~
ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ತುಳು ತಾಯ್ನುಡಿಯಾವರು ಕಲಿಕೆಯನ್ನು ತುಳುವಿನಿಂದ
ಕೊಡವ ತಾಯ್ನುಡಿಯಾದವರು ಕೊಡವದಿಂದ
ಬಡಗರು ಬಡಗದಿಂದ,
ಹವ್ಯಕರು ಹವ್ಯಕಕನ್ನಡದಿಂದ..
ಹೀಗೆ ಅವರವರ ಮನೆಮಾತಾದ ಕಿರುನುಡಿ/ಡಯ್ಲೆಕ್ಟ್ ಇಂದಲೇ ಕಲಿಕೆ ಸುರುವಾಗಬೇಕು..
ಬಳಿಕ ಪದವಿಗೆ ಒಂದು ಸಮನಾದ ನುಡಿ ಬರಲಿ....
ಇದೇನು ಕಶ್ಟ ಅಲ್ಲ..... ಯಾಕೆ ಅಂದರೆ ಪಾಟ ಮಾಡುವಾಗ ಅಲ್ಲಿಯ ಡಯ್ಲೆಕ್ಟಲ್ಲೇ ಬಿಡಿಸಿ ಹೇಳಬೇಕು. ಇಲ್ಲದೇ ಹೋದರೆ ಮಕ್ಕಳಿಗೆ ತಿಳಿಯಲ್ಲ ಸರಿಯಾಗಿ.

- Login or register to post comments
- 298 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ತಮಾಷೆಗೂ ಮಿತಿ ಇರಬೇಡವೇ?
ಅದರ practicality ಬಗ್ಗೆ ಯೋಚಿಸಿ ಆಮೇಲೆ ಬರೆಯಬಹುದಿತ್ತು.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಯಾಕೆ ಆಗಲ್ಲ?
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಆಗತ್ತೆ ಹಂತನೇ ಇಟ್ಖಳವ. ಹದೆಂಗಾಯ್ತದೆ ಅಂತ ನಿಮ್ ಯೋಜನೆಯ ಬಗ್ಗೆ ವಸಿ ಏಳಿ ಮೊದ್ಲು.
ಸುಮ್ಕೆ ಹಾಗ್ಬೇಕು ಹಾಗ್ಬೆಕು ಅಂದ್ರಾಗ್ಲಿಲ್ಲ. ಎಂಗಾಗ್ಬೇಕು ಅಂತನೂ ಯೋಳ್ಬೆಕು.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಏನಿಲ್ಲ..
ತುಳು ಮಕ್ಕಳು ತುಳುನಾಗೆ ಲೆಕ್ಕ, ಇಜ್ನಾನ ಕಲೀತಾವೆ
ಹವೀಕರು ಹವೀಕದಾಗೆ..
ಹಿಂಗೆ
ಮಾದರಿ :
ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು
"ರೆಡ್ಡಕ್ ರೆಡ್ಡ್ ಕೂಡಣ ನಾಲು" ಇದು ತುಳು ಇರಬೋದು.. !!
ಇಶ್ಟೇ..
ಬೇಕಾದ್ರೆ ಸಂಸ್ಕ್ರತದೋರು ಅದ್ರಾಗೆ ಲೆಕ್ಕ, ಇಜ್ನಾನ ಕಲೀಲಿ ಬ್ಯಾಡ ಅಂದೋರ್‍ಯಾರು!
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ನಿಮ್ ಮಾದರಿ ಮನೆನಾಗೇ ಆದ್ರೆ ಆಗತೈತೆ. ಆಗೋದೇನು ಈಗ್ಲೂ ಅಂಗೇ ಐತೆ ಸುಮಾರ್ ಕಡಿಕೆ.
ಇಸ್ಕೂಲ್ನಾಗೆ ಎಂಗೆ? ಸಿಕ್ಸಣ ಪದ್ಧತಿ ಎಂಗೆ..
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಸಾಲೆಯಾಗೂ ಅದೇ..
ಬುಕ್ಕುಗಳನ್ನು ಅದರಾಗೆ ಅಚ್ ಹಾಕಿಸಿದ್ರಾಯ್ತು.
ಇನ್ನ ಪಾಟ ಮಾಡಕ್ಕೆ ಮೇಶ್ಟ್ರುಗಳು ಸಿಕ್ತಾರೆ...
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅದೆಂಗಣೋ?
ಸಕಲಬಾಸಾವಲ್ಲಬ ಮೇಸ್ಟ್ರುಗಳು ಇರ್ತಾರಾ? ಅಥವಾ ನಾನೀಗ ಬೆಂಗಳೂರಲ್ಲಿ ಬಂದು ನಂಗೆ ಅವ್ಯಕದಾಗೇ ಮಗ್ಗಿ ಏಳ್ಕೋಡಿ ಅಂದ್ರೆ ಅವ್ಯಕ ಮೇಸ್ಟ್ರು ಕರ್ಸಿ, ಅವ್ಯಕ ಪುಸ್ಕ ಪ್ರಿಂಟಾಕ್ಸಿ ಏಳ್ಕೊಟ್ಟಾರಾ?
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅಣ್ಣೋ
ಬೆಂಗಳೂರಲ್ಲಿ ಅಲ್ಲ..
ತುಳು ಮಂದಿ ಯೆಚ್‌ಗೆ ಇರೋ ಕಡೆ ತುಳು ಪಾಟ ಸಿಕ್‌ಬೇಕು..
ಇಂಗೆ..
ಬೆಂಗಳೂರೋರಿಗೆ ಬೆಂಗಳೂರ್ ಕನ್ನಡದಾಗೆ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅಂಗಿದ್ರೆ ತುಳು ಮಂದಿ ಇರಕಡಿಕೆ ಬ್ಯಾರೇವ್ರು ಇರಂಗಿಲ್ವೋ? ಅತ್ವಾ ತುಳು ಜನರಿಗೇ ಒಂದು ಇಸ್ಕೂಲು. ಅವ್ಯಕರಿಗೇ ಒಂದು ಇಸ್ಕೂಲು, ಅಲ್ಲಿ ಬರೇ ಅದೇ ಪುಸ್ಕ, ಅದೇ ಮೇಸ್ಟ್ರು ಮಾಡಕ್ಕಾಯ್ತದಾ? ಏನ್ ಬೆಂಗಳೂರಾಗೇ ಬರೀ ಬೆಂಗಳೂರು ಕನ್ನಡದ ಜನ್ ಮಾತ್ರ ಇದ್ದಾರಾ? ಅತ್ವಾ ನಾವ್ ಬೆಂಗಳೂರಾಗಿ ಇದೀವಿ ಅಂತ ನಮ್ದೆಲ್ಲಾ ಬುಟ್ಕೊಟ್ಟು ನಿಮ್ದು ಮಂಡ್ಯ ಭಾಸೆಲ್ಲಿ ಮಗ್ಗಿ ಏಳ್ತಾ ಕೂತ್ಕಳಕ್ಕಾಯ್ತದಾ?
ತಲೆ ಮಡೀಕ್ಕಂಡು ಮಾತಾಡಣ್ಣೋ ವಸಿಯ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಉ ಅವ್ದಲ್ಲ...
ಈಗ ಉರ್ದು ಸಾಲೆಗಳವೆಲ್ಲ.. ಹಂಗೆ ಇರಲಿ.. ಅಂತ..
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅಂಗೆಲ್ಲಾ ಆಗಕ್ಕಿಲ್ಲ , ಸುಮ್ಕೆ ಹೇನೇನೋ ಏಳ್ಬೆಡಿ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅಂಗೆಲ್ಲ ಯಾಕ್ ಆಗಕ್ಕಿಲ್ಲ?
ಉರ್ದು ಸಾಲೆ ನಡೆಸೋಂಗೆ ಯಾಕ್ ತುಳು ಸಾಲೆ ನಡಿಸ್ಬೋದಿಲ್ಲ!
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಇದಕ್ ಉತ್ರ ಯೋಳಿ..
ಆಮ್ಯಾಕ್ ಆವಯ್ಯ ಕೊಡೋ ಆವಯ್ಯನ್ ಲಿಂಕ್ಗಳನ್ನ ಓದುಮ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ತವಡು ಕುಟ್ತಾ ಇರಿ.. ಅಮೇಕೆ ಬತ್ತೀನಿ
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಹೆ ಹೆ..!
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಶಂಕರ ಭಟ್ಟರು ಒಳ್ಳೆಯ ಪುಸ್ತಕಗಳನ್ನು ಬರೆದು, ಕೆಲವರು ಅದನ್ನು ಓದಿದಕ್ಕೂ ಸಾರ್ಥಕವಾಯಿತು. ಅಲ್ಲ, ಒಂದೊಂದೂರಿಗೆ ಒಂದೊಂದು ರೀತಿ ಬರವಣಿಗೆ ಮಾಡಿದ್ರೆ, ಬೆಂಗಳೂರು ಮತ್ತು ಮೈಸೂರಿಗರು, ಹೈ ಫೈ ಸಂಸ್ಕೃತ + ಇಂಗ್ಲೀಷ್ ಬೆರೆಕೆಯಾಗಿರೋ ಕನ್ನಡದಲ್ಲಿಯೇ ಕಲಿಯೋದು. ಈಗ ಸದ್ಯಕ್ಕೆ ಮಾತಾಡೋದು ಬೇಬೇರೆಯಾದ್ರೂ, ಬರವಣಿಗೆ ತಕ್ಕಮಟ್ಟಿಗೆ ಒಂದೇ ಇದೆ. ಕನ್ನಡ ಬರವಣಿಗೆಯಲ್ಲಿ, "ಅವಶ್ಯಕತೆ ಇದ್ದರೆ ಮಾತ್ರವೇ ಸಕ್ಕದ ಬಳಸಿ, ಪ್ರಬುದ್ಧತೆ ಎಂಬ ಒಂದೇ ಕಾರಣಕ್ಕೆ ಸುಮ್ಸುಮ್ನೆ ಸಕ್ಕದವನ್ನು ಬಳಸಬೇಡಿ" ಎಂಬ ಆಶಯ ಇದ್ದ ಯಾರೂ ಹೀಗೆ "ಒಂದೊಂದು ಊರಿಗೆ ಒಂದೊಂದು ಬರವಣಿಗೆಯ ಕನ್ನಡ ಬೇಕು" ಅನ್ನೋದನ್ನ ಯಾವನೂ ಒಪ್ಪಲ್ಲ.
ವಿಕಾಸ್,
ಇವರು ಹೇಳೋದು ಹೇಗಿದೆ ಅಂದ್ರೆ, ಹವ್ಯಕರ ಪದಗಳನ್ನು ಮೈಸೂರಿನವರು ಬಳಸಲೇಬಾರದು. ಒಟ್ನಲ್ಲಿ ಕನ್ನಡದ ಯಾವ ಸೀಮೆಯವರೂ ಬೇರೆ ಸೀಮೆಯವರ ಕನ್ನಡದಿಂದ ಕೊಟ್ಟತಂದುಮಾಡಬಾರದು. ಎಲ್ರೂ ಹೀಗೆ ಬೇಬೇರೆಯಾಗಿ ಇದ್ದು, ಯಾವತ್ತೂ ಒಂದಾಗಬಾರದು.
ಯಾವ್ದೋ ಸಮಸ್ಯೆ ಇನ್ಯಾವ್ದೋ ಪರಿಹಾರ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಅದೇ.. ಒಂದೊಂದು ಸಾರ್ತಿ ಒಂದೊಂದು ಹೇಳ್ತಾರೆ.
ಏನು ಮಾಡ್ಬೇಕು ಅಂತ ಅವರಿಗೇ ಗಟ್ಟಿಯಾಗಿ ಗೊತ್ತಿರೋಲ್ಲ.
ಒಟ್ನಲ್ಲಿ ಏನಾದ್ರೂ ಹೇಳ್ತಾ ಇರ್ಬೇಕು.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ನಾನು ಹೇಳಬಯಸಿದ್ದು ವಿಕಾಸ ಹೆಗಡೆ ಹೇಳಿದ್ರು.. ಅಲ್ಲ ನಾನು ಹೇಳಿಸಿದೆ..
ಎಶ್ಟೊಂದು ಕಶ್ಟ..
ಅದಕ್ಕೆ ಸುಮ್ನೆ ಇಂಗ್ಲಿಶ್ ಮೀಡಿಯಮ್ಮಲ್ಲಿ ಓದೋದೇ ಸಲೀಸು!
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಸರಿ, ಅಂಗೇ ಮಾಡಣ.
ಸುಬವಾಗಲಿ.
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ಹೆ ಹೆ..
ಈಗ ಗೊತ್ತಾಯ್ತಾ... ತವುಡಲ್ಲ ಅವುಡನ್ನೇ ಕುಟ್ಟಿದ್ದು ಅಲ್ಲ ಕುಟ್ಟಿಸಿದ್ದು!
ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
ತಾವು ಕುಟ್ಟುವುದು ಏನೂಂತ ಇಲ್ಲಿ ಎಲ್ಲರಿಗೂ ತಿಳಿದಿದೆ. ಯಾವುದೋ ವಿಸ್ಯ ಯಾವುದಕ್ಕೋ ಸೇರಿಸಿ ಕೋಡಂಗಿ ವೇಸ ಮಾಡುವುದು ಬಿಡಿ.
ಇನ್ನೂ ಎಷ್ಟೆ ಕುಟ್ಟಿದರೂ ನಿಮ್ಮದೇ ತವುಡು, ಮಜಾ ಮಾಡಿಕೊಳ್ಳಿ.
ನನ್ನಿ.