ಬಱಿ, ಬಱ, ಬಱಡು, ಬಱಿಗು
ಬಱಿಗು=ಖಾಲಿ ಮಾಡು.
ಬಱಿ=ವ್ಯರ್ಥ
ಬಱಡು=ಫಲವಿಲ್ಲದ, ವ್ಯರ್ಥ
ಬಱ=ಏನೂ ಸಿಗದ ಕಾಲ, ಕ್ಷಾಮ
ಬಱಸಿಡಿಲು=ಮೞೆ ತಾರದ ಬಱಿ ಸಿಡಿಯುವ ಸಿಡಿಲು.

- Login or register to post comments
- 99 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬಱಿಗು=ಖಾಲಿ ಮಾಡು.
ಬಱಿ=ವ್ಯರ್ಥ
ಬಱಡು=ಫಲವಿಲ್ಲದ, ವ್ಯರ್ಥ
ಬಱ=ಏನೂ ಸಿಗದ ಕಾಲ, ಕ್ಷಾಮ
ಬಱಸಿಡಿಲು=ಮೞೆ ತಾರದ ಬಱಿ ಸಿಡಿಯುವ ಸಿಡಿಲು.







ಉ: ಬಱಿ, ಬಱ, ಬಱಡು, ಬಱಿಗು
ಬರೆ ಎನ್ನುವದಕ್ಕೆ "ಲೇಖನ ಬರೆ" ಮತ್ತು "ಎತ್ತಿಗೆ ಬರೆಹಾಕುವದೂ" ಆಗುತ್ತದೆ.
ಕನ್ನಡ ಕಂದರೆ ನನ್ನ ಈ ಅನಿಸಿಕೆ ಸರಿಯಾ ? ತಿಳಿಸಿ.
ನನ್ನಿ
ಉ: ಬಱಿ, ಬಱ, ಬಱಡು, ಬಱಿಗು
ಬರೆ=write ಎಂಬಲ್ಲಿ ಇರುವುದು ತಾಡಿತ ರ. ಆದರೆ ಬಱಿ=ಖಾಲಿ ಎಂಬರ್ಥದ್ದು ಕಂಪಿತ ’ಱ’ ಅಂದರೆ ಈ ಱ ಉಚ್ಚರಿಸುವಾಗ ನಾಲಿಗೆ ಹಲ್ಲಿನ ಬುಡದಲ್ಲಿ ಕಂಪಿಸಬೇಕು. ನನ್ನ ’ಱ ಮತ್ತು ರ ಹಾಗೂ ೞ ಮತ್ತು ಳ ನಡುವಿನ ಉಚ್ಚಾರವ್ಯತ್ಯಾಸ’ ಲೇಖನ ಓದಿ.
ಉ: ಬಱಿ, ಬಱ, ಬಱಡು, ಬಱಿಗು
ಕನ್ನಡದ ಕಂದರೇ,
ನಾವ್ ಬರಿದಾಗು ಅಂತೀವಿ..
ಬಱೆಯ ಬಳಕೆಯ ಮಾದರಿ ನೀಡಿ.. ಅಯ್ಯ
ಉ: ಬಱಿ, ಬಱ, ಬಱಡು, ಬಱಿಗು
ಅದು ನಿಜವಾಗಿ ಬಱಿದಾಗು. ಬಱಿದು=ಖಾಲಿ+ಆಗು.
ಉ: ಬಱಿ, ಬಱ, ಬಱಡು, ಬಱಿಗು
ಬಱಿ, ಬಱಿದು ಎರಡೂ ರೂಪಗಳು ವ್ಯರ್ಥ, ಖಾಲಿ ಎಂಬರ್ಥದಲ್ಲಿ ಬೞಕೆಯಾಗುವ ವಿಶೇಷಣಗಳು. ಉದಾ:- ಬಱಿ ಬಾಯುಪಚಾರವಷ್ಟೇ.
ಉ: ಬಱಿ, ಬಱ, ಬಱಡು, ಬಱಿಗು
ಪಾತ್ರೆ ಬಱಿಗುತ್ತಾನೆ=ಪಾತ್ರೆ ಖಾಲಿ ಮಾಡುತ್ತಾನೆ. ಎಲ್ಲವನ್ನು ಬಱಿಗು= ಖಾಲಿಯಾಗುವಂತೆ ಎಲ್ಲವನ್ನು ಎತ್ತಿಕೋ.