ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಬಾಳ್, ಬಾೞ್

September 8, 2008 - 10:20am — kannadakanda

ಬಾಳ್=ಕತ್ತಿ, ಚೂರಿ
ಉದಾಹರಣೆ: ಜೈಮಿನಿಭಾರತದ ಈ ಪದ್ಯ ನೋಡಿ

ವ್ಯಾಳದಂಗದ ನಯವೊ? ಗರ್ತಸಂಛಾದಿತ ತೃ-
ಣಾಳಿಗಳೊ? ಮಕರದಿಕ್ಕೆಯ ಮಡುವಿನಂಬುಜವೊ?
ಬಾಳಧಾರೆಗೆ ಲೇಪಿಸಿದ ಮಧುವೊ? ಕಮಲಾಂಬಕಿಯರ ಕೃತಕದ ಬೇಟವೋ|
ಕಾಳಕೂಟಂ ಬೆರಸಿದಮೃತಾನ್ನಭೋಜನವೊ
ಪೇೞಲಱಿಯದೆನೆ, ಸೊಗಸಿತು ದುಷ್ಟಬುದ್ಧಿ ಘಾ-
ತಾಳಿಕೆಯನೊಳಗೊಂಡು ಹರುಷಲಾಂಛನದಿಂದ ನಸುನಗುತ ನುಡಿದ ಮಾತು||

ಬಾಳ ಧಾರೆ= ಕತ್ತಿಯ ಅಲಗು (ಹರಿತವಾದ ಭಾಗ)

ಬಾೞ್(ಕ್ರಿಯಾಪದ ಹಾಗೂ ನಾಮಪದ)=ಬದುಕು, ಜೀವಿಸು
ಬಾೞ್ ಗೆ ಉದಾಹರಣೆ: ಅದೇ ಜೈಮಿನಿಭಾರತದಿಂದ

ರಾಕಾಶಶಾಂಕನಭ್ಯುದಯಮಂ ಕೆಡಿಸಿ ತ-
ನ್ನಾಕಾರಮಂ ತೋಱಿಸುವೆನೆಂಬ ಕತ್ತಲೆಯೊ
ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾ ಬಾೞ್ವೆನೆಂಬುಜ್ಜುಗದೊಳು|
ಆ ಕುಮತಿಯಹ ಮಂತ್ರಿ ಬೞಿಕೊಂದು ಲೇಖನಮ-
ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ
ಜೋಕೆಯಿಂದಳವಡಿಸಿ ಕರೆಸಿ ಶಶಿಹಾಸನಂ ನೋಡಿ ನಗುತಿಂತೆಂದನು||
ಭಾವನಾಮಗಳು: ಬಾೞ್ಕೆ/ಬಾೞಿಕೆ, ಬಾೞ್/ಬಾೞು, ಬಾೞ್ವೆ
ಭೂತಕೃದ್ವಾಚಿ: ಬಾೞ್ದು/ಬಾೞಿ(ಹೊಸಗನ್ನಡದಲ್ಲಿ)
ವರ್ತಮಾನಕೃದ್ವಾಚಿ: ಬಾೞ್ವ/ಬಾೞುವ(ಹೊಸಗನ್ನಡದಲ್ಲಿ)

‹ ಕುಱಿ, ಗುಱಿ ಬಱಿ, ಬಱ, ಬಱಡು, ಬಱಿಗು ›
  • ದಿನಕ್ಕೊಂದು ಪದ
~.~
  • Login or register to post comments
  • 186 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 8, 2008 - 5:57pm — Shivakumar.Revadi

ಉ: ಬಾಳ್, ಬಾೞ್

Shivakumar.Revadi's picture

ಕನ್ನಡಕಂದರಿಗೆ..ನಮಸ್ಕಾರಗಳು.
ವಾಳ್ ಅಂದರೆ ಸಹ ಕತ್ತಿ, ಚೊರಿ ಅನ್ನುವ ಅರ್ಥವೂ ಇದೆಯಲ್ಲವೆ ?

ನೆನಪಿಸಿಕೊಳ್ಳಿ ಯಶೊಧರ ಚರಿತೆಯಲ್ಲಿಬರುವ ಈ ಸಾಲುಗಳನ್ನು.
"ಕೀಳ್ತ ಕರವಾಳ್ಗಂ ಪಿಡಿದ ನನ್ನುಂ, ಮಿಳ್ತುಮಿನಂತಿದ್ದ ಮಾರಿಗೂಂ ಪೆದರದೆ,ಅಳ್ತಿಯಯನೇ ನುಡಿದ......."
ಸರಿಯಾಗಿ ನೆನಪಿಲ್ಲ...

ನನ್ನಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 11:18am — kannadakanda

ಉ: ಬಾಳ್, ಬಾೞ್

kannadakanda's picture

ಪ, ಬ, ಮಗಳು ಎರಡು ಪದಗಳು ಸೇರುವಾಗ ವ ಆಗುವುದೆಂಬ ನಿಯಮ. ಬಾಳ್=ಕತ್ತಿ ಎಂಬುದು ಮೂಲಪದ. ನೀವು ತಿಳಿಸಿರುವುದು ಕರ+ಬಾಳ್=ಕರವಾಳ್
ಪದ್ಯದ ಸರಿಯಾದ ಪಾಠ ಇಂತಿದೆ
’ಕಿೞ್ತ ಕರವಾಳ್ಗಂ ಪಿಡಿದ ನನ್ನುಂ ಮಿೞ್ತುವಿನಂತಿದ್ದ ಮಾರಿಗುಂ ಪೆಳಱದೆ ಅೞ್ತಿಯಿನೇ ನುಡಿದ’ ಇರಬೇಕು. ಮೂಲಪಾಠ ಸಿಕ್ಕಾಗ ವಿವರಿಸುತ್ತೇನೆ.
ಈ ಉದಾಹರಣೆಗಳನ್ನು ನೋಡಿ
ಕೈ+ಬಾಳ್=ಕೈವಾಳ್=ಕೈಗತ್ತಿ
ನಿಲು+ಬಾಗಿಲು=ನಿಲುವಾಗಿಲು
ನಿಲು+ಮನೆ=ನಿಲುವನೆ
ಮರ+ಮಾನಿಸ=ಮರವಾನಿಸ
ಎರಡ್+ಮಾತು=ಎರೞ್ವಾತು (ಎರೞ್ಮಾತು ಕೂಡ ಇದೆ)
ನೆಱೆ+ಪೆಱೆ=ನೆಱೆವೆಱೆ
ಕರೆ+ಪಣ್ಣು=ಕರೆವೆಣ್ಣು
ಕುಲ+ಪೆಣ್ಣು=ಕುಲವೆಣ್ಣು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 10:41am — kpbolumbu

ಉ: ಬಾಳ್, ಬಾೞ್

kpbolumbu's picture

ಮಲೆಯಾಳದಲ್ಲಿ ಅರಿವಾಳ್ ಎಂಬ ಪದವಿದೆ. ಇದು ಕನ್ನಡದಿಂದ ಹೋದಂತಹುದು ಎನ್ನುತ್ತಾರೆ. ಅರಿ+ಬಾಳ್ ಎಂದು ಬಿಡಿಸಲಾಗುತ್ತದೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 10:46am — kannadakanda

ಉ: ಬಾಳ್, ಬಾೞ್

kannadakanda's picture

ತಮಿೞ್, ಮಲಯಾಳಂಗಳಲ್ಲಿ ವಾಳ್ ಬಾಳ್‍ಗೆ ದಾಯಾದಿ ಪದ. ಹಾಗೆಯೇ ಕನ್ನಡದ ಬಾೞ್ ತಮಿೞ್ ಮಲಯಾಳಂಗಳೆರಡಱಲ್ಲೂ ವಾೞ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 8, 2008 - 8:47pm — ಶ್ರೀನಿಧಿ

ಉ: ಬಾಳ್, ಬಾೞ್

ಶ್ರೀನಿಧಿ's picture

Laughing out loud

ನನ್ನಂತಹ ಅನೇಕರಿಗೆ, ಬಹುತೇಕ ಕನ್ನಡಿಗರಿಗೆ ೞು=ಳು ಆಗಿಹೋಗಿದೆ. ನೀವು ಹಾದಿಯಲ್ಲಿ ಹೋಗಿ ಬಾಳು ಕೊಡು ಎಂದರೆ ಯಾವ ಸಮಬುದ್ಧಿಯವನೂ ಕತ್ತಿ ಕೊಡುವುದಿಲ್ಲ.

ಅಂದಹಾಗೆ ಕನ್ನಡಕಂದರೇ,
http://en.wiktionary.org/wiki/Transwiki:Grammar_Nazi ಗೆ ಕನ್ನಡದಲ್ಲಿ ಏನೆನ್ನಬಹುದು?? Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 11:20am — kannadakanda

ಉ: ಬಾಳ್, ಬಾೞ್

kannadakanda's picture

ಹಾಗಾಗಿ ಬಾಳ್ ಎಂದರೆ ಕತ್ತಿ ಎಂಬರ್ಥದಲ್ಲಿ ಪದವಿರುವುದು ನಿಮಗೆ ಗೊತ್ತಿದ್ದಿರಲಿಕ್ಕಿಲ್ಲ. ಇದು ಕನ್ನಡಿಗರ ದೌರ್ಭಾಗ್ಯ. ಹೀಗಾಗಿ ಕೆಲವು ಪದಗಳನ್ನು ಕಳೆದುಕೊಂಡಿದ್ದೇವೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆಗೞ್
  • ಕುಱಿ, ಗುಱಿ
  • ಉಲ್
  • ಮೊರೆ, ಮೊಱೆ
  • ಬಿಲ್
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator