19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗೋಪ ಕವಿ ಹೆಸರಿಸಿದ ಮರಗಳು

October 1, 2008 - 1:16pm
kannadakanda
ಹಾಲೆ ತಾಲಂಕೋಲೆ ದಿಂಡದುಂಡಿಗ ಬೋರೆ ಜಾಲಿಯಾಲಂ ನೆಲ್ಲಿ ಬೆಲ್ಲವತ ಬೆಳಲಣಿಲೆ ಬೇಲ ಸಾಲ ರುಟಾಳ ಬೋಳ ನವಿಲಾಡಿಯಿಬ್ಬಡಿ ಬಂಗರಳಿಯರಳಿಯು ಹೂಲೆ ಹಾಲವಿ ಹುಣಿಸೆ ಹೊನ್ನೆ ಚನ್ನಂಗಿ ಕಂ ಚಾಲ ಗೊಣ್ಯಾಲವಗರಗಿಲೆಲವ ಬೂರಾರ ನೀಲಿ ಕುಲಿಚೇಲಿಯತ್ತಿಯು ತೋರಮತ್ತಿ ಪೇರುಪ್ಪೆ ತುಪ್ಪೆಗಳಿರ್ಪುವು|| ಹಾಲೆ= Mimosops kauki, Wrightia tinctoria ತಾಲಂಕೋಲೆ=? ಆಲ=Ficus bengalensis ದಿಂಡ=Anogeissus latifolia ದುಂಡಿಗ=? ಬೋರೆ=jujube tree, Zizipus zizuba ಜಾಲಿ=Acacia arabica, ನೆಲ್ಲಿ=ಆಮಲಕ, Phyllanthum emblica ಬೆಲ್ಲವತ=ಬಿಲ್ಪತ್ರ್ವೆ, ಬಿಲ್ವಪತ್ರೆ ಬೆಳಲ್=Wood apple tree, Fernia elephantum ಅಣಿಲೆ=ಅಳಲೆ, ಅಳಿಲೆ Terminalia chebula ಅಗಿಲ್=ಕಾಡುಗಂಧ, Dysoxylum binectoriferum ಅಗರ್=Balsam tree, Amyris agallocha ಎಲವ=ಬೂರುಗದ ಜಾತಿಯ ಮರ, Bombax heptaphyllum ಗೊಣ್ಯಾಲ=ಗೋಣಿಯಾಲ, Ficus mysorensis ಸಾಲ=ತೇಗ ರುಟಾಳ=? ಬೋಳ=? ನವಿಲಾಡಿ=Vitex nigunda ಇಬ್ಬಡಿ=ಬೀಟೆ, Dalbergia latifolia ಬಂಗರಳಿ=ಹೀಲ ಅರಳಿ=Ficus religiosa ಹೂಲೆ=Aeshynomene aspera ಹಾಲವಿ=ಹಾಲುವಾಣ, Erythrina indica ಹುಣಿಸೆ=ತಿಂತ್ರಿಣಿ, Tamarindus indica ಹೊನ್ನೆ=Terminalia tomentosa ಚನ್ನಂಗಿ=Largerstroemia parriflora ಕಂಚಾಲ=ಕಾಂಚನಾರಕ, Bauhimia variegata ಬೂರ=ಬೂರುಗ, Bombax malabarica ಆರ=ನಿಚುಲ, Barringtona acutangala ನೀಲಿ=Indigo shrub, Indigofera tinctorica ಕೂಲಿ= Solanum jacquini (Shrub used for making sun hats) ಚೇಲಿ=? ಅತ್ತಿ=ಔದುಂಬರ, Ficus racemosa ಮತ್ತಿ=Terminalia tomentosa ಪೇರುಪ್ಪೆ=ಪುನರ್ಪುಳಿ, Garcinia gummigutta ತುಪ್ಪೆ=?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by savithasr on
ತಾಲಂಕೋಲೆ= ಅಡಕೆ ಮರ ಅರುಟಾಳ = ಅಂಟುವಾಳ ಕಾಯಿಯ ಮರ ಬೋಳ= ಒಂದು ಬಗೆಯ ಔಷಧೀ ಸಸ್ಯ ತುಪ್ಪೆ= ಭತ್ತ ಸಂಗ್ರಹಿಸಲು ಹುಲ್ಲಿನಿಂದ ಮಾಡುವ ಕಣಜ ಅಂತೆ! -ಸವಿತ

Submitted by kannadakanda on
ನೀವು ಹವ್ಯಕರೇ? ತಾಲಂಕೋಲೆ=ಅಡಿಕೆ ಮರವೇ? ಅಥವಾ ತಾಳವೃಕ್ಷವೇ(Palm). ಏಕೆಂದರೆ ಇವೆರಡೂ ಒಂದೇ ಜಾತಿಗೆ ಸೇರಿದ ಮರಗಳು. ಇದೇ ಜಾತಿಗೆ ಸೇರಿದ ಇತರ ಮರಗಳೆಂದರೆ ತೆಂಗು, ಬಗಿನೆ(ಬಯಿನೆ), ಈಚಲು, ಖರ್ಜೂರ ಇತ್ಯಾದಿ.