ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಶಿರಾಡಿ ಘಾಟ್ ಎಂಬ ನರಕದ ದಾರಿ.

ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ. ಎರಡುಮೂರು ಅಡಿಗಳಿಗಿಂತಲು ಹೆಚ್ಚಿನ ಆಳದ ಗುಂಡಿಗಳು, ರಸ್ತೆ ತುಂಬ ಕಲ್ಲುಗಳ ರಾಶಿ, ಜೀವ ಕೈಯಲ್ಲಿ ಹಿಡಿದು ಪ್ರಯಣಿಸ ಬೇಕಾದ ಪರಿಸ್ಥಿತಿ ಅಲ್ಲಿದೆ. ಆ ಮಾರ್ಗದ ಜನಪ್ರತಿನಿಧಿಗಳಿಗಾಗಲಿ, ಮಂತ್ರಿಗಳಿಗಾಗಲಿ, ಬಹುಷಃ ಕಣ್ಣುಗಳೆ ಇಲ್ಲ ಅನ್ನಿಸುತ್ತೆ. ಇಂತ ಅಂಧರ ಕೈಗೆ ಸರ್ಕಾರ ಕೋಟ್ಟಿರೋದಕ್ಕೆ ನಮಗೆ ನಾವೆ ಶಾಪ ಹಾಕ್ಕೊ ಬೇಕಾಗಿದೆ. ಮೊನ್ನೆ ತಾನೆ ೪೮ ಕೋಟಿ ಖರ್ಚು ಮಾಡಿ ರಸ್ತೆ ರಿಪೇರಿ ಮಾಡ್ಸಿದ್ದೀವಿಂತ ಪತ್ರಿಕೆಗಳ ಮುಂದೆ ಬಡಾಯಿ ಕೊಚ್ಚಿಕೊಂಡ, ಕೇಂದ್ರ ಸಾರಿಗೆ ಮಂತ್ರಿನ, ಆ ಧರ್ಮಾಸ್ಥಳದ ಮಂಜುನಾಥ ಇನ್ನು ಯಾಕ್ ಅಧಿಕಾರದಲ್ಲಿ ಕೊರಿಸಿದ್ದಾನೊ? ಈ ಜನಕ್ಕೆ ಸ್ವಲ್ಪಾನು ನಾಚಿಕೆನೆ ಇಲ್ಲ ಅನ್ನಿಸುತ್ತೆ. ಒಂದು ನೊರು ಯಂತ್ರಗಳನ್ನ, ಸಾವಿರಾರು ಕಾರ್ಮಿಕರನ್ನ ಕರಕೊಂಡು ಬಂದು ಕೆಲಸ್ ಮಾಡ್ಸಿದ್ರೆ, ಒಂದು ವಾರದಲ್ಲಿ ಹಾಳಾಗಿರೊ ರಸ್ತೆನ ಸರಿ ಮಾಡಬಹುದು, ಕಡೆಪಕ್ಷ ಆ ಗುಂಡಿಗಳನ್ನಾದರು ಮುಚ್ಚಿಸ ಬಹುದು. ಇದ್ಯಾವುದು ಮಾಡದೆ ಇಲ್ಲದ ನೆಪ ಹೇಳ್ಕೊಂಡು ಒಡಾಡ್ತಿರೊ ರಾಜಕಾರಣಿಗಳಿಗೆ, ಯಾವ ರೀತಿ ಶಾಪ ಹಾಕಬೇಕೊ ಗೊತ್ತಾಗ್ತಿಲ್ಲ. ದಯಮಾಡಿ ಆ ಭಾಗದ ಕಡೆ ಪ್ರಯಾಣಿಸೋರಿಗೆ ಒಂದು ಸೊಚನೆ. ನಿಮ್ಮ ಜೀವವಿಮೆಯ ಮೊತ್ತ ಹೆಚ್ಚಿಸ್ಕೊಂಡು ಆ ಮೇಲೆ ಪ್ರಯಾಣ ಮಾಡಿ, ಯಾಕಂದ್ರೆ ಜೀವಂತ ವಾಪಸ್ಸ್ ಬರ್ತಿವಂತ ಬಂದ ಮೇಲೆನೆ ಗೊತ್ತಾಗೊದು.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಶಿರಾಡಿ ಘಾಟ್ ಎಂಬ ನರಕದ ದಾರಿ.

palachandra's picture

ಅದು ಟಾರ್ ಹಾಕಿ ಮಾಡಿದ ರಸ್ತೆ ಅಲ್ಲ, ಸಿಮೆಂಟ್ ಹಾಕಿ ಮಾಡಿದ್ದಂತೆ.. ಒಂದು ಮಳೇಗಾಲಾನೂ ಬರ್ಲಿಲ್ಲ.. ಬರೀ ಘಾಟಿ ರಸ್ತೆ ಅಲ್ಲ, N.H. 17 ಪೂರ್ತಿ ಕೆಟ್ಟು ಹೋಗಿದೆ.. ದಕ್ಷಿಣ ಕನ್ನಡಕ್ಕೆ ಹೋಗೋರ ಪಾಡಂತೂ ದೇವರಿಗೇ ಪ್ರೀತಿ..

--
PaLa

ಉ: ಶಿರಾಡಿ ಘಾಟ್ ಎಂಬ ನರಕದ ದಾರಿ.

ಗಣೇಶ's picture

ಶಿವಕುಮಾರ್ ಅವರೆ,

>>>ಆ ಧರ್ಮಸ್ಥಳದ ಮಂಜುನಾಥ ಇನ್ನು ಯಾಕೆ ಅಧಿಕಾರದಲ್ಲಿ ಕೂರಿಸಿದ್ದಾನೋ..
>>>ಯಾವ ರೀತಿ ಶಾಪ ಹಾಕಬೇಕೋಗೊತ್ತಾಗ್ತಿಲ್ಲ.

- ಈ ರಾಜಕಾರಣಿ, ಕಂಟ್ರಾಕ್ಟರ್..ಗಳಿಗೆ ನಾವು ಬೈದಷ್ಟು, ಶಾಪಹಾಕಿದಷ್ಟು, ದೇವರಿಗೆ ಅವರ ಮೇಲೇ ಕರುಣೆ ಜಾಸ್ತಿಯಾಗುವುದು ಕಾಣುತ್ತದೆ. ಇನ್ನು ಹೊಗಳಿ ನೋಡೋಣವಾ?

ಅತ್ಯಂತ ಕೆಟ್ಟ ರಸ್ತೆಗೆ ಪ್ರಶಸ್ತಿ ಕೊಡುವ ಅಭ್ಯಾಸ ಸುರುಮಾಡಿದರೆ, ಪ್ರತೀ ವರ್ಷ ಎರಡನೇ ಬಹುಮಾನ ಶಿರಾಡಿಘಾಟ್ ರಸ್ತೆಗೇ ಸಿಗುವುದು.

ಈ ರಸ್ತೆಯಲ್ಲಿ "ರಸ್ತೆ ತಿರುವಿದೆ. ಜಾಗ್ರತೆ ಚಲಿಸಿ" ಎಂಬ ಬೋರ್ಡ್ ಅಲ್ಲಲ್ಲಿ ಕಾಣಸಿಗುವುದು.
' ರಸ್ತೆ ತಿರುವಿದೆ' ಅಂದರೆ ತಿರುವಿ ಭೂಮಿ ಅಡಿಗೆ ಹೋಗಿದೆಯಾ? ಎಲ್ಲಿದೆ ರಸ್ತೆ?

-ಗಣೇಶ.

ಉ: ಶಿರಾಡಿ ಘಾಟ್ ಎಂಬ ನರಕದ ದಾರಿ.

anil.ramesh's picture

ಗಣೇಶ್,

>>ಅತ್ಯಂತ ಕೆಟ್ಟ ರಸ್ತೆಗೆ ಪ್ರಶಸ್ತಿ ಕೊಡುವ ಅಭ್ಯಾಸ ಸುರುಮಾಡಿದರೆ, ಪ್ರತೀ ವರ್ಷ ಎರಡನೇ ಬಹುಮಾನ ಶಿರಾಡಿಘಾಟ್ ರಸ್ತೆಗೇ ಸಿಗುವುದು.

ಮೊದಲ ಬಹುಮಾನ ಯಾವ್ದಕ್ಕೆ ಹಾಗಿದ್ರೆ?

ಇಂತಿ ನಿಮ್ಮ,
ಅನಿಲ್ ರಮೇಶ್.

ಉ: ಶಿರಾಡಿ ಘಾಟ್ ಎಂಬ ನರಕದ ದಾರಿ.

ಗಣೇಶ's picture

ಅನಿಲ್‌ಜೀ,

ನಿಮಗೆ ಗೊತ್ತಿದೆ.
ಆದರೂ ಕೇಳುತ್ತಿದ್ದೀರಲ್ಲ.
ಪ್ರಶಸ್ತಿ ಅಂದಮೇಲೆ-
ವಶೀಲಿ,ರಾಜಕಾರಣಿಗಳ ಪ್ರಭಾವದಿಂದ ಬೇರೆ ರಸ್ತೆಗಳು ಮೊದಲ ಬಹುಮಾನ ಗಿಟ್ಟಿಸಬಹುದು. :)
-ಗಣೇಶ.

ಉ: ಶಿರಾಡಿ ಘಾಟ್ ಎಂಬ ನರಕದ ದಾರಿ.

anil.ramesh's picture

ಗಣೇಶ್,
ಹಾಗೇ ಸುಮ್ಮನೆ. ;)
ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರ... :)

ಅದಕ್ಕೆ ನಿಮಗೆ ನಂನಿ.

ಇಂತಿ ನಿಮ್ಮ,
ಅನಿಲ್ ರಮೇಶ್.