~
ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಹರಿಪ್ರಸಾದ್ ನಾಡಿಗರು ಅಱುಹಿದ ಱಕಾರಕ್ಕೆ ರಕಾರ ಬೞಸಿದ ವಚನಗಳ ಮೂಲರೂಪ ಕೊಡುತ್ತಿದ್ದೇನೆ
ಅಱಿವನಱಿಯದ ಗುರುವು | ಪರಿವನಱಿಯದ ಶಿಷ್ಯ |
ಸಂದೆರಡು ವರ್ಗವಱಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ
ಮೂಱಿಟ್ಟರಾಱಕ್ಕು | ಆಱು ಹನ್ನೆರಡಕ್ಕು |
ಹೇಱುವ ಗೊಡ್ಡು ಹಯನಕ್ಕು ಗುರುಕರುಣ |
ತೋಱುವ ದಿನಕೆ ಸರ್ವಜ್ಞ
ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆಱೆವ ಬ್ರಹ್ಮಾಂಡದೊಳಹೊಱಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||
ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮೊಱೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||
ಹಂದಿ ಚಂದನದ ಸುಗಂಧವನು ಬಲ್ಲುದೆ?
ಒಂದನು ತಿಳಿಯಲಱಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

- Login or register to post comments
- 273 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನೊಂದು ಮೂಲರೂಪ ಈ ರೀತಿಯಿದೆ
ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆಱೆವ ಬ್ರಹ್ಮಾಂಡದೊಳಹೊಱಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||