ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
ಬೆಂಗಳೂರು ದೂರದರ್ಶನದ ಹೊಸತರಲ್ಲಿ ಪರಿಸರದ ಬಗ್ಗೆ, ಪರಿಸರ ಮಾಲಿನ್ಯ ತಡೆಯೋದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋವಂತಹ ಕೆಲವು ಹಾಡುಗಳನ್ನ ಪ್ರಸಾರ ಮಾಡುತ್ತಿದ್ದರು.ಅದರಲ್ಲಿ ಈ ಕೆಳಗಿನದ್ದೂ ಒಂದು..
"ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ...
ನೀಲಿ ಗಗನದ ತುಂಬಾ ನೀಲಿ ಏಕಿಲ್ಲಾ....ಯಾಕಿಂತಾ ಮಲಿನ ಮುಸುಕು??
. . . . . . . . ಎಲ್ಲಿ ಬಂದೀತು ಸ್ವಚ್ಛ ಗಾಳಿ?"
ಈ ಹಾಡಿನ ಸಾಹಿತ್ಯ ಸಿಗುತ್ತಾ?
ಧನ್ಯವಾದಗಳೊಂದಿಗೆ
-ಸವಿತ

- Login or register to post comments
- 154 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
ನನಗೆ ನೆನಪಿರುವಶ್‌ಟು ಬರೀತೀನಿ
ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ...
ನೀಲಿ ಗಗನದ ತುಂಬ ನೀಲಿ ಏಕಿಲ್ಲ
ಯಾಕಿಂತ ಮಲಿನ ಮುಸುಕು
ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚಲ್ಲಿ
ನೀಲಿಮಾಸಿತು ನನ್ನ ನಲ್ಲೇ
ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ
ಜೀವಕುಲಕೆ ಯಾಕೆ ಬವಣೆ
ಸಸ್ಯಶಾಮಲೆಯನ್ನು ಕೊಚ್ಚಿಕೆಡುವಿದ ಮೇಲೆ
ಎಲ್ಲಿ ಬಂದೀತು ಸ್ವಚ್ಛಗಾಳಿ
ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ
ಮೂಕ.. ಯಾಕೆ ಬವಣೆ
ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
ನೆನಪಿನಂಗಳದಿಂದ ಕೆದಕಿ ಬರೆದದ್ದಕ್ಕೆ ಧನ್ಯವಾದಗಳು ಮಹೇಶ್....
ಇನ್ನೂ ಕೆಲವಾರು ಸಾಲುಗಳಿವೆ ಅಲ್ವಾ?
-ಸವಿತ
ಉ: ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
ಹು...
ನನಗೆ ಬರಬರತ್ತಾ ಮರೆವು ಹೆಚ್ತಾನೋ ಇದೆ, ಕುಗ್ತಾನೂ ಇದೆ.. ಅನ್ನೋದಕ್ಕೆ ಇರೇ ಪುರಾವೆ.