ಪಂದಿ/ಹಂದಿ, ಪಂದೆ/ಹಂದೆ
ಹಂದಿ(ಪಂದಿ)= ಹೆಚ್ಚಾಗಿ ಹೊಲಸು ತಿನ್ನುವ, ಎಲ್ಲವನ್ನು ತಿನ್ನುವ ಪ್ರಾಣಿ
ಉದಾಹರಣೆಗೆ:
ಹರಿ ಹಂದಿಯಾದಂದು ಹರ ತಿರಿದುಂಡಂದು ಹರನಜನ ಶಿರವನರಿ-
ದಂದು ಲಿಖಿತವನು ಬರೆದವರಾರು?...........
...... ಸರ್ವಜ್ಞ
ಹಂದೆ(ಪಂದೆ)= ಹೇಡಿ
ಬಸವಣ್ಣನವರ ವಚನ ನೋಡಿ:
ಅರ್ಥರೇಖೆಯಿದ್ದಲ್ಲಿ ಫಲವೇನು?
ಆಯುಷ್ಯರೇಖೆಯಿಲ್ಲದನ್ನಕ್ಕ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
ನಮ್ಮ ಕೂಡಲಸಂಗನ ಶರಣನಱಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ಶಿವಪಥವನಱಿಯದನ್ನಕ್ಕ.
- Login or register to post comments
- 368 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಪಂದಿ/ಹಂದಿ, ಪಂದೆ/ಹಂದೆ
ದಕ್ಷಿಣ ಕನ್ನಡದ ಕೂಟ ಬ್ರಾಹ್ಮಣರು, ಹಂದೆ ಅಂತ ಇಟ್ಕೊಳ್ತಾರಲ್ಲ, ಅದರ ಹಿನ್ನೆಲೆ ಏನು ಗೊತ್ತಾ ?
ಉ: ಪಂದಿ/ಹಂದಿ, ಪಂದೆ/ಹಂದೆ
ಸುನೀಲ್,
ಅದು "ಕೋಟ ಬ್ರಾಹ್ಮಣರು" - ಕೂಟ ಮಹಾಜಗತ್ತಿನವರು. (ಖೋಟ ಅಲ್ಲ :) ) ಕೋಟ ಎಂಬ ಕುಂದಾಪುರದ ಬಳಿಯ ಊರು. "ಕೂಟ ಬ್ರಾಹ್ಮಣರು" ಅನ್ನುವುದು ಕೇಳಿಲ್ಲ.
ಹಂದೆ, ಉರಾಳ, ಐತಾಳ, ನಾವಡ, ಮಯ್ಯ ಎಂದೆಲ್ಲಾ ಮನೆತನ/ಕುಟುಂಬದ ಹೆಸರುಗಳು.
ಹಂದೆ ಹೆಸರು ಹೇಡಿಯಿಂದ ಬಂದಿರಬಹುದೇನೋ, ಗೊತ್ತಿಲ್ಲ.
ಉ: ಪಂದಿ/ಹಂದಿ, ಪಂದೆ/ಹಂದೆ
ಅನಿವಾಸಿ ನನ್ನಿ, ನೀವು ಹೇಳೋದು ಸರಿಯಾಗಿದೆ. ಕೂಟ ಮಹಾಸಂಸ್ಥಾನ. ಕೂಟಸ್ಥರು. ನಾನು ಕುಂದಾಪುರದ ಬಳಿಯಿರುವ "ಕೋಟ" ನೋಡಿದ್ದೇನೆ. ಆ ಊರಿಗೆ ಹೋಗುವ ದಾರಿಯಲ್ಲಿ, "ಹಲವು ಮಕ್ಕಳ ತಾಯಿ" ಎಂಬ ಒಂದು ದೇವಸ್ಥಾನ ಸಿಗುತ್ತದೆ. ಹಾಗೆಯೇ ನಮ್ಮ ಶಿವರಾಮ ಕಾರಂತರ ಮನೆಯೂ ಸಿಗುತ್ತದೆ.
ಆದರೆ ಬಸವನಗುಡಿಯಲ್ಲಿ "ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಲಿ"ಯವರು ನಡೆಸುವ ಒಂದು ಮದುವೆಮಂಟಪ ಇದೆ.