ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಮ್ ಕಂನಡದ ಎರಡನೇ ಮತ್ತು ಆರನೇ ವಿಬಕ್ತಿ

ಈ ಬರೆಗಂನಡ ಹೇಗಾದರೂ ಇರಲಿ.. ನಾವು ಮಾತಾಡೋ ಕಂನಡದಲ್ಲಿ ಎರಡನೇ ಮತ್ತು ಆರನೇ ವಿಬಕ್ತಿ ಬರೆಗನ್ನಡಕ್ಕಿಂತ ಬೇರೆಯಾಗಿದೆ...

ಮಾದರಿ ಎರಡನೇ ವಿಬಕ್ತಿಗೆ

ಬರೆ: ಅವನನ್ನು ಕರೆ
ಆಡು:ಅವನನ್ ಕರಿ

ಬರೆ: ಅದನ್ನು ತಿನ್ನು
ಆಡು : ಅದನ್ ತಿನ್ನು

ಬರೆ: ಅವಳನ್ನು ಹೊಡೆ
ಆಡು: ಅವಳನ್ ಹೊಡಿ

ಇಲ್ಲಿ ’ಅನ್ನು’ ಎಂದು ಒಟ್ಟು ಬರದೇ ’ಅನ್’ ಎಂಬ ಒಟ್ಟು ಬಂದಿದೆ. ಇದೇ ಸಾಲಿನ ಕೊನೆಯಲ್ಲಿ ’ಅನ್ನ’ ಎಂದು ಆಗುವುದು

ಕರಿ ಅವನನ್ನ, ತಿನ್ ಅದನ್ನ, ಹೊಡಿ ಅವಳನ್ನ.

ಮಾದರಿ ಆರನೇ ವಿಬಕ್ತಿ.

ಬರೆ : ಅದರ ಹೆಸರು
ಆಡು : ಅದರ್‍ ಹೆಸರು

ಬರೆ : ಅವನ ಮಾತು
ಆಡು : ಅವನ್ ಮಾತು

ಬರೆ : ಅವಳ ಕಣ್ಣು
ಆಡು : ಅವಳ್ ಕ/ಗಣ್ಣು

ಬರೆ : ಅವುಗಳ ಗುಂಪು
ಆಡು:ಅವುಗಳ್ ಗುಂಪು

ಇಲ್ಲಿ ಬರಹದ ’ಅ’ ಒಟ್ಟು ಆಡು ಮಾತಲ್ಲಿ ಬರಲ್ಲ...

ಗಮನಿಸಿರಿ ’ಅವಳ ಕಣ್ಣು’ ಅನ್ ’ಕಣ್ಣು ಅವಳ’ ಎಂದರೆ ತಪ್ಪು, ’ಕಣ್ ಅವಳದ್ದು’ ಎಂದೇ ಹೇಳಬೇಕು.

No votes yet