ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಾವನೆಗಳಿಲ್ಲದ ಬದುಕು.

ಕೆಲವು ಬಾರಿ ಅನಿಸುತ್ತದೆ. ಜೀವನದಲ್ಲಿ ಭಾವನೆಗಳಿಲ್ಲದೆಯೇ ಬದುಕುವುದೇ ಉತ್ತಮ ಎಂದು. ಈ ಪ್ರೀತಿ, ಪ್ರೇಮ, ವಾತ್ಸಲ್ಯ ಇವುಗಳಮೂಲಕ ಮಾಡುವ ಕೆಲಸವನ್ನು ಕರ್ತವ್ಯ ಎಂದು ಮಾಡಿದರೆ ಮನಸ್ಸಿಗೆ ಏನೂ ಅಂಟುವುದಿಲ್ಲ ಅಲ್ಲವೇ. ಹೆಂಡತಿ, ಮಕ್ಕಳು, ಕೆಲಸ, ದೇಶ, ಭಾಷೆ, ಧರ್ಮ, ಹಣ, ಆಸ್ತಿ, ಐಶ್ವರ್ಯ ಇವುಗಳಿಗೆಲ್ಲಾ ತಾನು ಏನು ಕರ್ತವ್ಯ ಪೂರಕವಾಗಿ ಕೆಲಸಮಾಡಬೇಕೋ ಅದನ್ನು ಮಾಡಿ ಮುಗಿಸುವುದು ಉತ್ತಮ. ಇವುಗಳೆಡೆಗೆ ಬರೀ ಪ್ರೀತಿ ತೋರಿಸಿ ತನ್ನ ಕರ್ತವ್ಯಗಳನ್ನು ಮಾಡದಿದ್ದರೆ ಏನು ಪ್ರಯೋಜನ ಅಲ್ಲವೇ?

ಇದು ಅತಿ ಎನ್ನಿಸಬಹುದು. ಆದರೆ ಕೆಲವು ವ್ಯಕ್ತಿಗಳಲ್ಲಿ ಇದನ್ನು ಗಮನಿಸಿದ್ದೇನೆ. ಅವರು ಯಾವುದೇ ರಾಗ,ದ್ವೇಶಗಳಿಲ್ಲದೆ ಜೀವಿಸುತ್ತಿರುತ್ತಾರೆ. ತಮ್ಮ ಕೆಲಸ, ಸಾಧನೆಗಳ ಕಡೆಗೇ ಗಮನವಿರುತ್ತದೆ. ತಮ್ಮ ಸುತ್ತಲಿನ ವ್ಯಕ್ತಿಗಳಿಗೆ ಪ್ರೀತಿ ಎಂತಲೋ ಕರ್ತವ್ಯ ಎಂತಲೋ ಆಯಾ ಸಂಭಂಧಗಳಿಗನುಸಾರ ನಡೆದುಕೊಳ್ಳುತ್ತಿರುತ್ತಾರೆ. ಜೀವನದ ಯಾವುದೇ ಏರು ಪೇರುಗಳಿಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ.

ಇರಬೇಕು ಸಂಸಾರದಲ್ಲಿ ಅಂಗಳದ ಹಕ್ಕಿಯ ತರಹ ಅಂತ ಒಂದು ಮಾತಿದೆ. ’ನಿಶ್ಕಾಮ ಕರ್ಮ’ ಎಂದರೆ ಆಸೆಯಿಲ್ಲದೆ ಕರ್ತವ್ಯಮಾಡು ಅಂತಲೇ ಅಲ್ಲವೇ? ಇದರರ್ಥ ಯಾವುದೇ ದ್ವೇಶ, ಸ್ವಾರ್ಥ ಇವುಗಳಿಲ್ಲದೆ ನಿನ್ನ ಕೆಲಸವನ್ನು ಕರ್ತವ್ಯ ಎಂದು ಮಾಡಿಕೊಂಡು ಹೋಗು ಎಂದು ಅರ್ಥವೇ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಭಾವನೆಗಳಿಲ್ಲದ ಬದುಕು.

vikashegde's picture

ಕೆಳಗೆ archieve ಪುಟಗಳಿಂದ "ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ" ಎಂಬ ಕೊಂಡಿಯೊಂದು ಇದೆ. ಅದೇನಾರೂ ಸಹಾಯವಾಗುತ್ತೋ ನೋಡಿ ಮಾಧವ.

**************************
http://vikasavada.bl...
**************************

ಉ: ಭಾವನೆಗಳಿಲ್ಲದ ಬದುಕು.

madhava_hs's picture

ನೀವುಹೇಳಿದ ಆ ವಿಷಯದ ಲಿಂಕ್ ಆ ಪುಟದಲ್ಲಿ ನನಗೆ ಸಿಗಲಿಲ್ಲ.

ಉ: ಭಾವನೆಗಳಿಲ್ಲದ ಬದುಕು.

Rajeshwari's picture

ಬಾವನೆಗಳು ಇಲ್ಲದ ಜೀವನದಲ್ಲಿ ಬದುಕುವುದು ಬಹಳ ಕಷ್ಟ. ಭಾವನೆಗಳು ಇರಬೇಕು ಆದ್ರೆ ಅದು ಅತಿಯಾಗಿರಬಾದ್ರು. ನಾನು ಗಮನಿಸಿದ ಕೆಲವು ವ್ಯಕ್ತಿಗಳಲ್ಲಿ ಬರೀ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮನೋಬಲವೊಂದಿರುತ್ತೆ , ಆದ್ರೆ ಅವರ ಜೊತೆ ಮಾತನಾಡನಾಡಲು ಸ್ವತಂತ್ರ್ಯ ಇರುವುದಿಲ್ಲ. ಪ್ರತಿಯೊಂದು ಕೆಲಸವನ್ನು ವ್ಯವಹಾರ , ಲೆಕ್ಕಾಚಾರ ಅಂತ ಮಾಡಿದ್ರೆ ಅದಕ್ಕೆ ಬೆಲೆ ಇರುವುದಿಲ್ಲ. ಮುಕ್ತವಾಗಿ ಮಾತನಾಡಲು ಸಾಧ್ಯವಾಗುದಿಲ್ಲ. ತಾವು ಯಾವುದೇ ರೀತಿಯಲ್ಲಿ ಸಮಸ್ಯೆಯಲ್ಲಿ ಸುಳಿಯಬಾರದು ಅಂತ ಸದಾ ಜಾಗರೂಕತೆಯನ್ನುವಹಿಸಿ ಜೀವನ ಮಾಡುತ್ತಿರುತ್ತಾರೆ. ಬಾವನೆಗಳಲೇ ಇಲ್ಲದೆ ಹೋದ್ರೆ ಅದು ಹೇಗೆ ಬದುಕಾಗುತ್ತೆ? ಯಾವಾಗ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಸಂಕಲ್ಪ ಮಾಡುತ್ತೇವೋ ಆಗ ಎಲ್ಲವು ವ್ಯಾವಹಾರಿಕ ಅಥವ ಕರ್ತವ್ಯದ ದೃಷ್ಟಿಯೊಂದೆ ಕಾಣತೊಡಗುತ್ತೆ. ಜೀವನಕ್ಕೆ ಬೇಕಾಗಿರುವುದು ಕರ್ತವ್ಯದ ಜೊತೆ ಪ್ರೀತಿ , ವಿಶ್ವಾಸ , ಸ್ನೇಹ.

ಉ: ಭಾವನೆಗಳಿಲ್ಲದ ಬದುಕು.

gururajkodkani's picture

ಗುಱುಱಾಜ
www.kannadaguru.blog...

ಮಾಧವರೇ, ಭಾವನೆ ಮತ್ತು ಪ್ರೀತಿಗಳ ಬಗ್ಗೆ ತಿಳಿದುಕೊಳ್ಳಲು ಯ೦ಡಮೂರಿಯವರ "ವಿಜಯಕ್ಕೆ ಆರನೇ ಮೆಟ್ಟಿಲು" ಓದಿ.ವ್ಯಕ್ತಿತ್ವ ವಿಕಸನ ಪುಸ್ತಕವಾದರೂ ಈ ಬಗ್ಗೆ ತು೦ಬಾ ಚೆನ್ನಾಗಿ ಬರೆದಿದ್ದಾರೆ.ಸುಮಾರಾಗಿ ಅವರ ಎಲ್ಲ ಕಾದ೦ಬರಿಗಳಲ್ಲೂ ಈ ಬಗ್ಗೆ ಬರೆದಿರುತ್ತಾರೆ.