~
ಸ್ವಂತ ಕಾಲ ಮೇಲೆ ನಿಲ್ಲುವುದು
ಬಹುಶಃ ನಮಗೆಲ್ಲರಿಗೂ, ಒಂದಲ್ಲ ಒಂದು ಸನ್ನಿವೇಶದಲ್ಲಿ, ಒಬ್ಬರಲ್ಲ ಒಬ್ಬರು, ನೀಡಿರಬಹುದಾದ ಸಲಹೆ, "ನಿನ್ನ ಸ್ವಂತ ಕಾಲ ನೀನು ನಿಂತ್ಕೋ". ಹಣಕಾಸು, ಕೌಶಲ್ಯ, ಯೋಚನಾಲಹರಿ..ಮುಂತಾದ ವಿಚಾರಗಳಲ್ಲಿ ಸ್ವಂತಿಕೆಯನ್ನು (ತನ್ನತನವನ್ನು) ರೂಪಿಸಿಕೊಳ್ಳಬೇಕು ಎಂಬುದು ಇದರ ಆಶಯ. ಈ "ಸ್ವಂತ ಕಾಲು" ಎಂದರೇನು ? ಎಂದು ತಿಳಿಯುವ ನಿಟ್ಟಿನಲ್ಲಿ ಒಂದು ಸಣ್ಣ ಚರ್ಚೆ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ.
ನನ್ನ ಜೀವನದಲ್ಲಿ ಮುಖ್ಯವಾಗಿ ಮನದಟ್ಟಾಗಿರುವ ಒಂದು ವಿಷಯವೆಂದರೆ, "ಸ್ವತಂತ್ರಬಾಳಬೇಕು ಎಂದರೆ ಸಹಭಾಗಿತ್ವ ಸಲ್ಲದು" ಎಂಬ ಅರ್ಥ ಇಲ್ಲವೇ ಇಲ್ಲ ಎಂಬುದು. i.e. ಬೀಯಿಂಗ್ ಇಂಡಿಪೆಂಡೆಂಟ್ ಡಸಂಟ್ ಮೀನ್, ಒನ್ ಶುಡನ್ಟ್ ಕೊಲಾಬರೇಟ್ (Being Independent doesn't mean one shouldn't collaborate).
"ಈ ಸ್ವಂತ ಕಾಲ ಮೇಲೆ ನಿಂತ್ಕೋ" ಎಂಬ ಸಲಹೆ, ಈಗಿನ ಸಮಾಜದಲ್ಲಿ ಒಬ್ಬ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಕೆಲವೊಂದು ದೂರಗಾಮಿ ಪರಿಣಾಮವನ್ನೂ ಬೀರುತ್ತಿದೆ.
೧. ಇನ್ನೊಬ್ಬರನ್ನು ಅಪ್ರೋಚ್ ಮಾಡುವಾಗ ಕೆಲವೊಬ್ಬರಿಗೆ ಮುಜುಗುರವುಂಟಾಗುವುದು.
೨. ಬೇರೆಯವರಲ್ಲಿ ನೆರವನ್ನು ಕೇಳುವಾಗ ಸಂಕೋಚ ಮನೆಮಾಡುವುದು. "ನೆರವನ್ನು ಕೇಳುವುದು = ನಾನೇನೋ ಕಳಕೊಂಡೆ" ಎನ್ನುವ ಭಾವನೆ ಬೆಳೆಸುವುದು.
೩. ನಾನು ಕೆಲವು ಗೆಳೆಯರನ್ನು ನೋಡಿದ್ದೇನೆ. ಅವರಿಗೆ ತಿಳಿಯದ ಏನಾದರೂ ವಿಚಾರ ಇದ್ದರೆ, ಅವರು ಆ ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿರುವವರನ್ನು ಕೇಳುವುದಕ್ಕಿಂತ, ಇಂಟರ್ನೆಟ್ಟಿನಲ್ಲಿ ಸರ್ಚ್ ಮಾಡುವುದರಲ್ಲಿಯೇ ಹೆಚ್ಚು ತೃಪ್ತಿ. ಹೌದು. ಇಂಟರ್ನೆಟ್ಟಿನಿಂದ ನಮಗೆ ಉತ್ತರ ಸಿಗತ್ತೆ, ಆದರೆ ಅದರ ಜೊತೆಗೆ ಆಯಾ ವಿಷಯದಲ್ಲಿ ಹಿಡಿತವಿರುವ ಬೇರೆಯವರ ಬಳಿಸಾರಿದರೆ(ಅಪ್ರೋಚ್ ಮಾಡಿದರೆ) ಮತ್ತಷ್ಟು ಪಾಯಿಂಟರುಗಳು (ಹೊಳಪುಗಳು) ಸಿಗಬಹುದಲ್ಲವೇ ?
ಹಾಗಾಗಿ, ನನಗನ್ನಿಸೋದು, ನೀವು ಯಾರಿಗಾದರೂ "ಸ್ವಂತ ಕಾಲು" ಸಲಹೆ ನೀಡಿದ್ದೇ ಆದರೆ, ಅವರಿಗೆ ಇದರ ಜೊತೆ "ಸಹಕಾರ, ಸಹಭಾಗಿತ್ವ" ಎಂದರೇನು ಎಂಬುದನ್ನೂ ತಿಳಿಸಿಕೊಡಿ, ಆಗ ಎಲ್ಲರಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ವೃತ್ತಿಪರತೆ ಹೆಚ್ಚಾಗುವುದು. ಏನಂತೀರಾ ?

- Login or register to post comments
- 308 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸ್ವಂತ ಕಾಲ ಮೇಲೆ ನಿಲ್ಲುವುದು
ಸಖತ್!! ಸುನಿಲರೇ!!
ಉ: ಸ್ವಂತ ಕಾಲ ಮೇಲೆ ನಿಲ್ಲುವುದು
ಸುನೀಲ್, ಸೊಂತ ಕಾಲ ಮೇಲೆ ನಿಲ್ಲುವದು ಅಂದರೆ,.. ಬೇರೆಯವರಿಗೆ ಹೊರೆಯಾಗದಿರುವದು,.. ಇದರಲ್ಲಿ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಬಾರದೆಂಬಂತ ತಿಳಿವು ಬರಲ್ಲ.... ಬೇಕಾದಾಗ ಗೆಳೆಯರನ್ನು ತಲುಪಬೇಕಾಗುತ್ತದೆ,..ಇಲ್ಲವಾದರೆ, ಯಾರಿಂದ ಆ ಕೆಲಸವಾದೀತು ಅವರನ್ನು ತಲುಪಬೇಕು,.. ಆದರೆ ಇಡೀ ಬಾಳನ್ನು ಒಬ್ಬರ ಹಂಗಿನಲ್ಲಿ ಕಳೆಯುವಂತಾಗಬಾರದು,.. ಅದನ್ನು ತಪ್ಪಿಸಿಕೊಳ್ಳುವದೇ,.. ಸೊಂತ ಕಾಲ ಮೇಲೆ ನಿಲ್ಲು ಅನ್ನುವದರ ತಿಳಿವು.. ಹಾಗೆಯೇ, ಗೆಳೆಯನೊಬ್ಬ ಇಲ್ಲವೇ ಯಾರೇ ಆಗಿರಲಿ, ಕೇಳಿಕೊಂಡು ಬಂದಾಗ, ನೆರವಾಗಬೇಕು,..
ಉ: ಸ್ವಂತ ಕಾಲ ಮೇಲೆ ನಿಲ್ಲುವುದು
ಸುನಿಲ್, ಸರಿಯಾಗಿ ಹೇಳಿದ್ದೀರಿ.
ಸ್ವಂತ ಕಾಲಿನ ಮೇಲೆ ನಿಲ್ಲುವುದೆಂದರೆ ಯಾರ ಸಹಕಾರ ಪಡೆಯುವುದೂ ತಪ್ಪು ಎಂಬ ತಪ್ಪು ತಿಳುವಳಿಕೆಯಿಂದ ಈಗೀಗ ಜನರು ಬೆರೆಯುವುದು, ಇನ್ನೊಬ್ಬರಿಂದ ತಿಳಿದುಕೊಳ್ಳುವುದು, ಅನುಭವ ಹಂಚಿಕೊಳ್ಳುವುದಕ್ಕೂ ಹಿಂದೆ ಮುಂದೆ ನೋಡುವ ಮನಸ್ಥಿತಿ ಬಂದಿದೆ. ನೀವು ಹೇಳಿದಂತೆ ಸ್ವಂತ ಕಾಲಿನಲ್ಲಿ ನಿಲ್ಲುವುದರ ಜೊತೆ ಸಹಕಾರ , ಸಹಭಾಗಿತ್ವದ ತಿಳುವಳಿಕೆಯೂ ಖಂಡಿತ ಅಗತ್ಯವಿದೆ.
**************************
http://vikasavada.blogspot.com/
**************************
ಉ: ಸ್ವಂತ ಕಾಲ ಮೇಲೆ ನಿಲ್ಲುವುದು
ತಮ್ಮ ಕಾಲ ಮೇಲೆ ತಾವು ನಿಲ್ಲೋದು ಅಂನೋದರೇ ತಿಳಿವನ್ನೇ ಏನೋ ಅಡ್ಡದಿಡ್ಡಿ ಮಾಡಿದಂಗಿದೆ...
ತಮ್ಮ ಕಾಲ ಮೇಲೆ ತಾವು ನಿಲ್ಲೋದು ಅಂದರೆ ’ನಿಲುವು’ ತಮ್ಮದೇ ಆಗಿರಬೇಕು ಹೊರತು ಬೇರೆಯವರ ಕುರುಡು ಬೆನ್ನಡೆಯಾಗಿರಬಾರದೆಂದು...
ಇಲ್ಲಿ ’ನಿಲುವು’ ಯಾವುದೇ ಆಗಿರಬೋದು.
ದುಡ್ಡಿನ ಸಂಗತಿಯ, ತಿಳಿವಳಿಕೆಯ, ಹಕ್ಕೊತ್ತಾಯದ, ಅದಿಕಾರದ, ಬಲ್ಮೆಯ, ನಂಬಿಕೆ ಮುಂ.. ಯಾವುದೇ ಸಂಗತಿಯ ಬಗ್ಗೆ ತನ್ನದೇ ನಿಲುವು ಹೊಂದುವುದು.. ಆ ತನ್ನ ನಿಲುವು ತನ್ನಿಂದಲೇ ಕಟ್ಟಿಕೊಂಡಿದ್ದಾಗಿರಬೇಕು.. ಇದಕ್ಕೆ ಇಂಬಾಗಿ ಹಲವು ಹೊರಗಣ ಸಂಗತಿಗಳಿರಬೋದು...
"ತನ್ನ ನಿಲುವಲ್ಲಿ ತಾನು ನಿಲ್ಲೋದು"