ಕುಱಿ, ಗುಱಿ
ಕುಱಿ(ಕ್ರಿಯಾಪದ)=ಒಂದನ್ನು ಗಮನದಲ್ಲಿಡು, ಲಕ್ಷ್ಯದಲ್ಲಿಡು.
ಉದಾಹರಣೆ: ಕನ್ನಡವನ್ನು ಕುಱಿತು ಮಾತನಾಡು.
ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್.
ಕುಱಿತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್.
ಕುಱಿ=ಗುಱಿ ನಾಮಪದವಾಗಿ ಬೞಸಬಹುದಾದರೂ ಗುಱಿ ಶಬ್ದ ಸಾಮಾನ್ಯವಾಗಿ ನಾಮಪದವಾಗಿ ಬೞಕೆ ಹೆಚ್ಚು.
ಗುಱಿ=ಧ್ಯೇಯ. ಗುಱಿಯಿಟ್ಟು ಹೊಡೆ.
ಕೃದಂತ ಭಾವನಾಮಗಳು ಕುಱುಹು, ಕುಱಿಪು, ಗುಱುತು.
ಭೂತಕೃದ್ವಾಚಿ: ಕುಱಿತು
ವರ್ತಮಾನಕೃದ್ವಾಚಿ: ಕುಱಿವ/ಕುಱಿಯುವ
ಕುಱಿ(ನಾಮಪದ)=ಒಂದು ಜಾತಿಯ ಸಸ್ಯಾಹಾರಿ ಸಸ್ತನಿ.

- Login or register to post comments
- 163 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕುಱಿ, ಗುಱಿ
ಕುರಿ = ಒಂದು ಜಾತಿಯ ಗಿಡತಿನಿ ಮೊಲೆಣಿ
ಉ: ಕುಱಿ, ಗುಱಿ
ನೋಡಿ ಕುಱಿ(ನಾಮಪದ)=ಒಂದು ಜಾತಿಯ ಸಸ್ಯಾಹಾರಿ ಸಸ್ತನಿ. ಅದು ಕುರಿಯಲ್ಲ. ಕುಱಿ.
ಉ: ಕುಱಿ, ಗುಱಿ
ಕುರಿ ತಿನ್ನೋರನ್ನ ಒಮ್ಮೆ ಕೇಳಿ ಹೇಳ್ತೀನಿ
ಉ: ಕುಱಿ, ಗುಱಿ
ಕುಱಿಯನ್ನೇ ಕೇಳಿ. ಅದು ಸರಿಯಾಗಿ ನಾನು ಕುಱಿಯೆಂದೇ ಅಱಚೀತು.

ಉ: ಕುಱಿ, ಗುಱಿ
ಉ: ಕುಱಿ, ಗುಱಿ
ಇದು ಸರಿಯೇ. ಮಾನಿಸರೊಡನೆ ಸೇರಿದ್ದಕ್ಕೆ ಕುಱಿ ಮಮ್ಮಲಮಱುಗೀತು.