~
ದೊಡ್ಡ ದರ್ಮಗಳ ಮುಂದೆ ಚಿಕ್ಕ ನಂಬಿಕೆಗಳು....
ಇದು ಇತಿಹಾಸ ಸಣ್ಣಪುಟ್ಟ ನಂಬಿಕೆಗಳು, ಆ ನಂಬಿಕೆಗಳ ಬುಡಕಟ್ಟುಗಳು ದೊಡ್ಡ ಧರ್ಮಗಳ ನೆರೆಯಲ್ಲಿ ಕೊಚ್ಚಿ ಅಳಿಸಿ ಹೋಗಿವೆ....
ಯುರೋಪಲ್ಲಿ ಪಡುವಣ ಏಶಿಯದಲ್ಲಿ ಎಶ್ಟೋ ನಂಬಿಕೆಗಳು ಅಳಿಸಿ ಹೋಗಿವೆ....
ನಮ್ಮ ನೆಲದಲ್ಲೇ ಒಂದು ಕಾಲದಲ್ಲಿ ಬೇರೆ ಬೇರೆಯಾಗಿದ್ದ ಮತ, ದರ್ಮಗಳು ಇಂದು ಅವುಗಳ ತನ್ನತನಗಳನ್ನು ಕಳೆದುಕೊಳ್ಳುತ್ತಿವೆ...
ಒಂದೊಂದು ಬುಡಕಟ್ಟು, ಜಾತಿಗಳ ನಂಬಿಕೆಗಳಿಗೂ ಆಚಾರಕ್ಕೂ ಕುತ್ತು. ಬೆಟ್ಟಗಾಡಲ್ಲಿ ತಮ್ಮದೇ ಬಾಳಲ್ಲಿ ಕಂಡುಕೊಂಡ ಬಗೆಯಲ್ಲಿ ಬದುಕುತ್ತಿದ್ದ ಮಂದಿಯನ್ನು ಆ ದರ್ಮ ಈ ದರ್ಮದವರು ತಮ್ಮೆಡೆ ಸೆಳೆದುಕೊಳ್ಳಲು ಹಣ, ನೆತ್ತರು ಮುಂತಾದವನ್ನು ಚೆಲ್ಲಲು ಅಣಿಯಾಗಿದ್ದಾರೆ..............
ದಿಟವಾಗಲೂ ಎಲ್ಲಾ ನಂಬಿಕೆಗಳನ್ನು ಗವ್ರವಿಸುವ, ಕಾಪಾಡುವ ಸರಕಾರಗಳು ನಮ್ಮಲ್ಲಿ ಇವೆಯೇ? ಒಂದೊಂದು ಪಾರ್‍ಟಿ ಒಂದೊಂದು ಕೋಮಿನ ಕಡೆ ವಾಲಿ ನಿಂತಿರುವುದು ನಮ್ ಒಳಜಗಳ, ಒಳಬಿರುಕನ್ನು ಹೆಚ್ಚಿಸುತ್ತಿದೆ.
ಬರುವ ಸರಕಾರಗಳೆಲ್ಲ ಒಂದೆಡೆಗೆ ವಾಲುವುದೇ ದೊಡ್ಡ ತೊಂದರೆ ಅಲ್ಲವೇ.!

- Login or register to post comments
- 177 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: