ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ನೆಗೞ್

August 20, 2008 - 4:52pm — kannadakanda

ನೆಗೞ್=ಪ್ರಸಿದ್ಧಿ ಪಡೆ, ಉದ್ಯೋಗದಲ್ಲಿರು, ಹೆಸರು ಪಡೆ.
ನೆಗೞ್ದ ಕನ್ನಡನಾಡೊಳ್ ಎಣಿಕೆಗಳವಲ್ಲದ ಕಬ್ಬಿಗರ್.
ಭಾವನಾಮ ನೆಗೞ್ತೆ

ನೆಗೞ್(ನಾಮಪದ)=ಮೊಸಳೆ

ಭೂತಕೃದ್ವಾಚಿ ನೆಗೞ್ದು ಹೊಸಗನ್ನಡದಲ್ಲಿ ನೆಗೞಿ
ವರ್ತಮಾನಕೃದ್ವಾಚಿ ನೆಗೞ್ವ ಹೊಸಗನ್ನಡದಲ್ಲಿ ನೆಗೞುವ

ಯಾಕೋ ಈ ಪದ ಹೊಸಗನ್ನಡಿಗರು ಬೞಸುತ್ತಿಲ್ಲ.

‹ ನೇರ್, ನೇರ
  • ದಿನಕ್ಕೊಂದು ಪದ
~.~
  • Login or register to post comments
  • 297 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2008 - 8:56pm — ASHOKKUMAR

ಉ: ನೆಗೞ್

ASHOKKUMAR's picture

ತಾವು ೞ್ ಕಾರಣ ಸಾಕಷ್ಟು ನೆಗೞ್ ಪಡೆದಿರುವಿರಿ. ಸರಿಯೇ? Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 10:04pm — hamsanandi

ಉ:

hamsanandi's picture

ನನಗೇಕೋ ೞ್ ಬಳಸಲು ಹಿಂಜರಿಕೆಯೇ. ಆ ಪದಗಳನ್ನೆಲ್ಲ ’ಳ’ ಬಳಸಿಯೇ ಹೇಳುವುದು ನನಗೆ ಸುಲಭ.

ಆದರೂ ಕನ್ನಡ ಕಂದರು ಒಳ್ಳೆ ಕನ್ನಡ ಹೇಳಿಕೊಡುವವರಲ್ಲಿ ನೆಗಳ್ಪಟ್ಟವರು ಅಂತ ಹೇಳಲು ಸಂತೋಷವಾಗುತ್ತೆ Smiling :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 6:42am — mahesha

ಉ:

mahesha's picture

ಹು

ನೆಗಳು ಎಂದು ವಸಗನ್ನಡ ರೂಪದಲ್ಲಿ ಬಳಸುವುದೇ ಸಲೀಸು. ತಕ್ಕದ್ದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 7:19am — Sunil Jayaprakash

ಉ:

Sunil Jayaprakash's picture

ದೊಣ್ಣೆನಾಯಕನ ಅಪ್ಪಣೆ !!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 7:34am — mahesha

ಉ:

mahesha's picture

ಹಂಸಾನಂದಿಯವರಿಗೆ ಹೇಳಿದ್ದಾ Smiling

ಸರಿಯಾಗಿ ಓದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:22am — Sunil Jayaprakash

ಉ:

Sunil Jayaprakash's picture

ಕಾಮೆಂಟ್ ಯಾರಡಿ ಇದೆ ಎಂಬುದನ್ನು ಸರಿಯಾಗಿ ಕಣ್ ಬಿಟ್ಟು ನೋಡಿ ಮಾಯ್ಸ್. ತಮಗೆ ಕಣ್ಣಯಿಬು ಇರಲಿಲ್ಲ ಅಲ್ವಾ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 7:24am — Sunil Jayaprakash

ಉ: ನೆಗೞ್

Sunil Jayaprakash's picture

@ಅಶೋಕ್, ಅದು ಹಾಗಲ್ಲ, ತಾವು ೞ್ ಕಾರಣ ಸಾಕಷ್ಟು ನೆಗೞ್ದಿದ್ದೀರಿ.
@ಕನ್ನಡಕಂದ, "ನೆಗೞ್ದಿದ್ದೀರಿ" ಎಂಬುದು ನೆಗದಿದ್ದೀರಿ ಅಂತಲೇ ಆಗತ್ತೆ ಅಲ್ವಾ. ಳ್/ಲ್/ೞ್ ಬಿದ್ದೋಗಿ.

ನೆಗೆ - ಏರು
ನೆಗ - ಪ್ರಸಿದ್ಧಿ ಹೊಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 9:23am — ASHOKKUMAR

ಉ: ನೆಗೞ್

ASHOKKUMAR's picture

ನೆಗೆದಿದ್ದೀರಿ ಆಗದಿದ್ರೆ ಸಾಕು Smiling
ಹಳೆಗನ್ನಡದ ರ್‍ ಯಾವುದು ಳ್ ಯಾವುದು ತಿಳಿಯೋದಿಲ್ಲ!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 12:51pm — kannadakanda

ಉ: ನೆಗೞ್

kannadakanda's picture

ಹೞಗನ್ನಡ ಕಬ್ಬನರೆದಱಿಯಬೇಕು ಅದಱ ರಸವ.

ಅರೆದು=ಕಬ್ಬಿನಂತೆ ಅರೆದು=ಜಜ್ಜಿ
ರಸವ ಅಱಿಯಬೇಕು=ರುಚಿ ನೋಡಿ ಅಱಿಯಬೇಕು (ತಿಳಿಯಬೇಕು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 12:32pm — kannadakanda

ಉ: ನೆಗೞ್

kannadakanda's picture

’ಅದೇ ನನ್ನ ನೆಗೞ್ತೆ (ಕೆಲಸ)’ ಎಂದುಂ ಕೆಲರ್ ಪೇೞ್ವರ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 4:53am — kannadakanda

ಉ: ನೆಗೞ್

kannadakanda's picture

ಕಂದಮಿೞ್‍ ಕನ್ನಡಿಗರಾಗಿರುವ ನೀವು ಱ ಮತ್ತು ೞ ಗೆ ಹೆದಱಲೇ ಕೂಡದು. ನೋಡಿ ತಮಿೞಿನ ಹಾಡಿ ಹೊಗೞಿ ಕೀರ್ತಿಸುವ ನಿಗೞ್ಚಿಗಳ್ಗೂ ಕನ್ನಡದ ನೆಗೞ್ತೆಗೂ ಅದೇ ಸಂಬಂಧವುಂಟು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 7:55am — hamsanandi

ಉ: ನೆಗೞ್

hamsanandi's picture

ನೀವು ಹೇಳಿದ್ದರಲ್ಲಿ ಒಂದು ತಪ್ಪಿತು ಕನ್ನಡ ಕಂದರೆ.

ನಾನು ಕನ್ನಡಿಗ - ಆದರೆ ಸ್ವಲ್ಪ ತಮಿಳೂ ಬರುತ್ತೆ.

ಮತ್ತೆ ನಿಗೞ್ಚಿ ಅನ್ನುವುದನ್ನು ತಮಿಳಲ್ಲಿ ಕಾರ್ಯಕ್ರಮ ಅನ್ನುವ ರೀತಿ ಬಳಸುವುದನ್ನು ಮಾತ್ರ ನೋಡಿದ್ದೇನೆ. ಪ್ರಖ್ಯಾತ, ಕೀರ್ತಿ ಅನ್ನೋ ಬಳಕೆ ನಾನು ಕಂಡಿಲ್ಲ. ಇದರ ಒಳಗುಟ್ಟೇನು ಗೊತ್ತೇ ನಿಮಗೆ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:08am — mahesha

ಉ: ನೆಗೞ್

mahesha's picture

ಹಂಸಾನಂದಿಗಳೇ

ನೆಗಳ್ ಇದನ್ನ ಕವಿರಾಜಮಾರ್ಗದಲ್ಲಿ ಪ್ರಸಿದ್ದ ಎಂದು ಬಳಕೆಯಾಗಿದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:24am — Sunil Jayaprakash

ಉ: ನೆಗೞ್

Sunil Jayaprakash's picture

ನೆಗಳ್ಧಿನ್ನೆನ್ನೊಳಂ ಭರತೇಶಂ - ಅಂತ ಭರತೇಶ ವೈಭವದಲ್ಲಿ ಓದಿದ್ದ ನೆನಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 12:30pm — kannadakanda

ಉ: ನೆಗೞ್

kannadakanda's picture

ನಿಗೞ್=ಹೇೞು, ಹಾಡು, ಹೊಗೞು ನಿಗೞ್ಚಿಗಳ್=ಹಾಡುಗಳು. ನಿಗೞ್=ಉಜ್ಜುಗ (ಉದ್ಯೋಗ)ಎಂಬರ್ಥದಲ್ಲಿ ಕಾರ್ಯಕ್ರಮ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 10:21am — mahesha

ಉ: ನೆಗೞ್

mahesha's picture

ಕಂದಮಿಳ್ ಅಂದರೇನು?
ಕಂಪಿನ ತಮಿಳೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 12:28pm — kannadakanda

ಉ: ನೆಗೞ್

kannadakanda's picture

ಕಂಪುಳ್ಳ ಕನ್ನುಡಿ ಕನ್ನಡ ಬೆರೆತ ತಮಿೞ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 1:03pm — mahesha

ಉ: ನೆಗೞ್

mahesha's picture

ಅದು ಕಂಗನ್ನುಡಿಗನ್ನಡದಮಿಳ್

ನಡುವಿನ ಕನ್ನುಡಿ ಕನ್ನಡ ಎಲ್ಲಿ ಎಗರಿಸಿದಿರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 1:03pm — kannadakanda

ಉ: ನೆಗೞ್

kannadakanda's picture

ನೆಗೞ್ ಬೞಸಿ ಹಂಸಾನಂದಿಯರು ಅಶೋಕ್ ಕೊಟ್ಟ ಉದಾಹರಣೆ ಸರಿಯಿದೆ.

ನೆಗೞ್ದ ಜೈಮಿನಿಯಂ ನೆಗೞೊಂದು ಕೊಂದಿತೆಂದೊಂದು ಕತೆ. ಇದೂ ಸರಿ ಇಲ್ಲಿಯ ಎರಡನೆಯ ನೆಗೞ್=ಮೊಸಳೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 10:50pm — kannadakanda

ಉ: ನೆಗೞ್

kannadakanda's picture

ನೆಗೞ್=ಪ್ರಸ್ತುತದಲ್ಲಿ ಉಪಯೋಗಕ್ಕೆ ಬರುವ ಕೆಲಸಕ್ಕೆ ಬರುವ ಚಾಲ್ತಿಯಲ್ಲಿರುವ ವಿಷಯ. ಹಾಗಾಗಿ ಪ್ರಸಿದ್ಧ, ಉದ್ಯೋಗದಲ್ಲಿರು, ಚಾಲ್ತಿಯಲ್ಲಿರು ಎಲ್ಲಾ ಅರ್ಥಗಳು ಬರುತ್ತವೆ.

ಪಂಪನ ಈ ಪದ್ಯ ನೋಡಿ

ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಣ್ಮೆ ಮುನ್ನೆ ನೀ-
ಮೆನಗಿದನೇಕೆ ಪೇೞ್ದಿರೊ ನೆಗೞ್ತೆ ಪೊಗೞ್ತೆಯನಾಂಪಿನಂ ಸುಯೋ-
ಧನನೆನಗೊಳ್ಳಿಕೆಯ್ದ ಕೃತಮಂ ಪೆಱಗಿಕ್ಕಿ ನೆಗೞ್ತೆ ಮಾಸೆ ನ-
ಣ್ಪಿನ ನೆವದಿಂದೆ ಪಾಂಡವರನಾನೊಳವೊಕ್ಕೊಡೆ ನೀಮೆ ಪೇಸಿರೇ||

ಕೃಷ್ಣನು ಕರ್ಣನನ್ನು ಪಾಂಡವರ ಕಡೆ ಸೆಳೆಯಲು ದುರ್ಯೋಧನನು ನಿನ್ನನ್ನು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಅವನ ಬಗ್ಗೆ ಸುಳ್ಳು ಕತೆ ಕಟ್ಟಿ ಹೇೞಿದಾಗ ಕರ್ಣನು ನನಗೆ ಉದ್ಯೋಗವನ್ನು (ಅಂಗಾಧಿಪತಿಯ ಪಟ್ತ) ಕೀರ್ತಿಯನ್ನು ಕೊಟ್ಟ ದುರ್ಯೋಧನನನ್ನು ನಂಟುತನವೆಂದು ಪಾಂಡವರೊಡನೆ ಸೇರಿದ ಮೇಲೆ ನನ್ನ ಕೀರ್ತಿ(ಚಾಲ್ತಿಯಲ್ಲಿರುವ ಅಂಗಾಧಿಪತ್ಯ) ಮಾಸಿದಾಗ ನೀವೇ ನನ್ನ ಮೇಲೆ ಹೇಸಿಕೊಳ್ಳುವುದಿಲ್ಲವೇ ಎಂದು ಮಱು ಪ್ರಶ್ನಿಸುತ್ತಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಡು
  • ಬಾಳ್, ಬಾೞ್
  • ಮಾಣ್(ಮಾಣು)
  • ಮೊರೆ, ಮೊಱೆ
  • ಆಳ್ ಮತ್ತು ಆೞ್
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator