ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

"ಕಿರುಬ"ನ ಕಿತಾಪತಿ

October 15, 2008 - 5:20am — Balaraj DK

ಈಶ್ವರಪ್ಪನವರಿಗೆ ಖಂಡಿತಾ ಬುದ್ದಿ ಭ್ರಮಣೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನೀಡಿರುವ ಹೇಳಿಕೆ ಕುರುಬ ಜನಾಂಗದವರನ್ನು ತಲೆತಗ್ಗಿಸುವಂತಾಗಿದೆ. ಕುರುಬ ಜಾತಿಯನ್ನು ಇವರನ್ನೇನು ಗುತ್ತಿಗೆ ಪಡೆದಿರುವರೇನೋ ಎಂಬ ಶಂಕೆ ಹಲವರಲ್ಲಿ ವ್ಯಕ್ತವಾಗಿದೆ. ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಜನಾಂಗದ ಪ್ರಶ್ನಾತೀತ ನಾಯಕರು ಎಂದೊಪ್ಪಲು ಇಷ್ಟಪಡದ ಇವರ ಬಾಲಿಶವಾದ ಇದು.

1950-60 ದಶಕದಲ್ಲಿ ರಾಜ್ಯದ ಹಣಕಾಸು ಸಚಿವರಾಗಿದ್ದ ಟಿ.ಎಂ. ಮರಿಯಪ್ಪ ಕುರುಬ ಸಮಾಜದ ಮೊದಲ ರಾಜಕೀಯ ಜಾಗೃತದಾರರೆನ್ನಬಹುದು. ಅವರು ವಿಧಿವಶರಾದ ನಂತರ ಮುಖಂಡರ ಕೊರತೆಯನ್ನು ಕುರುಬ ಸಮಾಜ ಅನುಭವಿಸುತ್ತಿತ್ತು. ಈ ಸಮುದಾಯ ದಿಕ್ಕು ದೆಸೆ ತಪ್ಪಿದ ಕಾಲದಲ್ಲಿಯೇ ಹೆಚ್‌. ವಿಶ್ವನಾಥ್ ಕಾಂಗ್ರೆಸ್‌ನಲ್ಲಿದ್ದು ಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲಾರಂಭಿಸಿದರು. ಆದರೆ ವಿಶ್ವನಾಥ್ ಕೇವಲ ಹಳೆಯ ಮೈಸೂರು ಪ್ರಾಂತ್ಯಕ್ಕೆ ಮೀಸಲಾದರೇ ಹೊರತು ರಾಜ್ಯಕ್ಕೆ ಸಮಾಜದ ಮುಖಂಡರಾಗಲಿಲ್ಲ. ಈ ಸಮಯದಲ್ಲಿ ಬಿರುಗಾಳಿಯಂತೆ ರಾಜ್ಯ ನಾಯಕರಾದವರು ಸಿದ್ದರಾಮಯ್ಯ ಜನತಾದಳದಲ್ಲಿದ್ದುಕೊಂಡು.

ಬಹುಶಃ ಸಿದ್ದರಾಮಯ್ಯನವರಿಗೆ ಈ ರೀತಿಯ ಜಾತಿಯ ಜಾಗೃತಿ ಆಗಿದ್ದು ಅವರ ರಾಜಕೀಯ "ಗುರು" ಮಾಜಿ ಪ್ರಧಾನಿ ದೇವೇಗೌಡರ ಪ್ರಭಾವ ಹಾಗೂ ವರ್ಚಸ್ಸು ಎನ್ನಬಹುದು. ಅಥವಾ ಗೌಡರ ಪ್ರಲೋಭನೆ ಕೂಡ ಎನ್ನಬಹುದು. ಏಕೆಂದ್ರೆ, ಇದೇ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದುಕೊಂಡೇ ಕೇಳದೇ ಬಂದ ನಸೀಬಿನ ಸಹಾಯದಿಂದ ದೇವೇಗೌಡರು ಪ್ರಧಾನಿ ಮಟ್ಟಕ್ಕೇರಿದರು. ಅದಕ್ಕೂ ಮೊದಲು ರಾಜ್ಯದಲ್ಲಿ "ವಿಶ್ವ ಒಕ್ಕಲಿಗ ಸಮುದಾಯ" ಅಯೋಜಿಸಿ ಯಶಸ್ವಿಯು ಕೂಡ ಆಗಿದ್ದರು.

ಗೌಡರು ಪ್ರಧಾನಿಯಾದ ನಂತರ ನಿರೀಕ್ಷೆಯಂತೆ ಸಿದ್ದರಾಮಯ್ಯಗೆ ಒಳ್ಳೆಯ ಘಳಿಗೆ ಕೂಡಿ ಬಂತೆನ್ನಬಹುದು. ಗುರುಗಳ ಹಾದಿಯನ್ನೇ ತುಳಿದ ಸಿದ್ದು ಪಟೇಲರ ಸಚಿವ ಸಂಪುಟದಲ್ಲಿ ಪ್ರಭಾವಿಯಾದರು. ಇವರು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡಿನಲ್ಲಿ "ಕುರುಬ ಸಮುದಾಯದ ಸಮಾವೇಶ" ಅದ್ದೂರಿಯಾಗಿ ಏರ್ಪಡಿಸಿ ಮಿಂಚಿನಂತೆ ರಾಜ್ಯದ ನಾಯಕರಾದರು. ಅಂದಿನಿಂದ ಕೋಲಾರದಲ್ಲಿ ಅಹಿಂದ ಸಮಾವೇಶ, ಕಾಗಿನೆಲೆ ಪ್ರಾಧಿಕಾರ ರಚನೆ ಸೇರಿದಂತೆ ಇತ್ತೀಚಿನ ಉದುಪಿಯ ಕನಕ ಗೋಪುರ ವಿಚಾರವಾಗಿ ತಮ್ಮ ಸ್ಪಷ್ಟ ಹಾಗೂ ನೇರ ನುಡೆ ಹಾಗೂ ಕೆಲವು ಸಿಡುಕುತನದ ಮೂಲಕ ಮನೆಮಾತಾದರು. ಆಗಲಂತೂ ಈಶ್ವರಪ್ಪನವರ ಹೆಸರು ಶಿವಮೊಗ್ಗ ಬಿಟ್ಟು ಅದೆಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ಆದರೆ ಇದೀಗ ಬಹಳ ರಾಜರೋಷವಾಗಿ ಮಾತಾಡುತ್ತಿದ್ದಾರೆ , ಅದು ಚೆಡ್ಡಿಗಳ ಪ್ರಭಾವದಿಂದ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮಾಜದಿಬ್ಬರು ಸಚಿವರಿದ್ದರೂ ಕಾರ್ಯ ಮಾತ್ರ ಶೂನ್ಯ. ಏನು ತೊಡೆ ದಪ್ಪ ಕೊಟ್ಟು ಬಿಡಿ ಎನ್ನುತ್ತಿಲ್ಲ. ಸ್ವಲ್ಪ ಕಿರುಬೆರಳು ಗಾತ್ರದ ಸಹಾಯ.. ಛೇ.. ಎಲ್ಲಿಂದ ಬರಬೇಕು. ಆ ಬೃಹಸ್ಪತಿಗಳು ಮತ್ಯಾರು ಅಲ್ಲ "ದಿ ಗ್ರೇಟ್ ಈಶ್ವರಪ್ಪ" ಹಾಗೂ ಬೀದರಿನ ನರಸತ್ತ ನಾಯಕ ಅಧಿಕಾರಕ್ಕಾಗಿ ಎಂಜಲು ಎತ್ತಲು ತಯಾರಾಗಿದ್ದ ಬಂಡೆಪ್ಪ ಕಾಶೆಂಪೂರ್‍.

ಆ ಸಮಯದಲ್ಲಿ ಇವರಿಬ್ಬರ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿದವರಿಗೆ ಗೊತ್ತಿರುತ್ತದೆ. ಒಮ್ಮೆ, ಸ್ವಾಮಿ ನಾವು ಕುರುಬರು. ನಮಗೆ ಇಂತಹ ಕೆಲಸ ಆಗಬೇಕಿತ್ತು. ನಾವು ಇಂತಹ ಸಮಾವೇಶ ಹಮ್ಮಿಕೊಂಡಿದ್ದೀವಿ. ತಾವು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಿರವಹಿಸಿ ಕೇಳಿದರೆ ಇವರಿಬ್ಬರ ಉತ್ತರ ಏನು ಗೊತ್ತೆ...... " ನಮಗೆ ಮುಖ್ಯಮಂತ್ರಿ ಹಾಗೂ ಡೆಪ್ಯೂಟಿ ಸಿಎಂ ಆಜ್ಞೆ ಆಗಿದೆ. ಕುರುಬ ಜಾತಿಯ ಕಾರ್ಯಗಳಿಗೆ ಹಾಜರಾಗುವ ಹಾಗಿಲ್ಲ. ಇದನ್ನು ಮರೆತರೆ ನಮ್ಮ ಅಧಿಕಾರಕ್ಕೇ ಕುತ್ತು ಬರಲಿದೆ" ಎಂದರು . ಇಂತಹ ನರಸತ್ತ ನಾಯಕರು ಸಿದ್ದರಾಮಯ್ಯ, ವಿಶ್ವನಾಥ್ ಕುರಿತು ಮಾತನಾಡುವುದಕ್ಕ ಯಾವುದೇ ನೈತಿಕ ಹಕ್ಕಿಲ್ಲ.

ಅನಂತರ, ಇತ್ತೀಚೆಗೆ ಜರುಗಿದ ಅನೇಕ ಘಟನೆಗಳು ತಮಗೆಲ್ಲಾ ಗೊತ್ತಿರುವ ವಿಚಾರಗಳೇ..

ಅದಕ್ಕೂ ಮೊದಲು ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡರು ಎಂದವರು ಅದೆಷ್ಟೋ ಜನ..... ನೀವೊಮ್ಮೆ ರಾಜಕೀಯ ತಿರುವು ಹಾಕಿ ನೋಡಿ. ಜಾತಿಯಿಂದಲೇ ಮುಖ್ಯಮಂತ್ರಿಯಾದ ದೇವೇಗೌಡ, ಎಸ್ಸೆಂ ಕೃಷ್ಣ ಇವರಿಗೆಲ್ಲಾ ಶ್ರೀ ರಕ್ಷೆಯಾಗಿದ್ದು ಜಾತಿ ಬಲವೇ ಹೊತು ಬೇರೇನು ಅಲ್ಲ. ಅತ್ತ ಮೈಸೂರು ದಿವಾನಗಿರಿಯಲ್ಲಿ ವಿಶ್ವೇಶರಯ್ಯ ಆಗಲಿ ಆರ್ಕಾಟ್ ರಾಮಸ್ವಾಮಿ ಆಗಿರಬಹುದು ಇವರೆಲ್ಲಾರೂ ಅಂದ ಕಾಲದಲ್ಲೇ ತಮಿಳು ಬ್ರಾಹ್ನಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದುದ್ದು ಇತಿಹಾಸದಲ್ಲಿ ಗಮನಿಸಬಹುದು. ಹಾಗೆಯೇ ಇವರನ್ನು ಸೆಡ್ಡು ಹೊಡೆಯಲೆಂದೇ ಲಿಂಗಾಯತ ಕೋಮಿನವರನ್ನು ಮೇಲ್ಪಂಕ್ತಿಗೆ ಏರಿಸಿದ್ದು ನಿಜಲಿಂಗಪ್ಪನವರು. ಇಂದಿಗೂ ಯಡಿಯೂರಪ್ಪನವರ ಅಧಿಕಾರ ಒಮ್ಮೆ ನೋಡಿ. ಆಯಕಟ್ಟಿನ ಸ್ಥಳಗಳು ಹಾಗೂ ವರ್ಗಾವಣೆ ವಿಚಾರದಲ್ಲಿ ಅವರ ಮೊದಲ ಮಾನದಂಡ ಯಾವುದೆಂದು ಸ್ಪಷ್ಟವಾಗುತ್ತದೆ.

ನನಗೆ ಖಂಡಿತ ಯಾವ ಕೋಮನ್ನೂ ಅಣಕಿಸುವ, ನೋಯಿಸುವ ಇರಾದೆಯಂತೂ ಇಲ್ಲ. ಒಂದೇ ಕೋಮಿನಲ್ಲಿದ್ದೂ ಇನ್ನೊಬ್ಬ ಮುಖಂಡರನ್ನು ಇನ್ನೊಬ್ಬರ ಅಣತಿಯಂತೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಹೇಳಿಕೆ ನೀಡಿದ ಈಶ್ವರಪ್ಪನವರ ಮೇಲಷ್ಟೇ ಸಿಟ್ಟು. ಇನ್ನು ಮೇಲಾದರು ಅಧಿಕಾರಕ್ಕೆ ಅಂಟಿಕೂರದೆ ಸ್ವಂತ ವಿವೇಚನೆಯಿಂದ ವರ್ತಿಸಲು ಮಹಾಸ್ವಾಮಿಗಳು ಮುಂದಾಗಬೇಕು. ಅದು ಬಿಟ್ಟು ಮೊಸರು ತಿಂದು ಮೇಕೆ ಬಾಯಿಗೆ ಉಜ್ಜುವ ತಂತ್ರವನ್ನು ಕೈಬಿಡಲಿ..

ಡೌನ್‌ ಡೌನ್.. ಈಶ್ವರಪ್ಪ ... ಡೌನ್‌ ಡೌನ್‌

- ಬಾಲರಾಜ್‌ ಡಿಕೆ

‹ ಕನ್ನಡಿಗರು ಕಟ್ಟುವ ಆದಯ ತರಿಗೆಗೆ ತಕ್ಕ ಸವಲಕ್ಕು ನಮಗೆ ಸಿಗುತ್ತಿದೆಯೇ ಕೇಂದ್ರದಿಂದ? ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು? ›
  • ರಾಜಕೀಯ
~.~
  • Login or register to post comments
  • 227 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • flagged

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 16, 2008 - 8:46am — harsha.st

ಉ: "ಕಿರುಬ"ನ ಕಿತಾಪತಿ

harsha.st's picture

ಬಾಲರಾಜ್ ರವರೆ, ಒಂದೊಂದು ಜಾತಿಗು ಅವರ ಜಾತಿಯ ನಾಯಕರು ಇರಲೆಬೇಕು ಅಂಥ ಎನಾದ್ರು ಕಾನೂನು ಇದಿಯಾ ? ಇಲ್ಲ ತಾನೆ ! ಅದೂ ಅಲ್ಲದೆ ಯಾವ ಯಾವ ಜಾತಿ ನಾಯಕರು ಅವರ ಜಾತಿಗೆ ಎನು ಸಹಾಯ ಮಾಡಿದಾರೆ. ರಾಜಕಾರಣಿಗಳು ಅವರ ಜಾತಿಗಳಿಗೆ ಯಾಕೆ ಸಹಾಯ ಮಾಡಬೆಕು ? ಆ ತರಹ ಅವರ ಜಾತಿ ಜನಗಳಿಗೆ ಮಾತ್ರ ಸಹಾಯ ಮಾಡಿದರೆ ಅವರು ಸಂಕುಚಿತ ಮನೋಭಾವದವರು ಮತ್ತು ನಾಯಕನಾಗೋಕೆ ಲಾಯಕಿಲ್ಲ ಅಂತ ಅರ್ಥ. ನನ್ನ ಪ್ರಕಾರ ಜಾತಿ ನೋಡಿ ಓಟು ಹಾಕೋದೆ ತಪ್ಪು, ನಮ್ಮ ಜಾತಿಯವನೆ ಚುನಾವಣೆಲಿ ಗೆಲ್ಲಬೇಕು ಅಂತ ಆಸೆ ಪಡೋದು ತಪ್ಪು.. ಇನ್ನು ಇವ್ನು ನಮ್ಮ ಜಾತಿ ನಾಯಕ ಅಂತ ಹೇಳೊ ಪ್ರಶ್ನೆನೇ ಇಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 18, 2008 - 6:01am — Balaraj DK

ಉ: "ಕಿರುಬ"ನ ಕಿತಾಪತಿ

Balaraj DK's picture

ಖಂಡಿತವಾಗಿ ಜಾತಿ ರಾಜಕೀಯ ನಾನು ಬೆಂಬಲಿಸುತ್ತಿಲ್ಲ. ಅದು ಬೇಡವೂ ಬೇಡ ಅನ್ನೋದು ನನ್ನ ವಿಚಾರ. ಆದರೆ ಒಂದೇ ಜಾತಿಯಲ್ಲಿ ಹುಟ್ಟಿ ಕಿತ್ತಾಡುವುದು ಬೇಡ ಅನ್ನೋದು ನ್ನನ ಚಿಂತನೆ
- ಬಾಲರಾಜು ಡಿ.ಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 18, 2008 - 4:24pm — Shivakumar.Revadi

ಉ: "ಕಿರುಬ"ನ ಕಿತಾಪತಿ

Shivakumar.Revadi's picture

"ಒಂದೇ ಜಾತಿಯಲ್ಲಿ ಹುಟ್ಟಿ ಕಿತ್ತಡೋದು ಬೇಡ ಅಂತೀರಲ್ರೀ"
ಇನ್ನೇನ್ ಬೇರೆ ಬೇರೆ ಜಾತೀಲ್ ಹುಟ್ಟಿ ಕಿತ್ತಾಡ್ಬೇಕೇನ್ರಿ?.
ಯಾವ ಜಾತಿಯಲ್ಲಿದ್ರೂ, ಜಾತೀಯ ಹೆಸರಿನಿಂದ ಕಿತ್ತಾಡೊದು ಬೇಡ, ನೀವೆನಂತಿರಿ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 19, 2008 - 12:08am — Balaraj DK

ಉ: "ಕಿರುಬ"ನ ಕಿತಾಪತಿ

Balaraj DK's picture

- ಬಾಲರಾಜು ಡಿ.ಕೆ.

ಖಂಡಿತಾ ಶಿವಕುಮಾರ್‍, ಯಾವುದೇ ಜಾತಿಯವರು ಕಿತ್ತಾಡುವುದು ಬೇಡ. ನನ್ನ ಅಪೇಕ್ಷೆ ಇಷ್ಟೆ. ಅಧಿಕಾರ, ಸ್ವಾರ್ಥ ರಾಜಕಾರಣಕ್ಕಾಗಿ ಕೋಮುಗಳ ಮಧ್ಯೆ ಸಾಮರಸ್ಯ ಹಾಳುಗೆಡವಬಾರದೆಂಬುದು ಮಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಣ್ಣನಿಗೊ೦ದು ನಮನ
  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ.
  • ಕರ್ನಾಟಕ ಚುನಾವಣೆ-ಎರಡು ಹಂತಗಳು
  • ತಪ್ಪಿ ನಡೆದ ಸರ್ಕಾರ
Syndicate content

ಲೇಖಕರು

Balaraj DK's picture

ಪೂರ್ಣ ಹೆಸರು
ಬಾಲರಾಜು ಡಿ.ಕೆ.

ಪರಿಚಯ

ಈಗ ತಾನೆ ಸ್ನಾತಕೋತ್ತರ ಪದವಿ ಮುಗಿಸಿ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಓದುವುದು, ಬರೆಯುವುದರಲ್ಲಿ ಆಸಕ್ತಿಯಿದೆ. ಕನ್ನಡಪ್ರಭ ಪತ್ರಿಕೆಯ ಕಾಲೇಜು ರಂಗ ಅಂಕಣದಲ್ಲಿ ಲೇಖನಗಳು ಅಚ್ಚಾಗಿವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator