ಕೇಶಿರಾಜನ ಶಬ್ದಮಣಿ ದರ್‍ಪಣಂ
ಸಂಸ್ಕೃತ ವ್ಯಾಕರಣವು ಪಾಣಿನಿಯ "ಅಷ್ಟಾಧ್ಯಾಯೀ"ಯನ್ನು ಸಂಪೂರ್‍ಣವಾಗಿ ಪಾಲಿಸುವಂತೆ,
ಕನ್ನಡವು ಕೇಶಿರಾಜನ "ಶಬ್ದಮಣಿ ದರ್‍ಪಣಂ"ವನ್ನು ಪಾಲಿಸುವುದೆ?

- Login or register to post comments
- 1413 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಂಸ್ಕೃತ ವ್ಯಾಕರಣವು ಪಾಣಿನಿಯ "ಅಷ್ಟಾಧ್ಯಾಯೀ"ಯನ್ನು ಸಂಪೂರ್‍ಣವಾಗಿ ಪಾಲಿಸುವಂತೆ,
ಕನ್ನಡವು ಕೇಶಿರಾಜನ "ಶಬ್ದಮಣಿ ದರ್‍ಪಣಂ"ವನ್ನು ಪಾಲಿಸುವುದೆ?




ಶಬ್ದಮಣಿ ದರ್ಪಣ
ಕನ್ನಡವು ಕೇಶಿರಾಜನ ಶಬ್ದಮಣಿ ದರ್ಪಣವನ್ನು ಪಾಲಿಸುವುದಿಲ್ಲ. ಪಾಲಿಸಬೇಕಾಗಿಲ್ಲ.
ಇದು ಏಕೆ ಎಂಬುದಕ್ಕೆ ಹೆಚ್ಚಿನ ವಿವರಗಳನ್ನು ತಿಳಿಯಬೇಕಿದ್ದರೆ ಡಿ. ಎನ್. ಶಂಕರಭಟ್ ಅವರ `ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪುಸ್ತಕವನ್ನು ಓದಬಹುದು. ಹಾಗೆಯೇ ಸಂಸ್ಕೃತ ಪಾಣಿನಿಯ ಅಷ್ಟಾಧ್ಯಾಯಿಯನ್ನು ಈಗಲೂ ಪಾಲಿಸುತ್ತಿರುವುದಕ್ಕೆ ಮುಖ್ಯ ಕಾರಣ ಆ ಭಾಷೆಯ ಬೆಳವಣಿಗೆ ಸ್ಥಗಿತಗೊಂಡಿರುವುದು. ಅಂದರೆ ಅದು ಸಾಮಾನ್ಯ ಬಳಕೆಯ ಅಥವಾ ನಿತ್ಯ ಬಳಕೆಯ ಭಾಷೆಯಾಗಿ ಉಳಿಯದೆ ಕೇವಲ ಗ್ರಂಥಗಳಲ್ಲಿ ಮಾತ್ರ ಉಳಿದುಕೊಂಡಿರುವುದರಿಂದ ಅದು ಹೊಸ ಪ್ರಯೋಗಗಳಿಗೆ ಒಳಗಾಗದೆ ಉಳಿದಿದೆ.
ಇನ್ನು ಕನ್ನಡದ ವಿಷಯಕ್ಕೆ ಬಂದರೆ ಕೇಶಿರಾಜನ ಕಾಲದಲ್ಲಿಯೂ ಕನ್ನಡವು ಶಬ್ದಮಣಿದರ್ಪಣವನ್ನು ಪಾಲಿಸುತ್ತಿರಲಿಲ್ಲ. ಜೀವಂತ ಭಾಷೆಗಳ್ಯಾವೂ ನಿರ್ದಿಷ್ಟ ವ್ಯಾಕರಣ ನಿಯಮಗಳೊಳಗೆ ಉಳಿಯುವುದಿಲ್ಲ.
ಪಾಣಿನಿ
ಹಾಗೆಯೇ ಸಂಸ್ಕೃತ ಪಾಣಿನಿಯ ಅಷ್ಟಾಧ್ಯಾಯಿಯನ್ನು ಈಗಲೂ ಪಾಲಿಸುತ್ತಿರುವುದಕ್ಕೆ ಮುಖ್ಯ ಕಾರಣ ಆ ಭಾಷೆಯ ಬೆಳವಣಿಗೆ ಸ್ಥಗಿತಗೊಂಡಿರುವುದು.
ಪಾಣಿನಿಯ ವ್ಯಾಕರಣಸೂತ್ರೆಗಳನ್ನು ಕನ್ನಡವು ಪಾಲಿಸುತ್ತದೆ.
ನಿದರ್ಶನಗಳು:
೧) ಕನ್ನಡದ ವರ್ಣಮಾಲೆ ಸಂಸ್ಕೃತದ ವರ್ಣಮಾಲೆಯನ್ನು ಅನುಸರಿಸುತ್ತದೆ. ಸಂಸ್ಕೃತದ ವರ್ಣಮಾಲೆ ಪಾಣಿನಿಯ ವ್ಯಾಕರಣ ಸೂತ್ರಗಳನ್ನು ಪಾಲಿಸುತ್ತದೆ. ಆದ್ದರಿಂದ ಕನ್ನಡದ ಅಕ್ಷರಮಾಲೆಯು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.
೨) ಕನ್ನಡದ ಸಂಧಿ, ಸಮಾಸ ಕ್ರಿಯೆಗಳು ಸಂಸ್ಕೃತದ ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.
೩)ಅವ್ಯಯಗಳು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.
ಆದ್ದರಿಂದ ಕನ್ನಡವು ಸಂಪೂರ್ಣವಾಗಲ್ಲದಿದ್ದರೂ, ಭಾಗಶಃ ವಾಗಿ ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.
ಇನ್ನೊಂದು ಮಾತು ಕನ್ನಡವು ಸಂಸ್ಕೃತವನ್ನು ಬಹಳವಾಗಿ ಅವಲಂಬಿಸಿದೆ. ಸಂಸ್ಕೃತಪದಗಳ ಹೊರತು ಕನ್ನಡವು ಬಹಳ ದುರ್ಬಲ ಮತ್ತು ಸೀಮಿತ ಭಾಷೆಯಾಗುವುದು. ವ್ಯಾಕರಣ, ವೈದ್ಯಕೀಯ, ನ್ಯಾಯಾಂಗ, ವಿಜ್ಙಾನ, ಸಾಹಿತ್ತ, ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆಡಳಿತ, ಸಮೂಹಮಾಧ್ಯಮ ಮುಂತಾದ ಎಲ್ಲ ವಿಭಾಗಗಳಲ್ಲು ಕನ್ನಡವು ಸಂಸ್ಕೃತಪದಗಳನ್ನೆ ಶೇಕಡ ೯೦ರಷ್ಟು ಉಪಯೋಗಿಸುತ್ತದೆ.
ಕನ್ನಡ ಮತ್ತು ಸಂಸ್ಕೃತ
ಋ , ಲೃ ಮುಂತಾದ ಶಬ್ದಗಳನ್ನು ಈಗಾಗಲೇ ಕೈಬಿಟ್ಟಾಗಿದೆ. ಮಹಾಪ್ರಾಣಗಳನ್ನು , 'ಷ' ಮುಂತಾದವನ್ನು ಕೈಬಿಡುವ ಯೋಚನೆಯನ್ನು ಕೆಲವರು ಮಾಡುತ್ತಿದ್ದಾರೆ.! ( 'ಕನ್ನಡ ಬರಹವನ್ನು ಸರಿಪಡಿಸೋಣ'- ಶಂಕರಭಟ್ಟರ ಪುಸ್ತಕ ನೋಡಿ)
ಕನ್ನಡದಲ್ಲಿರುವ ಸಂಸ್ಕೃತ ಶಬ್ದಗಳು ಮಾತ್ರ ಸಂಧಿ -ಸಮಾಸ ವಿಷಯಗಳಲ್ಲಿ ಸಂಸ್ಕೃತ ನಿಯಮ ಪಾಲಿಸುವವು . ( ನೋಡಿ - ಶಂಕರಭಟ್ಟರ ' ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ')
ಸಂಸ್ಕೃತ ಶಬ್ದಗಳ ಬದಲು ಸಾಧ್ಯವಿದ್ದಲ್ಲಿ ಅಚ್ಚ ಕನ್ನಡ ಶಬ್ದಗಳ ಬಳಕೆಯ ಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಮತ್ತು ಹೆಚ್ಚು ಸಂಸ್ಕೃತ ಶಬ್ದಗಳನ್ನು ಶಿಷ್ಟ ಸಾಹಿತ್ಯದಲ್ಲಿ, ಪುಸ್ತಕದ ಭಾಷೆಯಲ್ಲಿ , ಇಂಗ್ಲೀಷಿನ ಶಬ್ದಗಳ ಬದಲಾಗಿ ಹೊಸಪದಗಳನ್ನು ಚಲಾವಣೆಗೆ ತರುವಲ್ಲಿ ಮಾತ್ರ ನೋಡಬಹುದು ಅಂತ ನನಗೆ ಅನಿಸುತ್ತದೆ.
ಕನ್ನಡ ಸಂಸ್ಕೃತ
"ೠ" ಕಾರವನ್ನು ಸರಕಾರ ಬಿಟ್ಟಿರಬಹುದು ಆದರೆ.
ಮಾತೃ+ಋಣ = ಮಾತೄಣ ವಾಗುವುದು, ಹೀಗೆ
ಪಿತೃ+ಋಣ = ಪಿತೄಣ
ಆದ್ದರಿಂದ "ೠ"ಕಾರವು ಕನ್ನಡದಲ್ಲು ಅವಶ್ಯಕವೆ.
ಇನ್ನು ಲೃ.. ಕನ್ನಡದಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ವೇದ ಮಂತ್ರಗಳನ್ನು ಮುದ್ರಿಸುವಾಗ "ಲೃ"ಕಾರವು ಬೇಕು.
ಕನ್ನಡದಲ್ಲಿ ಕೇವಲ, ಆದೇಶ, ಲೋಪ ಮತ್ತು ಆಗಮ ಗಳೆಂಬ ಮೂರು ಸಂಧಿಗಳು ಕನ್ನಡ ಸಂಧಿಗಳು. ಹಾಗು ಸವರ್ಣಧೀರ್ಘ, ಗುಣ, ಯಣ್, ವೃದ್ಧಿ, ಅನುನಾಸಿಕ, ವಿಸರ್ಗ, ಇತ್ಯಾದಿಗಳು ಸಂಸ್ಕೃತದ ಸಂಧಿಗಳು.
ಆದರೆ ಕಿಸು+ಪೊೞಲ್ = ಕಿಸುವೊೞಲ್ ("ಕವಿ ರಾಜ ಮಾರ್ಗ") ಇದು ಯಾವ ಸಂಧಿ, ಹಾಗೆ
ಕಿರು + ಮಕ್ಕಳ್ = ಕಿರುವಕ್ಕಳ್("ಕವಿ ರಾಜ ಮಾರ್ಗ")?
ಇನ್ನು ಸಮಾಸಗಳಲ್ಲಿ ಗಮಕ ಮತ್ತು ಅರಿ ಸಮಾಸಗಳನ್ನು ಬಿಟ್ಟು ಮಿಕ್ಕೆಲ್ಲ ಸಮಾಸಗಳು ಸಂಸ್ಕೃತದ್ದೆ.
ನಮ್ಮ ನಾಡ ಗೀತೆಯ ಮೊದಲ ಸಾಲಾದ
"ಜಯ ಭಾರತ ಜನನಿಯ ತನುಜಾತೆ, ಜಯ ಹೆ ಕರ್ಣಾಟಕ ಮಾತೆ" ಯಲ್ಲಿ ಒಂದೂ ಅಚ್ಚಗನ್ನಡ ಪದವಿಲ್ಲ ಎಲ್ಲವು ಸಂಸ್ಖೃತದ ಪದಗಳು.
ಹೀಗೆ ಇತ್ಯಾದಿ
ಉ: ಕನ್ನಡ ಸಂಸ್ಕೃತ
ಕನ್ನಡದ ನಿಘಂಟುಗಳಲ್ಲಿರುವ ऌಕಾರ ಶಬ್ದ कॢप्त ಕನ್ನಡ ನಿಘಂಟುವಿನಲ್ಲೂ ಇರುವ ಒಂದೇ ಶಬ್ದ.