ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಇಲ್ಲಿಯವರೆಗೆ!
ಇದು ಒರ್ಕೂಟ್ ನಲ್ಲಿ ನಡೆದ ಚರ್ಚೆ!!
Hari Prasad >>
ಮಹೇಶ್, ಶಂಕರ ಭಟ್ ರವರ ಪುಸ್ತಕಗಳನ್ನ ಓದಿದ್ದೀರ?
ಅವರ "ಕನ್ನಡ ಬರಹವನ್ನು ಸರಿಪಡಿಸೋಣ!", "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಒಮ್ಮೆ ಸಾಧ್ಯವಾದಾಗ ಓದಿ.
ಮಹೇಶ ಭೋಗಾದಿ >>
ಅದೇ ನನ್ನ ಪ್ರಯತ್ನ.
ಯಾಕೆ ಕನ್ನಡದಲ್ಲಿ ಒಬ್ಬ ಪಾಣಿನಿ ಬರಬಾರದು?
ಏಕೆ ಕನ್ನಡವನ್ನು ಇನ್ನಷ್ಟು ಕ್ರಮಬದ್ಧವಾಗಿ ಓದು-ಬರೆಯುವ ಹಾಗೆ ಮಾಡಬಾರದು?
ಕಡೆ ಪಕ್ಷ ಇಲ್ಲೆ ಈ ವಿಷಯದ ಕುರಿತು ಒಂದು ಎಳೆಯನ್ನು ಎಳೆಯೋಣ...
ಸಹಕರಿಸಿ!
Hari Prasad >>
ಇಲ್ಲಿ ಬೇಡ, ಸಂಪದದಲ್ಲಿ ಪ್ರಾರಂಭಿಸಿ. ಆರ್ಕುಟ್ ನಲ್ಲಿ ಬರೆ ಆರ್ಕುಟ್ ಸದಸ್ಯರು ಮಾತ್ರ ಓದ್ತಾರೆ, ಬೇರೆಯವರಿಗೆ ತಲುಪೋದಿಲ್ಲ.
ಎಲ್ಲದಕ್ಕಿಂತ ಮೊದಲು ಶಂಕರ ಭಟ್ಟರ ಪುಸ್ತಕವನ್ನು ಕೊಂಡು ತಂದು ಓದಿ.
Hari Prasad >>
ಇನ್ನೊಂದು ವಿಷಯ, 'ಕನ್ನಡ ಬರಹವನ್ನು ಸರಿಪಡಿಸೋಣ' ಪುಸ್ತಕದಲ್ಲಿ ಶಂಕರ್ ಭಟ್ ಕನ್ನಡದಲ್ಲಿ ಬಳಕೆಯಲ್ಲಿರೋ ಸಂಸ್ಕೃತ ಪದಗಳನ್ನ ಪಟ್ಟಿ ಮಾಡಿದಾರೆ

- Login or register to post comments
- 1062 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಎಲ್ಲಿ ಸಿಗುತ್ತೆ ಈ ಪುಸ್ತಕ. ಬಹಳ ಅವಶ್ಯವಾಗಿ ಬೇಕಾಗಿದೆ. (ಅವಶ್ಯ ಕೂಡ ಸಂಸ್ಕೃತವಲ್ಲವೇ)
ಝರೂರು , desperately, ತುರ್ತಾಗಿ, ಅನಿವಾರ್ಯವಾಗಿ, ಖಂಡಿತವಾಗಿ..
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಅಂಕಿತದಲ್ಲೆ ಸಿಗಬಹುದು. ತೀರ ಹಳೆಯ ಪುಸ್ತಕವೇನಲ್ಲ. 'ಕನ್ನಡ ಬರಹವನ್ನು ಸರಿಪಡಿಸೋಣ!' ಪುಸ್ತಕವಂತೂ ೨೦೦೫ರಲ್ಲಿ ಬಂದದ್ದು (ಅಲ್ಲಿಗೆ ಸಾಕಷ್ಟು ಹೊಸ ಪುಸ್ತಕವೆಂದಾಯ್ತು).
ನನಗೆ ಇವೆರಡೂ ಪುಸ್ತಕಗಳು ಹೋದ ತಿಂಗಳು ಮೈಸೂರಿಗೆ ಭೇಟಿ ಕೊಟ್ಟಾಗ ಡಿ ವಿ ಕೆ ಮೂರ್ತಿ ಎಂಬುವರ wholesale ಪುಸ್ತಕ ಅಂಗಡೀಲಿ ಸಿಕ್ತು. ಮಾನ್ಯ ಓ ಎಲ್ ಎನ್ ರವರು ಈ ಪುಸ್ತಕಗಳ ಬಗ್ಗೆ ನನಗೆ ತಿಳಿಸಿದ್ದು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
Te tuṟutu haste, quickness; tuṟṟu haste; tora-paḍu to hasten.
ನಾನು ತುರ್ತು => ತುರುತು ಮಾಡಿಕೊಂಡಿದ್ದೇನೆ.
Tu. turuturu swiftly, quickly; turuta, turita, turta, turtu swiftness, haste; quick, swift.
======================================
ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(a) Ta. carakka quickly, speedily. Ka. sarakkane swiftly; sarasarane quickly, hastily. Te. saraga quickly, rapidly, soon; saragu quickness, swiftness, speed. Go. (Mu.) carkne immediately (Voc. 1289). / Cf. Skt. srāk quickly, speedily, instantly. MBE 1969, p. 292, no. 17, for areal etymology for Ka. sarasarane, with reference to some items in Turner, CDIAL, no. 13257, sarasara- moving hither and thither.
(b) Ka. caccara haste, with haste; ceccara quickness, quickly; caccariga, ceccariga a zealously active, restless, quick man. Tu. caccara haste, speed, hurry. Te. ceccera quickly, speedily.
(c) Ta. caraṭṭ-eṉal onom. expr. of moving quickly; caraṭṭu-caraṭṭ-eṉal onom. expr. of swishing, rushing sound as of air in motion. Ko. caraṭ pair-word with cadm sound, noise (cadm caraṭ).
(d) Ka. jaṟṟane quickly, rushingly. Tu. jarra suddenly, quickly. Te. jaṟṟuna quickly. DED (S) 1943.
ಸರಕ್ಕನೆ, ಸರಸರನೆ, ಚಚ್ಚರ, ಚೆಚ್ಚರ, ಚೆಚ್ಚರಿಗ, ಜರ್ರನೆ ಇವೆಲ್ಲ ಅವೆ!
======================================
ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
Ka. akkaṟe want, necessity, need.
ಅಕ್ಕರೆ!! ಅಕ್ಕಳೆ ಅಲ್ಲ
======================================