ಪಡು
ಪಡು ಇದಕ್ಕೆ ಸಾಕಷ್ಟು ಅರ್ಥಗಳಿವೆ.
೧) ಪಡು=ಮಲಗು, ಸೂರ್ಯ ಪಡುವ ದಿಕ್ಕು ಪಡುವಲು
ಪಡಸಾಲೆ, ಪಡುಕೋಣೆ=ಮಲಗುವ ಕೊಠಡಿ
ಪೞ್ಕೆ=ಪಕ್ಕೆ= ಮಲಗುವ ಮಗ್ಗುಲು ಮನುಷ್ಯ ಎಡ ಅಥವಾ ಬಲಮಗ್ಗುಲಲ್ಲೆ ಮಲಗುವುದಱಿಂದ ಪೞ್ಕೆ(ಪಕ್ಕೆ)
ಹಾಗೆಯೇ ಪೞ್ಕೆಲುಬು=ಪಕ್ಕೆಲುಬು
೨) ಪಡು=ಅನುಭವಿಸು, ಹೊಂದು
ಉದಾ:- ಅವನು ಸಂತೋಷ ಪಟ್ಟನು. ಅವನು ದುಃಖ ಪಟ್ಟನು
ಭಾವನಾಮ ಪಾಡು=ಅನುಭವ
೩) ಪಡು=ಸಂಭೋಗಿಸು (ಹೊಸಗನ್ನಡದಲ್ಲಿ ಹಡು)
ಎಲ್ಲವುದಱಗಳ ಭೂತಕೃದ್ವಾಚಿ ಪಟ್ಟು (ಹೊಸಗನ್ನಡದಲ್ಲಿ ಹಡುವಿಗೆ ರೂಪ ಹಟ್ಟು)
ವರ್ತಮಾನಕೃದ್ವಾಚಿ ಪಡುವ( ’ಹಡು’ಗೆ ಹಡುವ)
- Login or register to post comments
- 314 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಪಡು
ಹಾ! ಇನ್ನೊಂದು ವಿಷಯ ಕರ್ಮಣಿ ಪ್ರಯೋಗದಲ್ಲಿ ಪಡು=ಬಲಿಯಾಗು, ವಶವಾಗು, ಒಳಗಾಗು ಎಂಬರ್ಥದಲ್ಲಿ ಬೞಕೆಯಾಗುತ್ತದೆ.
ಉದಾಹರಣೆ: ನನ್ನಿಂದ ಹಣ್ಣು ತಿನ್ನಲ್ಪಡುತ್ತದೆ ಅಥವಾ ತಿನೆ ಪಡುತ್ತದೆ. ಎಂದಾಗ ನನ್ನ ತಿನ್ನುವ ಕ್ರಿಯೆಗೆ ಹಣ್ಣು ವಶವಾಗುತ್ತದೆ ಅಥ್ವವಾ ಬಲಿಯಾಗುತ್ತದೆ ಎಂಬರ್ಥ ಬರುತ್ತದೆ.
ಉ: ಪಡು
ಕನ್ನಡದಲ್ಲಿ ಕರ್ಮಣಿ, ಕರ್ತರಿ ಎಂಬ ಪ್ರಯೋಗಗಳಿಲ್ಲ!!
ರಾಮ ರಾವಣನನ್ನು ಕೊಂದನು
ರಾವಣನನ್ನು ರಾಮ ಕೊಂದನು.. ಹೀಗೆ ನಾವ್ ಸಬ್ಟೆಕ್ಟ್ ಮತ್ತು ಆಬ್ಜೆಕ್ಟ್‌ಗಳ ಒತ್ತು ತೋರುವುದು..
ಮಾಡಲ್ಪಟ್ಟಿತು ಇದು ಮಾತಲ್ಲಾಗಲಿ, ಹಳಗನ್ನಡದಲ್ಲಾಗಲಿ ಇರದ ಬಳಕೆ..
ಉ: ಪಡು
ಇಲ್ಲ. ಹೞಗನ್ನಡದಲ್ಲಿ ಸಂಸ್ಕೃತದವರನ್ನನುಸರಿಸಿ ತಿನ್ನಲ್ಪಟ್ಟು, ತಿನೆಪಟ್ಟೊನಾಗಿ ಈ ತೆಱನ ಕರ್ಮಣಿ ಪ್ರಯೋಗಗಳಿವೆ. ಕನ್ನಡಕ್ಕಿವು ಸಹಜವಲ್ಲವೆನ್ನುವುದನ್ನು ನಾನೂ ಒಪ್ಪುತ್ತೇನೆ.