ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

ಇಂದು ಬೆಳಿಗ್ಗೆ ನಾನು FMರೇಡಿಯೋ ಕೇಳುತಿದೆ. ಆಗ ಐದು ಜನರನ್ನ interview ಮಾಡ್ತಿದ್ರು. ಅವರಿಗೆಲ್ಲ ಕೇಳಿದು ಒಂದೇ ಪ್ರೆಶ್ನೆ , ಏನೆಂದರೆ ಗಾಂಧೀಜಿ ಯವರ ತಾಯಿ ಯಾರು? ಈ ಪ್ರೆಶ್ನೆಗೆ ಉತ್ತರ ಕೊಟ್ಟ ಆ ೫ ಮಹಾನುಬಾವರು ಯಾರೂ ಗೊತ್ತಿಲ್ಲ .ಒಂದು ಹುಡುಗಿ I DONT KNOW... ಅಂತ ಹೇಳಿದ್ಲು . ಇನ್ನು ಒಬ್ಬ ಹುಡುಗ ಪುಥಲಿ ಬಾಯಿ ನಾ ಅಥವಾ ಕಸ್ಥುರ ಬಾ ನಾ CONFUSE ಅಂತ ಹೇಳಿದ. ಹೀಗೆಯೇ ನಾಲ್ಕು ಜನ ಉತ್ತರಿಸಿದು. ಅದರಲ್ಲಿ ಒಬ್ಬ ಹುಡುಗ ಮಾತ್ರ ಸರಿಯಾದ ಉತ್ತರ ಕೊಟ್ಟಿಧು. ಇದು ಎಂತ ಕಾಲ ಬಂತು ನೋಡಿ. ಈಗಿನ GENERATION ನಲ್ಲೆ ಹೀಗೆ ಆದ್ರೆ ಇನ್ನ ಮುಂದಿನ GENERATION ನೆನುಸ್ಕೊಂದ್ರೆ ಭಯ ನೆ ಆಗುತೆ.ದಯವಿಟ್ಟು ನಿಮ್ಮ ಮಕ್ಕಳಿಗೆ ಈ ರೀತಿ ಆಗುವುದನ್ನು ನೀವೆಲ್ಲ ತಪ್ಪಿಸಿ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

makrumanju's picture

ಏನು ಮಾಡಕ್ಕೆ ಆಗಲ್ಲ, ಕಾಲಕ್ಕೆ ತಕ್ಕಂತೆ ಜನ ಬದಲಾಗೋದು ಪ್ರಕೃತಿ ನಿಯಮ. ಇಂದಿನ ಶಿಕ್ಷಣ ಮಾಧ್ಯಮದಿಂದಾಗಿ ಎಲ್ಲಾ ಬದಲಾಗಿದ್ದಾರೆ.

ಮಾ.ಕೃ.ಮಂಜು
http://makrumanju.bl...

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಹೌದು ಕಾಲಕ್ಕೆ ತಕ್ಕಂತೆ ಬದಲಾಗೋದು ಪ್ರಕೃತಿ ನಿಯಮ. ಆದ್ರೆ ಇಂತ ವಿಷಯ ದಲ್ಲಿ ಬದಲಾಗೋದು ಸರಿನಾ?? ನಾ ಅದಕ್ಕೆ ಹೇಳ್ತಿರೋದು ಸಂಪದ ಉಪಯೋಗಿಸುತಿರೂ ಎಲ್ಲ ದೇಶ ಅಭಿಮಾನಿ ಗಳು ಅವರ ಮಕ್ಕಳಿಗೆ ಏನು ಕಲಿಸುತರೂ ಬಿದುತಾರೂ ಗೊತ್ತಿಲ್ಲ ಆದ್ರೆ ದಯವಿಟ್ಟು ಇಂತ ವಿಷಯ ಗಳನ್ನ ತಳ್ಳಿ ಹಾಕ ಬೇಡಿ ಇದು ನನ್ನ ವಿನಂತಿ

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

makrumanju's picture

ಮಕ್ಕಳಿಗೆ ಕಲಿಸುವ ಮೊದಲು ಅವರು ಕಲಿಯೋದು ಉತ್ತಮ ಅಲ್ಲವೇ.

ಮಾ.ಕೃ.ಮಂಜು
http://makrumanju.bl...

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

savithasr's picture

ನಮ್ಮ ಮನೆ ಓನರ್ ಅಜ್ಜಿ ಮಹಾರಾಷ್ಟ್ರದವರು..ನೆನ್ನೆ ಅವರ ಅನುಭವಗಳನ್ನ ನಮ್ಮ ಜೊತೆ ಹಂಚಿಕೊಂಡರು. ಒಮ್ಮೆ ಬಾಪು ಅಜ್ಜಿ ಅವರ ಊರಿಗೆ ಬಂದಿದ್ದರಂತೆ,ಆಗ ಅಜ್ಜಿ ಇನ್ನು ಚಿಕ್ಕ ಹುಡುಗಿ.ಬಾಪು ಕೈ ಹಿಡಿದುಕೊಂಡು ಊರಲ್ಲೆಲ್ಲ ಓಡಾಡಿದ್ದರಂತೆ.ಬಾಪುವಿನ ಸರಳತೆ,ಮಾತುಕತೆಗಳನ್ನ ಅಜ್ಜಿ ಭಾವುಕರಾಗಿ ವರ್ಣಿಸೋದನ್ನ ಕೇಳಿ ತುಂಬಾ ಖುಷಿ ಆಯ್ತು.
-ಸವಿತ

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಒಹ್ ಹೌದಾ !! ಇದು ತುಂಬ ಒಳ್ಳೆ ವಿಷಯ . ನೀವ್ ಯಾಕೆ ಆ ಅಜ್ಜಿ ಹತ್ತಿರ ಇನ್ನು ಹೆಚ್ಚು ಮಾಹಿತಿ ಪಡೆದು ಕೊಂಡು ಅದರ ಬಗ್ಗೆ ಒಂದು ಒಳ್ಳೆ artikle ಬರಿಬಹುದಲ್ಲ

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

mahesha's picture

ಅಯ್ಯೋ ಗಾಂದಿ ಸತ್ತೇ ಸುಮಾರು ಅರವತ್ತ ವರ್ಶ ಆಯ್ತಲ್ಲ.......

ಮಂದಿ ’ಗಾಂದಿ’ ಅವರ ಹಸರೇ ನೆನೆಪಿಲ್ಲ ಇನ್ನನು ಅವರ ಅಮ್ಮನ ಹೆಸರು, ತಂಗಿ ಹೆಸರು ಇವೆಲ್ಲ ಎಲ್ಲಿ ಇರ್‍ತಾವೆ?

ಅಂದಹಾಗೆ ಗಾಂದಿಯವರ ಮಕ್ಕಳ ಹೆಸರೇನು?

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಕಂಡಿತ ವಾಗಿ ಗೊತ್ತು . ಹರಿಲಾಲ್ ಮಣಿಲಾಲ್ ರಾಮದಾಸ್ ಹಾಗು ದೇವದಾಸ್

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

ಅವತ್ತು ಬೆಳ್ಳಂಬೆಳಗ್ಗೆ ’ಗಾಂಧಿ, ಮೈ ಫಾದರ್ ’ ಅನ್ನೋ ಹೊಸ ಸಿನೆಮಾ ಟೀವೀನಲ್ಲಿ ಬರ್ತಾ ಇತ್ತು ?
ಗಾಂಧಿ ಮಗನ ಹೆಸರು ಹೊಸ ಜನರೇಷನ್ ಗೆ ತಿಳಿಸೋಕ್ಕೆ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

ಲೋಕವಂದ್ಯರಾದ ಮಹಾತ್ಮ ಗಾಂಧೀಜಿ ತಮ್ಮ ಸಂಸಾರವನ್ನು ಕಡೆಗಣಿಸಿದರು . ಅವನ ಮಗ ಹರಿಲಾಲನಿಗೆ ತಂದೆ ತನಗೆ ಅನ್ಯಾಯ ಮಾಡಿದರು, ಅದರಿಂದ ತನ್ನ ಜೀವನ ಹಾಳಾಯಿತು, ಅನ್ನೋ ಭಾವನೆ . ಈ ಬಗ್ಗೆ ಪುಸ್ತಕಗಳೂ ಇವೆ. ಇತ್ತೀಚೆಗೆ ಈ ವಿಷಯ , ’ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು .

ಈ ಬಗ್ಗೆ ’ಗಾಂಧಿ, ಮೈ ಫಾದರ್ ’ ಎಂಬ ಸಿನೇಮಾ ಇತ್ತೀಚೆಗೆ ಬಂದಿತು . ಹರಿಲಾಲ್ ಪಾತ್ರದಲ್ಲಿ ಹೊಸ ತಲೆಮಾರಿನ ಪ್ರಸಿದ್ಧ ನಟ - ಅಕ್ಷಯ್ ಖನ್ನಾ - ಅದೇ ’ತಾಲ್’ ಚಿತ್ರದಲ್ಲಿರೋನು - ಅಭಿನಯಿಸಿದ್ದಾನೆ .

ಗಾಂಧಿ ಸತ್ತು ಅರವತ್ತು ವರ್ಷ ಆಯ್ತು ಎಂದು ಜಗತ್ತು ಆತನನ್ನು ಮರೆತಿಲ್ಲ . ಅನ್ನೋಕೆ ಈ ವಿಷಯ ಹೇಳಿದೆ.

ಆಗಾಗ ಗಾಂಧಿ ನಮಗೆ ಪ್ರಸ್ತುತವೇ ಅನ್ನೋ ಚರ್ಚೆ , ಈಗ ಗಾಂಧಿ ಇದ್ದಿದ್ದರೆ ಏನುಮಾಡ್ತಿದ್ದರು ? ಅನ್ನೋ ಚರ್ಚೆ , ಗಾಂಧಿ ಲ್ಯಾಪ್ ಟಾಪ್ / ಮೊಬೈಲ್ ಬಳಸೋದು ಅನ್ನೋ ಕಲ್ಪನೆ ಇವನ್ನೆಲ್ಲ ನಾವು ನೋಡ್ತಾ ಇಲ್ಲವೆ? ತರುಣರು ಗಾಂಧಿ ಆತ್ಮಚರಿತ್ರೆ ಓದೋದನ್ನು ಎಷ್ಟೋ ಬಾರಿ ನೋಡಿದ್ದೀನಿ. ಇವತ್ತಿಗೂ ಅದು ಈವರೆಗೂ ಅತಿ ಹೆಚ್ಚು ಮಾರಾಟ ಆಗ್ತಿರೋ ಪುಸ್ತಕಗಳಲ್ಲಿ ಒಂದು . ಎಲ್ಲ ಭಾಶೆಗಳಲ್ಲೂ ಬಲುಕಡಿಮೆ ಬೆಲೆಗೆ ಸಿಗುತ್ತದೆ - ಕನ್ನಡದಲ್ಲಿ ಇಪ್ಪತ್ತೇ ರೂಪಾಯಿ ಇದೆ . ’ಒಬ್ಬ ಸಾಮಾನ್ಯ ಮನುಷ್ಯ - ಮಹಾತ್ಮನಾದ ಬಗೆ ಹೇಗೆ?’ ಅನ್ನೋ ಕುತೂಹಲಕ್ಕಾಗಿ ಓದಿದೆ.

’ಗಾಂಧಿ’ ಇಂಗ್ಲೀಷ್ ಸಿನೇಮಾ ಆಗಿ ಜಗತ್ತಿನ ಗಮನ ಸೆಳೆಯಲಿಲ್ವೆ?

ನಾನು ಚಿತ್ರ ನೋಡಿಲ್ಲ . ಆದರೆ ಹರಿಲಾಲ ಬಗ್ಗೆ ಗಾಂಧಿ ಮೊಮ್ಮಗಳು ಬರೆದ ಒಂದು ಪುಸ್ತಕದ ಸಂಕ್ಷಿಪ್ತ ರೂಪ ಕಸ್ತೂರಿಯಲ್ಲಿ ಬಂದಿತ್ತು.
ಅದನ್ನು ಓದಿದ್ದೇನೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಹೌದಾ!! ಈ ಬಗ್ಗೆ ನನಗೆ ತಿಳಿದಿಲ್ಲ. ಅದು ಯಾವ ಪುಸ್ತಕ. ಏನು ಬರೆದಿದ್ದರೆ ಅವ್ರು ಗಾಂಧಿ ಬಗ್ಗೆ?

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

mahesha's picture

ನಂಗೆ ಗೊತ್ತಿರಲಿಲ್ಲ.. :)

ಒಂದು ಸಂಗತಿ.. ಗಾಂದಿಯವರ ಬಗ್ಗೆ ತಿಳೀದೇ ಇರೋರು ಗಾಂದಿ ಅಂದರೆ ಗವ್ರವ ಇಟ್ಟಿಕೊಂಡಿರೋರು ಇದ್ದಾರೆ..

ಇಲ್ಲಿ ಗಾಂದಿಗೆ ಗವ್ರವ ಕೊಡೋ ಹಲವರು ನಮಗೆ ಸೊತಂತ್ರ ತಂದುಕೊಟ್ಟ ದೊಡ್ಡವೆಕ್ತಿ ಎಂದಶ್ಟೇ ಅರಿವು ಹೊಂದಿದವರು.

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

"ಗಾಂದಿಯವರ ಬಗ್ಗೆ ತಿಳೀದೇ ಇರೋರು ಗಾಂದಿ ಅಂದರೆ ಗವ್ರವ ಕೊಡ್ತಾರೆ , ತಿಳಕೊಂಡೋರು ಕೊಡಲು ಆಗುವದಿಲ್ಲ "ಅನ್ನೋದು ನಿಮ್ಮ ಅನಿಸಿಕೆಯೋ ?

" ಇಲ್ಲಿ ಗಾಂದಿಗೆ ಗವ್ರವ ಕೊಡೋ ಹಲವರು ನಮಗೆ ಸೊತಂತ್ರ ತಂದುಕೊಟ್ಟ ದೊಡ್ಡವೆಕ್ತಿ ಎಂದಶ್ಟೇ ಅರಿವು ಹೊಂದಿದವರು." ಅನ್ನೋವಾಗ ಸದ್ಯ "ಹಲವರು" ಅಂದಿರಿ ! ಈ "ಹಲವರು" , "ನಿಮಗೆ ಗೊತ್ತಿರೋ ಹಲವರು" ಅಂದ್ಕೋತೀನಿ!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

muralihr's picture

ಮೊಮ್ಮಕ್ಕಳ ಹೆಸರ್ ಹೇಳಿ ? ಕ್ಲೂ ಬೇಕಾ ? ಇಬ್ರೂ ತರಲೆ ನನ್ನ ಮಕ್ಕಳು . ಒಬ್ಬ ಅಮೇರಿಕಾದಲ್ಲಿ
ಶಾ೦ತಿ ಪೀಠವನ್ನು ಸ್ಥಾಪಿಸಿ ಯಹೂದಿಗಳನ್ನು ಕೆಟ್ಟದಾಗಿ ಬೈದು ಕಿರಿ ಕಿರಿ ಮಾಡಿದ್ದಾ.
ಅವನನ್ನು ಅಲ್ಲಿ೦ದಾ ಓಡ್ಸಿದ್ರೂ. ಇನೊಬ್ಬ ಹ೦ಗೆ ತರಲೆ ಮಾಡಿದ್ದಾ.
ಅದಿರಲಿ ಜನವರಿ 23 ಯಾರು ಹುಟ್ಟಿದ್ದು ಹೇಳಿ ನೋಡೋಣ .

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

muralihr's picture

ದಿವ್ಯ ! ನಿಮ್ಮ ಹ೦ಗೆ ಎಲ್ಲರಿಗೂ ದಿವ್ಯ ಜ್ಞಾನ ಇರುತ್ತೆ ಅ೦ದ್ಕೋ ಬೇಡಿ..:)
ಅವರಪ್ಪಾ ಅಮ್ಮನ ಹೆಸರು / Address ಗೊತ್ತಿರಲ್ಲಾ - ಎಲ್ಲೋ ವೃದ್ದಾಶ್ರಮದಲ್ಲಿ ಇರ್ತಾರೆ.
ಅ೦ತಾದರಲ್ಲಿ ಗಾ೦ಧೀ ಅಪ್ಪಾ / ಅಮ್ಮನದು ಹೆಸರು ಹೆ೦ಗೆ ಜ್ಞಾಪಕವಿರುತ್ತೆ .
ನಿಮ್ಗೇ ಗಾ೦ಧಿ ಇಷ್ಟಾ ಆದರೆ ಗೋಖಲೆ ಸ೦ಸ್ಥೆಯಲ್ಲಿ ಡಾ ! ಗುರುರಾಜ ರವರ "ಹೀಗಿದ್ದರೂ ನಮ್ಮ ಬಾಪು "ಸಿ.ಡಿ ಕೇಳಿ.

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

makrumanju's picture

ನಿಮ್ಮ ಮಾತು ನಿಜರೀ... ಈಗೀನ ಕಾಲದಲ್ಲಿ ಅವರಪ್ಪ, ಅಮ್ಮನನ್ನೇ ಮರೆತುಬಿಟ್ಟಿರುತ್ತಾರೆ. ಇನ್ನು ಗಾಂಧಿಯಂಥವರ ನೆನಪು ಎಲ್ಲಿಂದ ಬರಬೇಕು.

ಮಾ.ಕೃ.ಮಂಜು
http://makrumanju.bl...

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಹೌದು ನಿಮ್ಮ ಮಾತು ನಿಜ .

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಹೌದು ನಿಮ್ಮ ಮಾತು ನಿಜ. ನಾನು ಇಲ್ಲಿ ನನ್ನ ಅನಿಸಿಕೆ ಯನ್ನು ಹೇಳಿದ್ದೇನೆ ಅಸ್ಟೆ .

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

ನಿಮ್ಮ ಕಳವಳ ಚಿಂತನಯೋಗ್ಯ .

ದಯವಿಟ್ಟು ಪೋಸ್ಟ್ ಮಾಡುವ ಮೊದಲು "ಮುನ್ನೋಟ" ನೋಡಿ ,
ನೀವು ಬರೆದದ್ದು ನಿಮ್ಮ ಪ್ರಕಾರ ಸರಿ ಇದೆಯೇ ಅಂತ ಅರೆಕ್ಷಣ ಪರೀಕ್ಷಿಸಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಅಂದರೆ ನಿಮ್ಮ ಮಾತಿನ ಪ್ರಕಾರ ನಾನು ಬರೆದಿರುವುದು ಸರಿ ಇಲ್ಲವೇ? ನೀವು ನಾನು ಬರೆದಿರುವುದನ್ನು ಸಂಪೂರ್ಣ ವಾಗಿ ಒದ್ದಿದೀರೆ ?

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

ದಯವಿಟ್ಟು ಮತ್ತೊಂದ್ ರೌಂಡ್ ಅಳಬೇಡಿ :)

ನೀವು ಬಲು ಸೂಕ್ಷ್ಮ ಮನಸ್ಸಿನವರು ಅಂತ ಕಾಣುತ್ತದೆ. ಬೇಜಾರು ಮಾಡಿಕೊಳ್ಳದೆ ಮುಂದೆ ಓದಿ .

ನೀವು ಬರೆದ ವಿಷಯದ ಬಗ್ಗೆ ಹೇಳಲಿಲ್ಲ ; ನೀವು ಇಲ್ಲಿ ಮತ್ತು ಬೇರೆ ಕಡೆ ಬರೆದದ್ದರಲ್ಲಿ ಬಹಳಷ್ಟು ತಪ್ಪು ಇವೆ . "ನೀವು ನಾನು ಬರೆದಿರುವುದನ್ನು ಸಂಪೂರ್ಣ ವಾಗಿ ಒದ್ದಿದೀರೆ ?" ಎಂದು ಬೇರೆ ಕೇಳಿದ್ದೀರಿ !

ಇನ್ನೊಮ್ಮೆ ನೀವು ಬರೆದದ್ದನ್ನು ಓದೋಣ ಬನ್ನಿ - ಒದೆಯೋದು ಬೇಡ :)

ಈ ವಾಕ್ಯಗಳನ್ನು ನಿಧಾನವಾಗಿ ಅಕ್ಷರ ಅಕ್ಷರ ಗಮನಿಸಿ ಓದಿ.

ಇಂದು ಬೆಳಿಗ್ಗೆ ನಾನು FMರೇಡಿಯೋ ಕೇಳುತಿದೆ.
ಅವರಿಗೆಲ್ಲ ಕೇಳಿದು ಒಂದೇ ಪ್ರೆಶ್ನೆ ,
ಕಸ್ಥುರ ಬಾ
ಹೀಗೆಯೇ ನಾಲ್ಕು ಜನ ಉತ್ತರಿಸಿದು.
ಅದರಲ್ಲಿ ಒಬ್ಬ ಹುಡುಗ ಮಾತ್ರ ಸರಿಯಾದ ಉತ್ತರ ಕೊಟ್ಟಿಧು.
ಇದು ಎಂತ ಕಾಲ ಬಂತು ನೋಡಿ.

ಇಲ್ಲಿ ತಪ್ಪುಗಳು ನಿಮಗೆ ಕಾಣಲಿಲ್ಲವೆ ? ಕಂಡರೂ ತಿದ್ದಿ ಹಾಕದ ಅಜಾಗರೂಕತೆಯೇ ?
ನಿಮ್ಮ ಬೇರೆ ಕಡೆಯ ಬರಹಗಳೂ ಹೀಗೆಯೇ ಇವೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ನನಗೆ converter ಸರಿಯಾಗಿ ಸಿಕ್ಕಿಲ್ಲ ಸರ್ . ದಯವಿಟ್ಟು ನೀವು ನನಗೆ ಸಹಾಯ ಮಾಡಿ.

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

shreekant.mishrikoti's picture

( ಹೇಗೆ ಸಹಾಯ ಮಾಡೋದು ಅಂತ ನನಗೆ ಗೊತ್ತಾಗ್ತಿಲ್ಲ ) ದಯಮಾಡಿ

ಯಾರಾದ್ರೂ ಇವರಿಗೆ ಸಹಾಯ ಮಾಡ್ರಪ್ಪಾ ....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ನೀವು ನನ್ನನು ಗೇಲಿ ಮಾಡುತ್ತಿದ್ದೀರ? ಅಥವಾ ಸಹಜ ವಾಗಿಯೇ ಮಾತಾಡುತ್ತಿದ್ದೀರ? ನನಗೆ ತಿಳಿಯುತಿಲ್ಲ.

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

Nagaraj.G's picture

ಮೊದ ಮೊದಲು ಎಡವಿದರೇನೆ ಮುಂದೆ ಸಾಧನೆ ಮಾಡಲು ಸಾದ್ಯ ಪ್ರಯತ್ನ ಮಾಡ್ತಾ ಇರಿ . ನಾನು ಬಳುಸ್ತಾ ಇರೋ ಕನ್ವರ್ಟರ್ ಇದು ನನಗೆ ತಿಳಿದ ಮಟ್ಟಿಗೆ ಇದು ಚೆನ್ನಾಗಿದೆ ಪ್ರಯತ್ನಿಸಿ. :)
http://www.googlekan...
ನಾಗರಾಜ್. ಜಿ

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

Nagaraj.G's picture

ನಮ್ಮ ಹುಡಗರು ಗೇಲಿ ಮಾಡಲ್ಲ ಬಿಡ್ರಿ ತಮಾಷೆಯಾಗಿ ಮಾತನಾಡುತ್ತಾರೆ ಅಷ್ಟೆ. ಎಲ್ಲರಿಗೂ ಮೂಗಿನ ಮೇಲೆ ಕೋಪ ಇದ್ರೆ ನಿಮಗೆ ಮೂಗಿನ ಮೇಲೆ ಅಳು ಇದೆ ದಿವಾರವರೇ ನಿವೇನಂತಿರಾ :) (ಬೇಯ್ಯುಕೊಬೇಡಿ ತಮಾಷೆಗಾಗಿ ಹೇಳಿದೆ ಈಗಲಾದರು ನಗಿ) :) :) :)
ನಾಗರಾಜ್. ಜಿ

ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

hndivya's picture

ಹ್ಹ ಹ್ಹ ಆಯಿತು ರೀ. ನಿಮ್ಮೆಲರ ಪ್ರೋತ್ಸಾಹ ಕಂಡು ನನಗೆ ತುಂಬಾ ಸಂತೋಷವಾಗಿದೆ. ನನಗೆ ಹೀಗೆ ಪ್ರೋತ್ಸಾಹ ನೀಡಿ, ತಪ್ಪಿದರೆ ನಿದಾನವಾಗಿ ಹೇಳಿ. ನಾನು ಖಂಡಿತ ವಾಗಿ ತಿದ್ದಿಕೊಳ್ಳುತೇನೆ .
ಕನ್ನಡದ ಕುವರಿ
ದಿವ್ಯ