ಬಿಡ್ತಾರ್
ನೋಡಿ ಈ ಹಲ ಕನ್ನಡಬಗೆಗಳಲ್ಲಿ
ಬಿಡುತ್ತಾರೆ ಎಂದು ಬರಹದಲ್ಲಿ ಬರೆದುಕೊಂಡರೂ
ಬಿಡ್ತಾರೆ, ಬಿಡ್ತಾರ, ಬಿಡ್ತಾರು ಹೀಗೆಲ್ಲ ರೂಪಗಳಿವೆ...
ಆದರೆ ಇದಕ್ಕೆ ಎಲ್ಲ ಬೇರು ಅಂದರೆ ಬಿಡ್ತಾರ್, ಬಿಡ್ತಾನ್ ಇವೇ...
ಅದಕ್ಕೆ ನಾವು ಯಾಕೆ ಬಿಡ್ತಾರೆ ಅನ್ನೋದೇ ಸ್ಟಾಂಡರ್‍ಡ್ ಅಂತ ಇಟ್ಕೋಬೇಕು.. ಬಿಡ್ತಾರ್ ಯಾಕೆ ಆಗಲ್ಲ..
ಅಂದ್ರೆ
ಅವರ್ ನಾಳೆ ಬರ್‍ತಾರ್
ಇವನ್ ಎಲ್ಲಿಗ್ ಹೋತಾನ್( ಹೋ ಬೇರು, ಹೋಗ್ ಅಲ್ಲ )
ನಾನ್ ಊಟವನ್ ಮಾಡ್ತೇನ್( ಇಲ್ಲೂ ಮಾಡ್ತೀನಿ, ಮಾಡ್ತೇನೆ, ಮಾಡ್ತೀನ, ಮಾಡ್ತೇಂ ಹೀಗಲ್ಲ ಇದೆ )
- Login or register to post comments
- 397 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಬಿಡ್ತಾರ್
ಹೇಗೋ ಹೇಗೋ ಹರಿಯುವ ನೀರಿಗೊಂದು ರೂಪ ಕೊಟ್ಟು ಕೆಱೆ ಮಾಡಿ ಸರಿಯಾದ ಉಪಯೋಗಕ್ಕೆ ತರುವಂತೆ ವ್ಯಾಕರಣ ಭಾಷೆಗೆ. ನೋಡಿ ಮಹೇಶ್, ಭಾಷೆಯಿಂದ ವ್ಯಾಕರಣ. ಆದರೆ ವ್ಯಾಕರಣದಿಂದ ಭಾಷೆಯಲ್ಲ. ಹೇಗೆ ಹೇಗೋ ಬೆಳೆದ ಕೂದಲನ್ನು ಒಪ್ಪ ಮಾಡುವಂತೆ ವ್ಯಾಕರಣ ಬಾಸೆಗೊಂದು ಚೌಕಟ್ಟು ಕೊಡುತ್ತದೆ. ಹಾಗಾಗಿ ಎಲ್ಲವುದಕ್ಕೂ ನಿಯಮ. ತದ್ಭವಕ್ಕೊಂದು ನಿಯಮ. ಹಾಗೆ ನಿಯಮಕ್ಕೊಳಪಡಿಸದೆ ವಿಷಯವನ್ನು ವಿಶ್ಯ, ವಿಶಯವೆಂದು ನಾನು ಹೇೞೆನು. ಬಿಸಯ, ಇಸ್ಯ ಎಂದೇನು.
ಉ: ಬಿಡ್ತಾರ್
"ನಾನು ಹೇೞೆನು" ಬೇಡ ಹೇಳಿ. :)
ಒಂದು ಸಂಗತಿ ನಿಮಗೆ ತಿಳಿಯುತ್ತಿಲ್ಲ..
ಪೇೞ => ಹೇಳು ಎಂದು ಪ=>ಹ ಮತ್ತು ೞ => ಳ ಯಾಕೆ ಬದಲಾಗಿರಬಾರದು..
ಅಂದ್ರೆ ಹಳೆಗನ್ನಡ ಪೇೞ್, ವಸಗನ್ನಡದಲ್ಲಿ ಹೇಳು ಆಗಿದೆ. ಅದರಲ್ಲಿ ೞಕಾರವೂ ಳಕಾರಕ್ಕೆ ಬದಲಾಗಿದೆ..............
ಉ: ಬಿಡ್ತಾರ್
ಗಾವಿಲರಿಗೆ ಮಾತ್ರ ಳ ಮತ್ತು ೞ ಉಚ್ಚರಿಸಲು ಕಷ್ಟ. ನಮಗೆ, ನಿಮಗೆ ಒಬ್ಬರ ಮಾತು ಇನ್ನೊಬ್ಬರಿಗೆ ಗೊತ್ತಾಗುವವರಿಗೆ ಳ ಮತ್ತು ೞ ವ್ಯತ್ಯಾಸ ಕಷ್ಟವಲ್ಲ ಬಿಡಿ :D
ಉ: ಬಿಡ್ತಾರ್
ನಾನೂ ಹಳ್ಳಿಯವನೇ..!
ನಿಮ್ಮ ಹಾಗೆ ೞ ಱಗಳ ಪಂಟನ್ನಲ್ಲ.. ನನಗೆ ಱ/ೞ ಪಂಟಿಕೆ ಬೇಕಾಗೂ ಇಲ್ಲ..
ಗಾವಿಲರು ಹಳ್ಳಿಯವರ ಬಗ್ಗೆ ಹಗೂರವಾತು ನನ್ನಿಯಲ್ಲ...!
ಉ: ಬಿಡ್ತಾರ್
ಗಾವಿಲರು ಓದದ ಗಾವಿಲರೆಂದಷ್ಟೇ. ನಿಮ್ಮಂತಹೋದಿದ ಗಾವಿಲರನ್ನಲ್ಲ ಕುಱಿತು ಹೇೞಿದ್ದು. ಕೆಲವು ಗಾವಿಲರಿಲ್ಲಿ ಏನೂ ತೊಂದರೆ ಕೊಡದ ಹಾವನ್ನು ಕೊಂದರು. ಹಾಗಾಗಿ ಆರಯ್ದು ನೋಡದ ಗಾವಿಲನೋ ಶಹರಿನವನೋ ಅದು ಸರಿಯಲ್ಲವೆಂದೇ ನನ್ನ ಅಭಿಪ್ರಾಯ. ’ಱ’ ಮತ್ತು ’ೞ’ ಬಗ್ಗೆ ಮತ್ತೆ ಮತ್ತೆ ಕೇಶಿರಾಜ, ತಿರುಮಲಾರ್ಯ, ಕಿಟ್ಟೆಲ್ ಮತ್ತು ಕನ್ನಡಕಂದನಂಥವರು ಮತ್ತೆ ಮತ್ತೆ ಹುಟ್ಟಿ ಬರಬೇಕಾಗುತ್ತದೆ. ಏನಂತೀರಾ? :) :D
ಉ: ಬಿಡ್ತಾರ್
ನನಗೆ ಗೊತ್ತಿಲ್ಲ..
ೞ/ಱ ಕಾರಗಳು ಬರೀ ಹಳಗನ್ನಡದ ಆರಯ್ಯುವಿಗೆ ಬೇಕೇ ಹೊರತು ವಸಗನ್ನಡದ ಬರಹಕ್ಕಲ್ಲ ಎಂದು ಅಂದುಕೊಂಡಿದ್ದೀನಿ..
ನೀವ್ ತಿಪ್ಪರ ಲಾಗಾ ಹಾಕಿದ್ರೂ ಱ/ೞಕಾರ ಸಂಗತಿಯಲ್ಲಿ ನಿಮ್ಮೊಡನಿಲ್ಲ..
ಉ: ಬಿಡ್ತಾರ್
ಸತ್ಯವಾದ ಮಾತು ಸಿವಾ! ಇಂಥ ರಗಳೆಗಳಿಂದ್ಲೆ ಕನ್ನಡ ಬರೋರ್ ಕೂಡ ಕನ್ನಡ ಬಿಟ್ಟು ಇಂಗ್ಲೀಸ್, ಹಿಂದಿ ಸುರು ಹಚ್ಕಂಡಾರ್ ನೋಡ್ರಿ...
ಉ: ಬಿಡ್ತಾರ್
ಸತ್ಯವಾದ ಮಾತು ಸಿವಾ! ಇಂಥ ರಗಳೆಗಳಿಂದ್ಲೆ ಕನ್ನಡ ಬರೋರ್ ಕೂಡ ಕನ್ನಡ ಬಿಟ್ಟು ಇಂಗ್ಲೀಸ್, ಹಿಂದಿ ಸುರು ಹಚ್ಕಂಡಾರ್ ನೋಡ್ರಿ...
ಉ: ಬಿಡ್ತಾರ್
ಆಂ ಸರ್ವಾಧಿಕಾರಿಯಾದೊಡೆ ನಿಮ್ಮಂ ಱ,ೞ ಬೞಸದೊಡೆ ಸೆಱೆಗೆ ತಳ್ಳುವುದಂತು ನಿಕ್ಕುವಂ.
ಉ: ಬಿಡ್ತಾರ್
ಅಕಟಕಟಾ!
ಏನೀ ಱ ೞ ಱಗೞೆ..
ಪೞಗನ್ನಡ ಕಂದರೇ ಶಾಂತಾಱಾಗಿಱಿ...
ಪೞಪಱ ಎಂದಡಿದಡಿಗೆ ಪೇೞಬೇಡಿರೋ ದೇವ!