯಕ್ತಿಕ ವಿಷಯ. ಆದರೆ ಜ್ಯೋತಿಷ್ಯವನ್ನು ವಿಜ್ಞಾನ ಎನ್ನುವುದಕ್ಕೆ ಮಾತ್ರ ನನ್ನ ವಿರೋಧ.
savithruರವರೆ, ಆಕಾಶ ಕಾಯಗಳ ದಾರಿಯನ್ನು ಹೇಳುವ ಗಣಿತ ನಿಜಕ್ಕೂ ಬಹಳ ಆಸಕ್ತಿದಾಯಕ. ಜ್ಯೋತಿಷ್ಯ ಶಾಸ್ತ್ರದ ತಳಹದಿಯಲ್ಲಿ ಇರುವ ಖಗೋಳ ಶಾಸ್ತ್ರ ನಿಜಕ್ಕೂ ಮೆಚ್ಚುವಂತದ್ದು. ಆದರೆ ಖಗೋಳ ಕಾಯಗಳ ಚಲನೆಯಿಂದ ಜನರ ಜೀವನದ ಮೇಲೆ ಪ್ರಭಾವ ಆಗುತ್ತದೆ ಮತ್ತು ಆ ಪ್ರಭಾವ ಒಬ್ಬೊಬ್ಬ ವ್ಯಕ್ತಿಯ ಹುಟ್ಟಿನ ಅವಧಿಯ ಮೇಲೆ ಅವಲಂಬಿಸಿರುತ್ತದೆ ಎನ್ನುವುದಕ್ಕೆ ನನ್ನ ಸಹಮತವಿಲ್ಲ.
[ಇಂತಹ ವಿಷಯಗಳಲ್ಲಿ ಚರ್ಚೆಗಳು ಸುಲಭವಾಗಿ ವಾದಗಳಾಗಿ ಬದಲಾಗುವುದರಿಂದ ನಾನು ನನಗೆಂದು ಕೆಲವು ನಿಯಮಗಳನ್ನು ಮಾಡಿಕೊಂಡಿದ್ದೇನೆ. ಈ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಚರ್ಚೆಯು ಸುಗಮವಾಗಿ ನಡೆಯುವುದೆಂದು ನಂಬಿದ್ದೇನೆ. ಈ ನಿಯಮಗಳನ್ನು ಪಾಲಿಸದ comment ಗಳಿಗೆ ಪ್ರತಿಕ್ರಿಯಿಸದೇ ಇರುವ ಹಕ್ಕು ನನಗೆ ಇದೆ.
೧. ಯಾವುದೇ ಪರಿಸ್ಥಿತಿಯಲ್ಲಿಯೂ ವೈಯಕ್ತಿಕ ದೂಷಣೆ ಸಲ್ಲ. ವಿಚಾರಗಳನ್ನು ವಿರೋಧಿಸಬಹುದೇ ಹೊರತು ವ್ಯಕ್ತಿಯನ್ನಲ್ಲ.
೨. ಹೊಸ ವಿಶಯವನ್ನು ಹೇಳುವಾಗ ಆ ವಿಶಯದಲ್ಲಿ ಹಿನ್ನೆಲೆ ಇಲ್ಲದಿರುವವರಿಗೂ ಸುಲಭವಾಗಿ ಅರ್ಥವಾಗುವಂತೆ ಹೇಳಬೇಕು.
೩. ಒಂದು ಪ್ರತಿಕ್ರಿಯೆಗ ಉತ್ತರಿಸುವಾಗ ಆ ಪ್ರತಿಕ್ರಿಯೆಯ ಎಲ್ಲ ’ಪಾಯಿಂಟ್’ ಗಳನ್ನೂ address ಮಾಡಬೇಕು. ನನಗೆ ಬೇಕಾದ ಪಾಯಿಂಟ್‍ಗಳನ್ನು ಮಾತ್ರ ಆರಿಸಿ ಅವಕ್ಕೆ ಉತ್ತರಿಸುವುದಲ್ಲ.
೪. ಯಾವುದೇ claim ಮಾಡುವಾಗ ಅದಕ್ಕೆ ತಕ್ಕ ಪ್ರಾಮಾಣಿಸಲಾಗುವ (verifiable) ಸಾಕ್ಷ್ಯಾಧಾರಗಳಿರಬೇಕು.
೫. ಅನಗತ್ಯ ವಿಶಯಾಂತರ ಸಲ್ಲ ]
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಸಮ್ಮರ್ ಗ್ಲೌ,
ಒಳ್ಳೆಯ ಎಚ್ಚರಿಕೆಯೊಂದಿಗೆ ಚರ್ಚೆಯನ್ನು ಪ್ರಾರಂಭಿಸಿರುವಿರಿ. ಧನ್ಯವಾದಗಳು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಧನ್ಯವಾದಗಳು! ನಮ್ಮ ಅನಿಸಿಕೆಗಳನ್ನೂ ಸಮಯವಾದಾಗ ಬರೆಯಿರಿ.
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಸಮ್ಮರ್ ಗ್ಲೋ,
ನಿಮ್ಮ ಪಟ್ಟಿ ಮತ್ತು ನಿಯಮಗಳು ಚೆನ್ನಾಗಿವೆ. ಈ ರೀತಿ ಮಾಡದಿದ್ದರೆ ಸರಿಯಾಗಿ ಯಾವ ವಾದವನ್ನೂ ಪ್ರತಿಪಾದಿಸಲು ಸಾಧ್ಯವಿಲ್ಲ.
ಒಂದು ವಿಷಯವನ್ನು ಹೇಳಬಯಸುವೆ. ಬರೇ ಜ್ಯೋತಿಷ ವೆಂದರೆ observational astronomy + computable astronomy. ಎಸ್.ಕೆ.ಜೈನರು ಮೊದಲಾದವರು ಹೇಳುವುದು ’ಫಲ ಜ್ಯೋತಿಷ; . ಅಂದರೆ ಶುಕ್ರ ಈ ರಾಶಿಯಲ್ಲಿರೋದರಿಂದ"....." ಅನ್ನೋ ತರಹದ ಮಾತುಗಳೆಲ್ಲ ಈ ಗುಂಪಿಗೆ ಸೇರಿದವು.
"ಜ್ಯೋತಿಷ" ಅಥವಾ ಅದರ ಸಂಬಧದ ಗಣಿತಕ್ಕೆ ವೈಜ್ಞಾನಿಕ ಹಿನ್ನಲೆ (ಅಥವಾ empirical relations, and inference ಗಳು) ಇವೆ. ಸವಿತೃ ಅವರು ಕೇಳುತ್ತಿರುವುದು ಈ ವಿಷಯದ ಬಗ್ಗೆ ಅನ್ನಿಸುತ್ತೆ. ಅದರ ಬಗ್ಗೆ ಬೇರೆ ಎಳೆಗಳಲ್ಲಿ ಮಾತಾಡಬೇಕಾಗುತ್ತೋ ಏನೋ.
ಇನ್ನು ಫಲಜ್ಯೋತಿಷದ ಮಾತಿಗೆ ಬರುವುದಾದರೆ, ಅದು ಯಾಕೆ ಅರ್ಥಪೂರಿತವಲ್ಲ ಎಂದು ಬರೆಯಬೇಕು - ಮತ್ತೆ ಸ್ವಲ್ಪ ಸಮಯದ ನಂತರ ಬರೆಯುವೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಧನ್ಯವಾದ!
ಹಾಗಾದರೆ ನೀವು ಫಲಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲದವರು ಎಂದು ಆಯಿತು. ನಾನು ಕೂಡ ಎಂದು ಹೇಳುವ ಅಗತ್ಯವಿದೆಯೆ? ;)
ಇನ್ನು astronomy ಮತ್ತು astrology ಗೆ ತಳುಕು ಹಾಕುವುದು ಏಕೆ? observational astronomy ಎಂದರೆ ದೃಗಣಿತ ಎಂದಲ್ಲವೆ? ಅದು ಸರಿ ಎಂದು ನಾನು ಒಪ್ಪುತ್ತೇನೆ. ಅದರಿಂದಲೇ ನಮ್ಮ ಪಂಚಾಂಗಗಳು ಇನ್ನು ಕೂಡ ಗ್ರಹಣ ಗಳನ್ನು ಸರಿಯಾಗಿ predict ಮಾಡುತ್ತಿವೆ.
ನನಗೆ ಜ್ಯೋತಿಷ್ಯದ ಹಿಂದಿನ ಗಣಿತದ ಬಗ್ಗೆ ಇರುವ empirical relations ಬಗ್ಗೆ ಅರಿವಿಲ್ಲ. ತಿಳಿಯಲು ಬಯಸುತ್ತೇನೆ. ಸಮಯವಾದಾಗ ತಿಳಿಸಿ.
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಈ ವಿಷಯಕ್ಕೆ ಸಂಭಂದಿಸಿದಂತೆ ನಾನು ಓದಿದ ಈ ಭಾಗವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗಮನಿಸಿ. ವಿಷಯ ಇಂಗ್ಲಿಷ್ನಲ್ಲಿದೆ. ಕ್ಷಮಿಸಿ. ಕನ್ನಡದಲ್ಲೂ ಇದರ ಅನುವಾದವಿದೆ. ಸಮಯ ದೊರೆತೊಡನೆ ಟೈಪ್ ಮಾಡಿ ಹಾಕುತ್ತೇನೆ.
Autobiography of a Yogi
(Original 1946 Edition)
by Paramhansa Yogananda
CHAPTER 16
Outwitting the Stars
"Mukunda, why don't you get an astrological armlet?"
"Should I, Master? I don't believe in astrology."
"It is never a question of belief; the only scientific attitude one can take on any subject is whether it is true. The law of gravitation worked as efficiently before Newton as after him. The cosmos would be fairly chaotic if its laws could not operate without the sanction of human belief.
"Charlatans have brought the stellar science to its present state of disrepute. Astrology is too vast, both mathematically1 and philosophically, to be rightly grasped except by men of profound understanding. If ignoramuses misread the heavens, and see there a scrawl instead of a script, that is to be expected in this imperfect world. One should not dismiss the wisdom with the 'wise.'
"All parts of creation are linked together and interchange their influences. The balanced rhythm of the universe is rooted in reciprocity," my guru continued. "Man, in his human aspect, has to combat two sets of forces÷first, the tumults within his being, caused by the admixture of earth, water, fire, air, and ethereal elements; second, the outer disintegrating powers of nature. So long as man struggles with his mortality, he is affected by the myriad mutations of heaven and earth.
"Astrology is the study of man's response to planetary stimuli. The stars have no conscious benevolence or animosity; they merely send forth positive and negative radiations. Of themselves, these do not help or harm humanity, but offer a lawful channel for the outward operation of cause-effect equilibriums which each man has set into motion in the past.
"A child is born on that day and at that hour when the celestial rays are in mathematical harmony with his individual karma. His horoscope is a challenging portrait, revealing his unalterable past and its probable future results. But the natal chart can be rightly interpreted only by men of intuitive wisdom: these are few.
"The message boldly blazoned across the heavens at the moment of birth is not meant to emphasize fate÷the result of past good and evil÷but to arouse man's will to escape from his universal thralldom. What he has done, he can undo. None other than himself was the instigator of the causes of whatever effects are now prevalent in his life. He can overcome any limitation, because he created it by his own actions in the first place, and because he has spiritual resources which are not subject to planetary pressure.
"Superstitious awe of astrology makes one an automaton, slavishly dependent on mechanical guidance. The wise man defeats his planets÷which is to say, his past÷by transferring his allegiance from the creation to the Creator. The more he realizes his unity with Spirit, the less he can be dominated by matter. The soul is ever-free; it is deathless because birthless. It cannot be regimented by stars.
"Man is a soul, and has a body. When he properly places his sense of identity, he leaves behind all compulsive patterns. So long as he remains confused in his ordinary state of spiritual amnesia, he will know the subtle fetters of environmental law.
"God is harmony; the devotee who attunes himself will never perform any action amiss. His activities will be correctly and naturally timed to accord with astrological law. After deep prayer and meditation he is in touch with his divine consciousness; there is no greater power than that inward protection."
"Then, dear Master, why do you want me to wear an astrological bangle?" I ventured this question after a long silence, during which I had tried to assimilate Sri Yukteswar's noble exposition.
"It is only when a traveler has reached his goal that he is justified in discarding his maps. During the journey, he takes advantage of any convenient short cut. The ancient rishis discovered many ways to curtail the period of man's exile in delusion. There are certain mechanical features in the law of karma which can be skillfully adjusted by the fingers of wisdom.
"All human ills arise from some transgression of universal law. The scriptures point out that man must satisfy the laws of nature, while not discrediting the divine omnipotence. He should say: 'Lord, I trust in Thee, and know Thou canst help me, but I too will do my best to undo any wrong I have done.' By a number of means÷by prayer, by will power, by yoga meditation, by consultation with saints, by use of astrological bangles÷the adverse effects of past wrongs can be minimized or nullified.
"Just as a house can be fitted with a copper rod to absorb the shock of lightning, so the bodily temple can be benefited by various protective measures. Ages ago our yogis discovered that pure metals emit an astral light which is powerfully counteractive to negative pulls of the planets. Subtle electrical and magnetic radiations are constantly circulating in the universe; when a man's body is being aided, he does not know it; when it is being disintegrated, he is still in ignorance. Can he do anything about it?
"This problem received attention from our rishis; they found helpful not only a combination of metals, but also of plants and÷most effective of all÷faultless jewels of not less than two carats. The preventive uses of astrology have seldom been seriously studied outside of India. One little-known fact is that the proper jewels, metals, or plant preparations are valueless unless the required weight is secured, and unless these remedial agents are worn next to the skin."
"Sir, of course I shall take your advice and get a bangle. I am intrigued at the thought of outwitting a planet!"
JUST BE HAPPY
ಎನ್. ಅಂಜನ್ ಕುಮಾರ್
ಉ:
ಅಂಜನ್ ರವರೆ,
ಈ ಪುಸ್ತಕವನ್ನು ನಾನು ಕೂಡ ಓದಿದ್ದೇನೆ ಮತ್ತು ಹಲವಾರು ಕಾರಣಗಳಿಂದ ಮೆಚ್ಚಿದ್ದೇನೆ. ಈ ಭಾಗವನ್ನು ಇಲ್ಲಿ ಹಾಕಿದಕ್ಕೆ ಧನ್ಯವಾದಗಳು.
"It is never a question of belief; the only scientific attitude one can take on any subject is whether it is true. The law of gravitation worked as efficiently before Newton as after him. The cosmos would be fairly chaotic if its laws could not operate without the sanction of human belief.
"Charlatans have brought the stellar science to its present state of disrepute. Astrology is too vast, both mathematically1 and philosophically, to be rightly grasped except by men of profound understanding. If ignoramuses misread the heavens, and see there a scrawl instead of a script, that is to be expected in this imperfect world. One should not dismiss the wisdom with the 'wise.'
ಮೇಲಿನದನ್ನು ಒಪ್ಪುತ್ತೇನೆ.
"All parts of creation are linked together and interchange their influences. The balanced rhythm of the universe is rooted in reciprocity," my guru continued. "Man, in his human aspect, has to combat two sets of forces÷first, the tumults within his being, caused by the admixture of earth, water, fire, air, and ethereal elements; second, the outer disintegrating powers of nature. So long as man struggles with his mortality, he is affected by the myriad mutations of heaven and earth.
"Astrology is the study of man's response to planetary stimuli. The stars have no conscious benevolence or animosity; they merely send forth positive and negative radiations. Of themselves, these do not help or harm humanity, but offer a lawful channel for the outward operation of cause-effect equilibriums which each man has set into motion in the past.
"A child is born on that day and at that hour when the celestial rays are in mathematical harmony with his individual karma. His horoscope is a challenging portrait, revealing his unalterable past and its probable future results. But the natal chart can be rightly interpreted only by men of intuitive wisdom: these are few.
"The message boldly blazoned across the heavens at the moment of birth is not meant to emphasize fate÷the result of past good and evil÷but to arouse man's will to escape from his universal thralldom. What he has done, he can undo. None other than himself was the instigator of the causes of whatever effects are now prevalent in his life. He can overcome any limitation, because he created it by his own actions in the first place, and because he has spiritual resources which are not subject to planetary pressure.
ಈ ಭಾಗದಲ್ಲಿ ನಾನು ಮೇಲೆ ಹೇಳಿದ ’ವೈಜ್ಞಾನಿಕ ತಳಹದಿ’ಯ ಎಷ್ಟು ಅಂಶಗಳಿವೆ? ಉದಾಹರಣೆಗೆ ’ಮನುಷ್ಯ ದೇಹ ಪಂಚಭೂತಗಳಿಂದ ಆಗಿದೆ ಮತ್ತು ಅದರ ದೆಸೆಯಿಂದ ಗ್ರಹ/ನಕ್ಷತ್ರಗಳ ಪ್ರಭಾವ ನಮ್ಮ ಮೇಲೆ ಆಗುತ್ತದೆ’ ಎನ್ನುವ 'hypothesis' ಅನ್ನು ತೆಗೆದುಕೊಳ್ಳೋಣ. ಮನುಷ್ಯ ದೇಹ ಪಂಚಭೂತಗಳಿಂದ ಆಗಿದೆ ಅನ್ನುವುದು ಒಂದು 'hypothesis’ ಆದರೆ, ನೈಟ್ರೊಜೆನ್, ಆಕ್ಸಿಜನ್ ಇತ್ಯಾದಿಗಳಿಂದ ಆಗಿದೆ ಅನ್ನುವುದು ಇನ್ನೊಂದು hypothesis. ವೈಜ್ನಾನಿಕ ತಳಹದಿಯ ಮೇಲೆ ಇವೆರಡನ್ನೂ ತುಲನೆ ಮಾಡಿದಾಗ (ಪ್ರಯೋಗಗಳು ಇತ್ಯಾದಿ), ಎರಡನೆ hypothesis ಮೊದಲನೆಯದಕ್ಕಿಂತ ಹೆಚ್ಚು ವಿಶಯಗಲನ್ನು explaಇn ಮಾಡುತ್ತದೆ ಎಂಬುದು ಅರಿವಾಗುತ್ತದೆ. (ಉದಾಹರಣೆಗೆ ಪಂಚಭೂತ hypothesis ನಿಂದ 2H2 + O2 -> 2H2O ಎನ್ನುವುದನ್ನು ಸಮರ್ಪಕವಾಗಿ ವಿವರಿಸಲು ಆಗುವುದಿಲ್ಲ).
ಹಾಗೆಯೇ ಗ್ರಹ/ನಕ್ಷತ್ರಗಳಿಂದ ಬರುವ ವಿಕಿರಣಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಕೇವಲ ಒಂದು hypothesis ಅಷ್ಟೆ. ಅದಕ್ಕೆ ಮನ್ನಣೆ ಸಿಗಬೇಕಾದರೆ ಅದು ಹೇಗೆ ಕೆಲಸ ಮಾಡುತ್ತದೆ ಅನ್ನುವುದರ ಬಗ್ಗೆ ಪರೀಕ್ಷಿಸಲು ಬರುವಂತಹ (verifiable) ಸಂಶೋಧನೆ ನಡೆಯಬೇಕು. ಇಲ್ಲದಿದ್ದರೆ ಈ hypothesis ಗೂ, ಈ ವಿಡಿಯೋದಲ್ಲಿ (http://www.youtube.c...) ಇರುವ hypothesisಗೂ ವೈಜ್ಞಾನಿಕವಾಗಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ.
ಹೋಗಲಿ, ಗ್ರಹ ನಕ್ಷತ್ರಗಳು ನಮಗೆ ಈಗ ತಿಳಿಯದೇ ಇರುವ ಒಂದು ರೀತಿಯ ವಿಕಿರಣವನ್ನೇ ಹೊಮ್ಮಿಸುತ್ತವೆ ಎಂದು ಅಂದುಕೊಂಡರೂ, ತಾರ್ಕಿಕವಾಗಿ ಅವು ನಮ್ಮ ಮೇಲೆ ಪರಿಣಾಮ ಬೀರಲು ಹೇಗೆ ಸಾಧ್ಯವಿಲ್ಲ ಎನ್ನುವುದನ್ನು http://www.badastron... ನಲ್ಲಿ ವಿವರಿಸಲಾಗಿದೆ.
ಇನ್ನು ಲೋಹ ಮತ್ತು ಹರಳುಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎನ್ನುವ hypothesis ಗೆ ಕೂಡ ಮೇಲಿನದೇ ರೀತಿಯ ಪ್ರತಿಕ್ರಿಯೆ ಕೊಡಬಹುದು.
ಒಟ್ಟಿನಲ್ಲಿ ನನ್ನ ಹೇಳಿಕೆಯ ಅರ್ಥ, ಗ್ರಹ/ನಕ್ಷತ್ರಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಕೇವಲ ಒಂದು ನಂಬಿಕೆ ಮತ್ತು ಒಂದು hypothesis. ಅದು ವೈಜ್ನಾನಿಕ ಎಂದು ಅನಿಸಿಕೊಳ್ಳಬೇಕಾದರೆ ಅದು ಎಲ್ಲ hypothesis ಗಳಂತೆಯೇ rigorous scrutinyಗೆ ಒಳಪದಬೇಕಾಗುತ್ತದೆ. ಯೋಗಾನಂದರ ಗುರುಗಳು ಹೇಳಿದರೆಂದಾಗಲೀ, ಆಲ್ಬರ್ಟ್ ಐನ್‍ಸ್ಟೀನ್ ಹೇಳಿದನೆಂದಾಗಲೀ ವಿಜ್ಞಾನದಲ್ಲಿ ಈ ವಿಶಯಕ್ಕೆ ವಿನಾಯಿತಿ ಇಲ್ಲ.
ವಿಜ್ಞಾನ ವಲಯದಲ್ಲೂ ಹಲವಾರು hypothesis ಗಳು ಇವೆ. ಅವೆಲ್ಲವೂ ನಿಜವಾಗಬೇಕೆಂದು ಇಲ್ಲ, ಆದರೆ ಅವುಗಳಲ್ಲಿ ನಿಜ ಯಾವುದು ಎಂದು ತಿಳಿಯಲೆಂದೇ ಲಾರ್ಜ್ ಹಾಡ್ರಾನ್ ಕೊಲ್ಲೈಡರ್ (http://en.wikipedia....) ನಂತಹ ಉಪಕರಣ ಗಳನ್ನು ಬಳಸಿ ಪ್ರಯೋಗ ಮಾಡುತ್ತಿದ್ದಾರೆ. ಅದರಿಂದ ಕೆಲವು hypothesis ಗಳು ನಿಜವೆಂದೂ, ಕೆಲವು ಸುಳ್ಳೆಂದೂ ಗೊತ್ತಾಗುತ್ತವೆ, ವಿಜ್ಞಾನ ಬೆಳೆಯುತ್ತದೆ. ನನಗೆ ತಿಳಿದ ಯಾವ ಜ್ಯೋತಿಷ್ಯಾತ್ರಜ್ಞನೂ ಈ ರೀತಿಯ systematic ಪ್ರಯೋಗಗಳನ್ನು ಮಾಡಿ ಜ್ಯೋತಿಷ್ಯದ ಹಿಂದೆ ಇರುವ hypothesis ಗಳು ಸರಿಯೇ, ತಪ್ಪೇ ಎಂದು ಪರಿಶೀಲಿಸುವ ಗೋಜಿಗೇ ಹೋಗಿಲ್ಲ. ಹಾಗಾಗಿ ಜ್ಯೋತಿಷ್ಯವು ವಿಜ್ಞಾನ ಅಲ್ಲ ಎಂಬ ನನ್ನ ನಿಲುವು ಸಮರ್ಥಿತ ಎನಿಸುತ್ತದೆ.
ಉ:
ಈಗ ಎಸ್.ಕೆ.ಜೈನರ ಭವಿಷ್ಯವಾಣಿಯನ್ನೇ ತೆಗೆದುಕೊಳ್ಳೋಣ - ಕೆಳಗಿನ ಸಾಲುಗಳು ದಟ್ಸ್ ಕನ್ನಡ ವರದಿಯಿಂದ:
"ಚಂದ್ರಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸಿರುವುದರಿಂದ ಅದರ ಪ್ರಭಾವ ಸೂರ್ಯ,ಬುಧ,ಶುಕ್ರ,ಶನಿ,ಕೇತು,ರಾಹು ಮತ್ತು ಚಂದ್ರ ಗ್ರಹಗಳ ಮೇಲೆ ಉಂಟಾಗಲಿದೆ.
ಹಾಗೆಯೇ ಮೇಷ,ಮಿಥುನ,ಸಿಂಹ ಮತ್ತು ತುಲಾ ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ವೃಷಭ,ಧನುಸ್ಸು ಹಾಗೂ ಮಕರ ರಾಶಿಗಳ ಮೇಲೆ ಚಂದ್ರಗ್ರಹಣ ಯಾವುದೇ ಪ್ರಭಾವ ಬೀರುವುದಿಲ್ಲ. ಕುಂಭ,ಕನ್ಯಾ,ವೃಶ್ಚಿಕ ಮತ್ತು ಮೀನ ರಾಶಿಗಳ ಮೇಲೆ ಋಣಾತ್ಮಕ ಪರಿಣಾಗಳು ಉಂಟಾಗುವುದಾಗಿ ಎಸ್.ಕೆ.ಜೈನ್ ತಿಳಿಸಿದ್ದಾರೆ."
ಚಂದ್ರ ಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುವುದು ಅಂದ್ರೆ ಏನು ತಿಳಿಯೋಣ. ಆಕಾಶವನ್ನ ಹನ್ನೆರಡು ಭಾಗ ಮಾಡಿದಾರೆ. ಅದರಲ್ಲೊಂದು ಕುಂಭ. ನಮ್ಮ ಮನೆ ಹನುಮಂತನಗರದಲ್ಲಿದೆ ಅಂದ್ರೆ ಹುಡುಕೋದು ಸುಲಭವೋ? ಇಲ್ಲ ಹನುಮಂತ ನಗರ ಹದಿನೇಳನೇ ಮೈನ್ ನಲ್ಲಿ, ಅಥವಾ ಹತ್ತೊಂಬತ್ತನೇ ಮೈನ್ ನಲ್ಲಿದೆ ಅಂದ್ರೆ ಹುಡುಕೋದು ಸುಲಭವೋ?
ಚಂದ್ರ ಇಂಥ ರಾಶಿಯಲ್ಲಿದೆ ಅನ್ನೋದು ಕೂಡ ಹೀಗೆ ಒಂದು ಅಡ್ರೆಸ್ ತಿಳಿಸೋ ಅಂಥ ಸಂಗತಿ ಅಷ್ಟೇ.
ಇನ್ನು ಕುಂಭ ರಾಶಿಯವರು ಅಂದ್ರೆ ಯಾರು? ಸೂರ್ಯ ಕುಂಭದಲ್ಲಿದ್ದಾಗ ಹುಟ್ಟಿದ್ದವರು ಅಂತ್ಲೋ ಇಲ್ಲ ಚಂದ್ರ ಕುಂಭದಲ್ಲಿದ್ದಾಗ ಹುಟ್ದೋರು ಅಂತ್ಲೋ? (ಎರಡೂ ಪದ್ಧತಿಗಳು ರೂಢಿಯಲ್ಲಿದೆ)
ಅಲ್ಲದೆ ಕುಂಭ ರಾಶಿಯ ನಕ್ಷತ್ರಗಳಿಗೂ ಚಂದ್ರನಿಗೂ ಯಾವ ಸಂಬಂಧವೂ ಇಲ್ಲ (ನಿಜ ಹೇಳ್ಬೇಕಂದ್ರೆ. ಚಂದ್ರನಿಗೆ ಸಂಬಧ ಇರೋ ನಕ್ಷತ್ರ ಅಂದ್ರೆ ಸೂರ್ಯ ಮಾತ್ರ :) :) ) ಚಂದ್ರ ಒಂದು ನಾಕು ಲಕ್ಷ ಕಿಲೋಮೀಟರ್ ದೂರದಲ್ಲಿದ್ರೆ ಆ ಪಾಪದ ನಕ್ಷತ್ರಗಳೂ ಎಷ್ಟೋ ಲೈಟ್ ಇಯರ್ ದೂರದಲ್ಲಿವೆ.
ಮತ್ತೆ ಹನುಮಂತನಗರದ ಹೋಲಿಕೆಗೆ ಬರೋಣ. (ಊಹೆಗೆ) ಹನ್ನೆರಡನೇ ಕ್ರಾಸಿನ ಒಂದು ಮನೆಯಿಂದ ನೋಡಿದ್ರೆ, ಅವರ ಮನೆ ಮುಂದಿನ ತೆಂಗಿನ ಮರ ಕಾಣತ್ತೆ. ಅದರ ಹಿಂದೆ ರಾಮಾಂಜನೇಯ ದೇವಸ್ಥಾನದ ಮೇಲಿರೋ ಹನುಮಂತನ ವಿಗ್ರಹ ಕಾಣತ್ತೆ ಅಂದ್ಕೊಳಿ. ಆಗ ಆ ತೆಂಗಿನ ಮರ ಇರೋದು ಅವರ ಮನೆ ಮುಂದೋ, ಅಥ್ವಾ ಆಂಜನೇಯನ ವಿಗ್ರಹದ ಪಕ್ದಲ್ಲೋ? ಆ ಮರದಿಂದ ತೆಂಗಿನಕಾಯಿ ಬಿದ್ರೆ ಅದು ಇವರ ಮನೇಲಿ ಬೀಳತ್ತೋ ಇಲ್ಲ ಆಂಜನೇಯನ ತಲೆ ಮೇಲೆ ಬೀಳತ್ತೋ ನೀವೇ ಯೋಚಿಸಿ! ಅಥವಾ ಇನ್ನೂ ಸರಿಯಾಗಿ ಹೇಳ್ಬೇಕಾದ್ರೆ, ಇವತ್ತು ಇವರ ಮನೆ ಮುಂದಿನ ಮರದಿಂದ ಬೀಳೋ ತೆಂಗಿನಕಾಯಿ ಆ ದೇವಸ್ಥಾನದ ಪೌಳೀಲಿ ಹೋದವಾರ ಕೂತಿದ್ದವರ ಮೇಲೆ ಬೀಳತ್ತೋ? ( ಅದೇ ತಾನೆ ಕುಂಭರಾಶಿಯಲ್ಲಿ ಯಾವತ್ತೋ ಹುಟ್ಟಿದವರ ಹೋಲಿಕೆ!)
ಇನ್ನೂ ಹೇಳಬಹುದು ಬೇಕಾದಷ್ಟು. ಈಗ ಸದ್ಯಕ್ಕೆ ಇಷ್ಟಿರಲಿ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ:
ಚನ್ನಾಗೆ ತಿಳಿಸಿದ್ದೀರ.
ಜ್ಯೋತಿಷಿಗಳು ಖಗೋಳ ಶಾಸ್ತ್ರದ terminologyಯನ್ನೇ ಬಳಸಿ ಜ್ಯೋತಿಷ್ಯವು ಕೂಡಾ ಒಂದು ವಿಜ್ಞಾನ ಎಂಬ ಹುಸಿ ಭರವಸೆಯನ್ನು ಜನರಲ್ಲಿ ಹುಟ್ಟಿಸುತ್ತಿದ್ದಾರೆ ಎಂದು ನನ್ನ ನಂಬಿಕೆ.
ನೀವು ಮೇಲೆ ’ಜ್ಯೋತಿಷ್ಯ’ ಎನ್ನುವ ಪದವನ್ನು ’ಖಗೋಳ ಶಾಸ್ತ್ರ’ ಎಂಬುದನ್ನು ಸೂಚಿಸಲು ಬಳಸಿದ್ದೀರಿ ಎಂದು ನಿಮ್ಮ ಕಮೆಂಟನ್ನು ಮತ್ತೆ ಓದಿದಾಗ ತಿಳಿಯಿತು.
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಜೋತಿಶ್ಯ ವಿಜ್ನಾನ ಅನ್ನೋದಕ್ಕಿಂತ ಗಣಿತ ಅನ್ನೋದು ಮೇಲು...! :)
೨+೨ = ೪ ಅದಕ್ಕೆ ನಿಮಗೆ ಶನಿ ಕಾಟ.. ಅಂದ ಹಾಗೆ ಈ ಪಲಿತ :)
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಅದು ಹೇಗೆ? ನಾಳೆ ಬೆಳಗ್ಗೆ ಚಂದ್ರ ಇಷ್ಟು ಗಂಟೆಗೆ ಹುಟ್ಟುತ್ತಾನೆ ಎನ್ನುವುದು ಗಣಿತ/ವಿಜ್ಞಾನ ಸರಿ. ಆದರೆ ನಾಳೆ ಸೂರ್ಯ ಮೂಲಾ ನಕ್ಷತ್ರದಲ್ಲಿ ಇರೋದ್ರಿಂದ ಅವತ್ತು ಹುಟ್ಟೊ ಹೆಣ್ಣುಮಕ್ಕಳೆಲ್ಲ ತಂದೆ/ತಾಯಿ/ಅತ್ತೆ/ಮಾವಂದಿರನ್ನ ಸಾಯೋ ಹಾಗೆ ಮಾಡುತ್ತಾರೆ ಎನ್ನುವುದು ಗಣಿತವೇ?
Anyway, ನಾಳೆ ಸೂರ್ಯ, ಚಂದ್ರ ಹುಟ್ಟೊದನ್ನು ಹೆಳೊಕೆ ಜ್ಯೋತಿಷಿಗಳು ಯಾಕೆ? ಯಾವ ವಿಜ್ಞಾನಿಯನ್ನು ಕೇಳಿದರೂ ಹೇಳುತಾಳಲ್ಲ?
ಆಮೇಲೆ, ಪಲಿತ ಅಂದರೇನು? ಫಲಿತ ಅನ್ನೋದರ ತದ್ಭವದ ಹಾಗೆ ಬಳಸಿದ್ದೀರ? ನಿಮ್ಮ ಎರಡನೆ ವಾಕ್ಯ ನನಗೆ ಅರ್ಥ ಆಗಲಿಲ್ಲ.
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಗ್ರಹ, ಗ್ರಹಣ ಇತ್ಯಾದಿ ಹೇೞುವಾಗ ಜ್ಯೋತಿಷ್ಯ ವಿಜ್ಞಾನವೇ. ಆದರೆ ಫಲ ಹೇೞುವಾಗ ಕೇಳುವುದಕ್ಕಿಂತ ಕೇಳದಿರುವುದೇ ಒಳ್ಳೆಯದು. ಅದೃಷ್ಟ (ಕಾಣದಿರದ ವಿಷಯ) ಅದೃಷ್ಟವೇ ಇರಲಿ. ಯಾಕೆಂದರೆ ಮುಂದಾಗುವ ಒಳ್ಳೆಯ ವಿಷಯ ಕೇಳಲು ಮನಸ್ಸು ಮದ್ಯ ಕುಡಿಸಿದಂತೆ ಇನ್ನೂ ಮದ್ಯ ಸೇವಿಸಲುದ್ಯುಕ್ತವಾಗುತ್ತದೆ. ಆದರೆ ಕೆಟ್ಟದಱ ಬಗ್ಗೆ ಹೇೞಿದರೆ ತಲ್ಲೞಿಸುತ್ತದೆ. ಹೇಗೂ ಗೊತ್ತಿಲ್ಲ. ಒಳ್ಳೆಯದೋ ಕೆಟ್ಟದೋ ಈಗಲೇ ಆಗದುದಱ ಬಗ್ಗೆ ತಲೆ ಯಾಕೆ ಕೆಡಿಸಿಕೊಳ್ಳೋಣ. ಇದು ನನ್ನ ಅಂಬೋಣ. ಏನಂತೀರಾ?
ಉ: ಜ್ಯೋತಿಷ್ಯ..ವೈಜ್ಞಾನಿಕ ?
ರೀ ಹೞಗನ್ನಡದ ಕಂದ..
ಚೋತಿಶ್ಸ ಅಂದ್ರೆ ರೊಕ್ಕ ಲೆಕ್ಕ ತಿಳೀತೇನೂ!! :)
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಸಮ್ಮರ್ ಗ್ಲೋ ..
ನೀವು ಮಹೇಶರು ಬಳಸಿರುವ ಸ್ಮೈಲಿಗಳನ್ನು ಗಮನಿಸಲಿಲ್ಲ ಅನ್ನಿಸುತ್ತೆ.
ಸವಿತೃ
ಉ: ಜ್ಯೋತಿಷ್ಯ..ವೈಜ್ಞಾನಿಕ ?
ತಪ್ಪು ... :)
೪ + ೩ = ೭ ಅದಕ್ಕೆ ಒಂದು ಕೂಡಿದರೆ ಎಂಟು.
... ಅದಕ್ಕೆ ಏಳರಾಟದ ಶನಿ! :(
ನೋಡಿ..ಯಾರದ್ರೂ ಮೇಲಿನ "ಲೆಕ್ಕ" ವನ್ನು ತಪ್ಪು ಅಂತ ಪ್ರೂವ್ ಮಾಡಕ್ಕೆ ಆಗುತ್ತಾ! ;) ಹಾಗಾಗಿ ಜ್ಯೋತಿಷ್ಯ ಅಪ್ಪಟ ವೈಜ್ಞಾನಿಕ! :)
ಸವಿತೃ
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಜ್ಯೋತಿಷ್ಯ ನಮ್ಮ ಭವಿಷ್ಯದ ಬಗ್ಗೆ ಹೇಳುತ್ತೆ. ಅಷ್ಟೂ ಜನರ ಭವಿಷ್ಯನ ಬರೆದು, ಸರಿಯಾಗಿ maintain ಮಾಡೊಕ್ಕೆ ಆಗೋದು ದೇವರಿಗೆ ಮಾತ್ರ. ಆದಿಕ್ಕೆ ಅವ್ನು ಜೊತೆಗಿಟ್ಟುಕೊಂಡೆ ಮಾತಾಡೊಣ.
ಈ ಹುಟ್ಟು - ಸಾವಿನ processನ ಅವ್ನು ಹಿಂಗೆ ಬರದಿರಬಹುದು ಅಂತಾ ನನ್ನ ಊಹೆ:
೧. ಹಿಂದಿನ ಜನ್ಮದ ಪಾಪ ಪುಣ್ಯಗಳನ್ನ ಲೆಕ್ಕಹಾಕಿ, ಆ ದೇವರು ನಿರ್ದಿಷ್ಟ ಸಮಯದಲ್ಲಿ ನಮ್ಮನು ಮತ್ತೆ ಹುಟ್ಟಿಸ್ತಾನೆ. ಹುಟ್ಟಿದ ತಕ್ಷಣ ನಮ್ಮ "ಹಣೆ ಬರಹ" ಬರದು, ಚಿತ್ರಗುಪ್ತ೦ಗೆ ನೋಡ್ತಾ ಇರು ಅಂತ ಹೇಳಿ next ಮನುಷ್ಯನ್ನ ಹುಟ್ಟುಸಲಿಕ್ಕೆ ಹೋಕ್ತಾನೆ.
೨. ಚಿತ್ರಗುಪ್ತ ಲೆಕ್ಕ ಬರಿಯೋ ಹೊತ್ತಿಗೆ, ಜ್ಯೋತಿಷಿಗಳು ಜಾತಕ ಮಾಡಿ, ಚಿತ್ರಗುಪ್ತ ನ files ಕದ್ದು ನೊಡಕ್ಕೆ ಶುರು ಮಾಡುತ್ತಾರೆ.
೩. ನೆನಪಿರಲಿ, ನಾವು ಈ ಭೂಮಿಲಿ ಏನೇನು ಮಾಡ್ಬೇಕು ಅಂತ ದೆವರು ಮೊದ್ಲೆ decide ಮಾಡಿರ್ತಾನೆ ಹಾಗೂ ಅದು ಜ್ಯೋತಿಷಿಗಳಿಗೆ ಮಾತ್ರ ಗೊತ್ತಿರುತ್ತೆ.
೪. ಆದರೂ ನಮಗೆ ಪಾಪ-ಪುಣ್ಯ ಮಾಡಲು ಒಂದಷ್ಟು ಅವಕಾಶಗಳಿರುತ್ತವೆ.
ನಾವು ಬರೀ ಪುಣ್ಯನೇ ಮಾಡಿದರೆ, ಚಿತ್ರಗುಪ್ತ ಅದುನ್ನೆಲ್ಲ ಒಟ್ಟು ಸೇರ್ಸಿ ಹಳೇ ಪಾಪದ್ ಜೊತೆ substact ಮಾಡಿ, ಮೋಕ್ಷ ಕೊಡಿ ಅಂತ recommend ಮಾಡ್ತಾನೆ. minumum ಶಿಕ್ಷೆ ಆಗಿಯೇ ಆಗುತ್ತೆ ಬಿಡಿ (ಧರ್ಮರಾಯನಿಗೆ ಅದಂತೆ).
ಬರೀ ಪಾಪನೇ ಮಾಡಿದ್ರೆ ಇನ್ನೊಂದು ಹತ್ತು ಜನ್ಮ ಹುಟ್ಟೋದ೦ತು ಗ್ಯಾರಂಟಿ. ಹೆಚ್ಚಿನ ಬಾರಿ ಈಗಿನ ಪಾಪಕ್ಕೆ ಮುಂದಿನ ಜನ್ಮದಲ್ಲಿ ಶಿಕ್ಷೆ ಆಗುತ್ತೆ !!!! (ನಾವು, ನೀವು, ಲಾಲು ಪ್ರಸಾದ್ ಈ ಕೆಟೆಗರೀ). ಕೆಲವೇ ಕೇಸುಗಳಲ್ಲಿ (ಪಾಪದ ಕೊಡ ತುಂಬಿದ್ದರೆ) ಈ ಜನ್ಮದಲ್ಲಿ ಶಿಕ್ಷೆಯಾಗುತ್ತದೆ. ಉದಾಹರಣೆ: ಸದ್ದಾ೦ ಹುಸೇನ್. (ಇಲ್ಲಿ "ಅಲ್ಲ" ಬರೆದ ಜಾತಕ "ಏಸು"ವಿನಿಂದ ಮಾರ್ಪಾಡಾಗಿದ್ದು ಬೇರೇ ವಿಷಯ).
ಕೆಲವೊಮ್ಮೆ ಪಾಪ-ಪುಣ್ಯ ಮಾಡಕ್ಕೂ time ಕೊಡಲ್ಲ ಆ ದೆವ್ರು. ಹುಟ್ಟುಸ್ತಾನೆ, ಮೂರೆ ನಿಮಿಷದಲ್ಲಿ ಸಾಯಿಸಿಯೂ ಬಿಡ್ತಾನೆ.
೫. ನೀವು ಏನೇ ಮಾಡಿ ಚಿತ್ರಗುಪ್ತ ನಿಮ್ಮ tally recordನ update ಮಾಡ್ತಾನೇ ಇರ್ತಾನೆ. ಖುಷಿ ವಿಷಯ ಅಂದ್ರೆ ಅವ್ನ ಲೆಕ್ಕನ ಇಲ್ಲಿಂದಲೇ ತೆಗೇಸಿ ನೋಡಬಹುದು. ಲೆಕ್ಕ ತುಂಬಾ nagative ಆಗಿದ್ರೆ ಹೋಮ-ಹವನ, ಜಪ-ತಪ ಮಾಡಿದ್ರೆ ಆಯ್ತು. ಪಾಪ ಎಲ್ಲ nullify ಆಗುತ್ತೆ. ದೇವ್ರಿಗೆ ಲಂಚ ಕೊಟ್ಟು ಅವ್ನ ಸ್ವಂತ planನ್ನೇ ಬದಲಾಯಿಸಬಹುದು.
೬. But ಎಷ್ಟೇ ಲಂಚ ಕೊಟ್ರೂ ಕೊನೆಗೂ ಸಾವು ಬಂದೆ ಬರುತ್ತೆ.
ಜ್ಯೋತಿಷ್ಯ ಚರ್ಚಿತವಾಗುವುದು ೪ ನೇ ಪಾಯಂಟ್ ನಲ್ಲಿ. ನಮ್ಮ ಬದುಕು ಪೂರ್ತಿ ಪೂರ್ವ ನಿರ್ದರಿತವಲ್ಲ (ನಾವೂ ಬದಲಿಸಬಹುದು) ಅ೦ತಾದ್ರೆ, ಬರೀ ಹಿಂದಿನ ಜನ್ಮದ ಪಾಪನ ಮಾತ್ರ ಪರಿಗಣಿಸಿ (ಹುಟ್ಟಿದ ಸಮಯ ಮಾತ್ರ ಪರಿಗಣಿಸಿ) ತಯಾರಾದ ಜಾತಕ waste ಎಂದಾಗುತ್ತದೆ. ಎಲ್ಲ ಮೊದ್ಲೆ define ಆಗಿತ್ತು ಅಂತ ಆದ್ರೆ ಹೋಮ-ಹವನ ಗಳೆಲ್ಲಾ ಶಕ್ತಿ ಹೀನವಾಗುತ್ತವೆ.
ಕೊನೆಯದಾಗಿ, ನಮ್ಮ ಹುಟ್ಟಿಸಿ, ಬೆಳೆಸಿ ಸಾಯುವವವರೆಗೂ ಎಲ್ಲಾ ವಿದದಲ್ಲೂ control ಮಾಡುವ ಆ ದೇವರು, ಚಿತ್ರಗುಪ್ತನ ಟ್ಯಾಲಿಗೆ ಅಷ್ಟು ಸುಲಭವಾಗಿ access ಕೊಟ್ಟಿಲ್ಲ ಅನ್ನಿಸುತ್ತೆ. ಅದೂ ನಮ್ಮಂತೆಯೇ ದಿನಕ್ಕೆ ನೂರು ತಪ್ಪು ಮಾಡುವ ಜ್ಯೋತಿಷಿಗಳಿಗೆ..... ಸುಳ್ಳು ಬಿಡಿ.
ಜ್ಯೋತಿಷ್ಯದ ಫಲ ಭಾಗ ತರ್ಕಕ್ಕೂ ಬಾರದ್ದು, ಆದ್ದರಿಂದ ಇದು ವಿಜ್ನಾನವಾ ಅಂತ ಯೋಚಿಸಬೇಕಾಗಿಲ್ಲ.
-Yogi