ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.
ನೀವು ಈ ಜನಪದ ಹಾಡನ್ನು ಕೇಳಿರಬಹುದು .( ಜೋಗಿ ಚಿತ್ರದಲ್ಲಿ ಇರುವದು ಅಲ್ಲ. ಜನಪದದಲ್ಲಿ ಇರುವ ಹಾಡು) . ಸಿ. ಅಶ್ವಥ್ ಮತ್ತಿತರರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.
ಇದರಲ್ಲಿ ಒಳ್ಳೇಯ ಗಂಡನ ಬಿಟ್ಟು , ಎಳ್ಳೀನ ಹೊಲವ ಬಿಟ್ಟು , ಜೋಗಿಗೆ ಮರುಳಾಗಿ 'ನಿನ್ನಲ್ಲಿ ನನಗೆ ಮನಸಾದೆ '( ಇಂದಿನ ಐ ಲವ್ ಯೂ!) ಎಂದು ಅವನ ಹಿಂದೆ ಹೊರಟ ಹೆಣ್ಣು ಮಗಳು ಯಾರು ? ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋಗುವಂಥ ಸನ್ನಿವೇಶವನ್ನು ಗುರುತಿಸಿರುವ ( ಅಥವಾ ಸ್ವೀಕರಿಸಿರುವ) ಈ ಹಾಡಿನ ಹಿನ್ನೆಲೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

- Login or register to post comments
- 1558 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಜೋಗಪ್ಪ - ಮಲೆ ಮಹಾದೇವ
ನನಗೆ ತಿಳಿದಂತೆ ಈ ಹಾಡು ಮಲೆ ಮಹಾದೇವನ ಕುರಿತು ಇರುವುದು
ಜೋಗಪ್ಪ - ಮಲೆ ಮಹಾದೇವ
ಧನ್ಯವಾದಗಳು , ಹೆಚ್ಚಿಗೆ ವಿವರ ಇದ್ದರೆ ತಿಳಿಸಿ. ಗಂಡನನ್ನು ಬಿಟ್ಟು ಮಹಾದೇವನ್ ಹಿಂದೆ ಬಂದವಳು ಯಾರು?
ತಮಾಷೆಗಾಗಿ!
ಗಂಡನಿಗಿಂತಲೂ ಉನ್ನತವಾದ ದೇವರನ್ನು ನೋಡಹೊರಟವಳು!
ಇದು ಜನಪದ ಕ್ರುತಿಯಾದ್ದರಿಂದ ಅದರ ಮೂಲ ಯಾರೆಂದು ತಿಳಿದಿರಲಿಕ್ಕಿಲ್ಲ. ತಿಳಿದವರಾರಾದರೂ ತಿಳಿಸಿದರೆ ನನಗೂ ತಿಳಿಸಿ. ಅರಿವ ಕುತೂಹಲವಿದೆ.
ಪದ ಪ್ರಯೋಗ
> ಅರಿವ ಕುತೂಹಲವಿದೆ
ಅರಿತುಕೊಳ್ಳುವ ಕುತೂಹಲ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಹೌದು
ಅರಿ ಎಂದರೆ ಕ್ರಿಯಾಪದವಾಗಿ ತಿಳಿ ಎಂದಾಗುತ್ತದೆ.ತಿಳಿಯುವ,ಅರಿಯುವ ಎನ್ನಲು ಅರಿವ ಎಂದು ಉಪಯೋಗಿಸಿದ್ದೇನೆ.ಹೀಗೆ ಅರಿವ,ತಿಳಿವ ಎಂದು ಉಪಯೋಗಿಸುತ್ತಾರಲ್ಲವೆ?
ಕುತೂಹಲ
ಕುತೂಹಲವೆಂದರೆ ತಿಳಿಯುವ/ಅರಿಯುವ ಆಸೆ/ಆಸಕ್ತಿ ಎಂದು ಅರ್ಥವೆಂದು ನಾನು ಭಾವಿಸಿದ್ದೇನೆ.
ಆದ್ದರಿಂದ ಅರಿವ/ಅರಿಯುವ ಕುತೂಹಲ ಎಂದು ಹೇಳಬೇಕಾಗಿಲ್ಲ. ಬರೀ ಕುತೂಹಲವೆಂದರೆ ಸಾಕೆಂದು ನನ್ನ ಅನಿಸಿಕೆ.
ನಾನು
ನಾನು ಕುತೂಹಲವೆಂದರೆ ತವಕ ಎಂದು ತಿಳಿದಿದ್ದೆ.ನನ್ನದು ತಪ್ಪು ಕಲ್ಪನೆ ಆಗಿತ್ತೇನೊ,ನೀವು ಹೇಳಿರುವುದು ಸರಿ ಇದ್ದಿರಬಹುದು.ಧನ್ಯವಾದಗಳು.
ಉ: ಕುತೂಹಲ
ಕೇವಲ ಅರಿಯುವ ಕುತೂಹಲವೊಂದೆ ಇಲ್ಲವಲ್ಲ .. ನೋಡುವ ಹಾಗೂ ಕೇಳುವ ಕುತೂಹಲವೂ ಇರುವುದಲ್ಲವೆ? ಹಾಗಾಗಿ, ನನ್ನ ಪ್ರಕಾರ ಕುತೂಹಲವೆಂದರೆ (ಕೇವಲ) ಆಸಕ್ತಿ! ಏನಂತೀರಿ?
ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ - ಒಂದು update!
ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ .
ಎಂದು ಹಿಂದೊಮ್ಮೆ ಕೇಳಿದ್ದೆ . ಅದು ಯಾಕೋ ಇಲ್ಲಿ ಚರ್ಚೆಗಳು ಬಾಷಾ ಶುದ್ಧಿಯ / ಶಬ್ದಪ್ರಯೋಗ ಕುರಿತಾದ ಚರ್ಚೆಗಳಾಗಿ ಬದಲಾಗಿ ಬಿಡುತ್ತವೆ!. ಇದಕ್ಕೂ ಅದೇ ಗತಿಯಾಯಿತು.
ಇರಲಿ .
ನಾನು ಆಗಾಗ ಧಾರವಾಡದಲ್ಲಿ ಸಮಾಜ ಪುಸ್ತಕಾಲಯಕ್ಕೆ ಭೆಟ್ಟಿ ಕೊಡುತ್ತೇನೆ. ಅಲ್ಲಿ ಒಬ್ಬ ಸೇಲ್ಸ್‍ಮನ್ ಇದ್ದಾರೆ . ಪುಸ್ತಕದ ಅಂಗಡಿಯಲ್ಲಿ ಕೆಲಸಮಾಡಿಕೊಂಡಿರುವ ಅವರು ಬಹಳ ಓದಿಕೊಂಡಿದ್ದಾರೆ. ಅವರನ್ನು ಕೇಳಿದೆ. ಅವರು ಈ ಹಾಡಿಗೆ 'ಆಧ್ಯಾತ್ಮಿಕ ಅರ್ಥ' ಇದೆ ಎಂದು ತಿಳಿಸಿದರು.
ಹೆಚ್ಚಿನ ವಿವರ ನಾನು ಕೇಳಲಿಲ್ಲ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಜೋಗಿ
ಮೇಲು ನೋಟಕ್ಕೆ ಈ ಹಾಡು, ಹಾದರಕ್ಕೆ ಎಳಸುವ ಚಂಚಲ ಮನಸ್ಸಿನ ಹೆಣ್ಣೊಬ್ಬಳ ಹಾಡಿನಂತೆ ತೋರುತ್ತದೆ. ಆದರೆ ಇದಕ್ಕೆ ಒಳತಿರುಳಿನ ತಿಳಿವಿದೆ ಎಂದು ತಿಳಿದು ಕಣ್ಣರಳಿಸುವಂತಾಯಿತು. ಹಾಗೆಯೇ ಜನಪದದಲ್ಲಿ "ಪಾರವತಿಯನ್ನೂ ಹಾದರ ಬಿಡಲಿಲ್ಲ" ಎಂದಿದೆ. ಮಹಾಬಾರತವನ್ನು "ಹಾದರದ ಕತೆ,ಸೋದರದ ವದೆ" ಎನ್ನಲಾಗಿದೆ. ಮಹಾಬಾರತದ ಹೊತ್ತಿನಲ್ಲಿ ಮಕ್ಕಳಾಗದಿದ್ದವರಿಗೆ "ಮಕ್ಕಳ ಮಾಡುವ ಸಲುವಾಗಿ" ಗರತಿ ಹೆಣ್ಣು ಬೇರೊಬ್ಬನ ಸಂಗಡ ಮಲಗುತ್ತಿದ್ದಳು. ಅದರ ಉದ್ದೇಸ ಬರೀ ಮಕ್ಕಳಾಗಿ ಪೀಳಿಗೆ ಮುನ್ನಡೆಯಲಿ ಎಂಬುದಟ್ಟೇ ಆಗಿರುತ್ತಿತ್ತು. ಕಾಮ ವಾಸನೆ ಇರುತ್ತಿರಲಿಲ್ಲ. ಹಾಗೂ ಆ ಕಾಲದಲ್ಲಿ ಬಹುಗಂಡಂದಿರನ್ನು ಹೊಂದುವ ಪದ್ದತಿ ಇತ್ತು. ಆಚಾರ್‍ಯ ಬೀಸ್‍ಮರ ಅಪ್ಪ ಶಂತನುನ ಮೂರನೆಯ ಹೆಂಡತಿ 'ಸತ್‍ಯವತಿ', ಮದುವೆಗೆ ಮುನ್ನ ಮುನಿಯೊಬ್ಬರೊಂದಿಗೆ ಕೂಡಿ ಹುಟ್ಟಿದವನೇ ವ್‍ಯಾಸ ಮುನಿ, ಎಂದು ವ್‍ಯಾಸರೇ ಬರೆದ ಮಹಾಬಾರತದಲ್ಲಿದೆ. ಇದನ್ನೆಲ್ಲಾ ನೋಡಿದರೆ ಆಗಿನ ಹೊತ್ತಿನಲ್ಲಿ, ಹಾದರದ ಬಗ್ಗೆ ಈಗಿರುವಾಟು ಮೈಲಿಗೆ-ಮುಡಿಚೆಟ್ಟಿನ ಬಾವನೆ ಇರಲಿಲ್ಲ ಅನಿಸುತ್ತದೆ.
ನನ್ನ
ನನ್ನ ಪ್ರಕಾರ ಇದು ಒಂದು ಪ್ರೆಮಗೀತೆ ಅನ್ನಿಸುತ್ತೆ.
ಒಂದು ಮದುವೆಗೆ ಬಂದ ಹುಡುಗಿ ಒಬ್ಬ ಒಳ್ಲೆ ಹುಡುಗನಿಗೆ ಹುಡುಕುತ್ತಿರುತ್ತಾಳೆ, ಆದರೆ ಹುಡುಗ ಜೀವನದ ಗುರಿ ಹುಡುಕುತ್ತ ಇರುತ್ತಾನೆ...
ಗುತ್ತಿಲ್ಲ ಗುರಿಇಲ್ಲ .... ಅಂತ ಹೆಳ್ತಾನೆ....
ಇದು ನನ್ನ ಅನಿಸಿಕೆ.
-nimma bembidadha betala
ಉ: ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.
ಸ್ವಾಮಿ ಮಿಶ್ರಕೋಟಿಯವರೇ!
ನಿಮ್ಮ ಜೋಗಿಯ ಹಾಡಿನ ಹಿನ್ನೆಲೆಯ ಹುಡುಕಾಟ ತುಂಬಾ ಇಷ್ಟವಾಯಿತು. ನಾನೂ ಆ ಜನಪದಗೀತೆಯನ್ನು ಕೇಳಿ ಮೆಚ್ಚಿದ್ದೇನೆ. ಅದರಲ್ಲಿ ಸಾಕಷ್ಟು ಬದಲಾವಣೆಗೊಂಡ ಹಾಡುಗಳನ್ನೂ ಕೇಳಿದ್ದೇನೆ ಥೇಟ್ ‘ಜೋಗಿ’ಯ ಹಾಡಿನಂಗೆ. ನಾನೊಂದು ಕಥೆ (ಜಾನಪದ) ಓದಿದ್ದೆ. ಅದು ಇಬ್ಬರು ಮಲ-ಸಹೋದರಿಯರ ಕಥೆ. ಅದರ ಕೆಲವು ಸಾಲುಗಳು ನನ್ನ ನೆನಪಿನಲ್ಲಿ . .
. . .
ಹಿರಿಹೆಂಡತಿಯ ಮಗಳಿಗೆ ಮೈಮುರಿಯುವಂತಹ ಕೆಲಸ. ಇವಳ ಹೆತ್ತವ್ವನೂ ಇಲ್ಲ. ಮೈಮುರಿಯುವ ಕೆಲಸ ಹಾಗೂ ಅರೆಹೊಟ್ಟೆಯಿಂದಾಗಿ ಅವಳು ಸಪೂರ, ಏಳು ಮಲ್ಲಿಗೆ ತೂಕದವಳು. . . ಜೊತೆಗೆ ತನ್ನವ್ವನಂತೆಯೇ ಸುರಸುಂದರಿ!
ಕಿರಿಹೆಂಡತಿಯ ಮಗಳು ಮುದ್ದಿನಿಂದಾಗಿ ಮೊದ್ದು ಮೊದ್ದು. ಕೆಲಸವಿಲ್ಲದೆ ಹಾಗೂ ದಿನಾಪೂರಾ ಮೇಯುತ್ತಿರುವುದರಿಂದ ಮೈಯಲ್ಲೂ ಕೊಬ್ಬು, ಮುದ್ದಿನಿಂದಾಗಿ ಹಾಗೂ ಮನಪೂರಾ ಕೊಬ್ಬು!(ಸೊಕ್ಕಾ?) ಜೊತೆಗೆ ರೂಪವೋ ತನ್ನವ್ವನಂತೆಯೇ.
ಸುರಸುಂದರಿಯೊಮ್ಮೆ ಸುರಸುಂದರಾಂಗ ರಾಜಕುಮಾರನ ಕಣ್ಣಿಗೆ ಬೀಳುತ್ತಾಳೆ. ತಕ್ಷಣವೇ ಪ್ರೇಮೋದಯ! ಸುರಸುಂದರಾಂಗ ಮಾರುವೇಷದಲ್ಲಿ ಸುರಸುಂದರಿಯನ್ನು ಮೆಚ್ಚಿಸಲು ಹಿಂದೆದೇ ಸುತ್ತುವುದು ಮೊದ್ದು ಸೋದರಿಯ ಕಣ್ಣಿಗೆ ಬಿಳದಿರುವುದೇ? ಅವಳ ಹಿಂದೆ ಇಂತಹ ಸುರಸುಂದರಾಂಗ, ಮನಮೋಹನಾಂಗ ಸುತ್ತುವುದು ನೋಡಿ ಅವಳೊಟ್ಟಿಯಲ್ಲಿ ಉರಿಯೋ ಉರಿ. ಸರಿ ಇನ್ನು, ಸುರಸುಂದರಿಯ ಗ್ರಹಚಾರ ಬಿಡಿಸಬೇಕೆಂದು ಅಮ್ಮನ ಗಂಟು ಬೀಳುತ್ತಾಳೆ.
ಅಮ್ಮನೂ ಸುರಸುಂದರನನ್ನು ನೋಡುತ್ತಾಳೆ. ಹೇಗಾದರೂ ಸುರಸುಂದರಿಯನ್ನು ತೊಲಗಿಸಿದರೆ ತನ್ನ ಮುದ್ದಿನ ಮೊದ್ದಿಗೆ ತಕ್ಕ ವರ ಎಂದುಕೊಳ್ಳುತ್ತಾಳೆ. ಕ್ಯಾತೆ ತೆಗೆದು ನಾಳೆಯೇ ಬರುವ ಕುರೂಪಿ ಜೋಗಿಯೊಂದಿಗೆ (ತಿರುಕ) ನಿನ್ನ ಮದುವೆ ಮಾಡಿ ತೊಲಗಿಸುತ್ತೇನೆ ಎಂದು ಶಪತ ಮಾಡುತ್ತಾಳೆ. ಮಾರನೆಯ ದಿನ ಹಾಗೇ ಮಾಡಿ ಕೈತೊಳೆಯುತ್ತಾಳೆ.
ಆದರೆ, ನಮ್ಮ ಸುರಸುಂದರಿ ಮದುವೆಯ ಮರುದಿನವೇ ಅರಮನೆಯಲ್ಲಿ, ರಾಜಕುಮಾರಿಯಾಗಿ! (ಡಯಾನಾ ಬಗ್ಗೆ ಹೇಳುತ್ತಿಲ್ಲ ಮಾರಾಯ್ರೇ) . . . . .
ಮೊದಲೇ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ನಮ್ಮ ಮೊದ್ದಮ್ಮ ಸುಮ್ಮನಿರಬೇಕಲ್ಲ. ತನ್ನನ್ನೂ ಜೋಗಿಯೊಬ್ಬನಿಗೆ ಮದುವೆ ಮಾಡಲು ತಾಯಿಯನ್ನು ಪೀಡಿಸುತ್ತಾಳೆ. ತನಗೂ ರಾಜಕುಮಾರನೇ ಸಿಗಲೆಂಬ ಆಸೆ ಅವಳಿಗೆ (:
ಅದೂ ನಡೆದು ಹೋಗುತ್ತದೆ. ಅವಳು ಜೋಗಿಯ ಹಿಂದೆ! ಕೇಳುತ್ತಾ ಹೋಗುತ್ತಾಳೆ. ಜೋಗಿ ನಿನ್ನರಮನೆಯೆಲ್ಲಿ? ಎಂದು. . .
ಅದೇನೇನೋ ದಾಟಿ ಅಂತೂ ಸಿಗುತ್ತದೆ ತಿರುಪೆಯವನ ಅರಮನೆ!
ಈ.ನಾ.ಕೇಸರ್ಕರ್