ಕ್ಷಮಿಸಿ.. ತಡೆದುಕೊಳ್ಳಲಿಕ್ಕಾಗಲಿಲ್ಲ, ಬರೆಯುತ್ತಿದ್ದೇನೆ. ನಮ್ಮ ಚಿಕ್ಕಮ್ಮ ಸ್ಕೂಲೊಂದರಲ್ಲಿ ಕೆಲಸ ಮಾಡುತ್ತಾರೆ. ಅವರ ಶಾಲೆಯಲ್ಲಿ 'ಪುಳಕಿತ್' ಅನ್ನುವ ಹೆಸರಿನ ಹುಡುಗನೊಬ್ಬನಿದ್ದನಂತೆ. ಹಾಗೆಯೇ 'ಖಂಡಿತ್' ಅನ್ನುವ ಹೆಸರಿಟ್ಟರೆ ಹೇಗೆ? ಒಂತರ ಲೆವೆಲ್ಲಾಗಿದೆ ಅಲ್ಲವೆ ಹೆಸರು
ಖಂಡಿತ ಪದವು ನಿಶ್ಚಿತವಾಗಿ ಎನ್ನುವ ಅರ್ಥದಲ್ಲಿ ಹೆಚ್ಹು ಬಳಕೆಯಲ್ಲಿದೆ.ಒಂದು ನಾಮಪದವಾಗಿ ಖಂಡಿತ ಪದದ ಅರ್ಥ ಅಸಂಪೂರ್ಣವಾದುದು ಎಂದಾಗುತ್ತದೆ.
ನೀವು ಹೇಳಿದ ಹಾಗೆ, ಖಂಡಿತ(ಕನ್ನಡ) ಪದ "ನಿಶ್ಚಿತವಾಗಿ" ಎನ್ನುವ ಅರ್ಥದಲ್ಲಿ ಹೆಚ್ಹು ಬಳಕೆಯಲ್ಲಿದೆ. ಹಾಗೆಯೇ ಈ ಖಂಡನೆ(ಸಂಸ್ಕೃತ) ಗಮನಿಸೋಣ. ಖಂಡನೆ - ಕ್ರಿಯಾಪದವಾದರೆ ಖಂಡಿತ (ನಾಮಪದ) ತೆಗಳುವ, ತಿರಸ್ಕರಿಸುವ, ಬೈಯ್ದು ಜಾಲಾಡುವ ಎನ್ನುವ ಅರ್ಥ ನೀಡುತ್ತದ.
ಖಂಡಿಸಿದ ಕೃತಿ - "ಖಂಡಿತ" ವಾಗುತ್ತದೆ.
ಕವಿರತ್ನ ಕಾಳಿದಾಸದಲ್ಲಿ.
ಪಂಡಿತಾಃ ಖಂಡಿತಾಃ ಸರ್ವೇ, ಅಂತಾ ಕಾಳಿದಾಸ ಭೋಜರಾಜನ ಚರಣ ಗೀತೆ ಹಾಡುತ್ತಾನಲ್ಲವೇ.
ನಂತರ ಮತ್ತೆ ಅವನನ್ನು ಬದುಕಿಸಲು
ಪಂಡಿತಾಃ ಮಂಡಿತಾಃ ಸರ್ವೇ ಅಂತಾ ಹಾಡುತ್ತಾನೆ.
ಅದರಲ್ಲಿ ನಮ್ಮ ಪದ್ಮಭೂಷಣ ಡಾ||ರಾಜ್ ಕುಮಾರರವರ ಅಭಿನಯ ಮೆಚ್ಚುವಂಥಾದ್ದು.
"ಇಗೋ ಕನ್ನಡ" ಪೇಪರಿನಲ್ಲಿ ಬರುತ್ತಿದ್ದಾಗ ಈ ಪ್ರಶ್ನೆ ಎದ್ದಿತ್ತು. ನನಗೆ ನೆನಪಿರುವ ಮಟ್ಟಿಗೆ 'ನಿಶ್ಚಿತವಾಗಿ' ಎನ್ನುವ ಅರ್ಥಕ್ಕೆ (ಕನ್ನಡದ) ಕಂಡಿತವೇ ಸರಿ ಎಂದು ಪ್ರೊ. ವೆಂಕಟಸುಬ್ಬಯ್ಯನವರು ಹೇಳಿದ್ದರು. ನನ್ನ ಬಳಿ "ಇಗೋ ಕನ್ನಡ" ಪುಸ್ತಕ ಇಲ್ಲ; ಪೇಪರಂತೂ ಇಲ್ಲವೇ ಇಲ್ಲ. ಆ ಚರ್ಚೆ ಪುಸ್ತಕದಲ್ಲಿ ಸೇರಿದೆಯೊ ಇಲ್ಲವೋ ಗೊತ್ತಿಲ್ಲ. ಯಾರಾದರೂ ನೋಡಿ ಹೇಳುವಿರಾ? ನನ್ನ ತಿಳಿವಳಿಕೆ ತಪ್ಪಾಗಿದ್ದು ಅದು ಕಂಡಿತ "ಖಂಡಿತ"ವೇ ಆಗಿದ್ದಲ್ಲಿ ನಾನು ಕಂಡಿತ ತಿದ್ದಿಕೊಳ್ಳುತ್ತೇನೆ.
ನಾಣ್ನುಡಿ/ನಾಣ್ಣುಡಿ - ಪವನಜರು ಹೇಳಿದ್ದು ಸರಿ; ನಾಣ್ನುಡಿಯನ್ನು ನಾಡು ನುಡಿಯಾಗಿ ಬಿಡಿಸಲು ಬಾರದು (ನಾಡೆಲ್ಲ ತಲೆ ತಗ್ಗಿಸಬೇಕಾದಂತಹ ಮಾತಾಗಿದ್ದರೆ ಅದು ಬೇರೆ )
ಸಂಧಿಯ ಬಗ್ಗೆ ಹೆಚ್ಚು ಹೇಳಲಾರೆ; ಇಲ್ಲಿ ನಡೆಯುವುದು ಸಂಧಿಯಲ್ಲ ಸಮಾಸ ಎಂದೆನಿಸುತ್ತೆ. ಇಲ್ಲಿ ಬಲ್ಲವರು ಬೆಳಕು ಚೆಲ್ಲಬೇಕು.
ಅದು ಕ೦ಡಿತವಾಗಿಯೂ 'ಕ೦ಡಿತ.' ಶ್ರೀ ಜಿ. ಪ್ರೊ. ವೆಂಕಟಸುಬ್ಬಯ್ಯನವರಲ್ಲದೆ ಶ್ರೀ ಮ೦ಜೇಶ್ವರ ಗೋವಿ೦ದ ಪೈಗಳು ಕೂಡ ಇದನ್ನೇ ಹೇಳುತ್ತಿದ್ದರು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಸಂಕ್ಷಿಪ್ತ ನಿಘಂಟು ಪ್ರಕಾರ ಅದು ನಾಣ್ನುಡಿ ಅಲ್ಲ ನಾಣ್ಣುಡಿ. ನಾಣ್ಣುಡಿ ಎಂದರೆ "ಜನಸಾಮಾನ್ಯರಲ್ಲಿ ಬಳಕೆಯಿರುವ ಮಾತು; ಗಾದೆ; ಲೋಕೋಕ್ತಿ" ಎಂದು ಅರ್ಥ.
ನಾಣ್ ಪದದ ಅರ್ಥಗಳು - ನಾಚಿಕೆ; ಲಜ್ಜೆ; ಸಿಗ್ಗು; ಅವಮಾನ; ಗುಹ್ಯೇಂದ್ರಿಯ
ಕಂಡಿತ, ಖಂಡಿತ ಎರಡನ್ನೂ ಕಸಾಪ ನಿಘಂಟಿನಲ್ಲಿ ಕಾಣಬಹುದು. ನಾನೂ ಕೂಡ ಕಂಡಿತ ತಪ್ಪು ಎಂದೇ ನಂಬಿದ್ದವನು. ಬಹುಶಃ ಕಂಡಿತ ಎನ್ನು ವುದು ಬಳಕೆಯಲ್ಲಿ ಬಂದಿರುವುದರಿಂದ ಕಸಾಪ ನಿಘಂಟಿನಲ್ಲಿ ಅದನ್ನು ಸೇರಿಸಿರಬಹುದು. ನಾನಂತೂ ಖಂಡಿತವಾಗಿಯೂ ಖಂಡಿತ ಬಳಸುವವನು
ನಾನು ಪವನಜನವರನ್ನು ಬೆಂಬಲಿಸಿತ್ತುನೆ; ನಾನು ತಿಳಿದಂತೆ ನಾಣ್ಣುಡಿಯೇ ಸರಿಯಾದ ಬಳಕೆ (ಅದನ್ನೇ ನಾನು ಇಲ್ಲಿಯವರೆಗೆ ನೋಡುತ್ತಾ ಬಂದಿದ್ದು). ನಾಣ್ಣುಡಿಯನ್ನು ನಾಡು + ನುಡಿ ಎಂದು ವಿಭಜಿಸಿದ್ದನ್ನು ಕಂಡಾಗ ಒಮ್ಮೆ ನನ್ನಲ್ಲಿ ನಾಣ್ಣುಡಿಯೋ ಅಥವಾ ನಾಣ್ನುಡಿಯೋ ಎಂಬ ಅನುಮಾನ ಬಂದಿತ್ತು, ಆದರೆ ಪವನಜ ಅವರ ಸ್ಪಷ್ಚೀಕರಣದ ನಂತರ ಆ ಅನುಮಾನ ಕಳೆಯಿತು.
ನನ್ನ ಹತ್ತಿರ ಎಸ್. ವಿ. ರಂಗಣ್ಣ ಅವರ ಒಂದು ಪುಸ್ತಕವಿದೆ . ಅದರ ಹೆಸರೇ ನಾಟುನುಡಿ. ಇಂಗ್ಲೀಷಿನ ಎಪಿಗ್ರಾಮ್ ಗೆ ಈ ಪದ ಉಪಯೋಗಿಸಿದ್ದಾರೆ . ಅದೇ 'ನಾಣ್ಣುಡಿ'-'ನಾಣ್ನುಡಿ' ಯ ಸಂಧಿ ವಿಗ್ರಹ ಇರಬಹುದೇ?

ನಾಡು ನುಡಿ ಎಂಬುದು ನಾಣ್ಣುಡಿ ಆಗಿರಬಹುದು. ಯಾವುದೇ ಪುಸ್ತಕದಲ್ಲೂ (ಕಸಾಪ ನಿಘಂಟು, ಇಗೋಕನ್ನಡ) ಈ ಪದದ ವ್ಯುತ್ಪತ್ತಿ ನೀಡಿಲ್ಲ. ಪೆಣ್ಣು ಕೂಸು -> ಹೆಣ್ಣು ಕೂಸು -> ಹೆಂಗೂಸು -> ಹೆಂಗುಸು -> ಹೆಂಗಸು ಆದ ರೀತಿಯಲ್ಲೇ ನಾಡು ನುಡಿ ನಾಣ್ಣುಡಿ ಆಗಿರಬಹುದು.
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
ಕಂಡಿತ ಮಾಡಬಹುದು
ಹಾಗೆಯೇ ಮಾಡಬೇಕು, ಸಹ.
ಕಂಡಿತವಲ್ಲ, ಅದು ಖಂಡಿತ.
ದಯವಿಟ್ಟು ತಪ್ಪು ತಿಳಿಯಬೇಡಿ.
ಕಂಡಿತವಲ್ಲ, ಅದು ಖಂಡಿತ.
ಖಂಡಿತ ಅಂದರೆ ಸಂಸ್ಕೃತದಲ್ಲಿ ತುಂಡಾದ ಎಂದು ಅರ್ಥ.
ಕನ್ನಡದಲ್ಲಿ ಈ ಪದವನ್ನು ಯಾವ ಸಮಯದಲ್ಲಿ ಬಳಸಬೇಕು ಎಂದು ಸರಿಯಾಗಿ ನನಗೆ ತಿಳಿಯದು.
ಟೈಪೊ
ಬಹುಶಃ ಟೈಪ್ ಮಾಡುವಾಗ ಹೀಗಾಗಿರಬೇಕು.
ಸಂಸ್ಕೃತ ಚೆನ್ನಾಗಿ ಬಲ್ಲವರು, ಜಿ.ವೆಂ.ರವರು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಒಂದು ಅಪ್ರಸ್ತುತ ಅನಿಸಿಕೆ
ಕ್ಷಮಿಸಿ.. ತಡೆದುಕೊಳ್ಳಲಿಕ್ಕಾಗಲಿಲ್ಲ, ಬರೆಯುತ್ತಿದ್ದೇನೆ. ನಮ್ಮ ಚಿಕ್ಕಮ್ಮ ಸ್ಕೂಲೊಂದರಲ್ಲಿ ಕೆಲಸ ಮಾಡುತ್ತಾರೆ. ಅವರ ಶಾಲೆಯಲ್ಲಿ 'ಪುಳಕಿತ್' ಅನ್ನುವ ಹೆಸರಿನ ಹುಡುಗನೊಬ್ಬನಿದ್ದನಂತೆ. ಹಾಗೆಯೇ 'ಖಂಡಿತ್' ಅನ್ನುವ ಹೆಸರಿಟ್ಟರೆ ಹೇಗೆ? ಒಂತರ ಲೆವೆಲ್ಲಾಗಿದೆ ಅಲ್ಲವೆ ಹೆಸರು
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಚೆನ್ನಾಗಿರತ್ತೆ
ಖಂಡಿತವಾಗಿಯೂ ಈ ಹೆಸರು ಚೆನ್ನಾಗಿರುತ್ತದೆ.
ಪರದೇಶದವರ ಹೆಸರುಗಳನ್ನು ನೋಡಿದ್ರೆ ಕೇಳಿದ್ರೆ ಖಂಡಿತ್ ಅನ್ನುವ ಹೆಸರು ಪ್ರಸ್ತುತವಾಗೇ ಇರುತ್ತದೆ. ನಿಮ್ಮ ಸಹಿಯಲ್ಲಿರುವಂತೆ ಇರದುದದೆಡೆಗೇ ಓಡುವುದು ಜೀವನವಲ್ಲವೇ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಬಳಸಿ
ಖಂಡಿತ ಪದವು ನಿಶ್ಚಿತವಾಗಿ ಎನ್ನುವ ಅರ್ಥದಲ್ಲಿ ಹೆಚ್ಹು ಬಳಕೆಯಲ್ಲಿದೆ.ಒಂದು ನಾಮಪದವಾಗಿ ಖಂಡಿತ ಪದದ ಅರ್ಥ ಅಸಂಪೂರ್ಣವಾದುದು ಎಂದಾಗುತ್ತದೆ.
ಖಂಡಿತ(ಕನ್ನಡ) ಮತ್ತು ಖಂಡಿತ(ಸಂಸ್ಕೃತ)
ನೀವು ಹೇಳಿದ ಹಾಗೆ, ಖಂಡಿತ(ಕನ್ನಡ) ಪದ "ನಿಶ್ಚಿತವಾಗಿ" ಎನ್ನುವ ಅರ್ಥದಲ್ಲಿ ಹೆಚ್ಹು ಬಳಕೆಯಲ್ಲಿದೆ. ಹಾಗೆಯೇ ಈ ಖಂಡನೆ(ಸಂಸ್ಕೃತ) ಗಮನಿಸೋಣ. ಖಂಡನೆ - ಕ್ರಿಯಾಪದವಾದರೆ ಖಂಡಿತ (ನಾಮಪದ) ತೆಗಳುವ, ತಿರಸ್ಕರಿಸುವ, ಬೈಯ್ದು ಜಾಲಾಡುವ ಎನ್ನುವ ಅರ್ಥ ನೀಡುತ್ತದ.
ಖಂಡಿಸಿದ ಕೃತಿ - "ಖಂಡಿತ" ವಾಗುತ್ತದೆ.
ಕವಿರತ್ನ ಕಾಳಿದಾಸದಲ್ಲಿ.
ಪಂಡಿತಾಃ ಖಂಡಿತಾಃ ಸರ್ವೇ, ಅಂತಾ ಕಾಳಿದಾಸ ಭೋಜರಾಜನ ಚರಣ ಗೀತೆ ಹಾಡುತ್ತಾನಲ್ಲವೇ.
ನಂತರ ಮತ್ತೆ ಅವನನ್ನು ಬದುಕಿಸಲು
ಪಂಡಿತಾಃ ಮಂಡಿತಾಃ ಸರ್ವೇ ಅಂತಾ ಹಾಡುತ್ತಾನೆ.
ಅದರಲ್ಲಿ ನಮ್ಮ ಪದ್ಮಭೂಷಣ ಡಾ||ರಾಜ್ ಕುಮಾರರವರ ಅಭಿನಯ ಮೆಚ್ಚುವಂಥಾದ್ದು.
ಕಂಡಿತ - ಖಂಡಿತ
"ಇಗೋ ಕನ್ನಡ" ಪೇಪರಿನಲ್ಲಿ ಬರುತ್ತಿದ್ದಾಗ ಈ ಪ್ರಶ್ನೆ ಎದ್ದಿತ್ತು. ನನಗೆ ನೆನಪಿರುವ ಮಟ್ಟಿಗೆ 'ನಿಶ್ಚಿತವಾಗಿ' ಎನ್ನುವ ಅರ್ಥಕ್ಕೆ (ಕನ್ನಡದ) ಕಂಡಿತವೇ ಸರಿ ಎಂದು ಪ್ರೊ. ವೆಂಕಟಸುಬ್ಬಯ್ಯನವರು ಹೇಳಿದ್ದರು. ನನ್ನ ಬಳಿ "ಇಗೋ ಕನ್ನಡ" ಪುಸ್ತಕ ಇಲ್ಲ; ಪೇಪರಂತೂ ಇಲ್ಲವೇ ಇಲ್ಲ. ಆ ಚರ್ಚೆ ಪುಸ್ತಕದಲ್ಲಿ ಸೇರಿದೆಯೊ ಇಲ್ಲವೋ ಗೊತ್ತಿಲ್ಲ. ಯಾರಾದರೂ ನೋಡಿ ಹೇಳುವಿರಾ? ನನ್ನ ತಿಳಿವಳಿಕೆ ತಪ್ಪಾಗಿದ್ದು ಅದು ಕಂಡಿತ "ಖಂಡಿತ"ವೇ ಆಗಿದ್ದಲ್ಲಿ ನಾನು ಕಂಡಿತ ತಿದ್ದಿಕೊಳ್ಳುತ್ತೇನೆ.
ನಾಣ್ನುಡಿ/ನಾಣ್ಣುಡಿ - ಪವನಜರು ಹೇಳಿದ್ದು ಸರಿ; ನಾಣ್ನುಡಿಯನ್ನು ನಾಡು ನುಡಿಯಾಗಿ ಬಿಡಿಸಲು ಬಾರದು (ನಾಡೆಲ್ಲ ತಲೆ ತಗ್ಗಿಸಬೇಕಾದಂತಹ ಮಾತಾಗಿದ್ದರೆ ಅದು ಬೇರೆ
)
ಸಂಧಿಯ ಬಗ್ಗೆ ಹೆಚ್ಚು ಹೇಳಲಾರೆ; ಇಲ್ಲಿ ನಡೆಯುವುದು ಸಂಧಿಯಲ್ಲ ಸಮಾಸ ಎಂದೆನಿಸುತ್ತೆ. ಇಲ್ಲಿ ಬಲ್ಲವರು ಬೆಳಕು ಚೆಲ್ಲಬೇಕು.
ಕನ್ನಡೀಕರಣ
ನಿಮ್ಮ ಸೂಪ್ರ (ಸೂತ್ರ-ಪ್ರತಿಕ್ರಿಯೆ)ವನ್ನು ನೋಡಿದ್ರೆ, ನೀವಾಗಲೇ ಖಂಡಿತವಾಗಿಯೂ ಕಂಡಿತವನ್ನು ಸ್ವೀಕರಿಸಿದ್ದೀರಿ. (ತಮಾಷೆಗಾಗಿ ಬರೆದದ್ದು)
ಸೂಪ್ರ ದಂತೆ ಸ್ಮೈಲಿಗಳಿಗೆ ಸ್ಮಿತೆ ಎಂಬ ಕನ್ನಡೀಕರಣವೂ ಆಗಿದೆ. ಕನ್ನಡಆಡಿಯೋ ವೇದಿಕೆಯ ಸುವರ್ಣ ಕಾಲದಲ್ಲಿ ಇಂತಹ ಕೆಲವು ಕನ್ನಡ ಪದಗಳು ಹುಟ್ಟಿಕೊಂಡಿವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ: ಕಂಡಿತ - ಖಂಡಿತ
ಅದು ಕ೦ಡಿತವಾಗಿಯೂ 'ಕ೦ಡಿತ.' ಶ್ರೀ ಜಿ. ಪ್ರೊ. ವೆಂಕಟಸುಬ್ಬಯ್ಯನವರಲ್ಲದೆ ಶ್ರೀ ಮ೦ಜೇಶ್ವರ ಗೋವಿ೦ದ ಪೈಗಳು ಕೂಡ ಇದನ್ನೇ ಹೇಳುತ್ತಿದ್ದರು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ನಾಡ್ + ನುಡಿ
ನಾಣ್ನುಡಿಯನ್ನು ನಾಡ್ + ನುಡಿ ಎಂದು ವಿಗ್ರಹ ಮಾಡಿದರೆ ಅದು ಯಾವ ಕನ್ನಡ ಸಂಧಿಯು ಆಗದು. ಬದಲಿಗೆ ಅದು ಸಂಸ್ಕೃತದ ಅನುನಾಸಿಕ ಸಂಧಿಯಾಗುವುದು.
ನನ್ನ ಅನಿಸಿಕೆಯಲ್ಲಿ ಇದು ಎರಡು ಕನ್ನಡ ಪದಗಳ ಮೇಲೆ ಸಂಸ್ಕೃತ ಸಂಧಿ ಪ್ರಯೋಗದಂತೆ ಕಾಣುವುದು.
ನನ್ನ ಅಭಿಪ್ರಾಯ ಸರಿಯೇ ತಿಳಿಸಿ.
ನಾಣ್ನುಡಿ ಅಲ್ಲ ನಾಣ್ಣುಡಿ
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಸಂಕ್ಷಿಪ್ತ ನಿಘಂಟು ಪ್ರಕಾರ ಅದು ನಾಣ್ನುಡಿ ಅಲ್ಲ ನಾಣ್ಣುಡಿ. ನಾಣ್ಣುಡಿ ಎಂದರೆ "ಜನಸಾಮಾನ್ಯರಲ್ಲಿ ಬಳಕೆಯಿರುವ ಮಾತು; ಗಾದೆ; ಲೋಕೋಕ್ತಿ" ಎಂದು ಅರ್ಥ.
ನಾಣ್ ಪದದ ಅರ್ಥಗಳು - ನಾಚಿಕೆ; ಲಜ್ಜೆ; ಸಿಗ್ಗು; ಅವಮಾನ; ಗುಹ್ಯೇಂದ್ರಿಯ
ಕಂಡಿತ, ಖಂಡಿತ ಎರಡನ್ನೂ ಕಸಾಪ ನಿಘಂಟಿನಲ್ಲಿ ಕಾಣಬಹುದು. ನಾನೂ ಕೂಡ ಕಂಡಿತ ತಪ್ಪು ಎಂದೇ ನಂಬಿದ್ದವನು. ಬಹುಶಃ ಕಂಡಿತ ಎನ್ನು ವುದು ಬಳಕೆಯಲ್ಲಿ ಬಂದಿರುವುದರಿಂದ ಕಸಾಪ ನಿಘಂಟಿನಲ್ಲಿ ಅದನ್ನು ಸೇರಿಸಿರಬಹುದು. ನಾನಂತೂ ಖಂಡಿತವಾಗಿಯೂ ಖಂಡಿತ ಬಳಸುವವನು
ಸಿಗೋಣ,
ಪವನಜ
-----------
Vishva Kannada
Think globally, Act locally
ಧನ್ಯವಾದ
ಧನ್ಯವಾದ ಪವನಜರೆ.
ನಾನು ನಾಣ್ನುಡಿ ಎಂದು ಉಚ್ಚರಿಸುವುದನ್ನು ಹೆಚ್ಚಿಗೆ ಕೇಳಿದ್ದೇನೆ.
ಒಂದು ಅನುಮಾನ.
ನಾಣ್ಣುಡಿ ಇಂದು ಒಂದು ಪದವೆ ಅಥವಾ ಎರಡು ಪದಗಳು ಸೇರಿ ಆಗಿರುವುದೆ?
ನಾಣ್ಣುಡಿಯೇ ಸರಿಯಾದ ಪದ
ನಾನು ಪವನಜನವರನ್ನು ಬೆಂಬಲಿಸಿತ್ತುನೆ; ನಾನು ತಿಳಿದಂತೆ ನಾಣ್ಣುಡಿಯೇ ಸರಿಯಾದ ಬಳಕೆ (ಅದನ್ನೇ ನಾನು ಇಲ್ಲಿಯವರೆಗೆ ನೋಡುತ್ತಾ ಬಂದಿದ್ದು). ನಾಣ್ಣುಡಿಯನ್ನು ನಾಡು + ನುಡಿ ಎಂದು ವಿಭಜಿಸಿದ್ದನ್ನು ಕಂಡಾಗ ಒಮ್ಮೆ ನನ್ನಲ್ಲಿ ನಾಣ್ಣುಡಿಯೋ ಅಥವಾ ನಾಣ್ನುಡಿಯೋ ಎಂಬ ಅನುಮಾನ ಬಂದಿತ್ತು, ಆದರೆ ಪವನಜ ಅವರ ಸ್ಪಷ್ಚೀಕರಣದ ನಂತರ ಆ ಅನುಮಾನ ಕಳೆಯಿತು.
ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ?
ನನ್ನ ಹತ್ತಿರ ಎಸ್. ವಿ. ರಂಗಣ್ಣ ಅವರ ಒಂದು ಪುಸ್ತಕವಿದೆ . ಅದರ ಹೆಸರೇ ನಾಟುನುಡಿ. ಇಂಗ್ಲೀಷಿನ ಎಪಿಗ್ರಾಮ್ ಗೆ ಈ ಪದ ಉಪಯೋಗಿಸಿದ್ದಾರೆ . ಅದೇ 'ನಾಣ್ಣುಡಿ'-'ನಾಣ್ನುಡಿ' ಯ ಸಂಧಿ ವಿಗ್ರಹ ಇರಬಹುದೇ?
Re: ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ?