ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

August 22, 2008 - 7:51pm — Sunil Jayaprakash

ಈ ವೈದಿಕ ಧರ್ಮಕ್ಕೆ ನಂಟಾದ, "ಋಕ್ + ಯಜುರ್ + ಸಾಮವೇದಗಳ" ವಿಷಯ ಬಂದಾಗ ಎರಡು ಮಾತುಗಳು ಕೇಳಿಬರುತ್ತವೆ. ಅವೆಂದರೆ

೧. ವೇದಗಳು ಸ್ವಯಂವೇದ್ಯ.
೨. ವೇದಗಳು ಅಪೌರುಷೇಯ.

೧. ಸ್ವಯಂವೇದ್ಯ = "ಈ ವಸ್ತುವಿನ ವಿಮರ್ಶೆಯನ್ನು ಬೇರೆ ವಸ್ತುವಿನೊಡನೆ ಹೋಲಿಕೆ ಮಾಡದೆ, ಇದರ ವಿವರಣೆಯನ್ನು ಇದರ ಮೂಲಕವೇ ಪಡೆಯಬಹುದು" - ಈ ಅಂಶವೇನೋ ನನಗೆ ಅಷ್ಟು ಕಾಂಪ್ಲೆಕ್ಸಾಗಿ ಕಾಣಿಸುವುದಿಲ್ಲ, ಆದರೆ ಎರಡನೆಯ ವಿಷಯವಾದ

೨. ಅಪೌರುಷೇಯ = ನನಗೆ ಇದು ಇಲ್ಲಿಯವರೆಗೆ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ, ಈ ಪದ ವೇದಗಳಿಗೆ ಏಕೆ / ಹೇಗೆ ಅಂಟಿಕೊಂಡಿತು.

ಅಪೌರುಷೇಯ = "ಮನುಷ್ಯರು ಮಾಡಿದ್ದಲ್ಲ" / "ಕಲ್ಮಶವಾದದ್ದು ಇಲ್ಲದ್ದು" / ಹೇಗೆ ಇದನ್ನು ಅರ್ಥೈಸುವುದು ?

‹ ಈ ವಚನದ ಅರ್ಥ ಹೇಳಿ ನೋಡೋಣ ಮನ್ವಂತರ ಅಂದ್ರೇನು? ›
  • ತತ್ವಜ್ಞಾನ
~.~
  • Login or register to post comments
  • 333 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 23, 2008 - 4:01am — brahmana

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

brahmana's picture

ನನಗೆ ತಿಳಿದ ಮಟ್ಟಿಗೆ ಅದು ಹೀಗಿರಬಹುದು... ಇದು ನಾನು ರಾಮಕೃಷ್ಣ ವಿದ್ಯಾಶಾಲೆಯಲ್ಲಿದ್ದಾಗ ನಮ್ಮ ಸ್ವಾಮೀಜಿಯವರು ಹೇಳಿದ ಮಾತುಗಳನ್ನ ಅವಲಂಬಿಸಿದೆ

ವೇದಗಳನ್ನು ಜನ ಸಾಮಾನ್ಯರಿಗೆ ತಂದು ಕೊಟ್ಟವರು ಋಷಿಗಳು. ಆದ್ದರಿಂದ ಕೆಲವು ಜನರು ಋಷಿಗಳೇ ವೇದಗಳನ್ನು ರಚಿಸಿದರು ಅಂತ ತಪ್ಪಾಗಿ ತಿಳಿದಿದ್ದಾರೆ. (ಅಥವಾ ತಿಶಿದಿದ್ದರು). ಆದರೆ ಋಷಿಗಳು ವೇದಕರ್ತರಲ್ಲ ಅವರು ವೇದದೃಷ್ಚಾರರು (ಹಾಗೆ ಏನೋ) ಅಂತ ಹೇಳತಾರೆ. ಇಂತಹ ಸಂದೇಹವಿರಬಾರದೆಂದು ವೇದ ಅಪೌರುಷೇಯ ಅಂತ ಹೇಳಿರಬಹುದು.

ಇದಕ್ಕೆ ನನ್ನ ತರ್ಕ ಸೇರಿಸಿದರೆ, ವೇದ ಯಾರೋ ಒಬ್ಬರಿಂದ ಬಂದಿದ್ದು ಅಂತ ಅನ್ಕೊಂಡ್ರೆ ತಪ್ಪು ಅಂತ ತಿಳಿಸಲು ಇರಬಹುದು. ಆ ಯಾರೋ ಒಬ್ಬ ಯಾರೇ ಆಗಿರಲಿ -- ಬ್ರಹ್ಮನೋ, ಶಿವನೋ, ಬ್ರಹ್ಮನ್ -- ಯಾರೇ ಇದ್ದರೂ ಅವನನ್ನು ಪುರುಷ ಎಂದು ಸಂಬೋಧಿಸಬಹುದು. ಇದಕ್ಕೆ ಸಾಕ್ಷಿ ವೇದದಲ್ಲಿರುವ ಪುರುಷಸೂಕ್ತ.

ಆ ಪುರುಷಸೂಕ್ತದಲ್ಲಿ ಬರುವ ಪುರುಷನನ್ನು third person ಅಲ್ಲಿ ಹೇಳಿದ್ದಾರೆ. ಇದರಿಂದ ವೇದ ಭಗವಂತನಿಂದ ಬಂದಿಲ್ಲ ಅಂತ ಹೇಳಬಹುದು.

-- ಹರಿ ಓಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 12:33pm — Sunil Jayaprakash

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

Sunil Jayaprakash's picture

>> ಆದರೆ ಋಷಿಗಳು ವೇದಕರ್ತರಲ್ಲ ಅವರು ವೇದದೃಷ್ಚಾರರು (ಹಾಗೆ ಏನೋ) ಅಂತ ಹೇಳತಾರೆ

ಶ್ರೀ, ಅದು ಹೀಗೆ, "ಋಷಿಗಳು ದರ್ಶನ ಮಾಡಿದ್ದು" = "ಋಷಿಗಳಿಗೆ ಹೀಗೆ ಕಂಡಿತು". ಇಲ್ಲಿ ನನಗೆ ಇಷ್ಟವಾಗೋ ವಿಚಾರ ಅಂದ್ರೆ, "ಒಂದು ವೇಳೆ ಋಷಿಗಳಿಗೇ ಅದು ತಪ್ಪಾಗಿ ಕಂಡಿದ್ರೆ ?" ಅನ್ನೋ ಅನುಮಾನವನ್ನೂ ಹುಟ್ಟಿಹಾಕತ್ತೆ. ಅಂದ್ರೆ, "ವೇದದಲ್ಲಿ ಇರೋದೆಲ್ಲ ನಿಜ ಆಗಿರಲೇಬೇಕು ಅಂತ ಏನಿಲ್ಲ" ಎಂಬ ಅಭಿಪ್ರಾಯವನ್ನು ಈ "ವೈದಿಕ ದರ್ಶನ ಸಿದ್ಧಾಂತವೇ" ಮುಂದೆ ಇಡತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 11:09pm — brahmana

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

brahmana's picture

ನೀನು ಹೇಳಿದ್ದು ಸರಿ. ಋಷಿಗಳು ನೋಡಿದ್ದೆ ತಪ್ಪಾಗಿರದಹುದು. ಆದರೆ ಈ ರೀತಿಯ ವಿಚಾರಗಳು ಬಂದಾಗ ನನಗೆ ನನ್ನ physics ಸರ್ ಹೇಳಿದ ಮಾತು ನೆನಪಾಗುತ್ತದೆ. ಅದೇನೆಂದರೆ, ನಾವು ಯಾವಾಗಾದರೂ physicsನಲ್ಲಿ ಬರುವ ಬೇಸಿಕ್ defenitions ಬಗ್ಗೇನೆ ಪ್ರಶ್ನೆ ಮಾಡಿದಾಗ, ಅದು ತುಂಬಾನೇ ಕೇಳಿದಾಗ, ಅವರು ಹೀಗೆ ಹೇಳಿವರು..
"ದೊಡ್ಡ ವಿಜ್ಞಾನಿಗಳು ಹೇಳುವ ಮಾತುಗಳನ್ನ ಡೈರೋಕ್ಟಾಗಿ ಪ್ರಶ್ನಿಸಬೇಕೆಂದರೆ ನಾವು ಮೊದಲು ಅವರ ಲೆವಲ್ ಮುಟ್ಟಬೇಕು"... ಇದೇ ತರ್ಕ ಈ ವೇದದ ವಿಷಯದಲ್ಲಿ ಹಾಕಿದರೆ ಬರುವುದೇನೆಂದರೆ, ವೇದಗಳನ್ನ ಸರಿಯಾಗಿ ಸಂಪೂರ್ಣವಾಗಿ ಓದದೆ ಅವುಗಳ ಕ್ರೆಡಿಬಿಲಿಟಿ ಪ್ರಶ್ನಿಸಲು ನಾವು ಯೋಗ್ಯರಾಗಿದ್ದೀವಿ ಏನು ಅನ್ನುವ ಪ್ರಶ್ನೆ. ಇದಕ್ಕೆ ಉತ್ತರ ನನಗೆ ಸಿಕ್ಕಿಲ್ಲ.

-- ಹರಿ ಓಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2008 - 11:51pm — Sunil Jayaprakash

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

Sunil Jayaprakash's picture

ಹ್ಮ್..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 11:50am — mahesha

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

mahesha's picture

ವೇದ ಸೊಯಂ ವೇದ್ಯವೂ ಅಲ್ಲ ಅಪೌರುಶೇಯವೂ ಅಲ್ಲ..

ಅದೊಂದು ಮಾಮೂಲಿ ನಮ್ಮ ಹಳ್ಳಿ ಹಾಡಿನಂತಹ ಹಾಡು......

ಆದ್ರೆ ಅದರಲ್ಲಿ ಬರುವ ಯಪರಂತಪರ ಆದ್ಯಾತ್ಮ ಅನ್ನೋ ಸಂಗತಿಯನ್ನು ಕಂಡು ಒಬ್ಬ ಪಂಡಿತ "ಯಾವೋನೋ ಸಕ್ಕತ್ತಾ ಕುಡಿದು ಬರೆದಿರಬೇಕು ಒಂದಕ್ಕೊಂದು ನಂಟಿಲ್ಲ" ಎಂದೂ ಅಂದಿದ್ದಾರೆ..

ಹಾಗೆ ಕೆಲವು ವೇದದಲ್ಲಿ ಏನೋ ಗುಟ್ಟು ಅಡಗಿದೆ ಎಂದು ಕಲ್ಪಿಸಿಕೊಂಡು ಅದನ್ನು ಕಂಡು ಹೆದರಿಕೆ ಗವ್ರವ ಇಟ್ಟು ಕೊಂಡಿದ್ದಾರೆ..

ಇವೆರಡಲ್ಲಿ ಯಾವುದು ದಿಟ ಎಂದು ತಿಳಿಯಲು ಬಯಾಸಿಲ್ಲದ ಮನದವರು ವೇದವನ್ನು ಓದಿ ನೋಡಬೇಕು...!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 12:16pm — Sunil Jayaprakash

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

Sunil Jayaprakash's picture

ಅಣ್ಣಾ, ಕೈಮುಗಿಯುತ್ತಾ, ತಾವು ದಯವಿಟ್ಟು ಬೇರೆಯವರು ಬರೆಯುವುದನ್ನು ಸರಿಯಾಗಿ ಓದಿ. ಇಲ್ಲಿ ನಾನು ಕೇಳಿರೋದು, "ವೇದಗಳನ್ನು ಯಾಕೆ ಅಪೌರುಷೇಯ ಅಂತಾರೆ ?" ಅಂತ.

"ವೇದಗಳು ಅಪೌರುಷೇಯವೇ, ಅಲ್ಲವೇ" ಇದು ಈ ಚರ್ಚೆಯ ವಿಷಯ ಅಲ್ಲ. ಚರ್ಚೆಗೆ ನಂಟಿಲ್ಲದ ವಿಷಯ ಹೇಳಬೇಕಿದ್ರೆ, ಬೇರೊಂದು ಎಳೆ ತೆಗೀರಿ. ಅತ್ವಾ ಪುಟಗಟ್ಟಲೆ ಬ್ಲಾಗ್ ಬರೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2008 - 11:56pm — Sunil Jayaprakash

ಉ: ವೇದಗಳೇಕೆ ಅಪೌರುಷೇಯವೆನಿಸಿಕೊಂಡವು ?

Sunil Jayaprakash's picture

ನಿಗಂಟುಗಳು ಹೀಗೆ ಹೇಳತ್ತೆ.

ಪೌರುಷ - (ನಾ) ೧ ಪುರುಷತ್ವ, ಗಂಡಸುತನ ೨ ಶೌರ್ಯ, ಕೆಚ್ಚು ೩ ಮನುಷ್ಯ ಪ್ರಯತ್ನ, ಸಾಹಸ ೪ ಒಂದು ಅಳತೆ, ಒಂದಾಳೆತ್ತರ ಪುರುಷ ಪ್ರಮಾಣ, ಸುಮಾರು ಐದರಿಂದ ಆರು ಅಡಿವರೆಗಿನ ಎತ್ತರ

ಪೌರುಷೇಯ - a. (î) made by, derived from or relating to men; derived from the soul; n. human effort: -tva, n. human origin.

ಅಪೌರುಷೇಯ - (ನಾ) ಮನುಷ್ಯನಿಂದ ಮಾಡಲಾಗದುದು, ಮನುಷ್ಯನಿಂದ ಆಗದುದು

ಆದರೆ ನನಗೆ "ಅಪೌರುಷೇಯ" ಎಂಬ ಕಾನ್ಸೆಪ್ಟ್ ಮಾತ್ರ ಇನ್ನೂ ಅರ್ಥವಾಗಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಮಾರರಾಮ ಮತ್ತು ಯದ್ವಾ-ತದ್ವಾ
  • ದೂಳ್ವೆಣ್ಣು ಯಾರು?
  • ಪುರಾಣಗಳು/ಉಪನಿಷತ್ ಗಳು.
  • ಮನದಾಳದ ಮಾತುಗಳು
  • ಹಳ್ಳವಾಗದ ಹನಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator